ಹೆಣ್ಣನ್ನು ಅಬಲೆ ಎಂದು ಕರೆಯುವ ಮೂಲಕ ಆಕೆಗೆ  ಧೈರ್ಯ ಮತ್ತು ಶಕ್ತಿ ಇಲ್ಲಾ.  ಪ್ರತಿಯೊಂದು ಕೆಲಸಕ್ಕೂ ಆಕೆ ಮತ್ತೊಬ್ಬರ  ಅದರಲ್ಲೂ ಪುರಷರನ್ನೇ ಅವಲಂಭಿಸಬೇಕು ಎನ್ನುತ್ತದೆ ಈ ಪುರುಷ ಪ್ರಧಾನ ಸಮಾಜ.  ಅದರೆ ಇದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಶ್ಲೋಕದಲ್ಲಿ

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |

ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ || ಈ ಶ್ಲೋಕದ ಅರ್ಥ ಹೀಗಿದೆ.

ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ತನ್ಮೂಲಕದೈವಿಕ ಅನುಗ್ರಹ ಇರುತ್ತದೆ.   ಅದೇ ರೀತಿಯಲ್ಲಿ ಯಾವ ಮನೆಯಲ್ಲಿ ಸ್ತ್ರೀಯರನ್ನು ಗೌರವಿಸುವುದಿಲ್ಲವೋ, ಅಲ್ಲಿ ಮಾಡುವ ಎಲ್ಲಾ ಕ್ರಿಯೆಗಳು ಮತ್ತು ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ ಎಂದು ಹೇಳುವ ಮೂಲಕ ಹೆಣ್ಣು ಮಕ್ಕಳಿಗೆ  ಗೌರವ ಮತ್ತು ಸನ್ಮಾನದ ಮಹತ್ವವನ್ನು ಒತ್ತಿ ಹೇಳುತ್ತದೆ. ಅಂದು ಭಗೀರಥ ಶಿವನ ಜಟೆಯಿಂದ ಗಂಗೆಯನ್ನು ಈ ಭೂಮಿಗೆ ತಂದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀಮತಿ ಗೌರಿ ನಾಯಕ್ ಪಾತಾಳದಿಂದ ಗಂಗೆ ತರಿಸಿದ ಸಾಧನೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ಹವಾಮಾನ ವೈಪರೀತ್ಯದಿಂದ ಮತ್ತು ಓಝೋನ್ ಪದರಗಳ ನಾಶದಿಂದ ಪರಿಸರದ ಮೇಲೇ ಭಾರೀ ಪ್ರಮಾಣದಲ್ಲಿ ಹಾನಿಯಾಗಿ ಕಾಲಕಾಲಕ್ಕೆ ಆಗಬೇಕಿದ್ದ ಮಳೆಯೇ ಬಾರದೇ ಹೋದಾಗ, ಮಳೆಯನ್ನೇ ಅವಲಂಭಿಸಿ ಕೃಷಿ ಚಟುವಟಿಕೆಗಳನ್ನು ನಡೆಸುವ ಸಣ್ಣ ಪುಟ್ಟ ರೈತರಿಗೆ ಬಹಳವಾಗಿ ತೊಂದರೆ ಆಗುತ್ತದೆ. ಅದೇ ರೀತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ಸುಮಾರು 52 ವರ್ಷದ ಶ್ರೀಮತಿ ಗೌರಿ ನಾಯಕ್ ಅವರ ಬಳಿ ಕೇವಲ 6 ಗುಂಟೆ ತೋಟ ಇದ್ದು ಮಳೆಯ ನೀರಿನ ಕೊರತೆಯಿಂದಾಗಿ ಅವರೇ ನೆಟ್ಟ ಬಾಳೆ, ತೆಂಗು, ಅಡಕೆ ಗಿಡಗಳು  ಒಣಗುತ್ತಿರುವುದನ್ನು ನೋಡಲಾರದೆ, ಕೃಷಿ ಚಟುವಟಿಕೆಗಳನ್ನು ಮಾಡಲಾಗದೇ ಹೋದಾಗ,  ತಮ್ಮ ಬಳಿ ಭಾವಿ ಇದ್ದಲ್ಲಿ ಅದರ ಮೂಲಕ ನೀರನ್ನು ಸೇದಿ ತಮ್ಮ ಕೃಷಿಯನ್ನು ಮುಂದುವರೆಸಬಹುದು ಎಂಬ ಆಲೋಚನೆ ಇತ್ತು. ಆದರೆ  ಭಾವಿಯನ್ನು ತೋಡಿಸುವಷ್ಟು ಆರ್ಥಿಕವಾಗಿ ಸಧೃಢರಾಗಿರದೇ ಇದ್ದ ಕಾರಣ, ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ!! ಎಂಬ ಸಾಲಿನಂತೆ ವಿಧಿ ಇಲ್ಲದೇ, ಸ್ವತಃ ಹಾರೇ ಪಿಕಾಸಿ ಮತ್ತು ಗುದ್ದಲಿಯಂತಹ ಸಲಕರಣೆ ಹಿಡಿದು ತಮ್ಮ ಮಕ್ಕಳ ಸಹಾಯವನ್ನೂ ಪಡೆಯದೇ, ಯಾರೊಬ್ಬರಿಗೂ ಹೇಳಿದೇ ತಮ್ಮ ಮನೆಯ  ಹಿಂಭಾಗದ ಹಿತ್ತಲಿನಲ್ಲಿ ಮಗನಿಗೆ ತಿಳಿದರೆ ಆತ ಕೋಪಗೊಂಡು ಬೈಯ್ಯಬಹುದು  ಎಂದೆಣಿಸಿ,  ಯಾರ ಸಹಾಯವನ್ನೂ ಪಡೆಯದೇ ಅಲ್ಲಿನ ಅಂತರ್ಜಲದ ಮಟ್ಟವನ್ನು ಅರಿಯದೇ ತಾವೊಬ್ಬರೇ ಮಣ್ಣುನ್ನು ಅಗೆಯುವುದು, ಅಗೆದ ಮಣ್ಣನ್ನು ಮೇಲಕ್ಕೆತ್ತುವುದು ಮತ್ತು ಅದನ್ನು ಹೊತ್ತು ಮತ್ತೊಂದು ಕಡೆ ಸಾಗಿಸಿವುದು ಹೀಗೆ ಎಲ್ಲಾ ಕೆಲಸಗಳನ್ನು  ಸುಮಾರು  4-5 ತಿಂಗಳ ಕಾಲ  ಹಗಲು ರಾತ್ರಿ ಎನ್ನದೆ  ಪಾತಾಳದಿಂದ ನೀರು ಉಕ್ಕಿ ಬರುವವರೆಗೂ ತೋಡಿ ಅಂತಿಮವಾಗಿ  ಬರೋಬ್ಬರಿ 8 ಅಡಿ ಅಗಲ ಮತ್ತು 60 ಅಡಿ ಆಳದ ಬಾವಿಯನ್ನು ತೋಡಿ, ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡುವ ಮೂಲಕ ಆಧುನಿಕ ಭಾಗೀರಥಿ  ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ