ತೆಲಂಗಾಣದ ಖಮ್ಮಂ ಜಿಲ್ಲೆಯ ಪೆನುಬಳ್ಳಿ ಮಂಡಲದ ಗಣೇಶಪಾಡು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸುಮಾರು 100 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಾಲುವೆಗೆ ಉರುಳಿದೆ.

ಮದ್ದುಲಗುಡೆಮ್ (ವೆಮ್ಸೂರ್ ಮಂಡಲ) ದ ವಿವೇಕಾನಂದ ವಿದ್ಯಾಲಯದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ನಿನ್ನೆ ಸಂಜೆ ಅಪಘಾತಕ್ಕೆ ಒಳಗಾಗಿದೆ.

ಸ್ಕೂಲ್‌ ಮುಗಿದ ಬಳಿಕ ಗಣೇಶಪಾಡು, ಎಲ್.ಎಸ್. ಬಂಜಾರ್, ಕೆ.ಎಂ. ಬಂಜಾರ್, ಮರ್ಲಕುಂಟ ಮತ್ತು ಮುತ್ತುಗುಡೆಮ್ ನಿಂದ ವಿದ್ಯಾರ್ಥಿಗಳು ಬಸ್ಸಿನಲ್ಲಿ ಮನೆಗಳಿಗೆ ತೆರಳುತ್ತಿದ್ದರು.

ಗಣೇಶಪಡು ಗ್ರಾಮದ ಹೊರವಲಯಕ್ಕೆ ಬಸ್ಸು ಬರುವಾಗ ಕಾಲುವೆಗೆ ಉರುಳಿದೆ. ಅಪಘಾತದಲ್ಲಿ ಸುಮಾರು 40 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕ ಅತಿ ವೇಗವಾಗಿ ಬಸ್ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಬಸ್ಸು ಕಾಲುವೆಗೆ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪೊಲೀಸರು ಮತ್ತು ವಿದ್ಯಾರ್ಥಿಗಳ ಪೋಷಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಪೆನುಬಳ್ಳಿ ಮತ್ತು ತಿರುವೂರ್ ​​(ಎನ್‌ಟಿಆರ್ ಜಿಲ್ಲೆ, ಆಂಧ್ರಪ್ರದೇಶ) ನಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ