ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಚಂದರಗಿ ಗ್ರಾಮದಲ್ಲಿ 1984ರಲ್ಲಿ ಕ್ರೀಡಾ ವಸತಿ ಶಾಲೆ ಆರಂಭಗೊಂಡಿತು. ಸಹಕಾರಿ ಕ್ಷೇತ್ರದಲ್ಲಿ ಆರಂಭಗೊಂಡ ದೇಶದ ಪ್ರಥಮ ಕ್ರೀಡಾ ವಸತಿ ಶಾಲೆ ಎಂಬ ಹಿರಿಮೆ ಇದಕ್ಕಿದೆ. ಈ ಅಪರೂಪದ ಶಾಲೆಯ ಸ್ಥಾಪನೆಗೆ ಕಾರಣರಾದವರು ಎಸ್‌.ಎಂ. ಕಲೂತಿ. ಮೂಲತಃ ಅವರು ಕುಸ್ತಿಪಟು. ರಾಜ್ಯ ರಾಷ್ಟ್ರಮಟ್ಟದಲ್ಲಿ ಅನೇಕ ಬಹುಮಾನಗಳನ್ನು ಪಡೆದರು. ಬಳಿಕ ಅವರು ಕ್ರೀಡಾ ತರಬೇತುದಾರರಾದರು. ನಂತರ ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಹಾಗೂ ಸಹಕಾರಿ ಸಂಘಗಳ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಜಪಾನಿನ ಎಕ್ಸ್ ಪೊ 70ಗೆ ಹೋಗುವ ಅವಕಾಶ ಅವರಿಗೆ ಲಭಿಸಿತ್ತು. ದೆಹಲಿಯಲ್ಲಿ ನಡೆದ 1982ರ ಏಷ್ಯನ್‌ ಕ್ರೀಡಾಕೂಟಕ್ಕೆ ಭೇಟಿ ಕೊಟ್ಟಿದ್ದರು. ಅದರಲ್ಲಿ ಭಾರತದ ಕಳಪೆ ಸಾಧನೆ ಅವರಿಗೆ ವಿಭಿನ್ನವಾಗಿ ಯೋಚಿಸುವಂತೆ ಮಾಡಿತು. ಸಹಕಾರಿ ರಂಗದಲ್ಲಿ  ಕ್ರೀಡಾ ವಸತಿ ಶಾಲೆ ತೆರೆದು ಪ್ರತಿಭಾವಂತರನ್ನು ಪ್ರೋತ್ಸಾಹಿಸಬೇಕೆಂದು ಬೆಳಗಾವಿ ಜಿಲ್ಲೆಯ ಸಹಕಾರಿ ಧುರೀಣರನ್ನು ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ನಿಯಮಿತ ಅರ್ಥಾತ್‌ `ಸ್ಪೋಕೊ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಕ್ರೀಡಾ ವಸತಿ ಶಾಲೆಗೆ ಚಂದರಗಿಯಲ್ಲಿದ್ದ ತೊರಗಲ್ಲ ಸಂಸ್ಥಾನದ ಉದಯಸಿಂಹ ನರಸೋಜಿರಾವ್ ‌ಸಿಂಧೆ ಮಹಾರಾಜರ ಬೇಸಿಗೆ ಅರಮನೆ ಹಾಗೂ ಇತರೆ ಕಟ್ಟಡಗಳನ್ನು ಖರೀದಿಸಿ 1984ರಲ್ಲಿ ಶಾಲೆ ಆರಂಭಿಸಿದರು. ಈ ಶಾಲೆಯಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕ ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳೆರಡರಲ್ಲೂ ಬೋಧಿಸುವುದರ ಜೊತೆ ಜೊತೆಗೆ ಕ್ರೀಡೆಯಲ್ಲೂ ಅವರನ್ನು ತರಬೇತುಗೊಳಿಸುತ್ತಿದೆ.

ಬಗೆಬಗೆಯ ಕ್ರೀಡಾ ತರಬೇತಿ : ಇಲ್ಲಿ ವಿದ್ಯಾರ್ಥಿಗಳಿಗೆ ಜಿಮ್ನಾಸ್ಟಿಕ್ಸ್, ಬ್ಯಾಡ್ಮಿಂಟನ್‌, ಕುಸ್ತಿ, ಟೇಬಲ್ ಟೆನಿಸ್‌ ಮುಂತಾದ ಒಳಾಂಗಣ ಕ್ರೀಡೆಗಳನ್ನು ಕಲಿಸಲು ಪ್ರತ್ಯೇಕ ಕ್ರೀಡಾಂಗಣಗಳಿವೆ. ಈಜು ತರಬೇತಿಗೆ ಬೃಹತ್‌ ಈಜುಗೊಳ ಇದೆ. ವಾಲಿಬಾಲ್‌, ಫುಟ್‌ಬಾಲ್‌, ಬ್ಯಾಸ್ಕೆಟ್‌ ಬಾಲ್, ಹಾಕಿ, ಲಾನ್‌ ಟೆನ್ನಿಸ್‌, ಖೋಖೋ, ಅಟ್ಯಾಪಟ್ಯಾ ಮುಂತಾದ ಆಟಗಳಲ್ಲಿ ತರಬೇತಿ ನೀಡಲು ಹೊರಾಂಗಣ ಕ್ರೀಡಾಂಗಣಗಳ ಸೌಲಭ್ಯವಿದೆ.

ಸಮತೋಲನ ಆಹಾರಕ್ಕೆ ಪ್ರಾಧಾನ್ಯತೆ : ಭವಿಷ್ಯದ ಕ್ರೀಡಾಪಟುಗಳಿಗೆ ಸಮತೋಲನ ಆಹಾರ ದೊರಕಬೇಕೆನ್ನುವುದು `ಸ್ಪೋಕೊ' ಸಂಸ್ಥೆಯ ಮುಖ್ಯ ಧ್ಯೇಯ. ಸಂಸ್ಥೆ ತನ್ನದೇ ಆದ ಡೇರಿ ಫಾರ್ಮ್ ಹೊಂದಿದ್ದು, ಇಲ್ಲಿ 80 ಹಸುಗಳನ್ನು ಸಾಕಾಗಿದೆ. 30 ಎಕರೆ ಪ್ರದೇಶದಲ್ಲಿ ಬಾಳೆ, ಮಾವು, ದಾಳಿಂಬೆ, ಸಪೋಟ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿನ ಭೋಜನಾಲಯ ಅತ್ಯಂತ ವಿಶಾಲವಾಗಿದೆ. 700 ವಿದ್ಯಾರ್ಥಿಗಳು ಏಕಕಾಲಕ್ಕೆ  ಕುಳಿತು ಊಟ ಮಾಡಬಹುದಾಗಿದೆ.

ಪ್ರವೇಶ ಪರೀಕ್ಷೆ : ಈ ಕ್ರೀಡಾ ವಸತಿ ಶಾಲೆಯ 6ನೇ ತರಗತಿಗೆ ಪ್ರವೇಶ ಪಡೆಯಲು ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ತೃಪ್ತಿದಾಯಕ ಅಂಕ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಪ್ರತ್ಯೇಕ ವಸತಿ ಸೌಕರ್ಯ : ಇಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಧ್ಯಾರ್ಥಿಗಳಿಗೆ ಪ್ರತ್ಯೇಕ ನಸತಿ ವ್ಯಯಸ್ಥೆ ಕಲ್ಪಿಸಲಾಗಿದೆ. ಅದರ ಜೊತೆಗೆ ಪಿಯುಸಿ ವಿದ್ಯಾರ್ಥಿಗಳಿಗೂ ಪ್ರತ್ಯೇಕ ವಸತಿ ಸೌಕರ್ಯ ಕಲ್ಪಿಸಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ