ದೊಡ್ಡಬಳ್ಳಾಪುರದ ಹೊರಲಯದಲ್ಲಿ ಸುಂದರ ಪರಿಸರದಲ್ಲಿ ದೇವರಾಜ್‌ ಅರಸ್‌ ಇಂಟರ್‌ ನ್ಯಾಷನಲ್ ರೆಸಿಡೆನ್ಶಿಯ್‌ ಸ್ಕೂಲ್ ಸ್ಥಾಪನೆಗೊಂಡಿದೆ. ಇದರ ಸಂಸ್ಥಾಪಕರು ಹಿರಿಯ ರಾಜಕಾರಣಿ ಹಾಗೂ ಶಿಕ್ಷಣ ಪ್ರೇಮಿ ಆರ್‌.ಎಲ್. ಜಾಲಪ್ಪ. ಅವರು 2003ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ್‌ ಅರಸ್‌ರ ಹೆಸರಿನಲ್ಲಿ ಈ ವಸತಿ ಶಾಲೆಯನ್ನು ಆರಂಭಿಸಿದರು. ಸುಮಾರು 85 ಎಕರೆ ವಿಶಾಲ ಹಸಿರು ಆವರಣದ ಮಧ್ಯದಲ್ಲಿ ಈ ಶಾಲೆ ಇದೆ. ಈ ಶಾಲೆಯ ಆವರಣದೊಳಗೆ ಕಾಲಿಡುತ್ತಿದ್ದಂತೆ ಯಾವುದೋ ಉದ್ಯಾನದಲ್ಲಿ ಪ್ರವೇಶಿಸಿದ ಅನುಭವಾಗುತ್ತದೆ. ಈ ವಸತಿ ಶಾಲೆಯಲ್ಲಿ ಪ್ರಸ್ತುತ 4ನೇ ತರಗತಿಯಿಂದ 10ನೇ ತರಗತಿ ತನಕ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅದರಲ್ಲಿ ಬಾಲಕಿಯರು ಕೂಡ ಇದ್ದಾರೆ.

ಪಠ್ಯಕ್ರಮ : ಈ ಶಾಲೆ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಿಕೊಂಡಿದ್ದು, ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪ್ರಯತ್ನಿಸುತ್ತಿದೆ.

ಪ್ರವೇಶ ಪರೀಕ್ಷೆ : ಈ ಶಾಲೆಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನೇನೋ ನಡೆಸಲಾಗುತ್ತದೆ. ಆದರೆ ವಿದ್ಯಾರ್ಥಿ ಉತ್ತೀರ್ಣರಾದರಷ್ಟೇ ಪ್ರವೇಶ ಎಂಬ ಮಾತು ಇಲ್ಲಿ ನಡೆಯುವುದಿಲ್ಲ. ವಿದ್ಯಾರ್ಥಿಯೊಬ್ಬ ಯಾವ ವಿಷಯಗಳಲ್ಲಿ ಸಮರ್ಥನಾಗಿದ್ದಾನೆ, ಯಾವ ವಿಷಯದಲ್ಲಿ ದುರ್ಬಲನಾಗಿದ್ದಾನೆ ಎಂಬುದನ್ನು ಕಂಡುಕೊಂಡು, ಅಕಾಡೆಮಿಕ್‌ ವರ್ಷದಲ್ಲಿ ಅವನನ್ನು ಯಾವ ರೀತಿ ಸನ್ನದ್ದುಗೊಳಿಸಬೇಕು ಎಂಬ ಯೋಜನೆ ರೂಪಿಸಲು ಈ ಪರೀಕ್ಷೆ ನೆರವಾಗುತ್ತದೆ ಎಂದು ಶಾಲೆಯ ಪ್ರಿನ್ಸಿಪಾಲರಾಗಿರುವ ಆರ್‌. ದೇವಿಕಾ ರಾಣಿ ಹೇಳುತ್ತಾರೆ.

ಒತ್ತಡರಹಿತ ಶಿಕ್ಷಣ : ಬೆಂಗಳೂರು ಸುತ್ತಮುತ್ತಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ, ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಇಲ್ಲಿ ಮುಖ್ಯವಾಗಿ ಕಂಡುಬರುವುದು ಪ್ರೀತಿಪೂರ್ವಕ ಶಿಸ್ತು ಹಾಗೂ ಒತ್ತಡರಹಿತ ಕಲಿಕೆ. ಮಗು ಕಲಿಕೆಯಲ್ಲಿ, ಬರವಣಿಗೆಯಲ್ಲಿ, ಗ್ರಹಿಕೆಯಲ್ಲಿ ಯಾವುದರಲ್ಲಿ ಕೊರತೆ ಇದೆ ಎಂಬುದನ್ನು ಕಂಡುಕೊಂಡು, ಆ ಕೊರತೆಯನ್ನು ನೀಗಿಸಲು ಶಿಕ್ಷಕರು ಶಾಲಾ ಅವಧಿಯ ಬಳಿಕ ಅಂದರೆ ವಿದ್ಯಾರ್ಥಿಗಳು ನಿದ್ರೆಗೆ ಹೋಗುವ ತನಕ ಅವರ ಸಂದೇಹ ನಿವಾರಿಸುತ್ತಾರೆ. ಹೀಗಾಗಿ ಕಲಿಕೆಯಲ್ಲಿ ಅಸಮರ್ಥವಾಗಿರುವ ಮಗು ಕೆಲವೇ ತಿಂಗಳಿನಲ್ಲಿ ಪ್ರಗತಿಯತ್ತ ದಾಪುಗಾಲು ಹಾಕುವುದು ಅರಿವಿಗೆ ಬರುತ್ತದೆ.

ಕೃಷಿ ಪರಿಚಯ : ನಗರ ಪ್ರದೇಶಗಳಿಂದ ವಸತಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಅಷ್ಟಾಗಿ ಅರಿವಿರುವುದಿಲ್ಲ. ಅವರಿಗೆ ಕೃಷಿ ಚಟುವಟಿಕೆಗಳನ್ನು ಕಣ್ಣಾರೆ ಕಾಣಲು ಶಾಲೆಯ ಆವರಣದಲ್ಲಿರುವ ತೋಟಗಳಿಗೆ ಕರೆದುಕೊಂಡು ಹೋಗಿ ಪರಿಚಯಿಸಲಾಗುತ್ತದೆ.

ಕ್ರೀಡೆಯ ಪ್ರಾಮುಖ್ಯತೆ : ದೇವರಾಜ್‌ ಅರಸ್‌ ಇಂಟರ್‌ ನ್ಯಾಷನಲ್ ಶಾಲೆಯ  ಸಂಸ್ಥಾಪಕರಾದ ಆರ್‌.ಎಲ್. ಜಾಲಪ್ಪ ಅವರಿಗೆ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ. ಮಕ್ಕಳಿಗೆ ಪಾಠಗಳ ಜೊತೆ ಜೊತೆಗೆ ಆಟಗಳ ಬಗೆಗೂ ಒಲವು ಮೂಡಿಸಬೇಕೆಂದು ಅವರು ಒತ್ತಿ ಹೇಳುತ್ತಿರುತ್ತಾರೆ. ಹೀಗಾಗಿ ಈ ಶಾಲೆಯ ಆವರಣದಲ್ಲಿ ಅನೇಕ ಕ್ರೀಡಾಂಗಣಗಳು ನೋಡಲು ಸಿಗುತ್ತವೆ. ರಾಷ್ಟ್ರಮಟ್ಟದ ಕೋಚ್‌ಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಹಾಕಿ ತರಬೇತಿ ಕೊಡಿಸಲಾಗುತ್ತದೆ. ಫುಟ್‌ಬಾಲ್, ಹ್ಯಾಂಡ್‌ ಬಾಲ್‌, ಬ್ಯಾಸ್ಕೆಟ್‌ ಬಾಲ್ ತರಬೇತಿ ಕೂಡ ನೀಡಲಾಗುತ್ತದೆ. ಈ ಹೊರಾಂಗಣ ಕ್ರೀಡೆಗಳ ಜೊತೆ ಜೊತೆಗೆ ಚೆಸ್‌ ಕೇರಂ, ಟೇಬಲ್ ಟೆನಿಸ್‌ ಆಟಗಳನ್ನು ಕಲಿಸಲಾಗುತ್ತದೆ. ಕ್ರೀಡಾಂಗಣಗಳ ಸಮೀಪ ಒಂದು ಬೃಹತ್‌ ಈಜುಕೊಕೊಳ ಕೂಡ ಇದೆ. ವಿದ್ಯಾರ್ಥಿಗಳಿಗೆ ಪ್ರತಿದಿನ ಮುಂಜಾನೆ ಯೋಗ, ಕರಾಟೆ ಮುಂತಾದವುಗಳನ್ನು ಹೇಳಿ ಕೊಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ