ಇಂದಿನ ಮಹಿಳೆ ತನ್ನ ಕನಸುಗಳನ್ನು ಸಾಕಾರಗೊಳಿಸಲು ಹಿಂದೇಟು ಹಾಕುವುದಿಲ್ಲ. ತನ್ನ ಅಭಿಪ್ರಾಯಗಳ ಜೊತೆಜೊತೆಗೆ ಉನ್ನತ ಸ್ಥಾನ ಪಡೆಯುವ ಆಕಾಂಕ್ಷೆಯನ್ನು ಹೊಂದಿರುತ್ತಾಳೆ. ಅವಳ ಈ ಯಶಸ್ಸು ಒಂದು ಮಿತಿಯಲ್ಲಿ ಅವಳಿಗೆ ಸಿಗುತ್ತಿರುವ ಕಾನೂನು ಹಾಗೂ ಸಾಮಾಜಿಕ ಬಿಡುಗಡೆಯ ಪರಿಣಾಮವಾಗಿದ್ದರೂ ಬಹಳಷ್ಟು ಕಾನೂನು ಹಾಗೂ ಸಾಮಾಜಿಕ ಬಂಧನಗಳು ಬೇಡಿಗಳಾಗಿ ಅವಳ ಹೆಜ್ಜೆಗಳನ್ನು ತಡೆಯುತ್ತಿವೆ.
ಅಂತಹ ಬಿಡುಗಡೆ ಮತ್ತು ಬಂಧನಗಳ ಬಗ್ಗೆ ಕೊಂಚ ದೃಷ್ಟಿ ಹಾಯಿಸೋಣ.
ಅತ್ಯಾಚಾರ ಪೀಡಿತೆಗೆ ಗರ್ಭಪಾತದಿಂದ ಮುಕ್ತಿ : 35 ವರ್ಷದ ಹಾಲೋಬಿ ಎಂಬಾಕೆಯನ್ನು 2012ರ ನವೆಂಬರ್ 21 ರಂದು ಉಸ್ಮಾನ್ ಎಂಬ ವ್ಯಕ್ತಿಯ ಹತ್ಯೆಯ ಆರೋಪದಲ್ಲಿ ಬಂಧಿಸಲಾಗಿತ್ತು. ಹೇಳಿಕೆಯ ಪ್ರಕಾರ ಹಾಲೋಬಿಯನ್ನು ವೇಶ್ಯಾ ವೃತ್ತಿಗಾಗಿ ಅವಳ ಗಂಡ ಆಮಿನ್, ಉಸ್ನಾನ್‌ಗೆ ಮಾರಿದ್ದ. ಅಲ್ಲಿ ಅವಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಲಾಯಿತು.
2012ರ ಡಿಸೆಂಬರ್‌ನಲ್ಲಿ ಮೆಡಿಕಲ್ ಟೆಸ್ಟ್ ನಲ್ಲಿ ಅವಳಿಗೆ ಸುಮಾರು 6 ವಾರಗಳ ಗರ್ಭ ಇದೆಯೆಂದು ತಿಳಿಯಿತು. ಇದು ಆ ಅತ್ಯಾಚಾರಿಗಳಿಂದಲೇ ನಡೆದಿದ್ದು. ಅವಳು ಈ ಗರ್ಭದಿಂದ ಮುಕ್ತಿ ಪಡೆಯಲು ಇಚ್ಛಿಸಿದ್ದಳು. ಆದರೆ ಜೇಲ್ ವ್ಯವಸ್ಥಾಪಕರು ಅದಕ್ಕೆ ಅನುಕೂಲ ಮಾಡಿಕೊಡಲಿಲ್ಲ. ಅದರಿಂದ ಬೇಸರಗೊಂಡ ಹಾಲೋಬಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳನ್ನು ರಕ್ಷಿಸಲಾಯಿತು. ಜನವರಿ 2013ರಲ್ಲಿ ಅವಳು ಒಂದು ಪಿಟಿಶನ್ ಫೈಲ್ ಮಾಡಿ ಕಾನೂನಿನ ಸಹಾಯ ಕೇಳಿದಳು.
ಕೊನೆಗೆ ಮಧ್ಯಪ್ರದೇಶದ ಹೈಕೋರ್ಟ್, ಭಾರತದ ಸಂವಿಧಾನದ ಸೆಕ್ಷನ್ 21ನ್ನು ಉದಾಹರಿಸುತ್ತಾ ಯಾವುದೇ ಮಹಿಳೆಗೆ ಅತ್ಯಾಚಾರಿಯ ಮಗುವಿಗೆ ಜನ್ಮ ಕೊಡಲು ಒತ್ತಾಯ ಮಾಡುವಂತಿಲ್ಲ. ಏಕೆಂದರೆ ಅದು ಅವಳಿಗೆ ಗಾಢವಾದ ಮಾನಸಿಕ ಆಘಾತ ನೀಡುತ್ತದೆ. ಎಂಟಿಪಿ (ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ) ಪ್ರಕಾರ ಇದರ ಬಗ್ಗೆ ಡಾಕ್ಟರ್ ಮತ್ತು ರೇಪ್‌ಗೆ ಒಳಗಾದ ಮಹಿಳೆ ತೀರ್ಮಾನ ತೆಗೆದುಕೊಳ್ಳಬೇಕು. ಆ ಮಹಿಳೆಗೆ ಗರ್ಭಪಾತವನ್ನು ಮೆಡಿಕಲ್ ಸೌಲಭ್ಯ ಕೊಡಬೇಕು ಎಂದು ತನ್ನ ತೀರ್ಪಿನಲ್ಲಿ ತಿಳಿಸಿತು.
ಗುಜರಾತ್ ಹೈಕೊರ್ಟ್ ಕೂಡ 2011ರ ಫೆಬ್ರರಿಯಲ್ಲಿ ಅತ್ಯಾಚಾರಕ್ಕೆ ಗುರಿಯಾದ 18 ವರ್ಷದ ಒಬ್ಬ ದಲಿತ ಹುಡುಗಿಯ ಪರವಾಗಿ ಜಸ್ಟೀಸ್ ಅನಂತ್ ಎಸ್‌ಡಿ, ಇಂತಹ ಪರಿಸ್ಥಿತಿಯಲ್ಲಿ ಗರ್ಭವನ್ನು ಟರ್ಮಿನೇಟ್ ಮಾಡುವುದು ತಪ್ಪಲ್ಲ ಎಂದರು.
ಆ್ಯಂಟಿ ರೇಪ್ ಬಿಲ್ : 2013ರ ಏಪ್ರಿಲ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ಮಾಡಿದ ಈ ಆ್ಯಂಟಿ ರೇಪ್ ಬಿಲ್‌ಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದೆ.ಈ ಹೊಸ ಬಿಲ್‌ನಲ್ಲಿ ಸಾಧಾರಣ ಸೆಕ್ಸ್ ಅಪರಾಧಗಳಿಗೆ ಶಿಕ್ಷೆ ಹೆಚ್ಚಿಸಿರುವುದಲ್ಲದೆ, ಅತ್ಯಾಚಾರದ ವಿಷಯದಲ್ಲಿ ಕನಿಷ್ಠ 20 ವರ್ಷ ಮತ್ತು ಗರಿಷ್ಠ ಗಲ್ಲು ಶಿಕ್ಷೆಗೆ ಅವಕಾಶ ನೀಡಲಾಗಿದೆ.
ಇದರ ಪ್ರಕಾರ ಮಹಿಳೆಯ ಸಂವೇದನಾಶೀಲ ಅಂಗಗಳ ಸ್ಪರ್ಶವನ್ನು ಈಗ ಅತ್ಯಾಚಾರವೆಂದು ಪರಿಗಣಿಸಲಾಗುವುದು.
ಉಗ್ರವಾಗಿ ದಾಳಿ ಮಾಡುವವರಿಗೆ 10 ವರ್ಷದ ಶಿಕ್ಷೆ ವಿಧಿಸಲಾಗುದು.
ಇಣುಕಿ ನೋಡುವುದು, ಹಿಂಬಾಲಿಸುವುದು ಇತ್ಯಾದಿ ವಿಷಯಗಳಲ್ಲಿ ಎರಡನೇ ಬಾರಿ ಜಾಮೀನು ಸಿಗುವುದಿಲ್ಲ. ಪದೇ ಪದೇ ಹಿಂಬಾಲಿಸುವವರಿಗೆ ಗರಿಷ್ಠ 5 ವರ್ಷ ಶಿಕ್ಷೆ ವಿಧಿಸಲಾಗುದು.