ಉಸಿರೇ ನಿಂತು ಹೋದಂತೆ : ಇಗೊಳ್ಳಿ, ಪ್ರಸ್ತುತವಿದೆ ಅದ್ಭುತ ಕಲಾಕೃತಿ, ಇದರಲ್ಲಿ ಆರ್ಟಿಸ್ಟ್ ಸ್ವಯಂ ಆರ್ಟ್‌ನ ಭಾಗವಾಗಿದ್ದಾಳೆ! ಪರ್ಫಾರ್ಮೆನ್ಸ್ ಇನ್‌ಸ್ಟೀಶನ್‌ ಹೆಸರಿನಲ್ಲಿ ಜನಪ್ರಿಯವಾಗಿರುವ ಈ ಕಲೆಯಲ್ಲಿ ಮಿಲೀ ಬ್ರೌನ್‌, ತನ್ನನ್ನು ತಾನು ಒಂದು ಗ್ಯಾಲರಿಯಲ್ಲಿ  ಹೀಗೆ ತೂಗುಬಿಟ್ಟಿದ್ದಾಳೆ. ಇವಳ ಸುತ್ತಲೂ ಕ್ರಿಸ್ಟ್‌ನ ಬಣ್ಣಬಣ್ಣದ ಪೀಸ್‌ಗಳಿವೆ. ಅದರಿಂದ ಸಪ್ತವರ್ಣದ ಕಾಂತಿ ಹೊರಹೊಮ್ಮುತ್ತಿರುತ್ತದೆ. ಈಗ ಈ ಅದ್ಭುತ ಮೋಡಿ ಮಿಲೀಬ್ರೌನ್‌ಳ ಬಾಡಿಯದೋ ಅಥವ್ ಅಲ್ಲಿ ಮೂಡಿದ ಕಾಮನಬಿಲ್ಲಿನದೋ ಎಂದು ಕಸಿವಿಸಿಗೊಳ್ಳದಿರಿ.

ಎಷ್ಟೇ ಒತ್ತಡ ಹೇರಿದ್ದರೂ ಸಹ : ಇಸ್ಲಾಂ ಧರ್ಮ ಎಷ್ಟೇ ಪ್ರಯತ್ನಿಸಲಿ, ಅದು ಧರ್ಮದ ಹೆಸರಿನಲ್ಲಿ ನಕ್ಕು ನಲಿಡಾಡುವುದನ್ನು ನಿಯಂತ್ರಿಸಲಾಗದು. ಇಲ್ಲಿನ ಚಿತ್ರದಲ್ಲಿರುವ ನದಿಯಾ ಮಂಝೂರ್‌ ಕಾಮಿಡಿಯನ್‌ ಆಗಿ ಯಶಸ್ವಿಯಾದಳು. ಗೆಳತಿ ರಾಧಿಕಾ ರಾಜ್‌ಳ ಜೊತೆ ತನ್ನ `ಶ್ಯಾಗ್ಸ್  ಫೈಟ್ಸ್’ ಆಂಗ್ಲ ಚಿತ್ರಕ್ಕಾಗಿ ಪ್ರಶಸ್ತಿ ಪಡೆಯಲೆಂದು ನ್ಯೂಯಾರ್ಕ್‌ಗೆ ಬಂದಾಗ ಸೆಲ್ಛಿಗಾಗಿ ಪೋಸ್‌ನೀಡಿದ್ದು ಹೀಗೆ.

ಮುಗುಳ್ನಗೆ ಅಂತೂ ಇರುತ್ತದೆ : ಸೌಂದರ್ಯ ಸ್ಪರ್ಧೆಗಳಾದ ಮಿಸ್‌ ಕಾಂಟೆಸ್ಟ್ ಗಳಲ್ಲಿ ಇದೀಗ ಫಿಟ್‌ನೆಸ್‌ ಸಹ ಸೇರಿಕೊಂಡಿದೆ. ಇತ್ತೀಚೆಗೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಇಂಥ ಒಂದು ಕಾಂಟೆಸ್ಟ್ ನಲ್ಲಿ ಅತಿ ವೇಗದ ಜುಂಬಾ ಫಿಟ್‌ನೆಸ್‌ ಎಕ್ಸರ್‌ಸೈಜ್‌ಗಳನ್ನೂ ಪ್ರಾಕ್ಟೀಸ್‌ ಮಾಡಿಸಲಾಯಿತು. ಮಿಸ್‌ ಅಂಗೋಲಾ ಎನಿಸಿದ ಪೇಜೆಂಟ್‌ ಜುಲೈಕಾ ವಿಲ್ಸನ್‌ಗಳ ಪೋಸ್‌ಗಮನಿಸಿ.

ಓಪನ್ಮೈಂಡ್ಮತ್ತು ಸ್ವಾತಂತ್ರ್ಯದ ಮಜಾ : ಈ ತರಹದ ರಾಂಪ್‌ನ ಫ್ಯಾಷನ್‌ ಮಾಮೂಲಿ ಎನಿಸಿದೆ, ಆದರೆ ಇಲ್ಲಿನ ವಿಶೇಷ ಎಂದರೆ, ಇದು ನಡೆದದ್ದು ಲೆಬನಾನಿನ ರಾಜಧಾನಿ ಬೈರೂತ್‌ನಲ್ಲಿ. ಈ ಪ್ರದೇಶವಂತೂ ಇಸ್ಲಾಮಿ ಕಂದಾಚಾರಿಗಳ ಕಪಿಮುಷ್ಟಿಗೆ ಬಲವಾಗಿ ಸಿಲುಕಿರುವಂಥದು. ಇಷ್ಟೆಲ್ಲದರ ನಡುವೆ, ಮರುಭೂಮಿಯಲ್ಲಿನ ಓಯಸಿಸ್‌ನಂತೆ ಇಲ್ಲಿನ ಆಧುನಿಕ ಯುವತಿಯರು, ಓಪನ್‌ ಮೈಂಡ್‌ ಹಾಗೂ ಸ್ವಾತಂತ್ರ್ಯದ ಮಜಾ ಪಡೆಯುತ್ತಿದ್ದಾರೆ. ಆದರೆ ಇದು ಎಷ್ಟು ದಿನ ನಡೆಯುತ್ತದೋ ಹೇಳಲಾಗದು. ಇಸ್ಲಾಮಿಕ್‌ ಸ್ಟೇಟ್‌ನ ಕಬಂಧ ಬಾಹುಗಳು ಏನೆಲ್ಲ ಕಬಳಿಸಲಿವೆಯೋ….. ಹೇಳಲಾಗದು.

ಬೇಗ ಅರ್ಥವಾಗಿ ಹೋದರೆ ಅದೆಂಥ ಆರ್ಟ್‌! : ಈ ಪೇಂಟಿಂಗ್‌ನಲ್ಲಿ ವಿಭಿನ್ನ ಮುದ್ರೆಗಳಲ್ಲಿ ಈ ಉದ್ಯೋಗಸ್ಥ ವನಿತೆ ಏನು ಮಾಡುತ್ತಿದ್ದಾಳೋ, ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಬ್ಬರು ವೀಕ್ಷಕರು ಬಹಳ ತಲೆ ಕೆಡಿಸಿಕೊಂಡಂತಿದೆ. ನಿಮಗೇನಾದರೂ ಅರ್ಥವಾಯ್ತೆ? ಟ್ರೈ ಮಾಡಿ ನೋಡಿ……

ಮಾಡಿದ್ದುಣ್ಣೋ ಮಾರಾಯ : ಸಾಮಾನ್ಯವಾಗಿ ಬರದ ಕಾಟದಿಂದ ತತ್ತರಿಸಿಹೋಗುತ್ತಿದ್ದ ತಮಿಳುನಾಡು ಈ ಬಾರಿ ಭಾರಿ ಭಯಂಕರ ಮಳೆಗೆ ಸಿಲುಕಿ ತತ್ತರಿಸಿದೆ. ಚೆನ್ನೈನ ಮನೆಮನೆಗಳು ಮಳೆಗೆ ಮುಳುಗಿದವು. ಅತಿಯಾದ ಶುಷ್ಕತೆಯ ಕಾರಣ ಜನ ಹಳ್ಳಕೊಳ್ಳ ಒಂದನ್ನೂ ಬಿಡದೆ ಮನೆ ಕಟ್ಟಿಕೊಂಡಿದ್ದರು, ಪ್ರಕೃತಿ ಧರ್ಮಕ್ಕೆ ವಿರುದ್ಧ ಧನ ದಾಹ ಬಾಯ್ತೆರೆದಿತ್ತು. ಈ ರೀತಿ ಧೋ ಎಂದು ವಾರಗಟ್ಟಲೆ ಮಳೆ ಸುರಿದಾಗ, ಆ ನೀರು ಹರಿದು ಯಾವ ಹಳ್ಳಕ್ಕೆ ಹೋದೀತು? ಹೀಗಾಗಿ ಅದು ಹಲವು ಅಂತಸ್ತುಗಳ ಮನೆಗಳನ್ನೂ ಮುಳುಗಿಸಿತು. ಈ ಮಧ್ಯೆ  ಒಂದು ಸಣ್ಣ ಛತ್ರಿ ಈಕೆಯನ್ನು ಎಷ್ಟು ಮಹಾ ಕಾಪಾಡಲು ಸಾಧ್ಯ?

ಸಿಡಿದೆದ್ದ ಬೆಂಕಿ ಕಿಡಿ : ಗುಜರಾತ್‌ನ ಪಾಟೀದಾರ್‌ ಸಮಾಜದ ವಿದ್ರೋಹವನ್ನು ಹತ್ತಿಕ್ಕಲೆಂದು ಪ್ರಧಾನಿಯ ಸರ್ಕಾರ ಸಕಲ ಪ್ರಯತ್ನಗಳನ್ನೂ ಮಾಡುತ್ತಿದೆ, ಆ ಸಮುದಾಯದ ಮುಖಂಡರನ್ನು ಅನಗತ್ಯ ಕೇಸುಗಳಲ್ಲಿ ಸಿಲುಕಿಸಿ ಒಳಗೆ ಕೂಡಿ ಹಾಕಿದೆ. ಹೀಗಾಗಿ ಅಲ್ಲಿನ ಮಹಿಳೆಯರೂ ಕೂಡ ಹಾರ್ದಿಕ್‌ ಪಟೇಲ್‌ರ ನೆರವಿಗೆಂದೇ, ಸಾಮಾನ್ಯ ಹಬ್ಬಗಳಿಗೂ ರಾಜಕೀಯದ ಬಣ್ಣ ನೀಡುತ್ತಿದ್ದಾರೆ. ತಲೆಯ ಮೇಲಿರಿಸಿಕೊಂಡ ಮಡಕೆಗಳಲ್ಲಿ ಉರಿಯುತ್ತಿರುವ ಹಣತೆ ಇರಿಸಿಕೊಂಡು ಪಾಟೀದಾರ್‌ ಸಮುದಾಯದ ಹೆಂಗಸರು ಮೆರವಣಿಗೆ ಹೊರಟು, ತಮ್ಮ ಹಕ್ಕಿಗಾಗಿ ಹೋರಾಡಲು ರಸ್ತೆಗಿಳಿದರು. ತಮ್ಮ ತವರುಮನೆಗೆ ಬಿದ್ದ ಈ ಕಿಡಿ ನಂದಿಸುವವರೇ ನಮ್ಮ  ಪ್ರಧಾನಿ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ