ಬೆಂಗಳೂರಿನ ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿರುವ ನಾನು, ಹಲವು ಹಿಮ ಪರ್ವತಗಳಲ್ಲಿ ಚಾರಣ ಮಾಡಿದ ಅನುಭವಿದ್ದ ನನಗೆ, ಈ ಬಾರಿಯ ಚಾರಣ ವಿಭಿನ್ನತೆಯಿಂದ ಕೂಡಿತ್ತು. ಕಾರಣ ಪ್ರತಿ ಸಾರಿ ಚಾರಣದ ಚಿತ್ರಗಳ ವಿಡಿಯೋಗಳನ್ನು ಮಕ್ಕಳಿಗೆ ತೋರಿಸಿ ಪಾಠಗಳಲ್ಲಿ ಬಳಸಿಕೊಳ್ಳುತ್ತಿದ್ದೆ. ಚಿತ್ರಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು ತಮ್ಮನ್ನೂ ಕರೆದುಕೊಂಡು ಹೋಗುವಂತೆ ದುಂಬಾಲು ಬೀಳುತ್ತಿದ್ದರು.

ಯಾವುದೇ ತರಬೇತಿ ಇಲ್ಲದ ಈ ಮಕ್ಕಳನ್ನು ಕರೆದುಕೊಂಡು ಹೋಗುವುದು ಸುಲಭದ ಮಾತಲ್ಲ ಎಂದು ಯೋಚಿಸುತ್ತಿರುವಾಗ ಸಹಾಯಕ್ಕೆ ಬಂದದ್ದು ಹಿರಿಯ ಉಪನ್ಯಾಸಕಿ ಪ್ರಶಾಂತಿ ಮೇಡಂ ಹಾಗೂ ಸಹೋದ್ಯೋಗಿಗಳು. ನೋಡಿಯೇಬಿಡೋಣ ಎಂಬ ಸಾಹಸಕ್ಕೆ ಕೈ ಹಾಕಿದೆ. ಆಗ ಎದುರಾದದ್ದು ಹಣದ ಸಮಸ್ಯೆ. ತಟ್ಟನೆ ನೆನಪಾದದ್ದು ಬೆಂಗಳೂರು ಉತ್ತರ ವಲಯದ ರೋಟರಿ ಸಂಸ್ಥೆ. ಇವರ ಧನ ಸಹಯೋಗದೊಂದಿಗೆ ಪ್ರವೇಶ ಶುಲ್ಕವನ್ನು ಭರಿಸಲಾಯಿತು. ನಂತರ ಚಾರಣಕ್ಕೆ ಅಗತ್ಯವಾದ ಪೋಷಕರ ಒಪ್ಪಿಗೆ ಪತ್ರ, ಇಲಾಖಾ ಅನುಮತಿ ಪಡೆದು ಚಾರಣದ ಸಿದ್ಧತೆ ಪ್ರಾರಂಭವಾಯಿತು. ಮಕ್ಕಳಿಗೆ ಪ್ರಥಮ ಚಾರಣವಾದ್ದರಿಂದ ತರಬೇತಿಯನ್ನು ಸಹ ನೀಡಲಾಯಿತು. 7 ದಿನದ ನಮ್ಮ ಚಾರಣದಲ್ಲಿ 20 ವಿದ್ಯಾರ್ಥಿಗಳು, ಇಬ್ಬರು ಉಪನ್ಯಾಸಕರು, ಹಳೆಯ ವಿದ್ಯಾರ್ಥಿ ಸೇನೆಯಲ್ಲಿರುವ ಸಂತೋಷ್‌ ಹಾಗೂ ವಿವಿಧ ರಾಜ್ಯಗಳಿಂದಲೂ ಸಹಚಾರಣಿಗರು ಭಾಗವಹಿಸಿದ್ದರು. ನಮ್ಮ ತಂಡದಲ್ಲಿ ಒಟ್ಟು 39 ಜನ ಚಾರಣಿಗರಿದ್ದರು.

ಡಿಸೆಂಬರ್‌ 15ರಂದು ಮಧ್ಯಾಹ್ನ 2.30ಕ್ಕೆ ವಾಸ್ಕೋ ರೈಲಿನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಬೀಳ್ಕೊಡಲು ಪೋಷಕರು ಸ್ನೇಹಿತರ ದಂಡೇ ಆಗಮಿಸಿತ್ತು. ಶಿವ ಮತ್ತು ಸ್ನೇಹಿತರು ಚಾರಣಿಗರಿಗೆ ಅನುಕೂಲವಾಗಲೆಂದು ಒಂದು ಮೂಟೆ ಖಾರಪುರಿ ನೀಡುವುದರ ಮೂಲಕ ಶುಭ ಹಾರೈಸಿದ್ದರು. ವಾಸ್ಕೋ ತಲುಪಿದ ನಮ್ಮನ್ನು ಕರೆದುಕೊಂಡು ಹೋಗಲು ಅಲ್ಲಿನ ಮುಖ್ಯಸ್ಥರಾದ ರೋಹಿದಾಸ್‌ ಬಸ್ಸಿನ ವ್ಯವಸ್ಥೆ ಮಾಡಿದ್ದರು.

ಮೊದಲನೇ ದಿನ : ತಂಡದ ಚಾರಣಿಗರ ನೋಂದಣಿ, ಉದ್ಘಾಟನೆ, ಕ್ಯಾಂಪ್‌ ಫೈರ್‌ ಇರುತ್ತದೆ. ಕ್ಯಾಂಪ್‌ ಫೈರ್‌ನಲ್ಲಿ ತಂಡದ ಚಾರಣಿಗರ ಪರಿಚಯ ಹಾಗೂ ಚಾರಣದ ಪೂರ್ಣ ವಿವರ ನೀಡಲಾಯಿತು. ಗೋವಾದ ಮುಖ್ಯಮಂತ್ರಿ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. 7 ದಿನದ ಈ ಚಾರಣದಲ್ಲಿ 2 ದಿನ ಕಡಲ ತೀರದ ನಡಿಗೆ, 3 ದಿನ ಕಾಡಿನಲ್ಲಿ ಚಾರಣ, ಸುಮಾರು 10 ಕಿ.ಮೀ. ದೂರ ಕ್ರಮಿಸಬೇಕಾಗುವುದು.

ಎರಡನೇ ದಿನ : ಎರಡನೆ ದಿನ ಚಾರಣ ಪ್ರಾರಂಭವಾದದ್ದೇ ಮಧ್ಯಾಹ್ನದ ನಂತರ. ಪಣಜಿಯ ಬೇಸ್‌ ಕ್ಯಾಂಪ್‌ನಿಂದ 1 ಗಂಟೆ ಬಸ್ಸಿನಲ್ಲಿ ಪ್ರಯಾಣಿಸಿ `ಮೊಬರ್‌' ಎಂಬ ಸ್ಥಳವನ್ನು ತಲುಪಿದೆವು. ಇಲ್ಲಿಂದ ಸುಮಾರು 12 ಕಿ.ಮೀ. ದೂರದ `ಬೆನೋಲಿಮ್' ಕ್ಯಾಂಪ್‌ ತಲುಪುದು ನಮ್ಮ  ಗುರಿ. ತಂಪಾದ ಗಾಳಿ ಅಬ್ಬರಿಸಿ ಬರುತ್ತಿರುವ ಅಲೆಗಳ ದಡದಲ್ಲಿ ಒದ್ದೆಯಾದ ಮರಳಿನ ಮೇಲೆ ಹೆಜ್ಜೆ ಹಾಕಿದೆವು. ಮೊದಲ ಎರಡು ದಿನದ ಚಾರಣವನ್ನು ರಾತ್ರಿ ಚಾರಣ ಎಂದರೆ ತಪ್ಪಾಗಲಾರದು. ಸಂಜೆ 6 ಗಂಟೆಗೆ ಶಿವ ಕೊಟ್ಟ ಖಾರಪುರಿ ತಿಂದು ಸೂರ್ಯಾಸ್ತ ವೀಕ್ಷಿಸಿ ಮೊಬೈಲ್ ‌ಬೆಳಕಿನಲ್ಲಿ ನಡಿಗೆ ಪ್ರಾರಂಭಿಸಿದೆವು. ಕ್ಯಾಂಪ್‌ ತಲುಪಿದಾಗ ರಾತ್ರಿ 9 ಗಂಟೆಗೆ ಕ್ಯಾಂಪ್‌ ಲೀಡರ್‌ ನಮಗಾಗಿ ರುಚಿಯಾದ ಊಟದ ವ್ಯವಸ್ಥೆ ಮಾಡಿಸಿದ್ದರು. ಅನುಭವವಿಲ್ಲದ ಮಕ್ಕಳಿಗೆ ಮೊದಲ ದಿನ ಆಯಾಸವಾದ್ದರಿಂದ ಬೇಗ ನಿದ್ರೆಗೆ ಜಾರಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ