ಕಿತ್ತೂರು ರಾಣಿ ಚೆನ್ನಮ್ಮ ಎಂದಾಕ್ಷಣ ಥಟ್ ಅಂತಾ ನಮ್ಮೆಲ್ಲರ ಕಣ್ಮುಂದೆ ಬರುವುದೇ ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ಸಿನಿಮಾದಲ್ಲಿ ಹಿರಿಯ ನಟಿ ಬಿ ಸರೋಜಾ ದೇವಿ ಅವರು ಬ್ರಿಟೀಷರ ಅಧಿಕಾರಿ ಥ್ಯಾಕರೆ ಅವರು ಕಪ್ಪ ಕೇಳಲು ಬಂದಾಗ, ನೀವೇನು ಈ ನೆಲವನ್ನು ಉತ್ತಿರೇ? ಬಿತ್ತಿರೇ? ಬೆಳೆದರೇ? ನಿಮಗೇಕೆ ಕೊಡಬೇಕು ಕಪ್ಪಾ? ನಿಮಗೇಕೆ ಕೊಡಬೇಕು ಕಪ್ಪಾ? ಎಂದು ಅಬ್ಬಿರಿದು ಬಿಬ್ಬಿರಿದ ಸಂಭಾಷಣೆಯೇ ನಮ್ಮ ಕಿವಿಗೆ ಅಪ್ಪಳಿಸುವುದಲ್ಲದೇ, ಅಂತಿಮವಾಗಿ ಆ ಯುದ್ಧದಲ್ಲಿ ಬ್ರಿಟಿಷ್ ಅಧಿಕಾರಿ ಥ್ಯಾಕರೆವನ್ನು ಸೋಲಿಸಿದ್ದನ್ನು ನೋಡಿ ಹೆಮ್ಮೆ ಪಟ್ಟಿದ್ದೇವೆ. ಅಂತಹ ಸಾಹಸಿ ಮತ್ತು ಪ್ರಾತಃಸ್ಮರಣಿಯ ವೀರನಾರಿಯ ಜಯಂತಿಯಂದು ಆಕೆಯ ಯಶೋಗಾಥೆಯನ್ನು ಮೆಲುಕು ಹಾಕುವ ಮೂಲಕ ಆಕೆಗೆ ನಮನಗಳನ್ನು ಸಲ್ಲಿಸೋಣ.

ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 6 ಕಿ.ಮಿ. ದೂರದಲ್ಲಿರುವ ಕಾಕತಿಯ ದೇಸಾಯಿ ಧೂಳಪ್ಪಗೌಡರರಿಗೆ 23 ಅಕ್ಟೋಬರ್ 1778ರಲ್ಲಿ ಚನ್ನಮ್ಮನವರು ಜನಿಸುತ್ತಾರೆ. ಹುಟ್ಟಿನಿಂದಲೇ ಬಹಳ ಮುದ್ದಾಗಿದ್ದರೂ ಅಷ್ಟೇ ಧೈರ್ಯಸ್ಥೆಯಾಗಿದ್ದ ಕಾರಣ ಆಕೆಗೆ ಎಳೆ ವಯಸ್ಸಿನಲ್ಲಿಯೇ ಕುದುರೆ ಸವಾರಿ, ಕತ್ತೀವರಸೆ, ಬಿಲ್ವಿದ್ಯೆಗಳನ್ನು ಆಕೆಗೆ ಕರಗತ ಮಾಡಿಸುವ ಮೂಲಕ ಆಕೆಯ ತಂದೆ ಆಕೆಯನ್ನು ಗಂಡು ಮಕ್ಕಳ ರೀತಿಯಲ್ಲಿ ಬೆಳೆಸಿ ಚಿಕ್ಕವಯಸ್ಸಿನಿಂದಲೇ ಆಕೆಗೆ ನಾಯಕಿಯನ್ನಾಗಿಸಿ ಮದುವೆಯ ವಯಸ್ಸಿಗೆ ಬಂದಾಗ ಅಕೆಯನ್ನು ಪಕ್ಕದ ಕಿತ್ತೂರಿನ ಪಾಳೆಯಗಾರನಾಗಿದ್ದ ಮಲ್ಲಸರ್ಜನೊಂದಿ

ಕಿತ್ತೂರಿನ ರಾಣಿ ಚೆನ್ನಮ್ಮನ ಸಾಧನೆಗಳ ಬಗ್ಗೆ ತಿಳಿದುಕೊಳ್ಳುವ ಮುನ್ನಾ ಕಿತ್ತೂರಿನ ಇತಿಹಾದ ಬಗ್ಗೆ ಸ್ವಲ್ಪ ತಿಳಿಸಿಕೊಳ್ಳುವುದು ಅವಶ್ಯಕವಾಗಿದೆ. ಮೂಲತಃ ಮಲೆನಾಡಿನ ಬೇಡ ಮನೆತನದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ಕಿತ್ತೂರಿನ ಕ್ರಿ.ಶ. 1586 ರಷ್ಟರಲ್ಲಿ ವಿಜಾಪುರದ ಆದಿಲಶಾಹಿ ಸೈನ್ಯಕ್ಕೆ ಸೇರಿಕೊಂಡು ಪರಾಕ್ರಮ ತೋರಿದ ಕಾರಣ ಆ ಸೋದರರಲ್ಲಿ ಹಿರಿಯನಿಗೆ ಶಂಷೇರ್ ಜಂಗ್ ಬಹಾದ್ದೂರ್ ಬಿರುದಿಗೆ ಪಾತ್ರನಾಗಿದ್ದಲ್ಲದೇ, ಹುಬ್ಬಳ್ಳಿ ವಿಭಾಗದ ಸರದೇಶಮುಖ್ ರನ್ನಾಗಿ ನೇಮಿಸಲಾಯಿತು.
ಮುಂದೇ ಆಲ್ಲಿನ ರಾಜಕೀಯ ಪರಿಸ್ಥಿತಿ ಬದಲಾಗುತ್ತಾ, ಹಿಂದೂಸ್ತಾನದಲ್ಲಿ ಮೊಘಲರ ಶಕ್ತಿ ದುರ್ಬಲವಾಗುತ್ತಿದ್ದರೆ, ಅತ್ತ ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶ್ವೆಗಳು, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮನ ಜೊತೆ ಮೈಸೂರಿನ ಹೈದರ್ ಅಲಿ ತಮ್ಮ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಸಣ್ಣ ಪುಟ್ಟ ಪಾಳೆಯಗಾರರ ಮೇಲೆ ಧಾಳಿ ನಡೆಸುತ್ತಾ ವಿಸ್ತರಣಾ ಮನೋಭಾವನೆಯನ್ನು ಬೆಳಸಿಕೊಂಡಿದ್ದರು.
ಇಂತಹ ರಾಜಕೀಯ ಪರಿಸ್ಥಿತಿಯಲ್ಲಿಯೇ ಭಾರತಕ್ಕೆ ವ್ಯಾಪರಕ್ಕೆಂದು ಆಗಮಿಸಿ ನಮ್ಮಲ್ಲಿನ ಒಳಜಗಳನ್ನೇ ಬಂಡವಾಳ ಮಾಡಿಕೊಂಡು ಧೂರ್ತ, ಕ್ರೂರ ಧೋರಣೆಯ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ನಿಧಾನವಾಗಿ ಭಾರತದಲ್ಲಿ ಒಂದೊಂದೇ ಪ್ರದೇಶವನ್ನು ತನ್ನ ಕೈವಶ ಮಾಡಿಕೊಳ್ಳುತ್ತಿತ್ತು. ಅದೇ ಸಮಯದಲ್ಲಿ ಮೈಸೂರಿನ ಟಿಪ್ಪು ಸುಲ್ತಾನ್ ಮಲ್ಲಸರ್ಜನನ್ನು ಬಂಧಸಿ, ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಅದು ಹೇಗೋ ಉಪಾಯದಿಂದ ಆ ಸೆರೆಮನೆಯಿಂದ ತಪ್ಪಿಸಿಕೊಂಡ ಮಲ್ಲಸರ್ಜನನಿಗೆ ಇದೇ ಬ್ರಿಟೀಷ್ ಅಧಿಕಾರಿ ವೆಲ್ಲೆಸ್ಲಿ 1803ರಲ್ಲಿ ನೆರವು ನೀಡುವ ಮೂಲಕ ಮತ್ತೆ ಕಿತ್ತೂರನ್ನು ಭದ್ರ ಗೊಳಿಸಲು ಸಹಾಯ ಮಾಡಿದನು.
ಪೇಶ್ವೆಯವರಿಗೆ 1909ರಲ್ಲಿ 1,75,000 ರಷ್ಟು ಕಪ್ಪ ಕೊಟ್ಟಿದ್ದರೂ ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ೩ ವರ್ಷ ಕಾಲ ಪುಣೆಯಲ್ಲಿ ಸೆರೆ ಇಟ್ಟು ನಂತರ 1918ರಲ್ಲಿ ಬಿಡುಗಡೆ ಮಾಡಿ ಆತ ಕಿತ್ತೂರಿಗ ಮರಳುವಾಗ ದಾರಿಯಲ್ಲೇ ಅಸುನೀಗಿದಾಗ ಮಲ್ಲಸರ್ಜನನ ಮಗ ಶಿವಲಿಂಗ ರುದ್ರಸರ್ಜನು ಮರಾಠರು ಮತ್ತು ಟಿಪ್ಪು ಸುಲ್ತಾನರಿಂದ ಪದೇ ಪದೇ ಧಾಳಿಯ ಕಿರಿಕಿರಿ ತಪ್ಪಿಸಿಕೊಳ್ಳುವ ಸಲುವಾಗಿ ಬ್ರಿಟಿಷರರೊಂದಿಗೆ ಪ್ರತಿ ವರ್ಷ ರೂ. 1,70,000 ಕಪ್ಪ ನೀಡುವ ಒಪ್ಪಂದ ಮಾಡಿಕೊಳ್ಳುತ್ತಾನೆ. ದುರಾದೃಷ್ಟವಷಾ





