ಕ್ರಿಕೆಟ್ ಆಟ ಎನ್ನುವುದು ಇಂಗ್ಲೆಂಡ್‌ನಲ್ಲಿ ಮಕ್ಕಳ ಆಟವಾಗಿ ಬಹುಶಃ 13 ನೇ ಶತಮಾನದಷ್ಟು ಹಿಂದೆಯೇ, ಹುಟ್ಟಿಕೊಂಡಿದ್ದು ನಂತರ 16 ನೇ ಶತಮಾನದಲ್ಲಿ ಆಡಲ್ಪಡುತ್ತಿತ್ತು ಎಂಬುದಕ್ಕೆ 1597 ರ ನ್ಯಾಯಾಲಯದ ಪ್ರಕರಣದಲ್ಲಿ ಮೊದಲ ಲಿಖಿತ ದಾಖಲೆಯಾಗಿ ಕಾಣಿಸಿ ಕೊಂಡಿದೆ. ನಂತರ 18 ನೇ ಶತಮಾನದ ಆರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ನಂತರ ಒಂದೊಂದೇ ರಾಜ್ಯಗಳನ್ನು ಕೈವಶಮಾಡಿಕೊಂಡು ಹೋಗುತ್ತಿರುವಾಗ ಅಂದಿನ ಬ್ರಿಟೀಷ್ ನಾವಿಕರು, ಅಧಿಕಾರಿಗಳು ಮತ್ತು ಸೇವಕರುಗಳು ತಮ್ಮ ತಮ್ಮಲ್ಲೇ ಕ್ರಿಕೆಟ್ ಆಟವಾಡುವ ಮೂಲಕ ಭಾರತಕ್ಕೆ ಕ್ರಿಕೆಟ್ ಪರಿಚಯಿಸಲ್ಪಡುತ್ತದೆ. ಕ್ರಿಕೆಟ್ ಜನಕರು ಇಂಗ್ಲೇಂಡಿಗರಾದರೂ ಪ್ರಸ್ತುತವಾಗಿ ಕ್ರಿಕೆಟ್ ಎನ್ನುವುದು ಭಾರತದ ಉಪಖಂಡಗಳಾದ ಭಾರತ, ಪಾಕೀಸ್ಥಾನ, ಶ್ರೀಲಂಕ ಮತ್ತು ಬಾಂಗ್ಲಾದೇಶಗಳಲ್ಲಿ ಜನಪ್ರಿಯ ಕ್ರೀಡೆಯಾಗಿದ್ದು, ಭಾರತದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕ್ರಿಕೆಟ್ ಎನ್ನುವುದು ಧರ್ಮವಾಗಿ ಹೋಗಿದೆ ಎಂದರೂ ತಪ್ಪಾಗದು.

 

ಬಹುತೇಕರು ಹೇಳುವ ಪ್ರಕಾರ 1983ರ ಪ್ರುಡೆನ್ಷಿಯಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಪಿಲ್ ದೇವ್ ನಾಯಕತ್ವದ ತಂಡ ಅಚ್ಚರಿಯ ರೀತಿಯಲ್ಲಿ ಅಂದಿನ ಕಾಲದ ಕ್ರಿಕೆಟ್ ದಿಗ್ಗಜರಾದ ವೆಸ್ಟ್ ಇಂಡೀಸ್ ಅವರನ್ನು ಸೋಲಿಸಿದ ನಂತರ ಭಾರತದಲ್ಲಿ ಕ್ರಿಕೆಟ್ ಎನ್ನುವುದು ಬಹಳ ಪ್ರಾಮುಖ್ಯತೆ ಪಡೆಯಿತು ಎನ್ನುವುದು ಎಷ್ಟು ಸತ್ಯವೋ ಅದೇ ರೀತಿ, ಆ ಫೈನಲ್ಸ್ ಪಂದ್ಯವನ್ನು ಲಾರ್ಡ್ಸ್ ಕ್ರೀಡಾಂಗಣದಲ್ಲಿ ವೀಕ್ಷಿಸುವ ಸಲುವಾಗಿ ಅಂದಿನ BCCI ಅಧ್ಯಕ್ಷರಿಗೆ ಹೆಚ್ಚುವರಿಯಾಗಿ ಎರಡು ಟಿಕೆಟ್ ನೀಡಲು ನಿರಾಕರಿಸಿದ ಲಾರ್ಡ್ಸ್ ಕ್ರೀಡಾಂಗಣದ ಅಧಿಕಾರಿಗಳ ಉದ್ಧಟತನವೇ ಭಾರತದ ಉಪ ಖಂಡದಲ್ಲಿ ಕ್ರಿಕೆಟ್ ಈ ಪರಿಯಾದ ಧರ್ಮವಾಗಿ ಬೆಳೆಯಲು ಪ್ರೇರೇಪಿಸಿತು ಎಂಬುದೇ ಅಷ್ಟೇ ಸತ್ಯವಾಗಿದ್ದು ಆ ರೋಚಕತೆಯನ್ನು ಎಳೆ ಎಳೆಯಾಗಿ ತಿಳಿಯೋಣ ಬನ್ನಿ.

ಕೆಲವು ದೊರೆತ ದಾಖಲೆಗಳ ಪ್ರಕಾರ ಭಾರತದಲ್ಲಿ ಮೊದಲ ಪಂದ್ಯವು 1721ರಲ್ಲಿ ಕೆಲವು ಬ್ರಿಟಿಷ್ ಅಧಿಕಾರಿಗಳ ನಡುವೆ ನಡೆದರೆ, 1792ರಲ್ಲಿ ಕಲ್ಕತ್ತಾ ಕ್ರಿಕೆಟ್ ಕ್ಲಬ್ ಸ್ಥಾಪನೆ ಅಗುವ ಮೂಲಕ ಭಾರತದ ಮೊದಲ ಕ್ರಿಕೆಟ್ ಕ್ಲಬ್ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಆದರೆ ಇದು ಬ್ರಿಟೀಷರಿಂದ ಸ್ಥಾಪಿಸಲ್ಪಟ್ಟಿತ್ತು. ನಂತರ 1848ರಲ್ಲಿ ಮುಂಬೈನ ಪಾರ್ಸಿ ಸಮುದಾಯವು ಓರಿಯಂಟಲ್ ಕ್ರಿಕೆಟ್ ಕ್ಲಬ್ ಆರಂಭಿಸುವ ಮೂಲಕ ಮೊದಲ ಭಾರತೀಯ ಕ್ರಿಕೆಟ್ ಕ್ಲಬ್ ಎಂಬ ಖ್ಯಾತಿಯನ್ನು ಪಡೆದು ಕ್ರಿಕೆಟ್ ಆಟವನ್ನು ಕರಗತ ಮಾಡಿಕೊಂಡು 1886/1888 ರಲ್ಲಿ ಇದೇ ಪಾರ್ಸೀ ತಂಡವು ಇಂಗ್ಲೆಂಡ್ ಪ್ರವಾಸ ಮಾಡುವ ಮೂಲಕ ಭಾರತೀಯ ತಂಡದ ಮೊದಲ ಅಂತರರಾಷ್ಟ್ರೀಯ ಪ್ರವಾಸವಾಯಿತು. ನಂತರ ಬಾಂಬೆ, ಬರೋಡ, ಜಾಮ್ ನಗರ, ಹೈದರಾಬಾದಿನ ನಿಜಾಮರು ಮುಂತಾದ ಅನೇಕ ರಾಜ ಮಹಾರಾಜರ ಆಸ್ಥೆ ಮತ್ತು ಆಶ್ರಯದಲ್ಲಿ ಕ್ರಿಕೆಟ್ ಭಾರತದಲ್ಲಿ ವ್ಯಾಪಕವಾಯಿತು. 1911ರಲ್ಲಿ ಪಟಿಯಾಲ ಮಹಾರಾಜ ನೇತೃತ್ವದಲ್ಲಿ ಅಖಿಲ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಮಾಡಿದರೆ, 1932ರಲ್ಲಿ ಪೋರಬಂದರ್ ಮಹಾರಾಜರು ಮತ್ತು ಕೆಎಸ್‌ಜಿ ಲಿಂಬ್ಡಿ ರಾಜರುಗಳ ಸಾರಥ್ಯದಲ್ಲಿ ಇಂಗ್ಲೇಂಡ್ ಪ್ರವಾಸ ಮಾಡಿ ಲಾರ್ಡ್ಸ್‌ನಲ್ಲಿ ಮೊದಲ ಅಧಿಕೃತ ಟೆಸ್ಟ್ ಪಂದ್ಯವನ್ನು ಸಿ.ಕೆ. ನಾಯ್ಡು ಅವರ ನಾಯಕತ್ವದಲ್ಲಿ ಆಡುವ ಮೂಲಕ ಅಧಿಕೃತವಾಗಿ ಕ್ರಿಕೆಟ್ ಟೆಸ್ಟ್ ಆಡುವ 6ನೇ ರಾಷ್ಟ್ರವಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ