ಧರ್ಮ ಇಷ್ಟು ಬೆದರಿಸುವುದಾದರೂ ಏಕೆ?
ವಿಶ್ವದ ಕೆಲವು ಸಂಸ್ಥೆಗಳು, ಬೇಡದ ಅನಗತ್ಯ ವಸ್ತುಗಳ ಪಟ್ಟಿ ಮಾಡುತ್ತಾ ಇರುತ್ತವೆ. ಆದರೆ ಈ ಪಟ್ಟಿಯಲ್ಲೇ ನಮ್ಮ ಜೀವನದ ಸಿಹಿಕಹಿ ಅಡಗಿರುತ್ತದೆ. ನ್ಯೂಸ್‌ವರ್ಲ್ಡ್ ರಿಪೋರ್ಟ್, ವಿಶ್ವದ 35ಕ್ಕೂ ಹೆಚ್ಚಿನ ಫ್ರೆಂಡ್ಲಿ ದೇಶಗಳ ಪಟ್ಟಿ ಮಾಡಿದೆ. ಇದರಲ್ಲಿ ಹೆಚ್ಚಿನ ಯೂರೋಪ್ ಖಂಡಕ್ಕೆ ಸೇರಿವೆ.
ಸಾಮಾನ್ಯವಾಗಿ ಹಣವುಳ್ಳವರು ಬೇಗ ಫ್ರೆಂಡ್ಲಿ ಆಗಿಬಿಡುತ್ತಾರೆ, ಅವರಿಗೆ ಬಡವರಿಂದ ಏನೂ ಆಗಬೇಕಿಲ್ಲ. ಇಂಥವರಿಗೆ ತಮ್ಮ ಬಾಲ್ಯದಿಂದಲೇ, ಇತರ ಜನರ ಬಣ್ಣ, ಮಾತು, ಬಟ್ಟೆಬರೆ, ಸಣ್ಣ ಮನೆ ಇರುವವರ ಕಂಡು ಹೆದರುವ ಅಗತ್ಯವಿಲ್ಲ ಎಂದೇ ಕಲಿಸಲಾಗಿರುತ್ತದೆ. ಹಾಗೆ ನೋಡಿದರೆ ಎಲ್ಲಕ್ಕಿಂತ ಹೆಚ್ಚು ಬೆದರಿಸುವುದು ಅಂದ್ರೆ ಧರ್ಮ! ಯಾರು ನಮ್ಮ ಧರ್ಮದವರಲ್ಲೇ ಅವರೆಲ್ಲ ಶತ್ರುಗಳು ಎಂದೇ ಪ್ರತಿ ಧರ್ಮ ಕಲಿಸುತ್ತದೆ.
ಹಿಂದೂ ಧರ್ಮವಂತೂ ಎಲ್ಲಕ್ಕಿಂತ ಹೆಚ್ಚು ಕಂದಾಚಾರ ಮಾರ್ಗ ಹಿಡಿದಿದೆ. ಯಾವಾಗಿನಿಂದ ಅಧಿಕಾರ ದಾಹಕ್ಕಾಗಿ ಧರ್ಮವನ್ನು ಬಳಸಲಾಗುತ್ತದೋ, ಅಧಿಕಾರ ಉಳಿಸಿಕೊಳ್ಳಲೆಂದು ಧರ್ಮ ನೆಪಾಗಿದೆಯೋ, ಆಗಿನಿಂದ ಧರ್ಮವನ್ನು ಜನರಿಗಾಗಿ ಅಲ್ಲ, ಅವರನ್ನು ಬೆದರಿಸಲೆಂದೇ ಬಳಸಲಾಗುತ್ತಿದೆ! ಇದು ಪ್ರೀತಿ ವಾತ್ಸಲ್ಯಕ್ಕಾಗಿ ಅಲ್ಲ, ಧರ್ಮ ಕಂಡು ಹೆದರಿಕೆ ಇರಲಿ ಎನ್ನಲಾಗುತ್ತಿದೆ.
ಈ ಪಟ್ಟಿಯಲ್ಲಿ ಎಲ್ಲಕ್ಕಿಂತ ಮೇಲೆ ಕೆನಡಾ ಇದೆ. ಅಲ್ಲಿ ನಮ್ಮ ಸಿಖ್ಖರು ಬಹಳಷ್ಟು ಮಂದಿ ಇದ್ದಾರೆ. ಕೆನಡಾದವರ ಜೊತೆ ಬೆರೆತು ಒಂದಾಗಿ, ಮಂತ್ರಿ ಪದವಿ ಸಹ ಗಿಟ್ಟಿಸಿದ್ದಾರೆ. ಕೆನಡಾ ಸರ್ಕಾರಕ್ಕೆ ತನ್ನದೇ ಆದ ಧರ್ಮವಿಲ್ಲ. ಅದೇ ತರಹ ಅಮೆರಿಕಾ ಸಹ ಹಿಂದೆಲ್ಲ ಬಲು ಫ್ರೆಂಡ್ಲಿ ದೇಶ ಎನಿಸಿತ್ತು. ಆದರೆ ಯಾವಾಗಿನಿಂದ ಅಲ್ಲಿ ಚರ್ಚಿನ ಪ್ರಾಬಲ್ಯ ಶುರುವಾಯಿತೋ ಅದರ ಹೆಸರಲ್ಲಿ `ಮೇಕ್ ಅಮೆರಿಕಾ ಗ್ರೇಟ್ ಅಗೇನ್' ಎನ್ನುತ್ತಲೇ, ಬಿಳಿಯ ಕ್ರೈಸ್ತರು, ಅಮೆರಿಕಾದ ಬಿಳಿಯರಲ್ಲದವರ ಮೇಲೆ ದಬ್ಬಾಳಿಕೆ ನಡೆಸುತ್ತಾ ಅವರನ್ನು ಶತ್ರುಗಳಾಗಿಸಿದ್ದಾರೆ.
ಸ್ಪೇನ್, ನ್ಯೂಝಿಲೆಂಡ್, ನೆದರ್ ಲೆಂಡ್, ಪೋರ್ಚುಗಲ್, ಆಸ್ಟ್ರೇಲಿಯಾ, ಇಟಲಿ, ನಾರ್ವೆ ಇತ್ಯಾದಿ ದೇಶಗಳೂ ಈ ಪಟ್ಟಿಯಲ್ಲಿದ್ದು, 9ನೇ ಸ್ಥಾನದಲ್ಲಿ ಥೈಲೆಂಡಿದೆ. ಹಿಂದೆಲ್ಲ ಅಲ್ಲಿ ಭಾರತೀಯರು ನೆಮ್ಮದಿಯಾಗಿದ್ದರು, ಈಗಲ್ಲ. 22ನೇ ಸ್ಥಾನದಲ್ಲಿ ಮಲೇಷಿಯಾ, 24ನೇ ಸ್ಥಾನದಲ್ಲಿ ಸಿಂಗಾಪುರ್, 33ನೇ ಸ್ಥಾನದಲ್ಲಿ ಏಷ್ಯಾದ ಇಂಡೋನೇಷ್ಯಾ ಹಾಗೂ 35ನೇ ಸ್ಥಾನದಲ್ಲಿ ವಿಯೆಟ್ನಾಂ ಇದೆ.
ವಿಶ್ವದ ಅತಿ ಶ್ರೀಮಂತ ದೇಶ ಅಮೆರಿಕಾ 35 ಸ್ಥಾನಗಳಲ್ಲೂ ಇಲ್ಲ. ಮತ್ತೊಂದು ಶ್ರೀಮಂತ ದೇಶ ಚೀನಾ ಸಹ ಇಲ್ಲ, ಅತಿ ದಟ್ಟ ಜನಸಂದಣಿಯ ಭಾರತ ಇಲ್ಲ! ಈ 3 ದೇಶಗಳೂ ವಿಶಾಲವಾಗಿದ್ದರೂ ಫ್ರೆಂಡ್ಲಿ ಅಲ್ಲ. ಅಮೆರಿಕಾ ಅಂತೂ ಎಷ್ಟು ಅನ್ ಫ್ರೆಂಡ್ಲಿ ಎಂದರೆ, ಅಲ್ಲಿ ಎಷ್ಟು ಜನಸಂಖ್ಯೆ ಇದೋ ಅದಕ್ಕೆ 4 ಪಟ್ಟು ಗನ್ ಪಿಸ್ತೂಲು ರೈಫಲ್ ಹರಡಿವೆ, ಹಾಗಾಗಿಯೇ ಆ ಜನ ಇತರರನ್ನು ಬೆದರಿಸಲೆಂದೇ ಅವನ್ನು ಹೆಚ್ಚು ಬಳಸುತ್ತಾರೆ.
ನಮ್ಮಲ್ಲಿಯಂತೂ ಪೊಲೀಸರ ಬಳಿ ಮಾತ್ರವೇ ಗನ್ ಇರುತ್ತದೆ. ಇದನ್ನು ಅವರು ಎಲ್ಲಾ ಎನ್ ಕೌಂಟರ್ ಗಳಿಗೂ ಬಳಸಬಹುದಾಗಿದೆ. ಆದರೆ ಎಲ್ಲರ ಕೈಗಳಲ್ಲೂ ಲಾಠಿ ಅಂತೂ ಇದೆ. ತನ್ನ ವೃದ್ಧಾಪ್ಯದಲ್ಲಿ ಗಾಂಧಿ ಆಸರೆಗಾಗಿ ಲಾಠಿ ಬಳಸಿದ್ದರು. ಆದರೆ ನಮ್ಮಲ್ಲಿ ಲಾಠಿಯುಳ್ಳವರು ಪಕ್ಕಾ ಅನ್ ಫ್ರೆಂಡ್ಲಿ ಆಗುತ್ತಿದ್ದಾರೆ. ಏಕೆಂದರೆ ಅವರು ಅದನ್ನು ಆಸರೆಗಾಗಿ ಅಲ್ಲದೆ, ತಲೆ ಒಡೆಯಲೆಂದೇ ಬಳಸುತ್ತಾರೆ. ಬಾಲ್ಯದಿಂದಲೇ ನಮಗೆ ಇತರೆ ಧರ್ಮ, ಜಾತಿ, ಬಣ್ಣ, ಭಾಷೆಯರು ಗೆಳೆಯರಾಗಲು ಸಾಧ್ಯವಿಲ್ಲ ಎಂದೇ ಕಲಿಸಲಾಗುತ್ತದೆ. ನಮ್ಮಲ್ಲಿ ಆಫೀಸ್, ಶಾಲೆ, ವಠಾರ, ಒಂದೇ ಅಪಾರ್ಟ್ ಮೆಂಟ್ ಯಾ ಮಲ್ಟಿ ಕಟ್ಟಡಗಳಲ್ಲಿನ 400-500 ಮನೆಗಳಲ್ಲಿ ಭಯಂಕರ ಗ್ರೂಪಿಸಂ ಇದೆ. ಪ್ರತಿಯೊಬ್ಬರೂ ಇನ್ನೊಬ್ಬರ ಪಾಲಿಗೆ ಶತ್ರು ಆಗುತ್ತಾರೆ. ಇದರಲ್ಲಿ ಪ್ರಮುಖವಾಗಿ ಧರ್ಮ, ಉಪಧರ್ಮ, ದೇವದೇವಿಯರು, ಬದುಕಿರುವ ಅಥವಾ ಸತ್ತವರ ಪ್ರಾಬಲ್ಯಗಳೇ ಹೆಚ್ಚು.





