ತಾನಿಯಾ ಸಾನ್ವಾಲ್
ಈಕೆಯ ಕೆಲಸ ನಿಜಕ್ಕೂ ಅಪರಂಪರಾಗತ ಹಾಗೂ ಚಾಲೆಂಜಿಂಗ್ ಎನ್ನಬಹುದು. ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯ ನುರಿತ ಸಿಬ್ಬಂದಿ ಹಾಗೂ ಭಾರತದ ಮೊದಲ ಮಹಿಳಾ ಅಗ್ನಿಶಾಮಕ ಅಧಿಕಾರಿ (ಫಸ್ಟ್ ಫೀಮೇಲ್ ಏವಿಯೇಶನ್ ಫೈರ್ ಫೈಟರ್) ಎನಿಸಿರುವ ತಾನಿಯಾ ಸಾನ್ವಾಲ್, ಪಾರಂಪರಿಕ ವಿಧಾನಗಳನ್ನು ಬದಿಗೊತ್ತಿ ಮೇಲೇರಿದ ಸಾಹಸಗಾಥೆಯನ್ನು ಇಲ್ಲಿ ವಿವರಿಸಿದ್ದಾರೆ......
ತಾನಿಯಾ ಹುಟ್ಟಿದ್ದು ಕೋಲ್ಕತಾದಲ್ಲಿ. ಈಕೆ ಒಂದು ಸಾಧಾರಣ ಮಧ್ಯಮ ವರ್ಗದ ಬಂಗಾಳಿ ಕುಟುಂಬಕ್ಕೆ ಸೇರಿದ ಹೆಣ್ಣುಮಗಳು. ತನ್ನ ಅಪಾರ ಪರಿಶ್ರಮ, ಆತ್ಮವಿಶ್ವಾಸ, ಜೀವನದಲ್ಲಿ ಚಾಲೆಂಜಿಂಗ್ ಹೆಜ್ಜೆಗಳನ್ನಿರಿಸುತ್ತಾ ಹಂತ ಹಂತವಾಗಿ ಮೇಲೇರಿ ಬಂದರು. ಹೀಗಾಗಿ, ಔಪಚಾರಿಕ ಶಿಕ್ಷಣದ ಜೊತೆ ಜೊತೆಯಲ್ಲೇ ವ್ಯಾವಹಾರಿಕ ತರಬೇತಿಯು ತಾನಿಯಾರನ್ನು ಯಶಸ್ಸಿನ ಶಿಖರ ಏರುವಂತೆ ಮಾಡಿದೆ. ಯಾವುದೇ ಏರ್ ಪೋರ್ಟ್ ಯಾ ವಿಮಾನಕ್ಕೆ ಬೆಂಕಿ ಬಿದ್ದಾಗ, ಜನರ ಪ್ರಾಣ ಅಯೋಮಯ ಆಗುತ್ತದೆ. ತಕ್ಷಣ ತಾನಿಯಾ ಆ ಆಪತ್ತಿನ ಕ್ಷಣಗಳಲ್ಲಿ ನೆರವಾಗುತ್ತಾರೆ. ಈಕೆ ತಕ್ಷಣ ನೀರಿನ ಜೆಟ್ ನಲ್ಲಿ, ಪೇಂ ಯಾ ಅನ್ಯ ಅಗ್ನಿಶಾಮಕ ಉಪಕರಣಗಳನ್ನು ಬಳಸುತ್ತಾ ಜನರ ಜೀವ ರಕ್ಷಿಸುತ್ತಾರೆ. ಆದರೆ ಉನ್ನತ ಶಿಕ್ಷಣ ಪಡೆದ ಈಕೆ ಯಾವುದೇ ಕ್ಷೇತ್ರದಲ್ಲಿ ನೌಕರಿ ಯಾ ಬಿಸ್ ನೆಸ್ ಮಾಡುತ್ತಾ, ಸುಲಭವಾಗಿ ತನ್ನ ಜೀವನಯಾನ ಮುಂದುವರಿಸಬಹುದಿತ್ತು. ಅಂಥ ಸುರಕ್ಷಿತ ಜೀವನ ತೊರೆದು, ಈಕೆ ಜನರ ಜೀವ ಉಳಿಸಲು ಮುಂದಾಗಿದ್ದಾರೆ. ಆದರೆ ಅಂಥ ಈಝಿ ಲೈಫ್ ನ್ನು ಆಕೆ ಬಯಸಲಿಲ್ಲ. ತಾನಿಯಾ ಆ ಬಗೆಯ ಸುಖೀ ಜೀವನ ಧಿಕ್ಕರಿಸಿ, ಹೆಣ್ಣುಮಕ್ಕಳಿಗೆ ತೀರಾ ಅಪರಿಚಿತವಾದ ಈ ಅಗ್ನಿ ನಂದಿಸುವ ಚಾಲೆಂಜಿಂಗ್ ಕೆಲಸ ಅಪ್ಪಿದ್ದಾರೆ.
ನವ ಸಮರ್ಥ ಮಹಿಳಾ ಸಿಬ್ಬಂದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ನಿಟ್ಟಿನಲ್ಲಿ ಈಕೆ ಇಡೀ ದೇಶದ ಪ್ರಪ್ರಥಮ ಯಶಸ್ವೀ ಮಹಿಳಾ ಅಗ್ನಿಶಾಮಕ ಅಧಿಕಾರಿ (ಫಸ್ಟ್ ಫೀಮೇಲ್ ಏವಿಯೇಶನ್ ಫೈರ್ ಫೈಟರ್) ಎನಿಸಿದ್ದಾರೆ. ಆಕೆ ಏರ್ ಪೋರ್ಟಿಗೆ ಅಗ್ನಿ ಬಿದ್ದಾಗ, ಧಾವಿಸಿ ಅದನ್ನು ತಕ್ಷಣ ನಂದಿಸುವ ಚಾಲೆಂಜಿಂಗ್ ಕೆಲಸಕ್ಕೆ ಕೈ ಹಾಕಿದ್ದಾರೆ. ಒಂದಾದ ಮೇಲೊಂದರಂತೆ ಎದುರಾದ ಇಂಥ ಅನೇಕಾನೇಕ ಪ್ರಾಣಕಂಟಕ ಸವಾಲುಗಳನ್ನು ಸುಲಭವಾಗಿ ಎದುರಿಸುತ್ತಾ ಬಂದಿದ್ದಾರೆ. ಹಿಡಿದ ಪ್ರತಿ ಕೆಲಸದಲ್ಲೂ ಯಶಸ್ಸು ಗಳಿಸುತ್ತಾ, ಅದರೆಡೆ 100% ಗಮನಹರಿಸುತ್ತಾ ತಮ್ಮ ನಿರಂತರ ಯಶಸ್ಸಿನ ಕುರಿತಾಗಿ, ಗೃಹಶೋಭಾ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.
ತಯಾರಿ ಹಾಗೂ ಸೇವೆ : ಬಾಲ್ಯದಿಂದಲೂ ನಾನು ಏನಾದರೊಂದು ವಿಭಿನ್ನ, ವಿಶಿಷ್ಟ ಪಬ್ಲಿಕ್ ಸರ್ವೀಸ್ ನೀಡಬೇಕೆಂಬ ಹುಮ್ಮಸ್ಸಿನಲ್ಲಿ ಬೆಳೆದಳು. ಅದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಬರುವಂತಾಗಬೇಕು. ಒಂದು ವಿಭಿನ್ನ, ಅನುಪಮ, ಅನನ್ಯ ಸೇವೆ ಒದಗಿಸಬೇಕೆಂಬುದೇ ನನ್ನ ಗುರಿ! ನಿಜ ಹೇಳಬೇಕೂಂದ್ರೆ, ನನಗೆ ಇಂಥ ಒಂದು ಸಾಲುಭರಿತ ಕೆರಿಯರ್ ಒದಗಿಸಿಕೊಟ್ಟಿದೆ. ಇದರಿಂದ ನನ್ನಾಸೆ ಪೂರೈಸಿದೆ! ಏರ್ ಪೋರ್ಟ್ ಫೈರ್ ಫೈಟರ್ ಆಗುವುದೆಂದರೆ ಒಂದು ದುರ್ಲಭ ಅನುಭವವೇ ಸರಿ, ಅತಿ ಹೆಮ್ಮೆಯ ವಿಷಯ ಹೌದು.





