ಧರ್ಮದ ಯುದ್ಧದಲ್ಲಿ ನಲುಗುವವರು ಹೆಂಗಸರೇ ! :  ಇವರೀಗ ಇರಾಕಿನ ಕ್ರೈಸ್ತ ಹುಡುಗಿಯರಾಗಿದ್ದಾರೆ, ಇವರುಗಳು ಇಸ್ಲಾಮಿಕ್‌ಸ್ಟೇಟ್‌ನ ಆತಂಕದಿಂದ ಬೆಚ್ಚಿಬಿದ್ದು ತಮಗೆ ಆಸರೆ ಸಿಗಬಹುದಾದ ಜಾಗ ಅರಸುತ್ತಾ ಇಲ್ಲಿಗೆ ಬಂದಿದ್ದಾರೆ. ಈ ಮುಗ್ಧ ಹುಡುಗಿಯರಿಗೆ ಧರ್ಮದ ಚಹರೆ ಎಷ್ಟು ಘಾತಕವಾಗಿರುತ್ತದೆಂದು ಏನು ಗೊತ್ತು? ಅದು ಶಕ್ತಿಶಾಲಿಗಳನ್ನು ಮಾತ್ರವಲ್ಲದೆ ದುರ್ಬಲರು, ಹೆಂಗಸರು, ಮಕ್ಕಳನ್ನೂ ತನ್ನ ಕಬಂಧ ಬಾಹುಗಳಿಂದ ಹಿಂಸಿಸದೆ ಬಿಡುವುದಿಲ್ಲ.

ಯಾರಿಗುಂಟು ಎದೆಗಾರಿಕೆ? : ಹುಡುಗಿಯರು ಇಂಥ ಕಟ್ಟುಮಸ್ತಾದ ಬಾಡಿ ಬಿಲ್ಡರ್‌ಗಳಾಗಿ ತಯಾರಾದರೆ, ಯಾರಿಗಾದರೂ ಇವರನ್ನು ಕೆಣಕುವ ಎದೆಗಾರಿಕೆ ಬಂದೀತೇ? ನಾವು ಅವರಿಗೆ ಸೆಲ್ಫ್ ಡಿಫೆನ್ಸ್ ಕಲಿಸುವ ಬದಲು ಪ್ರಿಯಾಂಕಾ ಚೋಪ್ರಾಳಂತೆ ಅರ್ಥಾತ್‌ ಮೇರಿ ಕೋಮ್ ಆಗಲು ತರಬೇತಿ ನೀಡಿ ಇಂಥ ಸದೃಢ ಸಬಲೆಯರನ್ನಾಗಿಸಬೇಕು. ಸ್ತ್ರೀ ಶಕ್ತಿ ಜಿಂದಾಬಾದ್‌!

ಇದು ಹಳೆಯ ಫೋಟೋಗ್ರಾಫ್ಅಲ್ಲ ಇತ್ತೀಚಿನದು :  ಪ್ಯಾರಿಸ್‌ನ ಬಳಿಯ ‌ಅರಮನೆಯಲ್ಲಿ ರಾಜ 14ನೇ ಲೂಯಿಯ ನೆನಪುಗಳನ್ನು ತಾಜಾ ಆಗಿಸಲು, ಅಂದಿನ ಕಾಲದ ಪೋಷಾಕುಗಳನ್ನು ಧರಿಸಿ ಇಂದಿನ ಜನ ಒಂದು ಅದ್ಧೂರಿ ಪಾರ್ಟಿ ನಡೆಸಿದರು. ನಮ್ಮಲ್ಲಿ ಸಲೀಂ ಅನಾರ್ಕಲಿ ಯಾವಾಗ ಹೀಗೆ ಕಾಣಿಸಿಯಾರು ಎಂದು ಕಾಯಬೇಕಷ್ಟೆ. ಎಲ್ಲಾ ಸಾಮಾನ್ಯ ಜನರೂ ಅಂಥದೇ ಉಡುಗೆ ಧರಿಸಿ ಬಂದಾಗ ಮಾತ್ರ ಥೀಮ್ ಪಾರ್ಟಿ ಕಳೆಗಟ್ಟಲು ಸಾಧ್ಯ.

ಇದಲ್ಲವೇ ಗ್ಲಾಮರಸ್ಗೆಟಪ್‌! : ನಮ್ಮ ಸಿನಿ ನಾಯಕಿಯರ ಸೀರೆಗಳು ಮೀ.ಗಟ್ಟಲೆ ಗಾಳಿಯಲ್ಲಿ ಹಾರಾಡುತ್ತಿರುತ್ತವೆ, ಹಾಗಿರುವಾಗ ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ಶೋನಲ್ಲಿ ಈ ಮಾಡೆಲ್ ‌ಹೀಗೆ ಮೈ ತೆರೆದು, ಹಿಂಬದಿಯಿಂದ ಹಾರಾಡುವ ಉಡುಗೆ ಧರಿಸಿರುವಂತೆ ಸಮಂತಾ ಹೂಪ್ಸ್ ಸಹ ಏಕೆ ಮಾಡಬಾರದು? ಹಾಗಾದಾಗ ಅಮೆರಿಕಾದಲ್ಲಿ ಪ್ರತಿ ಸಿನಿಮಾದ ಪ್ರೀಮಿಯರ್‌ ಪಾರ್ಟಿಯಲ್ಲೂ ನಾಯಕಿಯರು ಪಾರದರ್ಶಕ, ಬಹುತೆರೆದ, ಬಳುಕುವ ಡ್ರೆಸ್‌ಗಳಲ್ಲಿ ತೊನೆದಾಡುತ್ತಾ  ಮಿಂಚುವುದನ್ನು ಕಾಣಬಹುದು.

ದೇಶಕ್ಕೆ ಅಹಿತ ಮಾಡುವ ಪ್ರಶ್ನೆಯೇ ಇಲ್ಲ :  ಸುಷ್ಮಾ ಸ್ವರಾಜ್‌ ಇತ್ತೀಚೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಕೆಂದರೆ ಅವರ ಮೇಲೆ ಲಲಿತ್‌ ಮೋದಿಗೆ ಸಹಾಯ  ಮಾಡಿದರೆಂಬ ಆಪಾದನೆ ಇದೆ,  ಲಲಿತ್ ಮೋದಿಯರ ಪಾಸ್‌ಪೋರ್ಟ್‌ನ್ನು ಭಾರತ ಸರಕಾರ ರದ್ದು ಮಾಡಿತ್ತು. ಪ್ರತಿದಿನ ಈ ಪ್ರಕರಣ ಹೊಸ ತಿರುವು ಪಡೆಯುತ್ತಿದೆ.

samachar-darshan-2

ಎಲ್ಲೆಲ್ಲೂ ಮಿಂಚಿದ ಮೋಡಿ : ಜೆನಿಫರ್‌ ಲೋಪೇರ್‌ಳ ಆಕರ್ಷಣೆಯಲ್ಲಿ ಎಂಥ ಮಿಂಚಿನ ಸೆಳೆತವಿದೆ ಎಂದರೆ ಕಂದಾಚಾರದ ಕೂಪವಾಗಿರುವ ಮೊರೆಕ್ಕೋದಂಥ ನಗರದಲ್ಲೂ ಆಕೆ ತನಗೆ ಬೇಕಾದ ಉಡುಗೆ ಧರಿಸಿ, ಅಭಿಮಾನಿಗಳೆದುರು ಫೋಟೋ ಕ್ಲಿಕ್ಕಿಸಬಹುದು.

ಯಶಸ್ಸನ್ನು ಕಂಡು ಕರುಬುವುದೇಕೆ ? :  ಈ ವರ್ಷ ಸಹ ಅಮೆರಿಕಾದ ಸ್ಪೆಲ್ಲಿಂಗ್‌ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಮೊದಲ ಮತ್ತು 2ನೇ ಸ್ಥಾನವನ್ನು ಲಾನ್ಯಾ ಶಿವಶಂಕರ್‌ ಮತ್ತು ಗೋಕುಲ್ ವೆಂಕಟಾಚಲಂ ತಮ್ಮದಾಗಿಸಿಕೊಂಡಿದ್ದಾರೆ. ತಮ್ಮದೇ ದೇಶದಲ್ಲಿ ಹೊರದೇಶದ ಮಕ್ಕಳು ಹೀಗೆ ಪ್ರಶಸ್ತಿ ಬಾಚಿಕೊಳ್ಳುವುದನ್ನು ಸಹಿಸದ ಅಮೆರಿಕನ್ನರು ಇವರನ್ನು ಕಂಠಪಾಠದ ಗಿಳಿಗಳಂದು ಆಡಿಕೊಂಡು, ತಮ್ಮ ಕೀಳ್ತನ ಪ್ರದರ್ಶಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ