ತೀರ್ಪು ಯಾತನೆ ಕೊಡದೆ ಸಾಂತ್ವನ ನೀಡಲಿ

ಸುಪ್ರೀಂಕೋರ್ಟ್‌ ತನ್ನ ಹೊಸದೊಂದು ತೀರ್ಪಿನಲ್ಲಿ ಅತ್ಯಾಚಾರದ ವಿಷಯಗಳಲ್ಲಿ ರಾಜಿ ಮಾಡಿಸುವ ಪ್ರಯತ್ನವನ್ನು ಕಾನೂನಿಗೆ ವಿರುದ್ಧ ಎಂದು ಹೇಳಿ ಅತ್ಯಾಚಾರಿ ಮತ್ತು ಸಂತ್ರಸ್ತೆಯ ನಡುವೆ ಏನಾದರೂ ಒಪ್ಪಂದ ಉಂಟಾದರೆ, ಒಂದುವೇಳೆ ಅವರಿಬ್ಬರ ಮದುವೆ ಆಗಿಹೋದರೂ ಮೊಕದ್ದಮೆ ನಡೆಸಲಾಗುವುದು ಎಂದಿದೆ. ಮಧ್ಯಪ್ರದೇಶದ ಗುನಾ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಅತ್ಯಾಚಾರದ ಒಂದು ಕೇಸ್‌ನಲ್ಲಿ ಸಂತ್ರಸ್ತಿ ಇನ್ನೂ ಅಪ್ರಾಪ್ತ ವಯಸ್ಕಳಾಗಿದ್ದಳು. ಅತ್ಯಾಚಾರಿಗೆ 5 ವರ್ಷದ ಶಿಕ್ಷೆಯಾಗಿತ್ತು. ಆದರೆ ಉಚ್ಚ ನ್ಯಾಯಾಲಯ ಎರಡೂ ಪಕ್ಷದವರು ರಾಜಿಯಾಗಿದ್ದರಿಂದ ಅತ್ಯಾಚಾರಿಯನ್ನು ಬಿಡುಗಡೆ ಮಾಡಿತು.

ಉಚ್ಚ ನ್ಯಾಯಾಲಯ ಆತ್ಯಾಚಾರಿಯನ್ನು ಬಿಡುಗಡೆ ಮಾಡಿದಾಗ ಅವನು ಬರೀ 1 ವರ್ಷ ಶಿಕ್ಷೆ ಅನುಭವಿಸಿದ್ದ. ಈ ಕೇಸು ಸುಪ್ರೀಂಕೋರ್ಟ್‌ಗೆ ಏಕೆ ಬಂತೋ ಸ್ಪಷ್ಟವಾಗಿಲ್ಲ. ಆದರೆ ಸುಪ್ರೀಂ ಕೋರ್ಟ್‌, ಅತ್ಯಾಚಾರ ಒಬ್ಬ ಹುಡುಗಿಯ ಮೇಲೆ ಮಾತ್ರ ಆಗಿರದೆ ಇಡೀ ಸಮಾಜದ ಮೇಲೆ ಆಗಿದೆ. ಪರಸ್ಪರ ರಾಜಿಯಿಂದ ಅದನ್ನು ಅಲ್ಲಗಳೆಯಲಾಗುವುದಿಲ್ಲ. ಮೊಕದ್ದಮೆ ನಡೆದೇ ತೀರುತ್ತದೆ ಎಂದು ಛೀಮಾರಿ ಹಾಕಿತು.

ಸುಪ್ರೀಂ ಕೋರ್ಟ್‌ ಈ ಹಿಂದೆಯೂ ಇದೇ ರೀತಿ ಚೆನ್ನೈ, ಮುಂಬೈ ಮತ್ತು ಕೋಲ್ಕತಾ ಉಚ್ಚ ನ್ಯಾಯಾಲಯಗಳ ವಿಷಯದಲ್ಲಿ ಅತ್ಯಾಚಾರದಂತಹ ಹೀನ ಅಪರಾಧವನ್ನು ಪರಸ್ಪರ ಒಪ್ಪಂದದ ಅಪರಾಧವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ಸುಪ್ರೀಂ ಕೋರ್ಟ್‌ನ ಭಾವನೆ ಒಳ್ಳೆಯದು ಹಾಗೂ ಪ್ರಶಂಸನೀಯವಾಗಿರಬಹುದು. ಆದರೆ ಈ ತೀರ್ಪು ಖಂಡಿತಾ ತಪ್ಪು. ವಾಸ್ತವವಾಗಿ ಅತ್ಯಾಚಾರ ಇಡೀ ಸಮಾಜದ ವಿರುದ್ಧ ನಡೆದ ಅಪರಾಧ. ಅದು ಹತ್ಯೆಗಿಂತಲೂ ಅತ್ಯಂತ ಹೀನವಾದ ಅಪರಾಧವಾಗಿದೆ. ನಿಸ್ಸಂದೇಹವಾಗಿ ಗಂಡಸರು ತಮ್ಮ ಶಕ್ತಿಯನ್ನು ಮಹಿಳೆಯರ ಮೇಲೆ ಪ್ರಯೋಗಿಸಲು ಪ್ರಯತ್ನಿಸುತ್ತಾರೆ. ಆದರೆ ಅದರ ವ್ಯಾವಹಾರಿಕತೆಯನ್ನು ಮರೆಯಬಾರದು.

ಮೊಕದ್ದಮೆ ನಡೆಸಿ ಎಂದು ಹೇಳುವುದು ಸುಲಭ. ಆದರೆ ಅತ್ಯಾಚಾರದ ಪ್ರಸಂಗಗಳನ್ನು 10-12 ವರ್ಷಗಳು ಎಳೆದರೆ ಕೋರ್ಟ್ ತೀರ್ಮಾನ ಮಹಿಳೆಗೆ ನೆಮ್ಮದಿ ಕೊಡುವಂತಿರುತ್ತದೆಯೇ? ಅತ್ಯಾಚಾರಿ 10-12 ವರ್ಷಗಳು ಗೂಳಿಯಂತೆ ಓಡಾಡುತ್ತಿದ್ದರೆ ಸಂತ್ರಸ್ತೆಗೆ ಪ್ರತಿದಿನ ಮಾನಸಿಕ ಹಾಗೂ ಕಾನೂನಿನ ಅತ್ಯಾಚಾರ ಆಗುವುದಿಲ್ಲವೇ? ತೀರ್ಪಿನ ದಿನಾಂಕ ಹತ್ತಿರ ಬಂದಾಗ, ಅತ್ಯಾಚಾರಿಯ ಕಡೆಯವರು ಸಂತ್ರಸ್ತೆಯ ಬಳಿ ರಾಜಿ ಮಾಡಿಸಲು ಅಥವಾ ರಾಜಿಯಾಗುವಂತೆ ಬೆದರಿಸಲು ಬರುತ್ತಿದ್ದರೆ ಅದು ಗಾಯವನ್ನು ಕೆದಕಿದಂತಾಗುವುದಿಲ್ಲವೇ? ಪೊಲೀಸ್‌ ಅಧಿಕಾರಿ ಹಾಗೂ ಸರ್ಕಾರಿ ವಕೀಲರು ಸಂತ್ರಸ್ತೆಯನ್ನು ಪ್ರತಿ ಬಾರಿ ಕೋರ್ಟ್‌ನಲ್ಲಿ ಹಾಜರುಪಡಿಸುವ ಮೊದಲು ಈ ವಿಷಯದ ಬಗ್ಗೆ ಪದೇ ಪದೇ ಕೇಳುವುದಿಲ್ಲವೇ?

ವೊಕದ್ದಮೆ ನಡೆಯುವವರೆಗೆ ಪ್ರತಿದಿನ ಸಂತ್ರಸ್ತೆಯ ತಲೆಯ ಮೇಲೆ ಕತ್ತಿ ತೂಗಾಡುವಂತಿರುತ್ತದೆ. ಏಕೆಂದರೆ ಅತ್ಯಾಚಾರಿ ಒಂದು ವೇಳೆ ಬಿಡುಗಡೆಯಾದರೆ ಅವನು ಮನೆಯ ಮುಂದೆ ಎದೆ ಸೆಟೆಸಿಕೊಂಡು ನಿಲ್ಲುತ್ತಾನೆ. ಮೊಕದ್ದಮೆ ನಡೆಯುವಾಗ 2-3 ವರ್ಷಗಳವರೆಗೆ ಸಾಕ್ಷಿಗಳ ವಿಚಾರಣೆ ನಡೆಯುತ್ತದೆ. ಪ್ರತಿ ವಿಚಾರಣೆಗೆ ಮೊದಲು ಸಂತ್ರಸ್ತೆ ತನ್ನೊಂದಿಗೆ ನಡೆದ ಅನ್ಯಾಯದ ಕಥೆಯನ್ನು ಪುನರಾವರ್ತಿಸಬೇಕಾಗುತ್ತದೆ. ಮೊದಲು ಹೇಳಿದ ವೃತ್ತಾಂತ ನಂತರದ ವಿಚಾರಣೆಯಲ್ಲಿ ಬದಲಾಗದಂತೆ ಗಮನವಿಡಬೇಕು. ಅಂದರೆ ಸಂತ್ರಸ್ತೆ ಪ್ರತಿ ಬಾರಿ ಆ ದುರ್ಘಟನೆಯನ್ನು ನೆನಪಿಸಿಕೊಳ್ಳಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ