ಬಿಗ್‌ ಕಾಫಿ' ಕಾರ್ಯಕ್ರಮದ ಮೂಲಕ ಪಟ್‌ ಪಟ್‌ ಪಟಾಕಿ ಶೃತಿ FM 92.7 ರಿಂದ ಎಲ್ಲ ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ. 2008ರಲ್ಲಿ FM ಗೆ ಅಡಿಯಿಟ್ಟ ಶೃತಿ, ಇದಕ್ಕೂ ಮುಂಚೆ ಲಾ ಆಗಿ ಅನುಭವ ಹೊಂದಿದ್ದಾರೆ. ಡಾಕ್ಟರ್ ಲವ್, ಬೊಂಬಾಟ್‌ ಭಾಮಾ, ಫಿಲ್ಟರ್‌ ಕಾಫಿ, ಅರ್ಲಿ ಮಾರ್ನಿಂಗ್‌... ಈ ರೀತಿ ಶೃತಿ ನಡೆಸಿಕೊಡುತ್ತಿದ್ದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಕೊನೆಯೇ ಇಲ್ಲ.

FM ಬಂದಾಗಿನಿಂದ ಬೆಳಗಿನ 7-11ರ ಪ್ರೈಮ್ ಟೈಮ್ ನಲ್ಲಿ ಇರ `ಬಿಗ್‌ ಕಾಫಿ' ಇದೀಗ ಎಲ್ಲರ ಮನೆಮಾತು. 80ರ ದಶಕದ ಬೆಳ್ಳಿತೆರೆಯ ಬಂಗಾರದ ಹಾಡುಗಳನ್ನು ಈ ಮೂಲಕ  ಕನ್ನಡಿಗರ ಮನೆಮನಗಳಿಗೆ ತಲುಪಿಸುವ ಅಪ್ಪಟ ಕನ್ನಡದ FM ಅಂದಿಗೆ ಮಾತ್ರವಲ್ಲ, `ಎಂದೆಂದಿಗೂ ಹಿಟ್‌' ಆಗಿರುವ ಹಾಡುಗಳನ್ನೇ ಪ್ರಸಾರ ಮಾಡುತ್ತದೆ ಎಂಬುದೊಂದು ಹೆಗ್ಗಳಿಕೆ.

ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಎಂದಿಗಿಂತಲೂ ವರ್ಣಮಯವಾಗಿಸಲು FM ಕಾಶ್ಮೀರದ ಗಡಿಯಲ್ಲಿ ಹೊಸ ಯೋಜನೆ ರೂಪಿಸಿತು. ಚೈನಾ ಬಾರ್ಡರ್‌ನ, ಭಾರತ-ಪಾಕಿಸ್ತಾನವನ್ನು ಪ್ರತ್ಯೇಕಿಸುವ ಸಿಯಾಚಿನ್‌ ಪ್ರದೇಶ ಇದೆ. ನಮ್ಮ ನಿಮ್ಮಂಥ ಸಾಮಾನ್ಯ ನಾಗರಿಕರ ರಕ್ಷಣೆಗೆಂದೇ ಈ ಗಡಿ ಕಾಯುವ ವೀರ ಯೋಧರೊಂದಿಗೆ ಅತಿ ಸಂಭ್ರಮದಿಂದ ಶೃತಿ ತನ್ನ ಸಂಗಡಿಗರೊಂದಿಗೆ ಇಲ್ಲಿಗೆ ಬಂದು ಆಗಸ್ಟ್ 14 ಮತ್ತು 15 ರಂದು ಸಿಯಾಚಿನ್‌ನಿಂದ ನೇರ ಲೈವ್ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಪ್ರದೇಶ ಹಿಮಾಲಯದ ದಟ್ಟ ಕಣಿವೆಗಳ ಮಧ್ಯೆ, ಸಮುದ್ರ ಮಟ್ಟದಿಂದ ಸುಮಾರು 22 ಸಾವಿರ ಅಡಿಗಳಿಗೂ ಹೆಚ್ಚು ಎತ್ತರದಲ್ಲಿದೆ! ವೇಲಡಖ್‌ ಪ್ರದೇಶ 11,300 ಹಾಗೂ ಕಾರ್ಗಿಲ್ ‌ಟಾಪ್‌ 18,300 ಅಡಿಗಳು ಎಂದಾಗ ಈ ಪ್ರದೇಶದ ಅಗಾಧತೆ ಊಹಿಸಿಕೊಳ್ಳಬಹುದು. ಇಲ್ಲಿನ ಉಷ್ಣಾಂಶ 600! ಮಂಜಿನ  ಕೊರೆತ, ಚಳಿಯ ತೀವ್ರತೆಯನ್ನು ಶಬ್ದಗಳಲ್ಲಿ  ವರ್ಣಿಸಲಾಗದು.  ಇಡೀ ವಿಶ್ವದಲ್ಲೇ ಇದು ಅತಿ ಎತ್ತರದ ರಣ ಕ್ಷೇತ್ರ ಎನಿಸಿದೆ. ಮತ್ತೊಂದು ಮುಖ್ಯ ವಿಷಯವೆಂದರೆ ಸಾಮಾನ್ಯ ನಾಗರಿಕರಿಗೆ ಈ ಪ್ರದೇಶದಲ್ಲಿ ಸಂಚರಿಸಲು ಅನುಮತಿ ಇಲ್ಲ. ಇಂಥ ದುರ್ಗಮ ಕ್ಷೇತ್ರವನ್ನು FM ತಂಡ ತಮ್ಮ `ಬಿಗ್‌ ಪೈಗಾಮ್' ಅಲಿಯಾಸ್‌`ನಮ್ಮ ಧೀರರ ಬಿಗ್‌ ಸಂದೇಶ' ಕಾರ್ಯಕ್ರಮಕ್ಕಾಗಿ, ದೇಶದ ಗಡಿಕಾಯ್ದು ನಾಗರಿಕರ ಬೆಂಗಾವಲಿಗಾಗಿ ಸದಾ ಚಳಿ, ಮಳೆ, ಗಾಳಿಗಳಿಗೆ ಎದೆಯೊಡ್ಡಿ ನಿಂತ ಧೀರ ಸೈನಿಕರೊಂದಿಗೆ ಸ್ವಾತಂತ್ರ್ಯ ಸಂಭ್ರಮ ಆಚರಿಸಲು ಒಂದು ವಿನೂತನ ಯೋಜನೆ ರೂಪಿಸಿ, ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಇಡೀ ದಿನ ಹಲವು ರಸಮಯ ಕಾರ್ಯಕ್ರಮವನ್ನು ರೂಪಿಸಿ, ದೇಶವಿಡೀ FMನ ಎಲ್ಲಾ ಶ್ರೋತೃಗಳೂ ಆಯಾ ಭಾಷೆಯಲ್ಲಿ ಈ ಸೈನಿಕರ ಮನದಾಳದ ಮಾತುಗಳನ್ನು ಕೇಳುವಂತೆ ಮಾಡಿತು. ಚೆನ್ನೈ, ದೆಹಲಿ, ಚಂಡೀಗಢದಿಂದ ಮೂರು ಪುರುಷರೊಂದಿಗೆ ಏಕೈಕ ಮಹಿಳಾ ಲಾ ಆಗಿ ಹೊರಟ ಕನ್ನಡತಿ ಶೃತಿ, ಸಿಯಾಚಿನ್‌ಸೈನಿಕರೊಂದಿಗೆ ಅವರ ಅನುಭವಗಳನ್ನು ತುಂಬು ಮನದಿಂದ ಹಂಚಿಕೊಂಡರು.

image4-1

ಇದಕ್ಕಾಗಿ ಶೃತಿ ಕಾರ್ಯಕ್ರಮದ ಕುರಿತು ಹಿಂದೆಯೇ ಅನೌನ್ಸ್ ಮಾಡಿದಾಗ, ಬೆಂಗಳೂರಿನ ಸಾವಿರಾರು ಶ್ರೋತೃಗಳು ಸೈನಿಕರಿಗೆ ತಮ್ಮ ತುಂಬು ಮನದ ಶುಭಾಶಯ ಕೋರಿದರು. ಅಂಧ ಹೆಣ್ಣುಮಕ್ಕಳ `ಪ್ರೇರಣಾ' ಹಾಗೂ ಕೊಳಗೇರಿಯ ಮಕ್ಕಳ ಏಳಿಗೆಗಾಗಿ ಶ್ರಮಿಸುವ ಅಶ್ವಿನಿ ಚ್ಯಾರಿಟೆಬಲ್ ಟ್ರಸ್ಟ್ ಸಂಸ್ಥೆ ವೈವಿಧ್ಯಮಯ ಗ್ರೀಟಿಂಗ್‌ ಕಾರ್ಡ್ಸ್ ಕಳುಹಿಸಿ ಕೊಟ್ಟಿದ್ದರು. ಜೊತೆಗೆ ನೂರಾರು ಮಾಜಿ ಸೈನಿಕರು ಇವರಿಗಾಗಿ ಸ್ವೀಟ್ಸ್, ಉಡುಗೊರೆಗಳನ್ನು ಕೊಟ್ಟು ಕಳುಹಿಸಿದ್ದರು. ಅಲ್ಲಿನ ಸೈನಿಕರು ಸಿಯಾಚಿನ್‌ನಂಥ ಗಿರಿಶಿಖರದ ತುದಿಯಲ್ಲಿ ತಾವು ಪಡುವ ಬವಣೆಗಳ ಕುರಿತು ಹಂಚಿಕೊಂಡರು. ಕಳೆದ 1-2 ವರ್ಷಗಳಿಂದ ಒಮ್ಮೆಯೂ ರಜೆ ಪಡೆದು ಮನೆಗೆ ಮರಳಲಾಗದೆ, ಮನೆಯವರನ್ನೆಲ್ಲ ಮತ್ತೆ ಮತ್ತೆ ನೆನೆದು ಕಂಬನಿ ಮಿಡಿದರು. ದೇಶದ ರಕ್ಷಣೆ, ತಾಯ್ನಾಡಿಗಾಗಿ ಸದಾ ಜಾಗೃತರಾಗಿದ್ದು, ಶತ್ರು ದಾಳಿ ಆಗದಂತೆ ಕಣ್ಣಿಗೆ ಎಣ್ಣೆ ಹಾಕಿಕೊಂಡು, ಸರ್ಪಗಾವಲು ಕಾಯಬೇಕಾದ ವಿಧಿ ವಿಧಾನಗಳನ್ನು ಹಂಚಿಕೊಂಡರು. ಅಂಥ ಸಾವಿರಾರು ಸೈನಿಕರು ಹಗಲಿರುಳೆನ್ನದೆ ತಾಯ್ನಾಡಿಗಾಗಿ ಹೀಗೆ ದುಡಿದಾಗ ಮಾತ್ರ ನಮ್ಮಂಥ ಜನ ಸುಖವಾಗಿರಲು ಸಾಧ್ಯ ಎಂಬುದು ಎಷ್ಟು ವಾಸ್ತವ! ಅವರೊಂದಿಗೆ FM ನಡೆಸಿದ ಕಾರ್ಯಕ್ರಮದಲ್ಲಿ ಈ ಯೋಧರು, ದೇಶಭಕ್ತಿ  ಹೆಚ್ಚಿಸುವ ಗೀತೆಗಳನ್ನು ಹೃದಯ ತುಂಬಿ ಹಾಡಿದರು. ಅವರ ಮೆಚ್ಚಿನ ಹಾಡುಗಳನ್ನು ಲೈವ್ ‌ಕಾರ್ಯಕ್ರಮದಲ್ಲಿ ಇಡೀ ದಿನ ಬಿತ್ತರಿಸಲಾಯಿತು. ಅನಿಲ್ ಕುಮಾರ್‌, ದುಂಡಯ್ಯ, ಪ್ರಶಾಂತ್‌ ಕುಮಾರ್‌ರಂಥ ಕನ್ನಡದ ಸೈನಿಕರು `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು,' `ನಾದಮಯ... ಈ ಲೋಕವೆಲ್ಲ,' `ಯುಗ ಯುಗಗಳೇ ಸಾಗಲಿ...' ಮುಂತಾದ ತಮ್ಮ ನೆಚ್ಚಿನ ಗೀತೆಗಳನ್ನು ಪ್ರಸಾರ ಮಾಡುವಂತೆ ಕೋರಿದರು. ಈ ಕಾರ್ಯಕ್ರಮ ದೇಶವಿಡೀ ಅತಿ ಯಶಸ್ವಿ ಎನಿಸಿತು. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾದಂಥ ಮಹಾನಗರಗಳಲ್ಲಿ ಎಲ್ಲಾ ನಾಗರಿಕರೂ ತೀವ್ರವಾಗಿ ಲೈವ್‌ ಕಾರ್ಯಕ್ರಮದಲ್ಲಿ ಸ್ಪಂದಿಸಿದರು. ಉಪೇಂದ್ರ, ಅಮಿತಾಬ್ ಬಚ್ಚನ್‌ರಂಥ ತಾರೆಯರು ಈ ಸೈನಿಕರಿಗಾಗಿ `ಸೆಲ್ಯೂಟ್‌ ಸೆಲ್ಛಿ' ಫೋಟೋ ಕಳುಹಿಸಿದ್ದು ವಿಶೇಷ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ