ಇದೀಗ ಮಕ್ಕಳ ಲಾಲನೆ ಪಾಲನೆ ಅಂದ್ರೆ ಮೊದಲಿಗಿಂತ ಎಷ್ಟೋ ಪಟ್ಟು ಕಷ್ಟಪಡಬೇಕು, ಅಷ್ಟೇ ಅಲ್ಲ, ಹಲವು ಪಟ್ಟು ಹಣ ಜಾಸ್ತಿ ಬೇಕು. ಹಿಂದೆಲ್ಲ ಮಕ್ಕಳು ಹೆಚ್ಚಿದ್ದರು, ಸಾಧನ ಕಡಿಮೆ ಇತ್ತು. ಆಗ ಮಕ್ಕಳು ತಾವೇ ಹೇಗೋ ಬೆಳೆಯುತ್ತಿದ್ದರು. ಅವರ ಊಟತಿಂಡಿ, ಸುರಕ್ಷತೆಯ ಕೆಲಸ ಹೇಗೋ ನಡೆಯುತ್ತಿತ್ತು. ಮುಂದೆ ಅವರ ಭವಿಷ್ಯನ್ನು ಅವರ ಪಾಲಿಗೇ ಬಿಡಲಾಗುತ್ತಿತ್ತು. ಮಗು ಅಂದ್ರೆ ಬಯಕೆಯ ಫಲ, ಯಾವುದೋ ದೈಹಿಕ ಸಮಾಗಮದ ಪರಿಣಾಮ ಅಲ್ಲ. ಅತಿಯಾದ ಪ್ಲಾನ್ ಮಾಡಿ ಮಗು ಹುಟ್ಟಿಸಿಕೊಳ್ಳುವುದು, ಸರ್ಕಾರ ಎಷ್ಟೋ ಕಾನೂನು ಕಟ್ಟಳೆ ವಿಧಿಸಿದ್ದರೂ ಹೇಗೋ ಬೇಕಾದಂಥ ಮಗುವನ್ನೇ ಪಡೆಯುವುದು.
ಆದರೆ ಈ 15-20 ವರ್ಷಗಳ ಕಸರತ್ತಿನ ಪರಿಣಾಮ ಇದೀಗ ಕಾಣುತ್ತಿದೆ. ಮಗುವಿನ ಹುಟ್ಟೇ ಒಂದು ಪ್ಲಾನ್, ನಂತರ ಅವರೇನು ಓದಬೇಕು, ಎಲ್ಲಿ, ಹೇಗೆ, ಮುಂದಿನ ಭವಿಷ್ಯ..... ಇತ್ಯಾದಿ ಎಲ್ಲವನ್ನೂ ಮೊದಲೇ ಟೈಂ ಟೇಬಲ್ ಹಾಕಿಡಲಾಗುತ್ತದೆ. ಹೀಗಾಗಿ ಮಗುವಿನ ಬಗ್ಗೆ ಸಾವಿರಾರು ಆಸೆಗಳನ್ನು ಬೆಳೆಸಿಕೊಳ್ಳುತ್ತಾರೆ, ಅದಕ್ಕೆಂದೇ ಹಣ ಹೂಡಿಕೆ ನಡೆಯುತ್ತಿರುತ್ತದೆ. ಇದರ ಪರಿಣಾಮ, ಹೆತ್ತವರು ಅಪಾರ ಟೆನ್ಶನ್ ಗೆ ಒಳಗಾಗುತ್ತಾರೆ, ಮಕ್ಕಳು ಸಹ ಅದೇ ಪ್ರೆಶರ್ ಕುಕ್ಕರ್ ಒತ್ತಡವನ್ನು ತಾಳಲಾರದೆ ಹಿಂಸೆಗೆ ಒಳಗಾಗುತ್ತವೆ.
ಕಳೆದ ತಿಂಗಳಷ್ಟೇ ಲಖ್ನೌನ ಡೀ ಫಾರ್ಮಾ ರಿಸ್ಟ್ ಪ್ರಕಟವಾದಾಗ, ಅಲ್ಲಿನ ಒಬ್ಬ ವಿದ್ಯಾರ್ಥಿ ಆಶುತೋಷ್ ತನ್ನ ಕೋಣೆಯ ಫ್ಯಾನಿಗೆ ನೇಣು ಹಾಕಿಕೊಂಡಿದ್ದ. ಅವನು ಬರೆದಿದ್ದ ನೋಟ್ ನಲ್ಲಿ, ``ನನಗಂತೂ ನಾನು ಏನೂ ಮಾಡಲಾರೆ ಅಂತ ಅನ್ಸುತ್ತೆ. ಮಮ್ಮಿ ಡ್ಯಾಡಿ ಕನಸು ನನಸಾಗಿಸಲಾರೆ..... ನನ್ನನ್ನು ಕ್ಷಮಿಸಿಬಿಡಿ....''
22ರ ಹರೆಯದ ಈ ಹುಡುಗ ಇಷ್ಟು ಹೊತ್ತಿಗೆ ಆ ಕುಟುಂಬದ ಗಳಿಸುವವನಾಗಿರುತ್ತಿದ್ದ. ಆದರೆ ಅವನು ಮನೆಗೆ ಭಾರವಾದ, ಅತ್ಯಧಿಕ ಒತ್ತಡದಲ್ಲಿ ಅವನು ಸಹಜವಾಗಿ ಓದಿನಲ್ಲಿ ಹಿಂದುಳಿದ.
ಹೀಗಾಗಿ ಸಮಾಜ ಚಿಂತಕರು ಇಂದಿನ ತಾಯಿ ತಂದೆಯರಿಗೆ ಮಕ್ಕಳ ಮೇಲೆ ಓದಿಗಾಗಿ ಹೆಚ್ಚಿನ ಒತ್ತಡ ಹೇರಬೇಡಿ ಎಂದು ಹೇಳುತ್ತಿರುತ್ತಾರೆ. ಅವರಿಗೆ ಇಷ್ಟವಾದ ಕೆಲಸ ಮಾಡಲಿ ಅಂತಾರೆ. ಜನಪ್ರಿಯ ಚಿತ್ರ `3 ಈಡಿಯಟ್ಸ್'ನ ಮುಖ್ಯ ಗುರಿ ಇದೇ ಆಗಿತ್ತು. ಫುಲ್ ಡಿಗ್ರಿ ಪಡೆದು ಅಧಿಕ ಸಂಬಳ ಗಳಿಸುವುದೇ ಜೀವನವಲ್ಲ ಎಂದು ಇದು ಸಾರಿತ್ತು. ಜೀವನದಲ್ಲಿ ಬೇರೆ ಏನೇನೋ ಮಾಡಿ ಖಂಡಿತಾ ಯಶಸ್ಸು ಗಳಿಸಬಹುದು. ಹೆತ್ತವರು ತಮ್ಮ ಮಗುವಿನ ಕಡೆ ಹೆಚ್ಚು ಮಮತೆ ಹರಿಸುತ್ತಾರೆ, ಅವರನ್ನು ಅತಿ ಖ್ಯಾತಿವೆತ್ತ ದುಬಾರಿ ಶಾಲೆಗಳಿಗೆ ಸೇರಿಸುತ್ತಾರೆ. ಅವರಿಗಾಗಿ ನೀರಿನಂತೆ ಹಣ ಖರ್ಚು ಮಾಡುತ್ತಾರೆ. ಕೋಚಿಂಗ್ ಕ್ಲಾಸುಗಳಿಗೆ ಹಣ ಸುರಿಯುತ್ತಾರೆ, ಹೀಗಾಗಿ ಮಕ್ಕಳ ಬಗ್ಗೆ ಅತಿ ಹೆಚ್ಚಿನ ನಿರೀಕ್ಷೆ ಇರುತ್ತದೆ. ಇದು ಇಂದಿನ ಯುವಜನತೆಗೆ ತೂಗುಗತ್ತಿಯಾಗಿದೆ. ಕನಸು ನನಸಾಗಲೇಬೇಕು ಇಲ್ಲ ಸರ್ವನಾಶ ಆಗಿಹೋಗಬೇಕು ಎಂದಾಗಿದೆ!
ಮಕ್ಕಳ ಬಗ್ಗೆ ನಿರೀಕ್ಷೆ ತಪ್ಪೇನಲ್ಲ, ಏಕೆಂದರೆ ಮುಕ್ಕಾಲು ಪಾಲು ಜನ ಹೀಗೆಯೇ ಯಶಸ್ಸು ಕಾಣುವುದು. ಒತ್ತಡ ಹೆಚ್ಚದಿದ್ದರೆ ಅವರಿಂದ ಹೊಸ ಕೆಲಸ ಆಗದು. ಅಂದಿನ ಕಾಲದ ಈಜಿಪ್ಟ್ನಲ್ಲಿ ಕಂದಾಚಾರಿಗಳ ಅಪಾರ ಒತ್ತಡಕ್ಕೆ ಮಣಿದು ಅಲ್ಲಿನ ಫ್ಯಾರೋ ಪಿರಮಿಡ್ ಮಾಡಿಸಿದ್ದಂತೆ. ಇದನ್ನು ಕಂಡು ಇಂದಿನ ಆಧುನಿಕ ಎಂಜಿನಿಯರ್ ಸಹ ಬೇಸ್ತು ಬೀಳುವಂತಿದೆ.