ಚೆನ್ನೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಜಾಗತಿಕ ತಂತ್ರಜ್ಞಾನ ಕಂಪನಿ ಜೊಹೊ ತನ್ನದೇ ಸ್ವಂತ ಲಾರ್ಜ್ ಲಾಂಗ್ವೇಜ್ ಮಾಡೆಲ್ ಜಿಯಾ ಎಲ್.ಎಲ್.ಎಂ. ಬಿಡುಗಡೆ ಮಾಡಿದ್ದು ಇದರೊಂದಿಗೆ ಆಟೊಮ್ಯಾಟಿಕ್ ಸ್ಪೀಚ್ ರಿಕಗ್ನಿಷನ್ (ಎ.ಎಸ್.ಆರ್.) ಮಾಡೆಲ್ ಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸ್ಪೀಚ್-ಟು-ಟೆಕ್ಸ್ಟ್ ಆಗಿ ಪರಿವರ್ತಿಸುತ್ತದೆ.
ಇನ್ನು ಹೆಚ್ಚಾಗಿ ಭಾರತೀಯ ಭಾಷೆಗಳಿಗೆ ವಿಸ್ತರಿಸುವ ಯೋಜನೆಗಳನ್ನು ಜೊಹೊ ಹೊಂದಿದೆ. ಕಂಪನಿಯು ನೋ-ಕೋಡ್ ಎಐ ಏಜೆಂಟ್ ಬಿಲ್ಡರ್ ಜಿಯಾ ಏಜೆಂಟ್ ಸ್ಟುಡಿಯೊ ಮತ್ತು ಮಾಡೆಲ್ ಕಾಂಟೆಕ್ಸ್ಟ್ ಪ್ರೊಟೊಕಾಲ್ (ಎಂಸಿಪಿ) ಸರ್ವರ್ ಅನ್ನು ಕೂಡಾ ಬಿಡುಗಡೆ ಮಾಡಿದ್ದು ಅದು ಜೊಹೊದ ಆಕ್ಷನ್ ಲೈಬ್ರೆರಿಗೆ ಮೂರನೇ ಪಕ್ಷದ ಸಾಧನಗಳಿಗೆ ಅವಕಾಶ ಕಲ್ಪಿಸುತ್ತಿದ್ದು ಎರಡನ್ನೂ ಭಾರತದಲ್ಲಿ ನಿರ್ಮಿಸಲಾಗಿದೆ.
ಜೊಹೊ 25ಕ್ಕೂ ಹೆಚ್ಚು ಪ್ರಿ-ಬಿಲ್ಟ್ ಏಜೆಂಟ್ಸ್ ಬಿಡುಗಡೆ ಮಾಡಿದ್ದು ಅವುಗಳಲ್ಲಿ ಕೆಲವನ್ನು ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಪರಿಶೀಲನೆಗಳಿಗೆ ಭಾರತದ ಮಾರುಕಟ್ಟೆಗೆ ರೂಪಿಸಲಾಗಿದೆ. ಇದಲ್ಲದೆ ಕಂಪನಿಯು ಭಾರತದಲ್ಲಿ 2024ರಲ್ಲಿ ಶೇ.32ರಷ್ಟು ಬೆಳವಣಿಗೆ ಕಂಡಿದೆ ಎಂದು ಹೇಳಿದೆ. ಬೆಂಗಳೂರಿನಲ್ಲಿ ಈ ವರ್ಷ ನಡೆದ ಕಂಪನಿಯ ವಾರ್ಷಿಕ ಬಳಕೆದಾರರ ಸಮ್ಮೇಳನ ಜೊಹೊಲಿಕ್ಸ್ ಇಂಡಿಯಾದಲ್ಲಿ ಇದನ್ನು ಪ್ರಕಟಿಸಲಾಯಿತು.
“ಇಂದಿನ ಪ್ರಕಟಣೆಯು ಗ್ರಾಹಕರ ದತ್ತಾಂಶಗಳು, ವ್ಯವಹಾರ ಸನ್ನಿವೇಶದಲ್ಲಿ ಸಾಮರ್ಥ್ಯಗಳ ಆಳ ಮತ್ತು ಅಗಲ ಮತ್ತು ಮೌಲ್ಯ ರಕ್ಷಣೆಯ ಮೂಲಭೂತ ತಂತ್ರಜ್ಞಾನ ನಿರ್ಮಿಸುವ ಜೊಹೊದ ದೀರ್ಘಕಾಲೀನ ಗುರಿಗೆ ಒತ್ತು ನೀಡುತ್ತದೆ” ಎಂದು ಜೊಹೊದ ಸಿಇಒ ಮಣಿ ವೆಂಬು ಹೇಳಿದ್ದಾರೆ.
“ಆಂತರಿಕವಾಗಿ ನಿರ್ಮಿಸಲಾದ ನಮ್ಮದೇ ಎಲ್.ಎಲ್.ಎಂ. ಮಾಡೆಲ್ ಅನ್ನು ಪ್ರಸ್ತುತಪಡಿಸಲು ನಾವು ಹೆಮ್ಮೆ ಪಡುತ್ತೇವೆ. ಜಿಯಾ ಎಲ್.ಎಲ್.ಎಂ. ಅನ್ನು ವಿಶೇಷವಾಗಿರಿಸಿರುವುದು ಏನೆಂದರೆ ಇದು ವಿಶೇಷವಾಗಿ ಉದ್ಯಮದ ಬಳಕೆಯ ಪ್ರಕರಣಗಳಿಗೆ ತರಬೇತಿ ಮಾಡಲಾಗಿದ್ದು, ಖಾಸಗಿತನವನ್ನು ಅದರಲ್ಲಿ ಕೇಂದ್ರದಲ್ಲಿರಿಸಲಾಗಿದ್ದು ಇದರಿಂದ ಕಡಿಮೆ ಇಂಟರ್ಫೇಸ್ ವೆಚ್ಚ, ಗ್ರಾಹಕರಿಗೆ ಆ ಮೌಲ್ಯವನ್ನು ವರ್ಗಾಯಿಸುವುದು, ಅಲ್ಲದೆ ಅವರು ಎಐ ಉತ್ಪಾದಕತೆ ಮತ್ತು ದಕ್ಷತೆಯನ್ನು ಬಳಸುವುದನ್ನು ದೃಢೀಕರಿಸಿಕೊಳ್ಳುತ್ತದೆ” ಎಂದರು.
ಭಾರತದಿಂದ ಸದೃಢ ಎಐ ತಳಹದಿಗಳ ನಿರ್ಮಾಣ: ಜಿಯಾ ಎಲ್.ಎಲ್.ಎಂ. ಎನ್.ವಿಡಿಯಾದ ಎಐ ಆಕ್ಸಲರೇಟೆಡ್ ಕಂಪ್ಯೂಟಿಂಗ್ ಪ್ಲಾಟ್ ಫಾರಂ ಬಳಸುತ್ತಿದೆ ಮತ್ತು ಭಾರತದಲ್ಲಿ ಇಡಿಯಾಗಿ ನಿರ್ಮಾಣಗೊಂಡಿದೆ. ಎಲ್.ಎಲ್.ಎಂ. ಅನ್ನು ನಿರ್ದಿಷ್ಟವಾಗಿ ಸಂದರ್ಭೋಚಿತ ಬಳಕೆಗೆ ನಿರ್ಮಿಸಲಾಗಿದೆ ಮತ್ತು 1.3, 2.6 ಮತ್ತು 7 ಬಿಲಿಯನ್ ಪ್ಯಾರಾಮೀಟರ್ ಗಳ ಮೂರು ಮಾಡೆಲ್ ಗಳನ್ನು ಹೊಂದಿದೆ ಮತ್ತು ಈ ಮಾಡೆಲ್ ಗಳು ಮಾರುಕಟ್ಟೆಯಲ್ಲಿ ಹೋಲಿಕೆ ಮಾಡಬಲ್ಲ ಓಪನ್ ಸೋರ್ಸ್ ಮಾಡೆಲ್ ಗಳ ವಿರುದ್ಧ ಸ್ಪರ್ಧಾತ್ಮಕವಾಗಿವೆ. ಈ ಮಾಡೆಲ್ ಗಳು ಜೊಹೊಮ್ಯಾಚ್ ಗೆ ಬಳಕೆದಾರರ ಸನ್ನಿವೇಶಕ್ಕೆ ಸೂಕ್ತ ಎಐನೊಂದಿಗೆ ನೆರವಾಗುವ ಮೂಲಕ ಕಾರ್ಯಕ್ಷಮತೆ ಮತ್ತು ಸಂಪನ್ಮೂಲ ಬಳಕೆಯನ್ನು ಸಮತೋಲನಗೊಳಿಸುತ್ತವೆ. ಜಿಯಾ ಎಲ್.ಎಲ್.ಎಂ. ಅನ್ನು ಜೊಹೊ ಉತ್ಪನ್ನದ ಬಳಕೆಯ ಪ್ರಕರಣಗಳಿಗೆ ತರಬೇತಿ ನೀಡಲಾಗಿದ್ದು ಅದರಲ್ಲಿ ಸ್ಟ್ರಕ್ಚರ್ಡ್ ಡೇಟಾ ಎಕ್ಸ್ಟ್ರಾಕ್ಷನ್, ಸಮ್ಮರಯಸೇಷನ್, ಆರ್.ಎ.ಜಿ. ಮತ್ತು ಕೋಡ್ ಜನರೇಷನ್ ಒಳಗೊಂಡಿವೆ. ಕಂಪನಿಯ ಆದ್ಯತೆಯು ಸೂಕ್ತ ಗಾತ್ರದ ಮಾಡೆಲ್ ಕುರಿತಾಗಿದೆ. ಅಲ್ಪಾವಧಿಯಲ್ಲಿ ಜೊಹೊ ತನ್ನ ಮಾಡೆಲ್ ಅನ್ನು ವಿಸ್ತರಿಸಲಿದ್ದು ವರ್ಷಾಂತ್ಯಕ್ಕೆ ಮೊದಲ ಪ್ಯಾರಾಮೀಟರ್ ಅಪ್ ಗ್ರೇಡ್ ಆಗಲಿದೆ.





