ವರನಟ ಡಾ.ರಾಜ್ ಕುಮಾರ್ ಅವರ ಸ್ಮಾರಕ ಜಾಗದ ಕುರಿತು ಕೊಂಕು ನುಡಿದಿದ್ದ ನಟ ಚೇತನ್ ಇದೀಗ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಈ ಹಿಂದೆಯೂ ಸಾಕಷ್ಟು ವಿಚಾರಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಿದ್ದ ಚೇತನ್, ಇದೀಗ ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಕುರಿತು ಹೇಳಿಕೆ ನೀಡಿ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಡಾ.ರಾಜ್ ಕುಮಾರ್ ಅವರ ಸ್ಮಾರಕಕ್ಕೆ 2.5ಎಕರೆ ಜಾಗವನ್ನೇಕೆ ನೀಡಲಾಗಿದೆ ಎಂದು ಪ್ರಶ್ನೆ ಎತ್ತುವ ಮೂಲಕ ಚೇತನ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಇದೀಗ ಡಾ.ರಾಜ್ ಕುಮಾರ್ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಚೇತನ್ ವಿರುದ್ಧ ಈಗಾಗಲೇ ಕೆಲ ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳ ಸಂಘಗಳು ಪೊಲೀಸ್ ಠಾಣೆಯಲ್ಲಿ ಮತ್ತು ಚಲನಚಿತ್ರ ಸಂಘಗಳಿಗೆ ದೂರು ನೀಡಿವೆ.

ಬದುಕೋಕೆ ಬಿಡಲ್ಲಎಂದ ಸಾರಾ: ಇದೀಗ ರಾಜ್​ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದು, ಚೇತನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ‘ಈ ಬಾರಿ ಚೇತನ್​​ಗೆ ಒದೆ ಬೀಳುವುದು ಖಂಡಿತ’ ಎಂದು ಎಚ್ಚರಿಸಿದ್ದಾರೆ.

'ಕ್ಷಮೆ ಕೇಳುವುದಕ್ಕೂ ಸಹ ಅವನಿಗೆ ಯೋಗ್ಯತೆ ಇಲ್ಲ. ಕರ್ನಾಟಕಕ್ಕೆ ಅವನ (ಚೇತನ್ ಅಹಿಂಸ) ಕೊಡುಗೆ ಏನು? ಎಷ್ಟು ಸಿನಿಮಾ ಮಾಡಿದ್ದಾನೆ ಅವನು? ತಿರ್ಕೋಂಡು ತಿಂತಿದ್ದಾನೆ. ಹಾದಿ ಬೀದಿಯಲ್ಲಿ ಬೇಡಿಕೊಂಡು ತಿಂತಿದ್ದೀಯ? ನೀನು ಮೇರು ನಟರ ಬಗ್ಗೆ ಮಾತನಾಡುತ್ತೀಯ. ಆತನೊಬ್ಬ ನಿರುದ್ಯೋಗಿ, ಕೈಯಲ್ಲಿ ಮಾಡೋಕೆ ಕೆಲಸ ಇಲ್ಲ, ಮೊದಲು ಕೆಲಸ ಹುಡುಕಿಕೊ. ನಾವು ಸರ್ಕಾರದ ಮೇಲೆ ಒತ್ತಡ ಹಾಕುತ್ತೀವಿ, ಆತನನ್ನು ಈ ಕೂಡಲೇ ರಾಜ್ಯದಿಂದ ಹೊರಗೆ ಹಾಕಬೇಕು’ ಎಂದಿದ್ದಾರೆ.ಅಲ್ಲದೆ 'ಅಣ್ಣಾವ್ರ ಸ್ಮಾರಕದ ಜಾಗ ನಮಗೆಲ್ಲ ದೇವಸ್ಥಾನ. ಸ್ಮಾರಕವನ್ನು ಕಾಂಪ್ಲೆಕ್ಸ್ ಅಂತಿಯಲ್ಲ ಅಲ್ಲಿ ಯಾವ ಕಮರ್ಷಿಯಲ್ ಆಕ್ಟಿವಿಟೀಸ್ ನಡೆಯುತ್ತಿದೆ? ಸರ್ಕಾರ ಕೂಡಲೆ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು. ಜೊತೆಗೆ ಚೇತನ್ ಗೆ ಅಣ್ಣಾವ್ರ ಅಭಿಮಾನಿಗಳು ಸರಿಯಾದ ಪಾಠ ಕಲಿಸ್ತೀವಿ' ಎಂದು ಎಚ್ಚರಿಕೆ ನೀಡಿದ್ದರು.

ಇನ್ನು ಕನ್ನಡಪರ ಸಂಘಟನೆಗಳು ಮತ್ತು ಡಾ.ರಾಜ್ ಅಭಿಮಾನಿಗಳ ಸಂಘದ ಸದಸ್ಯರು ಬೆಂಗಳೂರಿನಲ್ಲಿರುವ ನಟ ಚೇತನ್ ಮನೆಗೆ ಮುತ್ತಿಗೆ ಹಾಕಿದ್ದು, ಚೇತನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ವಿವಾದಕ್ಕೆ ಕಾರಣವಾದ ಟ್ವೀಟ್: ನಟ ಚೇತನ್ ಡಾ.ರಾಜ್ ಕುಮಾರ್ ಸಮಾಧಿ ಕುರಿತು ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಟ್ವೀಟ್ ನಲ್ಲಿ 'ನಾವು ರಾಜ್‌ಕುಮಾರ್ ಅವರನ್ನು ಒಬ್ಬ ಶ್ರೇಷ್ಠ ಕಲಾವಿದ ಎಂದು ಗೌರವಿಸುತ್ತೇವೆ. ಆದರೆ, 2006ರಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಈ ನಟನ ಸ್ಮಾರಕ ಸಂಕೀರ್ಣಕ್ಕಾಗಿ 2.5 ಎಕರೆ ಭೂಮಿಯನ್ನು ನೀಡಿದ್ದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕು. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು; ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ ಎಂದು ಟ್ವೀಟ್ ಮಾಡಿದ್ದರು. ಇದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ