ದೇಶದಲ್ಲಿ ಆಗುತ್ತಿರುವ ಎಲ್ಲಾ ವಿದ್ಯಮಾನಗಳ ನಡುವೆಯೂ, ಮಾರ್ಚ್ ತಿಂಗಳಿನಲ್ಲಿ ಹತ್ತನೇ ತರಗತಿಯ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿ, ಏಪ್ರಿಲ್ ತಿಂಗಳಿನಲ್ಲಿ ಮೌಲ್ಯಮಾಪನವನ್ನೂ ಮುಗಿಸಿ, ಮೇ ತಿಂಗಳಲ್ಲೇ ಫಲಿತಾಂಶಗಳನ್ನು ಪ್ರಕಟ ಮಾಡಿರುವುದಕ್ಕೆ ಶಿಕ್ಷಣ ಮಂತ್ರಿಗಳೂ ಸೇರಿದಂತೆ ಇಡೀ ಶಿಕ್ಷಣ ಇಲಾಖೆಗೊಂದು ಹೃತ್ಪೂರ್ವಕ ಅಭಿನಂದನೆಗಳು.ರಾಜ್ಯದಲ್ಲಿ ಈ ಬಾರಿ ಉತ್ತಮಸರಾಸರಿಯಲ್ಲಿ ತೇರ್ಗಡೆಯಾಗಿರುವುದು ಬಹಳ ಸಂತೋಷಕರವಾದ ವಿಷಯವಾಗಿದೆ. ಇತ್ತೀಚಿನ ಕೆಲವು ವರ್ಷಗಳ ಫಲಿತಾಂಶವನ್ನು ಗಮನಿಸಿದಲ್ಲಿ ಪೂರ್ಣಾಂಕಗಳನ್ನು ಗಳಿಸುವವರ ಸಂಖ್ಯೆ ಅಧಿಕವಾಗುತ್ತಿದೆ.

sslc4

2022ರಲ್ಲಿ 145 ವಿಧ್ಯಾರ್ಥಿಗಳು 625/625 ಅಂಕಗಳೊಂದಿಗೆ 100% ಫಲಿತಾಂಶವನ್ನು ಪಡೆದಿದ್ದು ಅದರಲ್ಲಿ 21 ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಓದಿದವರಾಗಿದ್ದರೆ 2023ರಲ್ಲಿ ನಾಲ್ಕು ವಿದ್ಯಾರ್ಥಿಗಳು ಪೂರ್ಣಾಂಕ ಪಡೆದಿದ್ದರೆ, 2025ರ ಪರೀಕ್ಷೆಯಲ್ಲಿ ಸುಮಾರು22 ವಿದ್ಯಾರ್ಥಿಗಳು, 2026ರಲ್ಲಿ 7  ವಿದ್ಯಾರ್ಥಿಗಳು, 625/625  ಅಂಕಗಳನ್ನು ಗಳಿಸಿರುವುದು ಹೆಮ್ಮೆಯ ವಿಷಯವಾಗಿದ್ದರೂ, ಇಂದಿನ ಪರೀಕ್ಷಾ ಗುಣ ಮಟ್ಟ ಈ ಪರಿಯಾಗಿ ಕಡಿಮೆಯಾಗಿ ಹೋಗಿದೆ ಎನ್ನುವುದೇ ವಿಷಾಧನೀಯವಾದ ವಿಷಯವಾಗಿದೆ.

sslc60-70 ರ ದಶಕದವರೆಗೂ ಪರೀಕ್ಷೇಯಲ್ಲಿ ಪಾಸ್ ಆದರೆ ಸಾಕು ಎಂಬಂತಾಗಿದ್ದು ಸರಾಸರಿ 20-30% ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿದ್ದರೆ, 80 ಮತ್ತು 90ರ ದಶಕದಲ್ಲಿ ತೇರ್ಗಡೆಯ ಫಲಿತಾಂಶ ಗಣನೀಯವಾಗಿ ಏರುತ್ತಾ 40-45% ವರೆಗು ತಲುಪಿ ಮೊದಲ ದರ್ಜೆಯಲ್ಲಿ (60%) ಪಡೆದರೂ ಸಾಕು ಎನ್ನುವಂತಹ ಪರಿಸ್ಥಿತಿ ಕ್ರಮೇಣ ಬದಲಾಗುತ್ತಾ ಹೋಗಿ 80% – 90% ತೆಗೆದುಕೊಂಡ ವಿದ್ಯಾರ್ಥಿಗಲೂ ಕಡಿಮೆ ಅಂಕ ಬಂದಿದೆ ಎಂದು ದುಃಖ ಪಟ್ಟು ಕೆಲವು ದುರ್ಬಲ ವಿದ್ಯಾರ್ಥಿಗಳು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವ ಉದಾಹರಣೆ ಇದೆ.

ranjith

ಬಹುಶಃ ಕರ್ನಾಟಕ ಶಿಕ್ಷಣ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ, 2016ರಲ್ಲಿ ಭದ್ರಾವತಿಯ ವಿದ್ಯಾರ್ಥಿ ರಂಜನ್ ಎಸ್ 625/625 ಅಂಕಗಳೊಂದಿಗೆ 100% ಫಲಿತಾಂಶವನ್ನು ಪಡೆದು ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ ನಂತರ 2018 ರಲ್ಲಿ ಮೈಸೂರಿನ ಸದ್ವಿದ್ಯಾ ಹೈಸ್ಕೂಲ್‌ನ ಯಶಸ್ ಎಂ ಎಸ್ ಮತ್ತು ಬೆಂಗಳೂರಿನ ಹೋಲಿ ಚೈಲ್ಡ್ ಆಂಗ್ಲ ಶಾಲೆಯ ವಿದ್ಯಾರ್ಥಿ ಸುದರ್ಶನ್ ಕೆ ಎಸ್ ಶೇ 100 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡ ನಂತರ ಶೇ 100 ಅಂಕಗಳಿಸುವುದೇ ಮಾನದಂಡವಾಗಿ  ಮತ್ತೆ 2019ರಲ್ಲಿ 02 ವಿದ್ಯಾರ್ಥಿಗಳು, 2020 ರಲ್ಲಿ 06 ವಿದ್ಯಾರ್ಥಿಗಳು, 2021 158 ವಿದ್ಯಾರ್ಥಿಗಳು (ಕೋವಿಡ್ ನಿಂದಾಗಿ ಪೂರ್ಣ ಪ್ರಮಾಣದ ಪರೀಕ್ಷೆ ನಡೆದಿರಲಿಲ್ಲ) ಪ್ರಸ್ತುತ 2022ರಲ್ಲಿ ನಡೆದ ಪೂರ್ಣಪ್ರಮಾಣದ ಪರೀಕ್ಷೆಯಲ್ಲಿ 145 ವಿದ್ಯಾರ್ಥಿಗಳು ಈ ಬಾರಿ 4 ವಿದ್ಯಾರ್ಥಿಗಳು ಶೇ 100 ಅಂಕಗಳಿಸಿರುವುದು ನಿಜಕ್ಕೂ ಅಚ್ಚರಿಯ ಜೊತೆಗೆ ಶಿಕ್ಷಣ ಗುಣಮಟ್ಟದೆಡೆಗೆ ಅಥವಾ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ರೀತಿಯ ಬಗ್ಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದರೂ ತಪ್ಪಾಗದು.

ಈ ಕುರಿತಂತೆ ಇಂದಿನ education system ಸರಿಯಿಲ್ಲ, ಶಾಲೆಗಳು ಸರಿಯಿಲ್ಲ ಎಂದು ಕೆಲವರು ಟೀಕೆಗಳನ್ನು ಮಾಡಲಾರಂಭಿಸಿದರೆ, ನಿಮ್ಮ‌ಮನೆಯ ಮಕ್ಕಳು ಇದೇ ರೀತಿ ಪೂರ್ಣಾಂಕಗಳನ್ನು ಪಡೆದಿದ್ದರೆ, ನಿಮ್ಮ ನಿಲುವು ಹೀಗೆಯೇ ಇರುತ್ತಿತ್ತೇ?  ಎಂಬ ಸವಾಲನ್ನು ಕೆಲವರು ಹಾಕುವ ಮೂಲಕ ವಾದ ವಿವಾದಗಳ ಚರ್ಚೆ ನಡೆಯುತ್ತಿದೆ.

ಸಾಧಾರಣವಾಗಿ ಗಣಿತ ಮತ್ತು ವಿಜ್ಞಾನಗಳಲ್ಲಿ 100% ತೆಗೆದುಕೊಳ್ಳುವುದು ಸುಲಭವಾದರೂ, ಭಾಷಾ ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ತೆಗೆದುಕೊಳ್ಳುವುದು ತುಸು ಕಷ್ಟಕರವೇ ಸರಿ. ಯಾವುದೇ ಭಾಷೆಯ ಪರೀಕ್ಷೆಗಳಲ್ಲಿ ಕೇವಲ ಉತ್ತರವಲ್ಲದೇ, ಕಾಗುಣಿತ, ವ್ಯಾಕರಣ ಮುಂತಾದವುಗಳು ಸಹಾ ಮುಖ್ಯವಾಗಿದ್ದು, 100-125 ಅಂಕಗಳ ಪರೀಕ್ಷೆಯಲ್ಲಿ ಒಂದೂ ತಪ್ಪಲ್ಲಿದೇ ಬರೆಯುವುದು ನಿಜಕ್ಕೂ ದುಸ್ಸಾಹಸವೇ ಸರಿ. ಒಂದು ಪಕ್ಷ ಎಲ್ಲರೂ ಸಹಾ ಒಂದೂ ಸಹಾ ತಪ್ಪಿಲ್ಲದೇ ಬರೆದಿದ್ದಲ್ಲಿ ನಿಜಕ್ಕೂ ಶ್ಲಾಘನೀಯ ವಿಷಯವೇ ಆಗಿದೆ.  ಪರೀಕ್ಷೆಯ ಮೂರು ಗಂಟೆಯ ಅವಧಿಯಲ್ಲಿ ಒಂದೂ ತಪ್ಪಿಲ್ಲದೇ ಭಾಷಾ ಪರೀಕ್ಷೆಯಲ್ಲಿ ಉತ್ತರ ಬರೆಯುವುದು ಅಷ್ಟು ಸುಲಭವಲ್ಲ ಎಂಬ ಭಾವನೆಯಿಂದಲೇ 2016ರಲ್ಲಿ 100% ಅಂಕಗಳನ್ನು ಗಳಿಸಿದ್ದ ಭದ್ರಾವತಿಯ ವಿದ್ಯಾರ್ಥಿ ರಂಜನ್ ಎಸ್ ಉತ್ತರ ಪತ್ರಿಕೆಯ ನಕಲನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಮಾದರೀ ಉತ್ತರ ಪತ್ರಿಕೆಯನ್ನಾಗಿ ತೋರಿಸಬೇಕೆಂದು ನನ್ನನ್ನೂ ಒಳಗೊಂಡು ಹಲವರು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದದ್ದರೂ ಅದು ನೆನೆಗುದಿಗೆ ಬಿದ್ದಿತ್ತು. ಈಗ ಈ ಪ್ರಮಾಣದ ವಿದ್ಯಾರ್ಥಿಗಳು 100% ಅಂಕಗಳನ್ನು ಗಳಿಸಿರುವಾಗ ಖಂಡಿತವಾಗಿಯೂ ಅವರ ಉತ್ತರ ಪತ್ರಿಕೆಗಳನ್ನು ಎಲ್ಲರಿಗೂ ಬಹಿರಂಗ ಪಡಿಸಿದಾಗ ಎಲ್ಲರ ಅನುಮಾನಗಳೂ ಪರಿಹಾರವಾಗಿ ಮುಂದಿನ ಮಕ್ಕಳಿಗೆ ಪ್ರೇರಣಾದಾಯಕವಾಗಬಲ್ಲದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ