ಅಮೆರಿಕನ್ : ಛೇ...ಛೇ! ನೀವು ಭಾರತೀಯರೆಲ್ಲ ಬೇರೆ ಬೇರೆ ಬಣ್ಣದಲ್ಲಿದ್ದೀರಿ. ಅದೇ ನಮ್ಮನ್ನು ನೋಡಿ, ಹೇಗೆ ಬೆಳ್ಳಗೆ ಹೊಳೆ ಹೊಳೆಯುತ್ತಿದ್ದೇವೆ?
ಭಾರತೀಯ : ಕುದುರೆಗಳೂ ವಿವಿಧ ಬಣ್ಣಗಳಲ್ಲಿ ಬರುತ್ತವೆ, ಆದರೆ ಕತ್ತೆಗಳು ಮಾತ್ರ ಒಂದೇ ಬಣ್ಣದಲ್ಲಿರುತ್ತವೆ!
ಮಹೇಶ್ ಹಿಂದಿನ ದಿನ ಬಂದಿದ್ದ ಅದೇ ಬಾರ್ ಗೆ ಬಂದು, ಅದೇ ಮೂಲೆ ಟೇಬಲ್ ಹಿಡಿದು, ಮತ್ತೆ ಅದೇ ಮಾಣಿಯನ್ನು ಕೂಗಿ ಕರೆದ. ಮಾಣಿ ಏನು ಬೇಕು ಎಂದು ಕೇಳಿದಾಗ, ಮತ್ತೆ ಅದೇ ತರಹದ 2 ಬಾಟಲಿ ತರುವಂತೆ ಆರ್ಡರ್ ಮಾಡಿದ.
ಮಾಣಿ : ಏನಾಯ್ತು ಸಾರ್....? ಬಹಳ ದುಃಖದಲ್ಲಿದ್ದೀರಿ....
ಮಹೇಶ್ : ನನ್ನ ತಮ್ಮನಿಗೆ ಮದುವೆ ಮಾಡೋಣ ಅಂತ ಕೇಳಿದರೆ, ಅವನು ತಾನು ಗೇ, ಮದುವೆ ಆಗೋದಿಲ್ಲ ಅಂದುಬಿಟ್ಟ. ಅವನು ನನಗೆ ಮಗನ ಸಮಾನ, ಬಹಳ ದುಃಖ ಆಯ್ತು.
ಮಾಣಿ 2 ವಾರ ಬಿಟ್ಟು ನೋಡುತ್ತಾನೆ, 50ರ ಹರೆಯದ ಅದೇ ಮಹೇಶ ಅದೇ ಬಾರ್ ಗೆ ಅದೇ ಟೇಬಲ್ ಗೆ ಬಂದು ಅದೇ ಮಾಣಿಯನ್ನು ಕರೆಯೋದೇ?
ಮಾಣಿ : ಏನಾಯ್ತು ಸಾರ್? ಮತ್ತೆ ದುಃಖದಲ್ಲಿದ್ದೀರಾ?
ಮಹೇಶ್ : ನನ್ನ ಮಗ ಸಹ ಸಲಿಂಗಕಾಮಿ ಅಂತ ಗೊತ್ತಾಯ್ತು, ಮದುವೆ ಬೇಡ ಅಂತಾನೆ. ಅಲ್ಲಿಗೆ ನಮ್ಮ ವಂಶ ನಿಂತೇ ಹೋಯ್ತು!
1 ವಾರ ಬಿಟ್ಟು ಅದೇ ಮಹೇಶ್ ಅದೇ ಬಾರ್‌ಗೆ ಬಂದು, ಅದೇ ಟೇಬಲ್ ನಲ್ಲಿ ಕುಳಿತು ಮತ್ತೆ ಅದೇ ಮಾಣಿಯನ್ನು ಕರೆದ. ಕಕ್ಕಾಬಿಕ್ಕಿಯಾದ ಮಾಣಿ ಅದೇ ಮಹೇಶ್ ಗೆ ಅದೇ ಬಾಟಲಿಗಳನ್ನು ತಂದುಕೊಟ್ಟ.
ಮಾಣಿ : ಮತ್ತೆ ಏನಾಯ್ತು ಸಾರ್? ನಿಮ್ಮ ಮನೆಯಲ್ಲಿ ಹೆಣ್ಣನ್ನು ಬಯಸುವವರು ಯಾರೂ ಇಲ್ಲವೇ?
ಮಹೇಶ್ : ಇದ್ದಾಳಲ್ಲ ನನ್ನ ಹೆಂಡತಿ.... ಆ ದುಃಖ ತಡೆಯೋಕ್ಕೆ ಆಗದೆ ಪುನಃ ಇಲ್ಲಿಗೇ ಬಂದಿದ್ದೀನಿ.....
ಯಾರೋ ತೀರಿಕೊಂಡರೆಂದು ಮಂಗ್ಯಾ ಬಸ್ಯಾ ಸ್ಮಶಾನಕ್ಕೆ ಬಂದು, ಹೆಣ ಉರಿಯುವವರೆಗೂ ಕಾಯೋಣ ಎಂದು ನಿಂತುಕೊಂಡರು.
ಮಂಗ್ಯಾ : ಆ ಹೆಣ ನೋಡ್ಲೇ..... ಎಷ್ಟು ಆರಾಮವಾಗಿ ಮಲಗಿದೆ, ಹೌದಲ್ಲ.....
ಹೆಣ (ಎದ್ದು ಕುಳಿತು) : ಯಾಕ್ಲಾ ಮಲಗಬಾರ್ದು? ಎಷ್ಟು ಕಷ್ಟಪಟ್ಟು ಹೋರಾಡಿ, ದಾಯಾದಿಗಳಿಂದ ಈ ಜಾಗ ನಮ್ಮದಾಗಿಸಿಕೊಂಡಿದ್ದೀನಿ, ಗೊತ್ತಾ?
ಮೋನಾ : ಡಾಕ್ಟ್ರೇ.... ನನ್ನ ಗಂಡಂದು ಬಹಳ ಕಾಟ ಆಗಿಹೋಗಿದೆ. ಸಹಿಸಿ ಸಹಿಸಿ ಸಾಕಾಗಿದೆ, ಏನಾದರೂ ಸಲಹೆ ಕೊಡಿ.
ಡಾಕ್ಟರ್ : ಮುಂದಿನ ಸಲ ಅವರನ್ನೂ ಕರೆದುಕೊಂಡು ಬಾರಮ್ಮ. ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿ, ಆತ ಕಾಟ ಕೊಡದಂತೆ ಮಾಡಿಬಿಡ್ತೀನಿ!
ಮೋನಾ : ಅಯ್ಯೋ ಕರ್ಮ! ಅದಲ್ಲ ಡಾಕ್ಟರ್....
ಡಾಕ್ಟರ್ : ಇನ್ನೇನು? ಕುಡಿದು ಬಂದು ಹೊಡೀತಾನಾ?
ಮೋನಾ : ಅಯ್ಯೋ... ಅವನಿಗೆಲ್ಲಿದೆ ಅಷ್ಟು ದಮ್ಮು...
ಡಾಕ್ಟರ್ : ಮತ್ತೆ ಏನಮ್ಮ ತೊಂದರೆ...? ವಿವರವಾಗಿ ಹೇಳು.
ಮೋನಾ : ಅವರಿಲ್ಲದಾಗ ನಾನು ಮನೆಯಲ್ಲಿ ಆಗಾಗ ಸಿಗರೇಟ್ ಸೇದ್ತೀನಿ. ಅದನ್ನು ಯಾರೋ ಅವನಿಗೆ ಚಾಡಿ ಹೇಳಿಬಿಟ್ಟಿದ್ದಾರೆ! ಅದಕ್ಕೆ ನನ್ನ ಮೇಲೆ ಸಿಕ್ಕಾಪಟ್ಟೆ ರೋಗಾಡೋದಾ....?





