ಇವತ್ತು ಬೆಳೆಗ್ಗೆ ಜಿಟಿ ಜಿಟಿ ಮಳೆ ಬೀಳ್ತಾ ಇದ್ದದ್ದರಿಂದ ಮುಂಜಾನೆಯ ವೃತ್ತ ಪತ್ರಿಕೆ ಎಲ್ಲಾ ಒದ್ದೆ ಮುದ್ದೆಯಾಗಿತ್ತು. ನನಗೆ ಒಂದು ಪಕ್ಷ ತಿಂಡಿ ತಿನ್ನೋದನ್ನ ಬಿಟ್ರೂ ಬೇಜಾರಿಲ್ಲ. ಆದರೆ ಬೆಳಗಿನ ಪೇಪರ್ ಓದದೇ ಹೋದ್ರೆ ಏನೋ ಕಳೆದು ಕೊಂಡ ಅನುಭವ. ಆಷ್ಟೆಲ್ಲ ಟಿವಿಯಲ್ಲಿ ವಾರ್ತೆಗಳನ್ನು ನೋಡಿದ್ರೂ, ಇಂಟರ್ನೆಟ್ಟಲ್ಲಿ ಸುದ್ದಿಗಳನ್ನು ಓದಿದ್ರೂ, ಪೇಪರ್ ಓದೋ ಮಜಾನೇ ಬೇರೆ. ಹಾಗೆ ಒದ್ದೆ ಆದ ಪೇಪರನ್ನು ಇಸ್ತ್ರಿಪೆಟ್ಟಿಗೆಯಲ್ಲಿ ಇಸ್ತ್ರಿ ಮಾಡಿಕೊಂಡು ಓದಲು ಪುಟ ತಿರುವು ಹಾಕುತ್ತಿದ್ದಂತೆಯೇ ಗಕ್ಕನೆ ಕಾಲೇಜಿನ ಏಳನೇ ಮಹಡಿಯಿಂದ ಜಿಗಿದು ಎಂಜಿನೆಯರಿಂಗ್ ವಿಧ್ಯಾರ್ಥಿ ಆತ್ಮಹತ್ಯೆ ಎನ್ನುವ ಸುದ್ದಿ ನೋಡಿ ಒಂದು ಕ್ಷಣ ಮನಸ್ಸಿಗೆ ದುಃಖವಾಗಿದ್ದಲ್ಲದೇ ಖೇದವೂ ಆಯಿತು. ಹಿಂದಿನ ದಿನ ನಮ್ಮ ಅಕ್ಕ ಒಬ್ಬ ಹಾಸ್ಟೆಲ್ನಲ್ಲಿ ಓದುತ್ತಿರುವ ಹುಡುಗನ ಹುಡುಗಾಟಿಕೆ ಇಲ್ಲವೇ ಧಾರ್ಮಿಕ ವಿಷಯದ ಪರಿಜ್ಞಾನ ಇಲ್ಲದೇ ಅಭಾಸಕ್ಕೊಳಗಾದ ವ್ಯಾಟ್ಯಾಪ್ ಸಂದೇಶ ಕಳುಹಿಸಿ, ಇದರ ಬಗ್ಗೆ ಹೆಚ್ಚಿಗೆ ಏನಾದರೂ ಬರೆಯಬಹುದಾ ಎಂದೂ ಹೇಳಿದ್ದೂ ನೆನಪಿಗೆ ಬಂದಾಗ ನನ್ನ ಮನಸ್ಸಿನಲ್ಲಾದ ತುಮುಲವೇ ಈ ಲೇಖನ.

ಅಕ್ಕ ಕಳುಹಿಸಿದ ಸಂದೇಶದ ಸಾರಾಂಶ ಹೀಗಿದೆ. ಅಪ್ಪಾ ಮತ್ತು ಅಮ್ಮಾ ಇಬ್ಬರೂ ಕೆಲಸಕ್ಕೆ ಹೋಗುವಂತಹ ಸ್ಥಿತಿವಂತರ ಕುಟುಂಬದ ಹಾಸ್ಟೆಲ್ಲಿನಲ್ಲಿ ಓದುತ್ತಿರುವ ಹೆಚ್ಚಿನ ಅಂಕ ಗಳಿಸುವ ಜಾಣ ಹುಡುಗ ತನ್ನ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವ ಎಂದು ತನ್ನ ಊರಿಗೆ ಬಂದಿದ್ದ. ಯಥಾ ಪ್ರಕಾರ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವಷ್ಟೂ ಪುರುಸೊತ್ತಿಲ್ಲದ ಅಪ್ಪಾ ಅಮ್ಮ, ಮಗನಿಗೆ 501 ರೂಪಾಯಿಗಳನ್ನು ಕೊಟ್ಟು ಅವರ ಮನೆಯ ಹತ್ತಿರದಲ್ಲೇ ಇರುವ ರಾಯರ ಮಠದಲ್ಲಿ ಯಾವುದಾದರೂ ಸೇವೆ ಮಾಡಿಸಿಕೊಂಡು ಬರಲು ಹೇಳಿ ಕಳುಹಿಸಿದರು.

ಪೋಷಕರ ಆಜ್ಞೆಯ ಮೇರೆಗೆ ರಾಯರ ಮಠಕ್ಕೆ ಬಂದ ಹುಡುಗ ಮಠದ ಸೇವಾ ಶುಲ್ಕ ಪಟ್ಟಿ ಅವಲೋಕಿಸಿದ. ಅದು ಅವನಿಗೆ ಹೋಟೆಲ್ನಲ್ಲಿರುವ ಮೆನು ಕಾರ್ಡಿನಂತಯೇ ಭಾಸವಾಗಿ, ಎಡಗಡೆಯ ಪೂಜೆಗಳಿಗಿಂತ ಬಲಗಡೆಯಲ್ಲಿ ನಮೂದಿಸಿದ್ದ ಬೆಲೆಯ ಕಡೆಯೇ ಹರಿದಿತ್ತು ಅವನ ಚಿತ್ತ.

ರಥೋತ್ಸವ,1000 ರೂ.
ಕನಕಾಭೀಶೇಕ 5000ರೂ ಹೀಗೇ ನೋಡುತ್ತಾ ಹೋದಾಗ,
ಚಟಕ ಶ್ರಾದ್ಧ 501 ರೂ ಎಂದು ನಮೂದಿಸಿದ್ದು ಕಂಡು ತನ್ನ ಬಳಿ ಇದ್ದ 501 ರೂಪಾಯಿಗಳಿಗೆ ಇದೇ ಸರಿಯಾದ ಸೇವೆ ಎಂದು ಭಾವಿಸಿ, ಕೌಂಟರ್ಗೆ ಹೋಗಿ ಚಟಕ ಶ್ರಾದ್ಧ ಎಂದು ಹೇಳಿ receipt ಪಡೆದು , ಪುರೋಹಿತರ ಕರೆಗಾಗಿ ಕಾಯುತ್ತಾ ಕುಳಿತ.

ಸ್ವಲ್ಪ ಹೊತ್ತಿಗೆ ಆಚಾರ್ ಅವರು ಆತನನ್ನು ಕರೆದು ಅವನ ತಂದೆಯ ಶ್ರಾದ್ದ ಮಾಡಿಸಿ, ಭೂರಿ ಭೋಜನ ಮಾಡಿಸಿ, ಇವತ್ತು ರಾತ್ರಿ ಊಟ ಮಾಡಕೂಡದು ಎಂದು ತಿಳಿಸಿದರು.ಆವರ ಮಾತಿಗೆ ತಬ್ಬಿಬ್ಬದ ಹುಡುಗ , ಆಚಾರ್ರೇ ಇವೊತ್ತು ನನ್ ತಂದೆ ತಾಯಿಯ ವೆಡ್ಡಿಂಗ್ ಆನಿವರ್ಸರಿ, ರಾತ್ರಿ ಪಾರ್ಟಿಗೆ ಹೋಗ್ತಾ ಇದ್ದೀವಿ. ಬೇಗನೆ ಪ್ರಸಾದ ಕೊಡಿ ನಾನು ಮನೆಗೆ ಹೋಗ್ವೇಕು ಎಂದ.

ಹುಡುಗನ ಮಾತಿಗೆ ಆಚಾರ್ ಅವರು ಕಕ್ಕಾಬಿಕ್ಕಿಯಾಗಿ, ಏನಪ್ಪಾ ಹಾಸ್ಟೆಲ್ಲ್ಲಿ ಕಲಿತಾ ಇದ್ಯಾ ಎಂದು ಕೇಳಿ, ಹುಡುಗ ಹೂಂ ಎಂದ ಮೇಲೆ, ಪುಸ್ತಕದಿಂದ ಯಾವ ಜ್ಞಾನ ಪಡೀತೀಯೋ, ಅದಕ್ಕೂ ಹೆಚ್ಚು ಮುಖ್ಯ ಸಾಮಾನ್ಯ ಜ್ಞಾನ. ಇವತ್ತು ನಾನು ಮಾಡಿಸಿದ್ದು ನಿನ್ನ ತಂದೆ ತೀರಿದ ಮೇಲೇ ಮಾಡುವ ತಿಥಿ, ಇರಲಿ, ತಿಳಿಯದೆ ಆದ ಪ್ರಮಾದ, ಗುರುರಾಯರಿಗೆ ತಂದೆ ತಾಯಿಗಳಿಗೆ ಮನಸ್ಸಲ್ಲಿ ವಂದಿಸಿ ಕ್ಷಮಿಸಿ ಅಂತ ಕೇಳು ಎಂದು ತಿಳಿ ಹೇಳಿ, ಇನ್ನು ಮುಂದೆ ನಿಮ್ಮ ಹಿರಿಯರಲ್ಲಿ ಕೇಳಿ ಮನೆಯ ಆಚಾರ ವಿಚಾರ ಮತ್ತು ಸಂಪ್ರದಾಯಗಳನ್ನು ತಿಳಿದುಕೋ ಎಂದು ತಿಳಿಸಿ, ಈ ರೀತಿಯಾದ ಪ್ರಮಾದ ಆಗಿರುವುದನ್ನು ತಂದೆ ತಾಯಿಗೆ ಹೇಳಬೇಡ ಎಂದು ತಿಳಿಸಿ, ಅವನಿಗೆ ರಾಯರ ಪ್ರಸಾದ ಕೊಟ್ಟು ದೇವರು ನಿಮಗೆ ಒಳ್ಳೇದು ಮಾಡಲಿ ಎಂದು ಹಾರೈಸಿದರು ಎನ್ನುವುದು ಸಾರಾಂಶ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ