ನಮ್ಮ ಸನಾತನ ಧರ್ಮದಲ್ಲಿ ಮೊದಲು ಮಾತೃದೇವೋಭವ ಪಿತೃದೇವೋಭವ ಎಂದು ಜನ್ಮ ನೀಡಿದ ತಂದೆ ತಾಯಿಯರಿಗೆ ಗೌರವ ನೀಡಿದ ನಂತರದ ಸ್ಥಾನವನ್ನು ನಮಗೆ ವಿದ್ಯಾಬುದ್ದಿಯನ್ನು ಕಲಿಸಿಕೊಡುವ ಗುರುಗಳಿಗೆ ಆಚಾರ್ಯದೇವೋಭವ ಎಂದು ಸಮರ್ಪಿಸುತ್ತೇವೆ. ದುರಾದೃಷ್ಟವಶಾತ್ ಇಂದು ಹಾಗೆ ವಿದ್ಯೆಯನ್ನು ಕಲಿಸಿಕೊಡುವ ಗುರುಗಳಿಗೆ ಬೆಲೆಯೇ ಇಲ್ಲದೇ ಹೋಗಿದೆ. ಹಿಂದೆ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣಾ ಮುಕುತಿ ಎಂದು ಗುರುವೇನಮಃ ಎಂದು ಹೇಳುತ್ತಿದ್ದ ಕಾಲವಿದ್ದರೆ, ಈಗ ಗುರು ಏನು ಮಹಾ? ಎಂದು ಗುರುಗಳನ್ನೇ ಹಿಯ್ಯಾಳಿಸುವ ಕಾಲವಿದೆ. ಇಂತಹ ಕಾಲದಲ್ಲಿ ಸುಮಾರು 3 ದಶಕಗಳಿಗೂ ಅಧಿಕ ಅಧ್ಯಾಪಕ ವೃತ್ತಿಯನ್ನು ಮಾಡಿ ನಿವೃತ್ತರಾದರೂ, ಶಿಕ್ಷಣ ಕ್ಷೇತ್ರದಲ್ಲೇ ಇಂದಿಗೂ ಮುಂದುವರೆದು ಈ ದೇಶ ಕಂಡ ಅತ್ಯುತ್ತಮ ಶಿಕ್ಷಣ ತಜ್ಞ, ಶ್ರೇಷ್ಠ ಬರಹಗಾರ, ಪ್ರಚಂಡ ವಾಗ್ಮಿ, ಅದ್ಭುತವಾದ ವ್ಯಕ್ತಿ ವಿಕಸನಗೊಳಿಸುವಂತಹ ವ್ಯಕ್ತಿ ಎನಿಸಿಕೊಂಡು ಪ್ರಪಂಚಾದ್ಯಂತ ಮನ್ನಣೆಯನ್ನು ಗಳಿಸಿರುವಂತಹ ಡಾ. ಗುರುರಾಜ ಕರ್ಜಗಿಯವರು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯರು.

ಸಂಪ್ರದಾಯಸ್ಥ ಕುಟಂಬದ ಶ್ರೀ ವಸಂತರಾವ್ ಕರ್ಜಗಿ ಮತ್ತು ಶ್ರೀಮತಿ ಲಕ್ಷ್ಮೀ ಕರ್ಜಗಿ ದಂಪತಿಗಳಿಗೆ ಬಿಳಗಿಯಲ್ಲಿ ಮೇ 24, 1952ರಲ್ಲಿ ಜನಿಸುತ್ತಾರೆ. ಶ್ರೀ ವಸಂತರಾವ್ ಪರಮ ನಿಷ್ಟಾವಂತ ಸರ್ಕಾರಿ ನೌಕರರಾಗಿದ್ದ ಕಾರಣ ಮೇಲಿಂದ ಮೇಲೆ ವರ್ಗಾವಣೆ ಆಗುತ್ತಿದ್ದ ಕಾರಣ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಿರಲೆಂದು, ಅವರ ಅಜ್ಜ ಮತ್ತು ಅಜ್ಜಿಯರ ಸುಪರ್ದಿಗೆ ಗುರುರಾಜರು ಮತ್ತು ಅವರ ಅಕ್ಕನನ್ನು ಬಿಟ್ಟಿರುತ್ತಾರೆ. ಬಾಲಕ ಗುರುರಾಜರ ಜೀವನದ ಮೇಲೆ ಅಜ್ಜನ ಪ್ರಭಾವ ಬಹಳ ಹೆಚ್ಚಾಗಿತ್ತು, ಚಿಕ್ಕ ವಯಸ್ಸಿನಲ್ಲೇ ತೊಡೆಯ ಮೇಲೆ ಕುಳ್ಳರಿಸಿಕೊಂಡು ಅನೇಕ ಪೌರಾಣಿಕ, ಐತಿಹಾಸಿಕ ಮತ್ತು ವೀರಪುರುಷರ ಕಥೆಗಳನ್ನು ಹೇಳುತ್ತಿದ್ದಲ್ಲದೇ, ಬಸವಣ್ಣ, ಅಲ್ಲಮ ಮತ್ತು ಅಕ್ಕ ಮಹಾದೇವಿಯವರ ವಚನಗಳನ್ನು ಅದರ ಅರ್ಥ ಸಹಿತ ಕಲಿಸುತ್ತಿದ್ದಲ್ಲದೇ ತಮ್ಮ ಸಂಪ್ರದಾಯದ ಅರಿವಾಗಲಿ ಮತ್ತು ತಮ್ಮ ಮೊಮ್ಮಗನ ಜ್ಞಾನ ಹೆಚ್ಚಾಗಲಿ ಎಂದು ಗುರುಗಳ ಬಳಿ ವೇದ ಮತ್ತು ಉಪನಿಷತ್ತುಗಳನ್ನು ಕಲಿಸಿದ ಕಾರಣ ಚಿಕ್ಕಂದಿನಿಂದಲೇ ಬಾಲಕ ಗುರುರಾಜರಿಗೆ ಉತ್ತಮವಾದ ಅಡಿಪಾಯ ದೊರಕಿದ ಕಾರಣ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿದ್ದರು.

ಇನ್ನು ಗುರುರಾಜ ಅಕ್ಕನೂ ಸಹಾ ಅಷ್ಟೇ ಬುದ್ದಿವಂತೆಯಾಗಿದ್ದು ಆಕೆಯೂ ಸಹಾ ತಮ್ಮ ಬಾಲ್ಯದಿಂದ ಸ್ನಾತಕೋತ್ತರ ಪದವಿ ಗಳಿಸುವ ವರೆಗೂ ಪ್ರಥಮ ರ್ಯಾಂಕ್ ಪಡೆಯುತ್ತಿದ್ದದ್ದಲ್ಲದೇ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದಂತಹವರು. ಹೀಗಾಗಿ ಅಕ್ಕ ಮತ್ತು ತಮ್ಮ ಇಬ್ಬರು ಸರಸ್ವತೀ ಪುತ್ರರು ಎಂದರೂ ತಪ್ಪಾಗದು. ಧಾರವಾಡದ ಕೆ.ಇ. ಬೋರ್ಡ್ ಹೈಸ್ಕೂಲಿನಲ್ಲಿ SSLC ಓದುತ್ತಿದ್ದಾಗ , ಅಂತಿಮ ಪರೀಕ್ಷೆಯ ಫಲಿತಾಂಶ ಅವರ ಜೀವನವನ್ನು ಬದಲಿಸಿತಲ್ಲದೇ ಅವರಿಗೆ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಎಂತಹ ಮಹತ್ವದ್ದಾಗಿರುತ್ತದೆ ಎಂಬುದರ ಅರಿವಾಗಿದ್ದಲ್ಲದೇ ತಾವೂ ಸಹಾ ಶಿಕ್ಷರಾಗಲೇ ಬೇಕೆಂಬ ಧೃಢ ನಿರ್ಧಾರವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿತು. ಆ ಆದ್ಭುತ ರೋಚಕ ಮತ್ತು ಪ್ರೇರಣಾತ್ಮಕ ಪ್ರಸಂಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಿಳಿಯುವುದು ಅತ್ಯಾವಶ್ಯಕವಾಗಿದೆ.

ಗುರುರಾಜರು SSLC ಪರೀಕ್ಷೆ ಬರೆದು ತಮ್ಮ ಅಕ್ಕನೊಡನೆ ಬೇಸಿಗೆ ರಜೆಯನ್ನು ಕಳೆಯಲು ಅವರ ಅಪ್ಪಾ ಅಮ್ಮ ಇದ್ದ ಕೋಲಾರಕ್ಕೆ ಹೋಗಿರುತ್ತಾರೆ. ಬಹಳ ತಿಂಗಳುಗಳ ಬಳಿಕ ಮಕ್ಕಳು ಊರಿಗೆ ಬಂದಿದ್ದ ಕಾರಣ ಸಂತಸಗೊಂಡ ಅವರ ತಂದೆಯವರು ಮಕ್ಕಳನ್ನು ಒಂದು ವಾರದ ಮಟ್ಟಿಗೆ ವಿವಿಧ ಪುಣ್ಯಕ್ಷೇತ್ರಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಪುನಃ ಕೋಲಾರಕ್ಕೆ ಹಿಂದಿರುಗಿದ ನಂತರ ಮನೆಯಲ್ಲಿ ಬಿದ್ದಿದ್ದ ಒಂದು ವಾರದ ಹಳೆಯ ವೃತ್ತ ಪತ್ರಿಕೆಗಳ ಕಡೆ ಕಣ್ಣಾಡಿಸುತ್ತಿದ್ದಾಗ ಅವರಿಗೆ SSLC ಪರೀಕ್ಷಾ ಫಲಿತಾಂಶ ಮೂರ್ನಾಲ್ಕು ದಿನಗಳ ಹಿಂದೆಯೇ ಬಂದಿರುವ ಸುದ್ದಿ ತಿಳಿದು ಮಗನ ರಿಜಿಸ್ಟ್ಟ್ರೇಶನ್ ನಂಬರ್ ಪಡೆದು ಕೊಂಡು ಪತ್ರಿಕೆಯಲ್ಲಿ (ಆಗೆಲ್ಲಾ SSLC ಫಲಿತಾಂಶ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲೇ ಪ್ರಕಟವಾಗುತ್ತಿತ್ತು) ಆರಂಭದಲ್ಲಿ ರ್ಯಾಂಕ್ ಪಟ್ಟಿಯಲ್ಲಿ ಮಗನ ನಂಬರ್ ಕಾಣದೇ ಹೋದಾಗ, ಬೇಸರದಿಂದಲೇ 1st class, 2nd class ಕಡೆಗೆ 3rd classನಲ್ಲೂ ಇರದೇ ಮಗ SSLC ಪರೀಕ್ಷೆಯಲ್ಲಿ ಫೇಲ್ ಆಗಿದ್ದದ್ದು ನೋಡಿ ಇಡೀ ಮನೆಯವರೆಲ್ಲಾ ದುಃಖಿತರಾಗಿಯೂ ಆಶ್ಚರ್ಯಗೊಂಡು ಕೂಡಲೇ ಅಪ್ಪಾ ಮಗ ಧಾರವಾಡಕ್ಕೆ ಬರುವಷ್ಟರಲ್ಲಿ ಫಲಿತಾಂಶ ಬಂದು ವಾರ ಕಳೆದಿರುತ್ತದೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ