ಭಾರತದ ತುಂಬಾ ಅಸಂಖ್ಯಾತ ದೇವಾಲಯಗಳಿದ್ದರೂ ಬೇಲೂರು ಮತ್ತು ಹಳೇಬೀಡು ತನ್ನದೇ ಸ್ಥಾನವನ್ನು ಹೊಂದಿದೆ. ಅಷ್ಟು ಉತ್ಕೃಷ್ಟ ಶಿಲ್ಪಕಲೆ ಇನ್ನೆಲ್ಲೂ ನೋಡಲು ಸಿಗದು. ಬರಿಯ ಕಲ್ಲಲ್ಲ, ಶಿಲ್ಪಕಲೆಯಲ್ಲ. ವೇದಾಂತ, ಪುರಾಣ, ಆಧ್ಯಾತ್ಮ, ತತ್ವಶಾಸ್ತ್ರ, ನೀತಿ ನಿಯಮ ಎಲ್ಲ ಅಡಗಿದೆ ಇಲ್ಲಿ. ಪ್ರತಿಯೊಂದು ಕಲ್ಲೂ ಸಂದೇಶ ಸಾರುತ್ತದೆ. ಯಾವೊಂದು ವಿಶ್ವವಿದ್ಯಾಲಯ ನೀಡದ ವಿದ್ಯೆಯನ್ನು ನೀಡುತ್ತದೆ. ವಿನ್ಯಾಸ, ಕಲಾ ಕೌಶಲ್ಯ ಮತ್ತು  ಸಂಸ್ಕೃತಿಯ ಜೊತೆ ಮತ್ತಷ್ಟು ವಿಷಯಗಳು ಅಲ್ಲಿ ಅಡಕವಾಗಿದೆ. ಗ್ರೀಸ್‌ನ ಪಾರ್ತೆನಾನ್‌, ಈಜಿಪ್ಟ್ ನ ಪಿರಮಿಡ್‌ನಂತೆ ಭಾರತದ ಈ ಹೊಯ್ಸಳ ದೇವಾಲಯಗಳು ಉತ್ಕೃಷ್ಟವಾಗಿವೆ. ಬೇಲೂರನ್ನು ದಕ್ಷಿಣದ ಕಾಶಿ ಎಂದೂ ಹೇಳುತ್ತಾರೆ. ಹೊಯ್ಸಳ ರಾಜರು ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಅವರ ಆಳ್ವಿಕೆಯಲ್ಲಿ ಕ್ರಿ.ಪೂ. 1000 ದಿಂದ ಕ್ರಿ.ಶ.1345ರ ಅವಧಿಯಲ್ಲಿ 958 ಸ್ಥಳಗಳಲ್ಲಿ 1500 ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಇತಿಹಾಸ

ಈಗ ಬೇಲೂರು ಮತ್ತು ಹಳೇಬೀಡು ದಕ್ಷಿಣ ಭಾರತದ ಅಂದರೆ ಕರ್ನಾಟಕದ ಎರಡು ಪ್ರವಾಸಿ ತಾಣಗಳಾಗಿ ಉಳಿದಿದೆಯಷ್ಟೇ. ಆದರೆ 11 ರಿಂದ 14ನೇ ಶತಮಾನದಲ್ಲಿ ಚಾಲುಕ್ಯರ ನಂತರ ಆಳ್ವಿಕೆಗೆ ಬಂದ ಹೊಯ್ಸಳ ರಾಜರ ಅತ್ಯಂತ ವೈಭವದ ರಾಜಧಾನಿಗಳಾಗಿ ಮೆರೆದ ನಗರಗಳಿವು. ಹೊಯ್ಸಳ ರಾಜರು ಅತ್ಯಂತ ಸಮರ್ಥ, ಆಡಳಿತಗಾರರಾಗಿದ್ದು, ಮೂರೂವರೆ ಶತಮಾನ ತಮ್ಮ ಆಳ್ವಿಕೆಯನ್ನು ನಡೆಸಿದರು.

ಯಗಚಿ ನದಿಯ ತಟದಲ್ಲಿದ್ದ ಬೇಲೂರು ಮೊದಲಿಗೆ ಹೊಯ್ಸಳರ ರಾಜಧಾನಿಯಾಗಿತ್ತು. ನಂತರ ದ್ವಾರಸಮುದ್ರ ಅರ್ಥಾತ್ ಹಳೇಬೀಡನ್ನು ರಾಜಧಾನಿಯನ್ನಾಗಿ ಬದಲಾಯಿಸಲಾಯಿತು. ಆದರೆ ಮುಸ್ಲಿಂ ರಾಜರು 1311 ಮತ್ತು 1327ರಲ್ಲಿ ಎರಡು ಬಾರಿ ದಾಳಿ ಮಾಡಿದ್ದರಿಂದ ಮತ್ತೆ ಬೇಲೂರನ್ನು ರಾಜಧಾನಿಯನ್ನಾಗಿ ಮಾಡಲಾಯಿತು. ಬೇಲೂರಿನ ದೇವಾಲಯ ಬೇಲೂರಿನ ಚನ್ನಕೇಶವ ದೇವಾಲಯ ಆ ದೇವರ ಹೆಸರೇ ಹೇಳುವಂತೆ ಅತ್ಯಂತ ಸುಂದರವಾಗಿದೆ. ಚೋಳರ ಮೇಲೆ ತಲಕಾಡಿನಲ್ಲಿ ಪಡೆದ ವಿಜಯದ ಸಂಕೇತವಾಗಿ ಬೇಲೂರಿನ ದೇವಾಲಯದ ನಿರ್ಮಾಣ ಪ್ರಾರಂಭವಾಯಿತು. ಅದರ ನಿರ್ಮಾಣಕ್ಕೆ ಸುಮಾರು 103 ವರ್ಷಗಳೇ ಹಿಡಿದವು. ವಿಷ್ಣುರ್ಧನನ ಕಾಲದಲ್ಲಿ ಪ್ರಾರಂಭವಾಗಿದ್ದು ಅವನ ಮೊಮ್ಮಗ ವೀರಬಲ್ಲಾಳ-2 ಕಾಲದಲ್ಲಿ ಮುಗಿಸಲಾಯಿತು.

ದೇವಾಲಯದ ಪ್ರವೇಶ ದ್ವಾರದ ಮೇಲೆ ಕೆತ್ತಿರುವ ದ್ರಾವಿಡ ಶೈಲಿಯ ಗೋಪುರ 100 ಅಡಿ ಎತ್ತರವಿದ್ದು, ಸುಂದರ ಕೆತ್ತನೆಯನ್ನು ಮೂಡಿಸಲಾಗಿದೆ. ಪ್ರವೇಶದ್ವಾರದ ಮೇಲಿನ ಗೋಪುರ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಕೆತ್ತಲಾಗಿದೆ. ಪ್ರವೇಶ ದ್ವಾರದಿಂದ ಒಳ ಹೊಕ್ಕರೆ ಬಲಗಡೆಗೆ ಕಾಣುವುದು ಪುಷ್ಕರಣಿ, ಈಗಲೂ ನೀರಿನಿಂದ ತುಂಬಿದೆ.

ಮಧ್ಯಭಾಗದಲ್ಲಿ ಚನ್ನಕೇಶವನ ದೇವಾಲಯವಿದ್ದರೆ, ಬಲಗಡೆಗೆ ಪಕ್ಕದಲ್ಲಿ ಪುಟ್ಟ ಲಕ್ಷ್ಮಿ ಮತ್ತು ಕಪ್ಪೆ ಚೆನ್ನಿಗರಾಯನ ಗುಡಿಗಳಿವೆ. `ಹೋಯ್‌ ಸಳ' ಎಂದ ಗುರುವಿನ ಮಾತಿನಂತೆ ಸಳ ಮಹಾರಾಜ ಹುಲಿಯನ್ನು ಕೊಂದದ್ದರಿಂದ ಹೊಯ್ಸಳ ಎನ್ನುವ ಹೆಸರು ಬಂದಿತೆನ್ನುವ ಕಥೆ ಇದೆ. ದೇವಾಲಯದ ಮುಖ್ಯ ದ್ವಾರದಲ್ಲಿ ಹುಲಿಯ ಸಂಹಾರ ಮಾಡುವ ಒಂದೇ ರೀತಿಯ ಎರಡು ವಿಗ್ರಹಗಳು ದ್ವಾರದ ಅಕ್ಕಪಕ್ಕದಲ್ಲಿವೆ. ದೇವಾಲಯದ ಹೊರಗೆ ಅಸಂಖ್ಯಾತ ಶಿಲ್ಪಗಳನ್ನು ಕೆತ್ತಲಾಗಿದೆ. ಸಿಂಹ, ಆನೆ, ಕುದುರೆ, ಹಂಸ, ಪಕ್ಷಿ, ಪ್ರಾಣಿಗಳು ಮತ್ತು ರಾಮಾಯಣ, ಮಹಾಭಾರತ ಮತ್ತು ಪುರಾಣದ ಕಥೆಗಳನ್ನು ಶಿಲ್ಪಿ ಕಲ್ಲಿನಲ್ಲಿ ಹೊರತಂದಿದ್ದಾನೆ. ವಿಶ್ವ ಪರಂಪರೆಯ ತಾಣವೆನಿಸಿಕೊಂಡ ಬೇಲೂರಿನ ದೇವಾಲಯದ ಹೊರ ಗೋಡೆಗಳಲ್ಲಿ ಒಟ್ಟು 20,000 ವಿಗ್ರಹಗಳಿವೆ ಎಂದು ಅಂದಾಜು ಮಾಡಲಾಗಿದೆ. ಅಷ್ಟೊಂದು ವಿಗ್ರಹಗಳಿದ್ದರೂ ಪ್ರತಿಯೊಂದನ್ನೂ ಬಹಳ ಸಹನೆಯಿಂದ ಸಣ್ಣ ಸಣ್ಣ ವಿವರಗಳನ್ನು ಒಳಗೊಂಡಂತೆ ಕೆತ್ತಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ