ಸೆಲ್ಛಿ ತೋರ್ಪಡಿಕೆಗೂ ಸಹ : ಸೆಲ್ಛಿ ತೆಗೆಸಿಕೊಳ್ಳುವ ಹುಚ್ಚು ನಮ್ಮ ಪ್ರಧಾನಿಯಿಂದ ಹಿಡಿದು ಬರಾಕ್‌ ಒಬಾಮಾರವರೆಗೂ ಯಾರನ್ನೂ ಬಿಟ್ಟಿಲ್ಲ. ಅಮೆರಿಕಾದ ಟೀ ಪಾರ್ಟಿ ಆಂದೋಲನದ ಮುಖ್ಯಸ್ಥರಾದ ಜೆನಿಬೆಥ್‌ ಹಾಗೂ ಸಂಸದ ಸ್ಟೀವ್ ಕಿಂಗ್‌ರ ಪ್ರಕರಣ ಅಲ್ಲಿ ಸುಪ್ರೀಂ ಕೋರ್ಟ್‌ನ ಹಿಯರಿಂಗ್‌ಗೆ ಬಂದಿದೆ. ಅವರು ಹಿಯರಿಂಗ್‌ ಮುಗಿಸಿ ಬಂದಾಗ, ಹೊರಗೆ ಎಲ್ಲೆಡೆ ಸೆಲ್ಛಿ ವಾತಾವರಣವೇ ತುಂಬಿತ್ತು! ಸೆಲ್ಛಿ ಕ್ಲಿಕ್ಕಿಸಿ ಆ ಮೂಲಕ `ನೋಡಿ, ಕೋರ್ಟು ಕಛೇರಿಯ ಅಲೆದಾಟ ಎಷ್ಟು ಕಷ್ಟಕರ' ಎಂದು ಹೇಳುವಂತಿತ್ತು.

ಪೋಪ್ಗಿರಿಯ ಗುಟ್ಟು ರಟ್ಟು : ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಮುಖ್ಯಸ್ಥರಾದ ಪೋಪ್‌ಗೆ, ವ್ಯಾಟಿಕನ್‌ ಸಿಟಿಯಲ್ಲಿ ಭವ್ಯ ದರ್ಶನೀಯ ಮಹಲು ಇದೆ. ಆದರೆ ಈ ಮಹಲಿನ ಗೋಡೆಗಳಲ್ಲಿ ಸಾವಿರಾರು ರಹಸ್ಯಗಳು ಅಡಗಿವೆ. ಒಬ್ಬ ಮಹಿಳಾ ಪಿಆರ್‌ಓ ಬಹಳ ಧೈರ್ಯ ಒಗ್ಗೂಡಿಸಿಕೊಂಡು ಪೋಪ್‌ರ ಗುಟ್ಟು ರಟ್ಟು ಮಾಡುವ ಬಹಳಷ್ಟು ಡಾಕ್ಯುಮೆಂಟ್‌ಗಳನ್ನು ಪತ್ರಕರ್ತರಿಗೆ ನೀಡಿದರು. ಈಗ ಫ್ರಾಂಸಿಸ್ಕಾ ಸ್ಕ್ವೇರ್‌ನಲ್ಲಿ ಈ ರಹಸ್ಯ ಬಯಲು ಮಾಡುವ ಕೇಸ್‌ ನಡೆಯುತ್ತಿದೆ. ಹೆಣ್ಣಾಗಿದ್ದು ಗಂಡೆದೆಯ ಧೈರ್ಯ ತೋರಿದ ಈ ಹೆಣ್ಣಿಗೆ  ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಪ್ರಜೆಗಳೆಲ್ಲರ ಸಲಾಂ! ನಮ್ಮಲ್ಲಿ ಮೇಧಾ ಪಾಟೆಕರ್‌, ತೃಪ್ತಿ ದೇಸಾಯಿ, ಅರುಂಧತಿ ರಾಯ್‌ ಮಾಡಿದ್ದೂ ಇದನ್ನೇ!

ಮೇಡಂ ಮೈಮೇಲೇನಾದರೂ ಉಂಟೋ ಇಲ್ಲವೋ? : ಆಹಾ, ಈಕೆಯ ಮೈ ಮೇಲೆ ಹೆಸರಿಗಷ್ಟೇ ಪಾರದರ್ಶಕ ಉಡುಗೆ ಇದೆ, ಆದರೆ ಎಲ್ಲ ಖುಲ್ಲಂ ಖುಲ್ಲ. ಇಂಥ ಬ್ಯೂಟಿಫುಲ್ ಡ್ರೆಸ್‌ ದೊರೆತಾಗ ಪ್ರದರ್ಶನ ಮಾಡದೇ ಇರ್ತಾರಾ? ಬ್ಲೌಸ್‌ ರಹಿತ ಈ ಟಾಪ್‌ನ ಗ್ಲಾಮರ್‌ ನೋಡಿಯೇ ತಣಿಯಬೇಕು. ಈ ಮೇಡಂ ಬೇರಾರೂ ಅಲ್ಲ, ಹಾಲಿವುಡ್‌ನ ಜನಪ್ರಿಯ ನಟಿ ಕ್ಯಾಮಿಲಾ ಸೋಡಿ. ಈಕೆಯ ಬರಲಿರುವ ಚಿತ್ರ `ಕಂಪ್ಯಾಡ್ರಸ್‌.'

ಗೋ ಪ್ರೇಮಿಗಳ ಇನ್ನೊಂದು ಮುಖ : ಕುದುರೆ ಸತ್ತ ದುಃಖದಲ್ಲಿ ಶಾಂತಿ ಪೆರೇಡ್‌ ಸಂಭವವಿದೆ, ಅದೂ ನಮ್ಮ ದೇಶದಲ್ಲಿ! ಬಿಜೆಪಿಯ ಶಾಸಕ ಒಂದು ಕುದುರೆಯನ್ನು ಲಾಠಿಯಿಂದ ಸಾಯ ಹೊಡೆದಿದ್ದಾರೆ. ಅದರಿಂದ ಆ ಕುದುರೆಯ ಕಾಲು ಮುರಿದು, ಎಲ್ಲಾ ತರಹದ ಚಿಕಿತ್ಸೆಯ ನಂತರ ಉಳಿಯದೆ ಸತ್ತಿತು. ಪೊಲೀಸರ ಈ ಕುದುರೆ ಶಕ್ತಿಮಾನ್‌, ಪ್ರಾಣಿಗಳ ಕುರಿತು ಗೋ ಪ್ರೇಮಿಗಳು ಹೇಗೆ ವರ್ತಿಸುತ್ತಾರೆಂದು ತೋರಿಸಿದೆ. ಈ ಕುದುರೆ ಈಗ ಸ್ಮರಣಾರ್ಹವಾಗಿದೆ. ಈಗ ಇದರ ಪುತ್ಥಳಿಯನ್ನು ಉತ್ತರಾಖಂಡದ ನಗರ, ಹೋಬಳಿಗಳಲ್ಲೂ ಸ್ಥಾಪಿಸಿ, ಅದು ದಾನವಾಗಿ ಪಡೆಯುವಂಥ ಹಸುವಲ್ಲ, ಅದರ ದುರ್ದೆಶೆ ಸೋಡಿ ಎಂದು ಸಾರಲಾಗುವುದು.

ಅಮ್ಮನ ವಾತ್ಸಲ್ಯಕ್ಕೆ ಎಣೆಯುಂಟೇ? :  ಅಮ್ಮನೆಂದರೆ ಅಮ್ಮನೇ! ಆಕೆ ಅಪರಾಧಿಯ ತಾಯಿಯೇ ಇರಬಹುದು, ವಾತ್ಸಲ್ಯದಲ್ಲಿ ಲೋಪವಿಲ್ಲ. ಪಶ್ಚಿಮ ಏಷ್ಯಾದ ಇಸ್ರೇಲ್‌ನಲ್ಲಿ ಒಬ್ಬ ಸೈನಿಕ ನೆಲದ ಮೇಲೆ ಬಿದ್ದಿದ್ದ ಫಿಲಿಪೀನ್ಸ್ ನ ಭಯೋತ್ಪಾದಕನಿಗೆ ಗುಂಡಿಟ್ಟು ಕೊಂದುಬಿಟ್ಟ. ಇದು ಸೈನಿಕನ ಅಮಾನವೀಯ ಕೃತ್ಯ. ಅವನ ವಿರುದ್ಧ ಕೇಸ್‌ನಡೆಯುತ್ತಿದೆ. ಕೋರ್ಟಿಗೆ ಬಂದ ಅವನ ತಾಯಿ, ಮಗನನ್ನು ಕಂಡದ್ದೇ ತಬ್ಬಿಕೊಂಡು ಗೋಳಾಡಿದಳು. ತಾಯಿ ಪ್ರೀತಿ ಎಂದರೆ ಎಂಥ ಅಮೂಲ್ಯ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ