ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ ಜಿ. ರಾಜಲಕ್ಷ್ಮಿ ಶ್ರೀಧರ್‌ ಅವರದು ಸಂಗೀತ ಮನೆತನ. ಇವರ ತಂದೆ ದಿವಂಗತ ವಿದ್ವಾನ್‌ ಟಿ.ಆರ್‌. ಗೋಪಾಲನ್‌ ನಮ್ಮ ನಾಡಿನ ಶ್ರೇಷ್ಠ ಸಂಗೀತಾಗಾರರು. ಇವರು ಕೀರ್ತಿಶೇಷ ಮೈಸೂರು ಬಿ.ಕೆ. ಪದ್ಮನಾಭರಾಯರ ಪ್ರಮುಖ ಶಿಷ್ಯರು. ಅವರು ಮೈಸೂರು ವಾಸುದೇವಾಚಾರ್ಯರ ಶಿಷ್ಯರು. ಈ ಕಾರಣದಿಂದ ಜಿ. ರಾಜಲಕ್ಷ್ಮಿ ಶ್ರೀಧರ್‌ ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯರ ಸಂಗೀತ ಪರಂಪರೆಗೆ ಸೇರಿದ್ದಾರೆ. ಜಿ. ರಾಜಲಕ್ಷ್ಮಿಯವರಿಗೆ ಬಾಲ್ಯದಿಂದಲೇ ತಂದೆಯವರಿಂದ ಕ್ರಮಬದ್ಧ ಸಂಗೀತ ಪಾಠ ಆಗಿದೆ.

ಈಕೆ ಆಕಾಶವಾಣಿ ಹಾಗೂ ದೂರದರ್ಶನದ ಉನ್ನತ ದರ್ಜೆ ಕಲಾವಿದೆ. ಇವರ ಸಂಗೀತ ಕಾರ್ಯಕ್ರಮಗಳು ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಮೂಡಿ ಬರುತ್ತಿರುತ್ತವೆ. ತಮ್ಮ 8ನೇ ವಯಸ್ಸಿನಲ್ಲಿ ಬೆಂಗಳೂರಿನ ಬಳೇಪೇಟೆಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ  ಸಂಗೀತ ಕಚೇರಿ ನೀಡಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿನ ಹಲವಾರು ಪ್ರತಿಷ್ಠಿತ ಸಂಗೀತ ಸಭೆಗಳು, ಉತ್ಸವಗಳಲ್ಲಿ ಇವರು ಅಮೋಘವಾಗಿ ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು :

ಇವರು ಸಂಗೀತ ಸ್ನಾತಕೋತ್ತರ ಪದವಿಯ ವ್ಯಾಸಂಗದಲ್ಲಿದ್ದಾಗ, ಕೀರ್ತಿಶೇಷರಾದ ಆವನೂರು ಎಸ್‌. ರಾಮಕೃಷ್ಣ ಮತ್ತು ಬೆಂಗಳೂರು ಕೆ. ವೆಂಕಟರಾಮರಾಯರ ನಿರ್ದೇಶನದಲ್ಲಿ ವಿಶೇಷ ಪಲ್ಲವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದು, ಕಾರ್ಯಕ್ರಮಕ್ಕೆ ಸಂಗೀತ ದಿಗ್ಗಜರಾದ ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈಯವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು. ಅವರು ರಾಜಲಕ್ಷ್ಮಿಯವರ ಗಾಯನವನ್ನು ಮೆಚ್ಚಿ 101/ ರೂ.ಗಳನ್ನು ಆಶೀರ್ವಾದಪೂರ್ವಕವಾಗಿ ನೀಡಿರುವುದು ನಿಜಕ್ಕೂ ಪ್ರಶಂಸನೀಯ!

ಇವರು ರಾಗ, ತಾಳ, ಪಲ್ಲವಿ ಹಾಡುಗಾರಿಕೆಗೆ ಅತ್ಯಂತ ಹೆಸರುವಾಸಿ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಆಶ್ರಯದಲ್ಲಿ ಬೆಂಗಳೂರಿನ `ಯವನಿಕಾ'ದಲ್ಲಿ ನಡೆದ ವಿಶೇಷ ಪಲ್ಲವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯಂತ ಕ್ಲಿಷ್ಟವಾದ `ಅಧಾನ' ಪಲ್ಲವಿಯನ್ನು ಹಾಡಿ ಅನೇಕ ಘನ ವಿದ್ವಾಂಸರಿಂದ, ಸಭಿಕರಿಂದ ಶಹಭಾಸ್‌ಗಿರಿಯನ್ನು ಪಡೆದರು. ಸಂಗೀತಾಸಕ್ತರು ಒನ್ಸ್ ಮೋರ್‌ ಎಂದು ಕೂಗಿ ಮತ್ತೊಮ್ಮೆ ಇವರಿಂದ ಪಲ್ಲವಿ ಹಾಡಿಸಿದರು.

ಈ ಕಾರ್ಯಕ್ರಮಕ್ಕೆ ಅಧಾನ ಪಲ್ಲವಿ ಹಾಡುವುದರಲ್ಲಿ ಅತ್ಯಂತ ಖ್ಯಾತನಾಮರಾಗಿದ್ದ ಪಲ್ಲವಿ ಚಂದ್ರಪ್ಪನವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದು ವಿಶೇಷವೆನ್ನಬಹುದು.

ನಮ್ಮ ನಾಡಿನ ಪ್ರಖ್ಯಾತ ವೀಣಾ ವಿದ್ವಾಂಸರಾಗಿದ್ದ ಕೀರ್ತಿಶೇಷರಾದ ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್‌ ಮತ್ತು ವಯೋಲಿನ್ ವಿದ್ಯಾಂಸರಾಗಿದ್ದ ಆವನೂರು ಎಸ್‌. ರಾಮಕೃಷ್ಣರ ಸಂಗೀತ ನಿರ್ದೇಶನ ಹಾಗೂ ಕಲಾ ವಿಮರ್ಶಕರಾಗಿದ್ದ ಕೀರ್ತಿಶೇಷ ಬಿ.ವಿ.ಕೆ. ಶಾಸ್ತ್ರೀಯವರ ವ್ಯಾಖ್ಯಾನದಲ್ಲಿ ಚೆನ್ನೈನ ಮ್ಯೂಸಿಕಲ್ ಅಕಾಡೆಮಿಯಲ್ಲಿ ಡಿ.ವಿ.ಜಿ.ಯವರ ಸುಪ್ರಸಿದ್ಧ ಅಂತಃಪುರ ಗೀತೆಗಳನ್ನು ಹಾಡಲು ವಿದ್ಯಾರ್ಥಿಗಳನ್ನು ಆಡಿಷನ್‌ ಮಾಡಿ ಆರಿಸಲಾಯಿತು. ಅದರಲ್ಲಿ ಜಿ. ರಾಜಲಕ್ಷ್ಮಿ ಶ್ರೀಧರ್‌ ಕೂಡ ಒಬ್ಬರು. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಂಗೀತ ದಿಗ್ಗಜರಾದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್‌, ಎಂ.ಡಿ. ರಾಮನಾಥನ್‌, ಡಿ.ಕೆ. ಜಯರಾಮನ್‌ ಮುಂತಾದವರೆಲ್ಲರೂ ಆಗಮಿಸಿದ್ದು, ಎಲ್ಲರೂ ಈ ಕಾರ್ಯಕ್ರಮವನ್ನು ಮೆಚ್ಚಿದ್ದರು. ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಇವರಿಗೆ ಮೆರಿಟ್‌ ಸ್ಕಾಲರ್‌ಶಿಪ್‌ ಲಭಿಸಿದ್ದು, ಅಂದಿನ ಮಂತ್ರಿಗಳಾಗಿದ್ದ ಸ್ಪೀಕರ್‌ ನಾಗರತ್ನಮ್ಮನವರು ಇದನ್ನು ಪೊಡ ಮಾಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ