ರಾಜ್ಯದ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಫೇಸ್​ ರೆಕಗ್ನಿಶನ್​ ಅಟೆಂಡೆನ್ಸ್​ (ಮುಖಚರ್ಯೆ ಹಾಜರಾತಿ) ಜೂನ್​ ಅಂತ್ಯದೊಳಗೆ ಕಡ್ಡಾಯವಾಗಲಿದೆ.

ಪ್ರಾರಂಭದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯಿಸಲಿದ್ದು, ಬಳಿಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಈ ನಿಯಮವನ್ನು ಕಡ್ಡಾಯಗೊಳಿಸಲಾಗುತ್ತದೆ.

ಕಳೆದ ವರ್ಷ ರಾಜ್ಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಥಮ ಹಾಗೂ ದ್ವಿತೀಯ ಪಿಯುನಲ್ಲಿ 2.77 ಲಕ್ಷ ವಿದ್ಯಾಥಿಗಳು ಶಿಕ್ಷಣ ಪಡೆಯುತ್ತಿದ್ದರು. ಈ ಬಾರಿ ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಮೊದಲಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಫೇಸ್​ ರೆಕಗ್ನಿಶನ್​ ಹಾಜರಾತಿ ಮಾಡಲು ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಲಾಗಿದೆ.

ಸರಕಾರಿ ಪಿಯು ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ನಂತರ, ಅನುದಾನಿತ ಪಿಯು ಕಾಲೇಜುಗಳಲ್ಲಿ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಯೋಜನೆ ರೂಪಿಸಿದೆ.

ಪಿಯು ಶಿಕ್ಷಣ ಇಲಾಖೆ ಈಗಾಗಲೇ ಪ್ರತಿ ಕಾಲೇಜಿನಿಂದ ಇಬ್ಬರು ಉಪನ್ಯಾಸಕರನ್ನು ಗುರುತಿಸಿ ಮಾಸ್ಟರ್​ ಟ್ರೈನರ್ಸ್​ ಆಗಿ ತರಬೇತಿ ನೀಡಿದ್ದು, ಇವರು ಕಾಲೇಜಿನ ಇತರೆ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಉಪನ್ಯಾಸರು ವಿಶೇಷ Appನಲ್ಲಿ ವಿದ್ಯಾಥಿಗಳ ಮುಖವನ್ನು ಒಮ್ಮೆ ನೋಂದಣಿ ಮಾಡಿಕೊಳ್ಳುತ್ತಾರೆ. ತರಗತಿ ಆರಂಭದಲ್ಲಿ ಎಲ್ಲ ವಿದ್ಯಾರ್ಥಿಗಳು ಒಟ್ಟು ಇರುವಂತೆ ಫೋಟೋ ತೆಗೆದರೆ ಸಾಕು, ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ತಂತ್ರಜ್ಞಾನವು ವಿದ್ಯಾರ್ಥಿಗಳ ಮುಖವನ್ನು ಗುರುತಿಸಿ ಹಾಜರಾತಿ ಪಟ್ಟಿಯನ್ನು ನೇರವಾಗಿ ಇಲಾಖೆಯ ಸರ್ವರ್​ಗೆ ರವಾನಿಸುತ್ತದೆ.

ತರಗತಿಯಲ್ಲಿ ಉಪನ್ಯಾಸಕರು ಪ್ರತಿಯೊಬ್ಬ ವಿದ್ಯಾರ್ಥಿಯ ರೋಲ್​ ನಂಬರ್​ ಕರೆದು ಹಾಜರಾತಿ ತೆಗೆದುಕೊಳ್ಳಲು ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಈ ಹೊಸ ವಿಧಾನದಲ್ಲಿ ಕೇವಲ ಎರಡು ಫೋಟೋ ಕ್ಲಿಕ್​ ಮಾಡುವ ಮೂಲಕ ಕೆಲವೇ ನಿಮಿಷಗಳಲ್ಲಿ ಇಡೀ ಕ್ಲಾಸ್​ನ ಹಾಜರಾತಿ ಮುಗಿದುಹೋಗುತ್ತದೆ.

ಕಳೆದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿದಿತ್ತು. ಪರೀಕ್ಷೆಗೆ ಕೂರಲು ಶೇ.75ರಷ್ಟು ಹಾಜರಾತಿ ಕಡ್ಡಾಯವಿದ್ದರೂ, ಕೆಲವು ಉಪನ್ಯಾಸಕರು ನಿಯಮ ಸಡಿಲಿಸಿ ಹಾಜರಾತಿ ನೀಡಿದ್ದರು. ಇದು ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ಇದೀಗ ಈ ಹೊಸ ವ್ಯವಸ್ಥೆಯಿಂದ ಇದಕ್ಕೆ ಬ್ರೇಕ್​ ಬೀಳಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ