ಕೈ ತುತ್ತು ಎನ್ನುವ ಪದ ಕೇಳಿದ ತಕ್ಷಣ ಥಟ್ ಅಂತಾ ನಮಗೇ ಗೊತ್ತಿಲ್ಲದ ಹಾಗೆ ಹಂಸಲೇಖ ಮತ್ತು ಪ್ರಭಾಕರ್ ಅವರ ಜೋಡಿ ನೀಡಿದ ಅತ್ಯುತ್ತಮ ಹಾಡುಗಳಲ್ಲಿ ಒಂದಾದ ಕೈ ತುತ್ತು ಕೊಟ್ಟೋಳು ಐ ಲವ್ ಯೂ ಎಂದಳೋ ಮೈ ಮದರ್ ಇಂಡಿಯಾ ಎನ್ನುವ ಹಾಡನ್ನು ನಮ್ಮ ಮನಸ್ಸಿನ ಮುಂದೆ ಬಂದು ಆ ಹಾಡನು ಗುನುಗಲು ಆರಂಭಿಸುತ್ತೇವೆ. ಆದರೆ ನಿಜವಾಗಿಯೂ ಅಮ್ಮನ ಇಲ್ಲವೇ ಅಜ್ಜಿಯ ಕೈ ತುತ್ತಿನ ರುಚಿಯನ್ನು ಬಲ್ಲವರೇ ಬಲ್ಲ ಅದರ ಸವಿಯನ್ನು. ಹಾಗಾಗಿ ಅಂತಹ ಅಪರೂಪದ ಮತ್ತು ಅಪ್ಯಾಯಮಾನದ ಕೈ ತುತ್ತಿನ ರಸಗವಳವನ್ನು ಸವಿಯೋಣ ಬನ್ನಿ.

ಕೈ ತುತ್ತು ಎಂದಾಕ್ಷಣವೇ ನಮೆಗೆಲ್ಲಾ ನೆನಪಾಗೋದೇ ಸಣ್ಣ ವಯಸ್ಸಿನ ಮಕ್ಕಳಿಗೆ ಅಮ್ಮಾ ಬಟ್ಟಲಲ್ಲಿ ಸ್ವಲ್ಪ ಅನ್ನಾ ಅದಕ್ಕೆ ಸ್ವಲ್ಪ ಸಾರು ಇಲ್ಲವೇ ಹುಳಿಯನ್ನು ಹಾಕಿಕೊಂಡು ಅದಕ್ಕೆ ತುಸು ಜಾಸ್ತಿಯೇ ತುಪ್ಪವನ್ನು ಹಾಕಿ ಮಕ್ಕಳು ಬೇಡ ಬೇಡಾ ಅಂದರೂ ಬಲವಂತ ಮಾಡಿ ತಿನ್ನಿಸುವುದು. ಮಕ್ಕಳು ತಿನ್ನಲು ಹಟ ಮಾಡುತ್ತಿದ್ದರೆ, ಆವರಿಗೆ ಯಾವುದೋ ಕಥೆಯನ್ನು ಹೇಳುತ್ತಲೋ ಇಲ್ಲವೇ ಹೊರಗೆ ಬಂದು ಆಗಸದಲ್ಲಿ ಚಂದಮಾಮನನ್ನು ತೋರಿಸುತ್ತಲೋ ಕಡೆಗೆ ಅದಕ್ಕೂ ಬಗ್ಗದಿದ್ದಲ್ಲಿ ಗುಮ್ಮನಿಗೆ ಹಿಡಿದುಕೊಡುತ್ತೇನೆಂದೋ ಇಲ್ಲವೇ ಪೋಲಿಸರನ್ನು ಕರೆಯುತ್ತೇನೆಂದು ಗದರಿಸಿ ತಿನ್ನಿಸುವುದು. ಈ ರೀತಿಯ ಪ್ರಕ್ರಿಯೆ ಮಗು ತಂತಾನೇ ಕೈಯಿಂದ ಆಹಾರವನ್ನು ತಿನ್ನುವವರೆಗೂ ಮುಂದುವರೆಯುತ್ತದೆ. ಇದಾದ ಮೇಲೇ ಮಕ್ಕಳು ಶಾಲೆಗೆ ಹೊರಡುವಾಗ ಅಯ್ಯೋ ತಡವಾಗೋಯ್ತು ತಿಂಡಿ ಬೇಡ, ಊಟ ಬೇಡ ಎಂದಾಗ ಹೆತ್ತಕರುಳು ಚುರುಕ್ ಎಂದು ಮತ್ತೇ ಅದೇ ಕಕ್ಕುಲತೆಯಿಂದ ತಾಯಿ ತನ್ನ ಮಕ್ಕಳಿಗೆ ತಿನ್ನಿಸುತ್ತಾಳೆಈ ರೀತಿ ತಾಯಿಯ ಕೈಯಿಂದ ತಿನ್ನಿಸಿಕೊಳ್ಳುವ ಆನಂದ ಮುಂದೆ ಬೇರಾವ ಭಕ್ಷ ಭೋಜನಗಳಿಗೂ ಇರುವುದಿಲ್ಲ ಮತ್ತು ತಾಯಿಯ ಕೈಯಿಂದ ತಿನ್ನಿಸಿಕೊಳ್ಳುವಾಗಿನ ಸಂತೋಷ ಬೇರೆ ಯಾರಿಂದಲೂ ಪಡೆಯಲು ಸಾಧ್ಯವೇ ಇಲ್ಲ.

ಇದು ತಾಯಿ ಮತ್ತು ಮಗುವಿನ ನಡುವಿನ ಅವಿನಾಭಾವ ಸಂಬಂಧವಾದರೇಿ, ಇನ್ನು ಎರಡು ಮೂರು ಮಕ್ಕಳಿದ್ದರೆ ಇದರ ಮುಂದುವರೆದ ಭಾಗವೇ ಕೈತುತ್ತು ಎಂದರೂ ತಪ್ಪಾಗಲಾರದು. ಮಕ್ಕಳು ದೊಡ್ಡವರಾದ ಮೇಲೆ ಅಮ್ಮಾ ಎಲ್ಲಾ ಮಕ್ಕಳಿಗೂ ಈ ರೀತಿಯಾಗಿ ತಿನ್ನಿಸಲು ಸಾಧ್ಯವಾಗದ ಕಾರಣ ಎಲ್ಲಾ ಮಕ್ಕಳಿಗೂ ಸಮಪ್ರಮಾಣದಲ್ಲಿ ತಟ್ಟೆಯಲ್ಲಿ ಊಟ ಅಥವಾ ತಿಂಡಿಯನ್ನು ಹಾಕಿಕೊಡುತ್ತಾಳಾದರೂ, ಮಕ್ಕಳು ಸರಿಯಾಗಿ ತಿನ್ನುವುದಿಲ್ಲ. ಆಗ ಏಕಕಾಲದಲ್ಲಿ ಎಲ್ಲಾ ಮಕ್ಕಳಿಗೂ ಸಮ ಪ್ರಮಾಣದಲ್ಲಿ ತಿನ್ನಿಸಲು ಅಮ್ಮಾ ಬಳಸುವ ತಂತ್ರವೇ ಕೈ ತುತ್ತು. ಒಂದು ಪಾತ್ರೆಯಲ್ಲಿ ಅನ್ನಾಸಾರು, ಇಲ್ಲವೇ ಹುಳಿಯನ್ನ ಅವನ್ನು ಕಲೆಸಿ, ಎಲ್ಲಾ ಮಕ್ಕಳನ್ನೂ ಅಮ್ಮನ ಸುತ್ತಾ ಕುಳ್ಳರಿಸಿಕೊಂಡು ಒಬ್ಬೊಬ್ಬರಿಗೆ ಒಂದೊಂದು ತುತ್ತನ್ನು ಕೊಟ್ಟು ಅಕ್ಕರೆಯಿಂದ ತಿನ್ನಿಸುವುದಲ್ಲದೇ, ತಮ್ಮ ಮಕ್ಕಳಿಗೆ ಅರಿವಿಲ್ಲದಂತೆಯೇ ಅವರ ನಡುವೆಯೇ ಒಂದು ಆರೋಗ್ಯಕರವಾದ ಪೈಪೋಟಿಯನ್ನು ಏರ್ಪಡಿಸುತ್ತಾಳೆ. ತಟ್ಟೆಯಲ್ಲಿ ಹಾಕಿಕೊಟ್ಟಾಗ ಸರಿಯಾಗಿ ತಿನ್ನದ ಮಕ್ಕಳೂ ಅಕ್ಕ, ತಮ್ಮ, ಆಣ್ಣಾ ತಂಗಿ ಕೈ ತುತ್ತು ತಿನ್ನುವುದನ್ನು ನೋಡಿ ತಾನೂ ಕೂಡಾ ಅವರೊಂದಿಗೆ ಜಿದ್ದಾಜಿದ್ದಿಗೆ ಇಳಿದು ಸಾಧಾರಣವಾಗಿ ತಿನ್ನುವುದಕ್ಕಿಂತಲೂ ಎರಡು ತುತ್ತು ಹೆಚ್ಚಾಗಿ ತಿಂದದ್ದು ಗೊತ್ತೇ ಆಗಿರುವುದಿಲ್ಲ. ಹಾಗೆ ಗಬ ಗಬ ಎಂದು ತಿನ್ನುವ ಭರದಲ್ಲಿ ನೆತ್ತಿ ಹತ್ತಿದಾಗ, ಮಗೂ ನಿಧಾನವಾಗಿ ಅಗಿದು ಅಗಿದು ಸವಿದು ತಿನ್ನು ಎಂದು ಬೆನ್ನು ಮತ್ತು ತಲೇ ನೇವರಿಸಿ ಕುಡಿಯಲು ಸ್ವಲ್ಪ ನೀರು ಕೊಟ್ಟು ಮತ್ತು ಕೈ ತುತ್ತು ನೀಡಿ ಮಕ್ಕಳು ತಿನ್ನುವುದನ್ನೇ ಕಣ್ತುಂಬ ನೋಡಿ ಸಂತೋಷ ಪಡುವ ತಾಯಂದಿರಿಗೆ ನಿಜಕ್ಕೂ ಸಾಟಿಯೇ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ