ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಷ್ಟೇ ಅಲ್ಲ, ಇನ್ನೂ ಬಹಳಷ್ಟು ಕ್ಷೇತ್ರಗಳಲ್ಲಿ ಹುಡುಗಿಯರು ತಮ್ಮ ಬಾಡಿಯ ಮುಖಾಂತರ ಗಳಿಕೆ ಮಾಡುತ್ತಿದ್ದಾರೆ. ಸೇಲ್ಸ್ ಗರ್ಲ್ಸ್, ಆರ್ಕೆಸ್ಟ್ರಾ, ವೇಟರ್, ಲೇಡಿಸ್ ಬೌನ್ಸರ್, ರಿಸೆಪ್ಶನಿಸ್ಟ್, ಮಸಾಜ್ ಗರ್ಲ್ಸ್, ಟೆಲಿಕಾಲಿಂಗ್, ಡ್ಯಾನ್ಸ್, ಆರ್ಟಿಸ್ಟ್, ಲೇಡಿ ಬಾಡಿ ಬಿಲ್ಡರ್ ಹೀಗೆ ಹತ್ತು ಹಲವು ಕ್ಷೇತ್ರಗಳು ಪರಿಪೂರ್ಣ ಉದ್ಯೋಗ ದೊರಕಿಸಿಕೊಡುತ್ತಿವೆ. ಇನ್ನು ಕೆಲವು ಹವ್ಯಾಸ ಕ್ಷೇತ್ರಗಳಾಗಿವೆ. ಹವ್ಯಾಸಿ ಉದ್ಯೋಗಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅವನ್ನು ಕೆಲವರು ಟೀಕೆ ಕೂಡ ಮಾಡುತ್ತಾರೆ. ಯಾವ ಕೆಲಸ ಕಾನೂನು ಬಾಹಿರ ಅಲ್ಲವೋ, ಅದನ್ನು ಕಾನೂನು ಕೂಡ ತಪ್ಪು ಎಂದು ಹೇಳುವುದಿಲ್ಲ. ಈ ಕೆರಿಯರ್‌ಗಳಲ್ಲಿ ಹುಡುಗಿಯರು ತಮ್ಮ ದೇಹವನ್ನು ಗಳಿಕೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಹುಡುಗಿ ತನ್ನ ಕ್ಷೇತ್ರದಲ್ಲಿ ನಿಪುಣಳಾಗಿರುತ್ತಾಳೆ. ಅದಕ್ಕಾಗಿ ಅವಳ ದೇಹವೇ ಅವಳ ಟ್ಯಾಲೆಂಟ್ ಆಗಿರುತ್ತದೆ.
ಕೆರಿಯರ್ ರೂಪಿಸುತ್ತಿರುವ ದೇಹ
ಹುಡುಗಿಯರ ಕೆರಿಯರ್‌ಗೆ ಅವರ ದೇಹವೇ ದಾರಿ ಮಾಡಿಕೊಡುತ್ತಿದೆ. ಇಂದಿನ ನಗರಗಳಲ್ಲಿ ಪ್ರಚಾರಕ್ಕೆ ಹುಡುಗಿಯರನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಹುಡುಗಿಯರಿಗೆ ಹಾಗೂ ಮಹಿಳೆಯರಿಗೆ ಕೆರಿಯರ್‌ನ ಅವಕಾಶಗಳು ತೆರೆದುಕೊಳ್ಳುತ್ತಿವೆ. ಸ್ಟೇಜ್ ಶೋನಲ್ಲಿ ಮಹಿಳೆಯೊಬ್ಬಳಿಗೆ ಹಾಡು ಬರದೇ ಇರಬಹುದು. ಆದರೆ ಆಕೆ ಕೇವಲ ಡ್ಯಾನ್ಸ್ ಮೂಲಕ ಗಳಿಕೆ ಮಾಡುತ್ತಿದ್ದಾಳೆ.
ಮದುವೆಯ ಆರ್ಕೆಸ್ಟ್ರಾಗಳಿಂದ ಹಿಡಿದು ಆಹಾರ ಬಡಿಸುವ ವೇಟರ್‌ತನಕ ಎಲ್ಲ ಕೆಲಸಗಳಲ್ಲೂ ಹುಡುಗಿಯರಿಗೆ ಆದ್ಯತೆ ನೀಡಲಾಗುತ್ತಿದೆ. ಮದುವೆಯಲ್ಲಿ ವಧುವಿನ ಗೆಳತಿಯರು ಕೂಡ ಅತ್ಯವಶ್ಯ. ಗೆಳತಿಯ ಗೆಟಪ್‌ನಲ್ಲಿ ಹುಡುಗಿಯರು ವೆಡ್ಡಿಂಗ್ ಇವೆಂಟ್ಸ್ ನಲ್ಲಿ ಮಿಂಚುತ್ತಿದ್ದಾರೆ.
ಇವೆಂಟ್ ಮ್ಯಾನೇಜರ್ ಶಿಲ್ಪಾ ಹೇಳುತ್ತಾರೆ, ``ಈಗ ಪ್ರತಿ ಇವೆಂಟ್‌ನಲ್ಲಿ ಎಂಟ್ರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ವಿಶೇಷ ವ್ಯಕ್ತಿ ಪ್ರಥಮ ಬಾರಿಗೆ ಅಲ್ಲಿಗೆ ಆಗಮಿಸುತ್ತಿರುತ್ತಾರೆ. ಆ ಒಂದು ಕ್ಷಣವನ್ನು ವಿಶೇಷವಾಗಿಸುವ ಅಭಿಲಾಷೆ ಎಲ್ಲರಿಗೂ ಇರುತ್ತದೆ. ಒಂದು ಮಗುವಿನ ಮೊದಲ ಹುಟ್ಟುಹಬ್ಬದ ಸಮಾರಂಭ. ಮಗು ಹಾಗೂ ತಾಯಿ ಏಕಕಾಲಕ್ಕೆ ಅಲ್ಲಿಗೆ ಆಗಮಿಸಬೇಕಿತ್ತು. ಅಮ್ಮ ಗೌನ್ ಧರಿಸಿದ್ದರು. ಅವರಿಗೆ ಮಗುವನ್ನು ತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ. ಮಗುವನ್ನು ಬೇಬಿ ವಾಕರ್‌ನಲ್ಲಿ ತೆಗೆದುಕೊಂಡು ಬಂದರೆ ಅಂತಹ ವಿಶೇಷ ಫೀಲ್ ಬರುತ್ತಿರಲಿಲ್ಲ. ಹೀಗಾಗಿ ಸುಂದರ ಹುಡುಗಿಯೊಬ್ಬಳು ಮಗುವನ್ನು ಎತ್ತಿಕೊಂಡು ತಾಯಿಯ ಜೊತೆ ಹೆಜ್ಜೆ ಹಾಕಿದಳು. ಈ ರೀತಿಯ ಹಲವು ಆಫರ್‌ಗಳು ಹುಡುಗಿಯರಿಗೆ ವಿಶೇಷ ಆಫರ್‌ಗಳಾಗುತ್ತಿವೆ.''
ಸಂಗೀತ ಮತ್ತು ನೃತ್ಯ
ಮ್ಯೂಸಿಕ್ ಮತ್ತು ಡ್ಯಾನ್ಸ್ ಹುಡುಗಿಯರಿಗೆ ಕೆರಿಯರ್‌ನ ಬಹುದೊಡ್ಡ ರಹದಾರಿಗಳಾಗಿವೆ. ಇವುಗಳಲ್ಲಿ ಹುಡುಗಿಯರು ತಮ್ಮ ದೇಹವನ್ನು ಯಥೇಚ್ಛವಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಗಾಯಕ ಎಷ್ಟೇ ಮಧುರವಾಗಿ ಹಾಡಿರಲಿ ಸ್ಟೇಜ್‌ನಲ್ಲಿ ಅಥವಾ ವಿಡಿಯೋದಲ್ಲಿ ಆತನೊಂದಿಗೆ ಕುಣಿಯಲು ಹುಡುಗಿಯರು ಬೇಕೇ ಬೇಕು. ಇತ್ತೀಚೆಗೆ ಪಂಜಾಬಿ, ಹರಿಯಾಣ, ರಾಜಸ್ಥಾನಿ, ಭೋಜಪುರಿ ಹಾಡುಗಳಲ್ಲಿ ಹಾಡುಗಾರರಿಗಿಂತ ಹೆಚ್ಚಾಗಿ ಗಿರಗಿರ ಎಂದು ವೇಗವಾಗಿ ಡ್ಯಾನ್ಸ್ ಮಾಡುವ ಹುಡುಗಿಯರಿಗೆ ಹೆಚ್ಚು ಬೇಡಿಕೆ. ಹರಿಯಾಣಾದ ಸಪ್ನಾ ಚೌಧರಿ ತಮ್ಮ ಒಂದು ಡ್ಯಾನ್ಸ್ ಶೋಗೆ 8 ಲಕ್ಷ ರೂ. ಪಡೆಯುತ್ತಿದ್ದಾರೆ. ಅದೇ ರೀತಿ ಭೋಜಪುರಿ ಗಾಯಕಿ ಹಾಗೂ ವೇದಿಕೆಯಲ್ಲಿ ಡ್ಯಾನ್ಸ್ ಮಾಡುವ ನಿಶಾ ಹೆಚ್ಚು ಬೇಡಿಕೆಯಲ್ಲಿದ್ದಾರೆ.