ಅರ್ಜೆಂಟೀನಾದ `ಚೈಲ್ಡ್ ಲೇಬರ್‌ ಕಾನ್‌ಫರೆನ್ಸ್'ನಲ್ಲಿ ಪಾಲ್ಗೊಳ್ಳಲು ಬ್ಯೂನಸ್‌ ಐರಸ್‌ಗೆ ಹೋದಾಗ ಅಲ್ಲೊಂದು ಹೊಸ ದೃಶ್ಯ ಕಂಡುಬಂತು. ಅಲ್ಲಿನ ಕೆಲವು ಯುವಕರು 10-15 ನಾಯಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಆ ನಾಯಿಗಳು ಕೂಡ ಪರಸ್ಪರ ಹೊಂದಿಕೊಂಡು ಸಾಲಾಗಿ ಹೊರಟಿದ್ದವು. ಯುವಕರ ಆದೇಶವನ್ನು ಅವು ಚಾಚೂ ತಪ್ಪದೇ ಪಾಲಿಸುತ್ತಿದ್ದವು. ನನಗೆ ದಾರಿಯುದ್ದಕ್ಕೂ ಸುಮಾರು 14 ಜನ ಯುವಕರು ಈ ರೀತಿಯಲ್ಲಿ ಸಾಮೂಹಿಕವಾಗಿ ನಾಯಿಗಳನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬಂತು.

ನನ್ನ ಕಾರಿನ ಚಾಲಕ ಇದು ಇಲ್ಲಿನ ಸಾಮಾನ್ಯ ವಿಷಯ ಎಂದು ಹೇಳಿದ. ಆ ಯುವಕರು ಡಾಗ್‌ ವಾಕಿಂಗ್‌ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ನಾಯಿಗಳನ್ನು ಹೇಗೆ ಮ್ಯಾನೇಜ್‌ ಮಾಡಬೇಕೆಂದು ಕಲಿಸಲಾಗುತ್ತದೆ. ಅವುಗಳಿಗೆ ಸಕಾಲಕ್ಕೆ ತಿಂಡಿ ತಿನ್ನಿಸುವುದು, ಅವುಗಳೊಂದಿಗೆ ಸಂಭಾಷಣೆ ನಡೆಸುವುದು ಎಲ್ಲಿಯಾದರೂ ಗಾಯವಾದಾಗ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆಯೂ ಕಲಿಸಿಕೊಡಲಾಗುತ್ತದೆ.

ಕಂಪನಿಗಳು ಅದಕ್ಕಾಗಿಯೇ ಒಂದು ಆ್ಯಪ್‌ ಸೃಷ್ಟಿಸಿರುತ್ತವೆ. ಆ ಆ್ಯಪ್‌ ಮುಖಾಂತರ ನಾಯಿಯ ಮಾಲೀಕರು ತಮ್ಮ ನಾಯಿಗಳನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಗುತ್ತದೆ, ನೀರು ಕುಡಿಸುವ, ಆಹಾರದ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಆ ಯುವಕರು ನಾಯಿಗಳ ಮಾಲೀಕರಿಗೆ ಆ್ಯಪ್‌ ಮುಖಾಂತರ ನಾಯಿಗಳ ಚಿಕ್ಕಪುಟ್ಟ ಅವಶ್ಯಕತೆಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ಪ್ರತಿ ಸೇವೆಗೂ ಪ್ರತ್ಯೇಕ ದರಪಟ್ಟಿ

ಡಾಗ್‌ ವಾಕ್‌ ಕಂಪನಿಗಳ ಹಾಗೆ ಅಲ್ಲಿ ಪೆಟ್‌ ಟ್ಯಾಕ್ಸಿಗಳು ಕೂಡಾ ಇವೆ. ಅವು ನಿಗದಿತ ದಿನದಂದು ಸಾಕು ಪ್ರಾಣಿಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುತ್ತವೆ. ಕೆಲವೊಮ್ಮೆ ತುರ್ತು ಸೇವೆ ಕೂಡ ದೊರಕಿಸಿಕೊಡುತ್ತವೆ. ಅನಾರೋಗ್ಯಕ್ಕೆ ತುತ್ತಾದ ನಾಯಿಗಳ ಸೇವೆಯನ್ನು ಕಂಪನಿಯ ಕ್ಲಿನಿಕ್‌ನಲ್ಲಿ ಇಲ್ಲವೇ ಮಾಲೀಕನ ಮನೆಯಲ್ಲಿಯೇ ಮಾಡಲಾಗುತ್ತದೆ. ಹೀಗಾಗಿ ನಾಯಿಯ ಮಾಲೀಕ ನಿಶ್ಚಿಂತನಾಗಿ ತನ್ನ ಕೆಲಸ ಕಾರ್ಯಗಳಲ್ಲಿ ಇಲ್ಲವೇ ಟೂರ್‌ನಲ್ಲಿ ಮಗ್ನನಾಗಿರಬಹುದು.

ನಾಯಿಗಳನ್ನು ಬಹಿರ್ದೆಸೆಗಷ್ಟೇ ಕರೆದುಕೊಂಡು ಹೋಗುವ ಸೇವೆಯನ್ನು ಕೆಲವು ಕಂಪನಿಗಳು ನೀಡುತ್ತವೆ. ಪ್ರತಿಯೊಂದು ಸೇವೆಗೂ ದರ ಪ್ರತ್ಯೇಕ, ಆದರೆ ಸೇವೆ ಲಭಿಸುತ್ತದೆ.

ನಿಮ್ಮ ನಾಯಿಯನ್ನು ಸುತ್ತಾಡಿಸಿಕೊಂಡು ಬರಲು ವಿಳಂಬವಾದಲ್ಲಿ ನೀವು ನಿಶ್ಚಿಂತರಾಗಿ ಮನೆಗೆ ಬೀಗ ಹಾಕಿಕೊಂಡು ಕೂಡ ಹೋಗಬಹುದು. ನಾಯಿಯ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿ ಡೂಪ್ಲಿಕೇಟ್‌ ಬೀಗದ ಕೈನಿಂದ ಬೀಗ ತೆರೆದು ನಾಯಿಯನ್ನು ಒಳಗೆ ಬಿಟ್ಟು ಬೀಗ ಹಾಕಿ ಹೋಗುತ್ತಾನೆ. ಅಲ್ಲಿ ಪುಟ್ಟ ನಾಯಿಗಳು, ದೊಡ್ಡ ನಾಯಿಗಳು ಹಾಗೂ ವೃದ್ಧ ನಾಯಿಗಳು ಹೀಗೆ ಎಲ್ಲದಕ್ಕೂ ಸೇವೆಯನ್ನು ನಿಗದಿಪಡಿಸಲಾಗಿದೆ.

ಒಂದಿಷ್ಟು ಕಷ್ಟ ಇದೆ

ಇಲ್ಲಿ ಎಲ್ಲ ಸುಸೂತ್ರವಲ್ಲ, ಕೆಲವು ತೊಂದರೆಗಳೂ ಇವೆ. ನಾಯಿ ಕಳ್ಳರು ಸದಾ ಸಕ್ರಿಯರಾಗಿರುತ್ತಾರೆ. ಗುಂಪಿನಲ್ಲಿ ನಾಯಿಗಳನ್ನು ವಾಕಿಂಗ್‌ಗೆಂದು ಕರೆದುಕೊಂಡು ಹೋಗುವ ಯುವಕರು ಸ್ವಲ್ಪ ಮೈಮರೆತರೂ ಸಾಕು, ಒಂದಿಷ್ಟು ನಾಯಿಗಳನ್ನು ವಾಹನದಲ್ಲಿ ಎತ್ತಿಕೊಂಡು ನಾಯಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಯಾರಾದರೂ ಈ ತೆರನಾದ ಸೇವೆಯನ್ನು ಭಾರತದಲ್ಲೂ ಆರಂಭಿಸುವಂತಾಗಬೇಕು. ಕೆಲವರು ಪಶು ಆಸ್ಪತ್ರೆಗಳಿಗೆ ಫೋನ್‌ ಮಾಡಿ ನಮ್ಮಲ್ಲಿರುವ ಪ್ರಾಣಿಗೆ ವಯಸ್ಸಾಗಿದೆ ಅಥವಾ ಆರೋಗ್ಯ ಸರಿಯಿಲ್ಲ. ಅದನ್ನು ನಿಮ್ಮಲ್ಲಿಯೇ ಇಟ್ಟುಕೊಂಡು ಚಿಕಿತ್ಸೆ ಕೊಡುತ್ತೀರಾ ನಮಗೆ ಅದನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ. ಇಂಥದೇ ಒಂದು ಕೆಲಸವನ್ನು ದೆಹಲಿ ಬಳಿಯ ನೊಯ್ಡಾದ ಒಂದು ಸಂಸ್ಥೆ ಮಾಡುತ್ತಿದೆ. ಅದು ಲಕ್ವಾ ಪೀಡಿತ ಅಥವಾ ಮೂಳೆಗಳ ರೋಗಗಳಿಂದ ಬಳಲುವ ನಾಯಿಗಳಿಗೆ ಫಿಸಿಯೊಥೆರಪಿ ಒದಗಿಸುವ ಕೆಲಸ ಮಾಡುತ್ತಿದೆ ಇಂಥವು ದೇಶವಿಡೀ ಲಭ್ಯ ಆಗಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ