ಗುಂಡ : ಯಾರೋ 4 ಜನ ರಸ್ತೆ ಬದಿ ಜಗಳ ಆಡುತ್ತಿದ್ದರೆ ನಾವು ನಿಂತು ನೋಡಬಾರದು.

ಕಿಟ್ಟಿ : ಮತ್ತೆ.....? ಅವರನ್ನು ಬಿಡಿಸಲು ಹೋಗಬೇಕು ಅಂತೀಯೇನು? ನಮಗೂ ಧರ್ಮದೇಟು ಬಿದ್ದರೆ?

ಗುಂಡ : ಹಾಗಲ್ಲ.... ನಿಂತು ನೋಡೋ ಬದಲು ಕುಂತು ನೋಡಬೇಕು. ಆಗ ಹಿಂದಿನವರಿಗೂ ಕಾಣಿಸ್ತದೆ ನೋಡು.

ಮಂಜು : ಅಲ್ಲ ಕಣ್ಲಾ, ಹೆಂಗಸರು ಕೆಲಸ ಮಾಡದ ಡಿಪಾರ್ಟ್‌ಮೆಂಟ್‌ ಏನಾರ ಇದೆ ಅಂತೀಯಾ?

ರಾಜ : ಇರುತ್ತೆ ಯಾಕಿಲ್ಲ? ಸರಿಯಾಗಿ ನೋಡ್ಬೇಕು.

ಮಂಜು : ಉದಾಹರಣೆ.

ರಾಜ : ನಮ್ಮ ಫೈರ್‌ ಬ್ರಿಗೇಡ್‌ ಡಿಪಾರ್ಟ್‌ಮೆಂಟ್‌ನಲ್ಲಿ ಹೆಂಗಸರು ಇಲ್ಲ ಅಂತೀನಿ.

ಮಂಜು : ಅದು ಹೇಗೆ ಹೇಳ್ತೀಯಾ?

ರಾಜ : ಹೆಂಗಸರದು ಬೆಂಕಿ ಹಚ್ಚೋ ಸಮಾಚಾರ, ಅದನ್ನು ಆರಿಸ್ಲಿಕ್ಕೆ ಬರಲ್ಲ ನೋಡು!

ಗುಂಡನನ್ನು ಮದುವೆ ಆಗಲು ಯಾವ ಹುಡುಗಿಯರೂ ಒಪ್ಪುತ್ತಲೇ ಇರಲಿಲ್ಲ. ಅದೇನು ಕಾರಣ ಅಂತೀರಾ?

ಹುಡುಗಿ ಮದುವೆ ನಂತರ ಟಿವಿ, ಫೇಸ್‌ಬುಕ್‌, ವಾಟ್ಸ್ಆ್ಯಪ್‌ ಬದಲು ತನ್ನ ಕಡೆ ಹೆಚ್ಚು ಗಮನ ಕೊಡಬೇಕು ಅನ್ನೋದೇ ಅವನ ಷರತ್ತು! ಅಂಥ ಮೂರ್ಖ ಹುಡುಗಿಯರು ಈ ಕಾಲದಲ್ಲುಂಟೇ?

ಒಬ್ಬ ಪತಿರಾಯ ನೀಟಾಗಿ ಪಾತ್ರೆ ತೊಳೆಯುತ್ತಿರುವುದನ್ನು ಕಂಡು, ಅವನ ಹೆಂಡತಿ ಕೆಲಸಕ್ಕೆ ಹೋಗಿರುವಾಗ ಪಕ್ಕದ್ಮನೆ ಪಾರು ಬಂದು ಕೇಳಿದಳು.

ಪಾರು : ನೀವು ಚೆನ್ನಾಗೇ ಪಾತ್ರೆ ತೊಳೆಯುತ್ತೀರಿ. ಬಿಡುವಿರುವಾಗ ನಮ್ಮ ಮನೆ ಪಾತ್ರೇನೂ ತೊಳೆದು ಕೊಡಬಾರದೇ? ಏನು ಕೊಡಬೇಕು ಅಂತ ಮೊದಲೇ ಹೇಳಿಬಿಡಿ.

ಪತಿ : ನಿಮ್ಮ ಹತ್ತಿರ ಏನು ಚೌಕಾಸಿ? ನನ್ನ ಹೆಂಡತಿ ಕೊಡೋದನ್ನೇ ನೀವು ಕೊಡಿ.

ಅಂದಿನಿಂದ ಪಾರು ಈತನನ್ನು ಕಂಡು ಮುಖ ತಿರುಗಿಸಿಕೊಂಡು ಹೋಗುತ್ತಾಳೆ.

ಪತಿ : ಯಾಕೆ ನೀವು ಮಾತೇ ಆಡ್ತಿಲ್ಲ?

ಪಾರು : ಮತ್ತೆ..... ನೀವು ಹಾಗಾ ಹೇಳುವುದು?

ಪತಿ : ನಾನೇನು ತಪ್ಪು ಹೇಳಿದೆ? ನನ್ನ ಹೆಂಡತಿ ನನಗೆ ಪಾಕೆಟ್‌ಮನಿ ಅಂತ 2 ಸಾವಿರ ಕೊಡೋ ಹಾಗೇ ನೀವು ಕೊಡಿ ಅಂದೆ!

ಒಮ್ಮೆ ಒಂದು ಗ್ರೂಪ್‌ನಲ್ಲಿ ಅಡ್ಮಿನ್‌ ರಾಧಾರಮಣಿ ಹೆಸರನ್ನು ಗ್ರೂಪಿಗೆ ಸೇರಿಸಿದರು. ಅದಾದ ಮೇಲೆ ಗ್ರೂಪಿನ ಸದಸ್ಯರು ಹೆಚ್ಚು ಆ್ಯಕ್ಟಿವ್‌ ಆದಂತೆ ಕಾಣತೊಡಗಿತು.

ಸೋಮೇಶ್‌ : ಹಾಯ್‌ ರಾಧಾ!

ವರುಣ್‌ : ಹಾಯ್‌ ರಮಣಿ!

ಸಂಜೀವ್ : ಹಲೋ ರಾಧಾ.... ಹೌ ಆರ್‌ ಯೂ?

ರಾಧಾರಮಣಿ : ಹಾಯ್‌ ಎವೆರಿಬಡಿ.... ಐ ಆ್ಯಮ್ ಫೈನ್‌.

ಗೋವಿಂದ್‌ : ನಿಮಗೆ ಏನಾದರೂ ತೊಂದರೆ ಆದರೆ, ಅಗತ್ಯ ವಸ್ತು ಬೇಕಾದರೆ ನಮ್ಮ ಅಂಗಡಿಗೆ ಬನ್ನಿ.

ನಾಗೇಶ್‌ : ಹಾಯ್‌ ರಾಧಾ... ನಿಮ್ಮ ಊರು ಯಾವುದು?

ರಾಧಾರಮಣಿ : ಹಾಯ್‌.... ಐ ಆ್ಯಮ್ ಫ್ರಂ ಕೋಲಾರ.

ನಾಗೇಶ್‌ : ನಾನೂ ಅಷ್ಟೆ... ಹತ್ತಿರದ ಕೆ.ಜಿ.ಎಫ್‌.

ವರುಣ್‌ : ನಿಮ್ಮ ಶಿಕ್ಷಣದ ಬಗ್ಗೆ...

ರಾಧಾರಮಣಿ : ನಾನು ಪೋಸ್ಟ್ ಗ್ರಾಜುಯೇಟ್‌

ವರುಣ್‌ : ಗ್ರೇಟ್‌! ಬೆಸ್ಟ್ ಆಫ್‌ ಲಕ್‌.....

ಸೋಮೇಶ್‌ : ನಿಮ್ಮ ಪೂರ್ತಿ ಹೆಸರು....

ರಾಧಾ : ರಾಧಾ ಆರ್‌. ರಮಣ್‌.... ಆಟೋ ಕರೆಕ್ಟ್ ನಿಂದ ರಾಧಾರಮಣಿ ಆಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ