ಧಾರಾವಾಹಿ `ವೀರಾ : ಏಕ್‌ ವೀರ್‌ ಕಿ ಅರ್‌ದಾಸ್‌'ನಲ್ಲಿ ವೀರಾಳ ಪಾತ್ರ ನಿರ್ವಹಿಸುತ್ತಿರುವ 16 ವರ್ಷದ ದಿಗಂಗನಾ ಹುಟ್ಟು ಪ್ರತಿಭಾವಂತೆ. ಈಕೆ ನಟನೆ ಜೊತೆ ಲೇಖಕಿ, ಸಂಗೀತ ನಿರ್ದೇಶಕಿ, ಗೀತ ರಚನೆಕಾರಳು, ಗಾಯಕಿ ಸಹ! ಈಕೆಯ ಒಂದು ಕಾದಂಬರಿ ಹಾಗೂ ಕವನ ಸಂಕಲನಗಳು ಪ್ರಕಟಗೊಂಡು ಮಾರುಕಟ್ಟೆಯಲ್ಲಿವೆ.

ಮುಂಬೈ ಮೂಲದ ಈಕೆ ನೀರಜ್‌ ಸೂರ್ಯವಂಶಿಯವರ ಮಗಳು. ಅವರು ನಟನೆಯಲ್ಲಿ ನುರಿತವರು. ತಾಯಿ ಸರಿತಾ ಸೂರ್ಯವಂಶಿ ಅಪ್ಟಟ ಗೃಹಿಣಿ. ಗೊರೆಗಾಂವ್‌ನ ಸೇಂಟ್‌ ಝೇವಿಯರ್‌ ಜೂನಿಯರ್‌ ಕಾಲೇಜಿನ ಪಿ.ಯು. ವಿದ್ಯಾರ್ಥಿನಿ. ಮೊದಲಿನಿಂದಲೂ ನನ್ನ ತಾಯಿ ತಂದೆ ನೀಡಿದ ಶಿಕ್ಷಣದ ಪರಿಣಾಮವಾಗಿಯೇ ನಾನಿಷ್ಟು ಪ್ರತಿಭಾವಶಾಲಿ ಆಗಿದ್ದೇನೆ, ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದ್ದೇನೆ ಎನ್ನುತ್ತಾಳೆ.

ಮೊದಲಿನಿಂದಲೂ ಸಾಹಿತ್ಯದಲ್ಲಿ ಅಪಾರ ಶ್ರದ್ಧೆ ವಹಿಸಿದ್ದ ನಾನು ಹಿಂದಿ, ಆಂಗ್ಲ, ಮರಾಠಿ, ಗುಜರಾತಿ, ಪಂಜಾಬಿ, ಬಂಗಾಳಿ ಇತ್ಯಾದಿ ಅನೇಕ ಭಾಷೆಗಳಲ್ಲಿ ಮಾತನಾಡಿ, ಓದಿ, ಬರೆಯಬಲ್ಲೆ. ಮಾನವರ ಜೀವನದಲ್ಲಿ ಅನುಭವಗಳೇ ದೊಡ್ಡ ಶಾಲೆ. ಅದನ್ನು ಒಂದು ಹಾಡು, ಕವಿತೆ, ಕಥೆಯಾಗಿ ನಿರೂಪಿಸಬಹುದು. ಸಮಾಜದಲ್ಲಿ ನಾನು ಕಂಡ ಎಷ್ಟೋ ಮಂದಿಯೊಂದಿಗೆ ಅವರ ವಿಚಾರಧಾರೆ, ಭಾವನೆಗಳನ್ನೂ ಬರೆಯುವುದರಲ್ಲಿ ನನಗೆ ಹೆಮ್ಮೆ ಎನಿಸುತ್ತದೆ, ಎನ್ನುತ್ತಾಳೆ ಈಕೆ.

ನನ್ನ ಒಂದು ಆಂಗ್ಲ ಕಾದಂಬರಿ `ನಿಕ್ಮಿ ದಿ ಮರ್‌ಮೇಡ್‌ ಅಂಡ್‌ ದಿ ಪವರ್‌ ಆಫ್‌ ಲವ್'ನಲ್ಲಿ ಪ್ರೇಮದ ಆಳವನ್ನು ಬಹಳ ಸ್ವಾರಸ್ಯಕರವಾಗಿ ಹೇಳಲು ಯತ್ನಿಸಿದ್ದೇನೆ. ನಾನು ವಿಶ್ವದ ಅತ್ಯಂತ ಕಿರಿಯ ಕಾಂದಬರಿಗಾರ್ತಿ ಎಂದು ಗಿನೆಸ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ನನ್ನ ಹೆಸರು ದಾಖಲೆಯಾಗಲಿದೆ.

ನಟನೆಯ ವಿಷಯಕ್ಕೆ ಬಂದಾಗ ನೀನು `ವೀರಾ' ಧಾರಾವಾಹಿ ಏಕೆ ಆರಿಸಿಕೊಂಡೆ ಎನಲು, ``ಮೊದಲಿಗೆ ಇದು ನನ್ನ ಪ್ರಥಮ ಧಾರಾವಾಹಿ ಅಲ್ಲ. ಏಕ್‌ ಪ್ರೇಂ ಕಹಾನಿ, ಕೃಷ್ಣಾರ್ಜುನ್‌, ಕ್ಯಾ ಹಾದ್‌ ಸಾ ಕ್ಯಾ ಹಕೀಕತ್‌, ರುಕ್‌ ಜಾನಾ ನಹೀ ಇತ್ಯಾದಿಗಳಲ್ಲಿ ಈಗಾಗಲೇ ನಟಿಸಿದ್ದೇನೆ. ನನ್ನ ಓದಿನ ಸಲುವಾಗಿ ನಾನು ನಟನೆಯಿಂದ ಕೆಲವು ಕಾಲ ದೂರ ಉಳಿದೆ.

``ನನ್ನ ಪರೀಕ್ಷೆಗಳು ಮುಗಿದಾಗ ಇದರಲ್ಲಿ ಹಿರಿಯ ವೀರಾಳ ಪಾತ್ರಧಾರಿ ಆಗಲು ಆಫರ್‌ ಬಂತು. ಈ ಧಾರಾವಾಹಿಗೇ ಅಂಟಿಕೊಳ್ಳಲು ಮುಖ್ಯ ಕಾರಣ, ಇದು ಅಣ್ಣತಂಗಿಯರ ಕಥೆ, ಬಲು ರೋಚಕವಾದದು. ಈ ಪಾತ್ರ ಬಲು ವಿಭಿನ್ನ.

ದಿಗಂಗನಾಳಿಗೆ ಬ್ಯಾಂಡ್‌ಮಿಂಟನ್‌, ಸ್ಕೇಟಿಂಗ್‌ ಆಟಗಳು ಚಿತ್ರಕಲೆ, ವಿಭಿನ್ನ ವಿಚಾರಗಳ ವಿಮರ್ಶೆ, ಸಿನಿಮಾ ನೋಡುವುದು ಎಂದರೆ ಬಲು ಇಷ್ಟವಂತೆ. ದೇಶದ ರಾಜಕೀಯ ಕುರಿತು ಚರ್ಚಿಸುತ್ತಾ ಆಕೆ ಹೇಳುತ್ತಾಳೆ?

``ಹೆಣ್ಣುಮಕ್ಕಳ ಮೇಲಾಗುವ ಅತ್ಯಾಚಾರ, ಹೆಂಗಸರ ಮೇಲಿನ ದಾರುಣ ಕಿರುಕಳ ಪ್ರಕರಣಗಳು ನನ್ನನ್ನು ಸಂಕಟಕ್ಕೆ ಈಡು ಮಾಡುತ್ತವೆ. ಮುಖ್ಯವಾಗಿ ರೇಪ್‌ನಂಥ ಹೇಯಕೃತ್ಯಗಳ ವಿರುದ್ಧ ಅತಿ ಕಠೋರವಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇವಲ ಕಾನೂನು ಕಟ್ಟಳೆ ಎಂದು ಕುಳಿತರೆ ಏನೂ ಲಾಭವಿಲ್ಲ!''

ಈಕೆ ಶುದ್ಧ ಸಸ್ಯಾಹಾರಿ. ಸಂಜೆ ಸೂರ್ಯ ಮುಳುಗಿದ ನಂತರ ಎಂದೂ ಆಹಾರ ಸೇವಿಸುವುದಿಲ್ಲವಂತೆ. ಅಕಸ್ಮಾತ್‌ ಸೂರ್ಯಾಸ್ತದ ಮೊದಲು ಊಟ ಆಗಿಲ್ಲವೆಂದರೆ, ಆ ರಾತ್ರಿ ಕೇವಲ 1 ಗ್ಲಾಸ್‌ ಹಾಲು ಕುಡಿದು ಮಲಗಿಬಿಡುತ್ತಾಳಂತೆ. ದಿನಾ ಬೆಳಗ್ಗೆ ಸೂರ್ಯೋದಯದ ಹೊತ್ತಿಗೆ ಏಳು ರೂಢಿ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ