ಬ್ಯಾಂಕ್‌ ಮ್ಯಾನೇಜರ್‌ ಕೇಶವನ ಹೆಂಡತಿ ಒಮ್ಮಿಂದೊಮ್ಮೆಲೇ ತೌರಿನಿಂದ ಹಿಂದಿರುಗಿ ಬಂದಳು. ಗಂಡನೊಂದಿಗೆ, ``ಅಯ್ಯೋ ದೇವ್ರೇ ರೀ ನನಗಂತೂ ತುಂಬಾ ಗಾಬ್ರಿ ಆಗ್ಹೋಯ್ತು. ನಿಮಗೆ ನಾಲ್ಕು ಪತ್ರ ಬರೆದೆ. ಆದರೆ ನೀವು ಒಂದಕ್ಕೂ ಸಹ ಉತ್ತರ ಕೊಡ್ಲಿಲ್ಲ!'' ಎಂದಳು.

``ನಿನ್ನ ಯಾವ ಪತ್ರವೂ ಬರಲಿಲ್ಲ. ತಮಾಷೆಗಂತ ಯಾರೋ ನಿನ್‌ ಹೆಸರಿನಲ್ಲಿ ಪತ್ರಗಳನ್ನು ಬರೀತಿದ್ರು,'' ಎಂದವನೇ ಕೇಶವ ಡ್ರಾನಿಂದ ನಾಲ್ಕು ಪತ್ರಗಳನ್ನು ಹೊರತೆಗೆದು ಮೇಜಿನ ಮೇಲೆ ಹಾಕಿದ.

``ನೀವೊಂತರ ವಿಚಿತ್ರ ಕಣ್ರಿ! ಈ ಪತ್ರಗಳನ್ನು ನಾನೇರಿ ಬರೆದದ್ದು.''

``ಹಾಂ, ನಿನ್ನವಾ ಇವು ಆದ್ರೆ ನೀನು ಸಹಿ ಮಾಡಿದ ಮೇಲೆ ಒಂದು ಗೆರೆ ಎಳ್ದು, ಪಕ್ಕದಲ್ಲಿ ಎರಡು ಚುಕ್ಕೆ ಇಡ್ತಿದ್ಯಲ್ಲಾ? ನಿನ್ನ ಈ ಪತ್ರಗಳಲ್ಲಿ ಆ ಗೆರೆ, ಆ ಚುಕ್ಕೆಗಳು ಎಲ್ಲಿವೆ, ತೋರ್ಸು!'' ಎಂದ ಕೇವಶ.

ಇಬ್ಬರು ಹೆಂಗಸರು ಮೂರನೇ ಹೆಂಗಸಿನ ಬಗ್ಗೆ ಮಾತನಾಡುತ್ತಿದ್ದರು. ಒಬ್ಬಾಕೆ ಹೇಳಿದಳು, ``ಗೀತಾ ವಿಚಿತ್ರ ಹೆಣ್ಣಪ್ಪ! ಯಾವಾಗ ನೋಡಿದ್ರೂ ಅವಳು ಗಂಡನ್ನ ಬಯ್ಯುತ್ಲೇ ಇರ್ತಾಳೆ. ಯಾವಾಗಲೂ ಅವನು ಸುಳ್ಳುಗಾರ, ಮೋಸಗಾರ ಹೇಡೀಂತ ಹೇಳ್ತಾಳೆ. ಅದೇ ನನ್ನ ಗಂಡನ್ನ ನೋಡು, ಮೊದಲ ದರ್ಜೆ ಅಂಜುಬುರುಕ, ನಿಶ್ಶಕ್ತ. ಆದ್ರೆ ಎಂದಿಗೂ ಅವರನ್ನು ನಾನು ಬೈದಿಲ್ಲ!''

``ಇದು ನನಗೂ ಒಳ್ಳೇದಾಗಿ ಕಾಣೋಲ್ಲಾಕ್ಕ!'' ಎರಡನೇಯವಳು ಹೇಳಿದಳು,

``ನನ್ನ ಗಂಡನನ್ನು ನೋಡು ನಂಬರ್‌ ಒನ್‌ ಸೋಮಾರಿ ಜೊತೆಗೆ ಮೂರ್ಖ! ಹಾಗಂತ ನಾನೇನು ಅವರ ಬಗ್ಗೆ ಎಲ್ಲರ ಹತ್ತಿರ ಹೇಳ್ಕೊಂಡು ಬರ್ತೀನಾ?''

ರೈಲು ಮುಂದೆ ಮುಂದೆ ಹೋಗುತ್ತಿತ್ತು. ಬೋಗಿಯಲ್ಲಿ ರಾಜಕೀಯ ಚರ್ಚೆ ಮುಂದುವರಿಯುತ್ತಿತ್ತು. ಇದಕ್ಕೆ ಮುಕ್ತಾಯ ಹಾಡುವವನಂತೆ ಒಬ್ಬ ನೇತಾರ ಎತ್ತರದ ಧ್ವನಿಯಲ್ಲಿ ಹೇಳಿದ, ``ಇನ್ನು ಮುಂದೆ ಸಮಾಜವಾದ ಬರುತ್ತೆ, ಸಾಮಾನ್ಯವಾದ ಬರುತ್ತೆ ಮಾರ್ಕ್ಸ್ ವಾದ ಬರುತ್ತೆ.''

ಇದ್ದಕ್ಕಿದ್ದಂತೆ ಮೇಲ್ಗಡೆ ಬರ್ತ್‌ನಲ್ಲಿದ್ದ, ಪ್ರಯಾಣಿಕ ಎದ್ದು, ಕುಳಿತು, ಕಣ್ಣು ಉಜ್ಜಿಕೊಳ್ಳುತ್ತಾ ಕೆಳಗೆ ಬಗ್ಗಿ ನೋಡಿ, ``ಆದ್ರೆ ವಿಜಯವಾಡ ಬಂದಾಗ ಮಾತ್ರ ಮರೀದೆ ನನ್ನನ್ನ ಎಬ್ಬಿಸಿ. ತುಂಬಾ ಉಪಕಾರವಾಗುತ್ತೆ,'' ಎಂದವನೇ ಬೆಡ್‌ ಶೀಟ್‌ಹೊದೆದು ಮಲಗಿಬಿಟ್ಟ.

ಹೆಂಡತಿ : ಈವತ್ತಿನ ಆಲೂಗಡ್ಡೆ, ಈರುಳ್ಳಿ ಸಾಂಬಾರ್‌ ಹೇಗಿತ್ತು?

ಗಂಡ : ತುಂಬಾ ರುಚಿಯಾಗಿತ್ತು. ಯಾವ ಹೋಟ್ಲಿಂದ ತರಿಸ್ದೆ?

ಪಕ್ಕದ ಮನೆಯ ಆಂಟಿ ಮಾರುಕಟ್ಟೆಗೆ ಹೋಗುತ್ತಿರುವುದನ್ನು ನೋಡಿದ ಕೌಸಲ್ಯಾಳ ಐದು ವರ್ಷದ ಮಗಳು ಅವರ ಜೊತೆ ತಾನೂ ಹೋಗುವುದಾಗಿ ಹಠ ಹಿಡಿದಳು. ಕೌಸಲ್ಯಾ ಅವಳಿಗೆ ಕೂಡಲೇ ಲಂಗ ಹಾಕಿ, ಸಿದ್ಧಪಡಿಸಿದಳು. ಪಕ್ಕದ ಮನೆಯಾಕೆಯೊಂದಿಗೆ ಹುಡುಗಿಯನ್ನು ಕಳುಹಿಸುತ್ತಾ, ಆ ಆಂಟಿಯ ಕೈಗೆ 50 ರೂ. ಕೊಡುತ್ತಾ, ``ಮಗು ಚಿಕ್ಕದು. ಮಾರುಕಟ್ಟೆಯಲ್ಲಿ ಮಗೂಗೆ ಹಸಿವಾದ್ರೆ ಅಥವಾ ಆಟದ ಸಾಮಾನೇನಾದ್ರೂ ಬೇಕೂಂತ ಹಠ ಹಿಡಿದ್ರೆ ಏನಾದರೂ ಕೊಡಿಸಿ,'' ಎಂದಳು ಕೌಸಲ್ಯಾ.

ಹುಡುಗಿ ಹಿಂದಿರುಗಿ ಬಂದಳು. ಕೌಸಲ್ಯಾ ಕೇಳಿದಳು, ``ಏನಾದ್ರೂ ತಿಂದ್ಯಾ....?''

ಹುಡುಗಿ ಉಸ್ಸೆನ್ನುತ್ತಾ ಉತ್ತರಿಸಿದಳು, ``ತಿನ್ನೋದನ್ನು ಕೇಳಬೇಕೂಂದ್ರೆ ಆಂಟೀನೇ ಕೇಳು! ಬರೀ ರುಚಿ ನೋಡುವುದರ ಬಗ್ಗೆ ಕೇಳಬೇಕೂಂದ್ರೆ ನನ್ನ ಕೇಳು!`` ಎಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ