ದೂರದರ್ಶನ ಕೇಂದ್ರದಲ್ಲಿ ಅಭಿನಯದ ಕೆರಿಯರ್‌ ಆರಂಭಿಸಿದ ದಿವ್ಯಾಂಕಾ ತ್ರಿಪಾಠಿ ಪ್ರಸ್ತುತ `ಯೇ ಹೈ ಮೊಹಬ್ಬತೇ'ಯಲ್ಲಿ ಡಾ. ಇಶಿತಾ ಅಯ್ಯರ್‌ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ದಿವ್ಯಾಂಕಾಗೆ ಬಾಲ್ಯದಿಂದಲೇ ಕ್ರೀಡೆ ಹಾಗೂ ಸಾಹಸಮಯ ಚಟುವಟಿಕೆಗಳೆಂದರೆ ಬಲು ಇಷ್ಟ. ಅವರು ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಆದರೆ ಅವರು `ಮಿಸ್‌ ಭೂಪಾಲ್‌' ಆದ ಬಳಿಕ ಅಭಿನಯ ಕ್ಷೇತ್ರದಲ್ಲಿಯೇ ಕೆರಿಯರ್‌ ರೂಪಿಸಿಕೊಳ್ಳಲು ನಿರ್ಧರಿಸಿದರು. ಮಾಡೆಲಿಂಗ್‌ ಹೊರತಾಗಿ ಅವರು ಹಲವು ಟೆಲಿ ಫಿಲ್ಮ್ ಗಳಲ್ಲೂ ನಟಿಸಿದ್ದಾರೆ. ತಾಯಿ ಥಿಯೇಟರ್‌ ಕಲಾವಿದೆ, ಜೊತೆಗೆ ಲೇಖಕಿ ಕೂಡ. ಅವರಿಂದಲೇ ಇವರಿಗೆ ಅಭಿನಯದ ಪ್ರೇರಣೆ ದೊರೆಯಿತು.

7 ವರ್ಷಗಳ ಹಿಂದೆ ದಿವ್ಯಾಂಕಾ ಮುಂಬೈಗೆ ಬಂದಾಗ `ಬನೂ ಮೈ ತೇರಿ ದುಲ್ಹನ್‌'ನಲ್ಲಿ ವಿದ್ಯಾಳ ಪಾತ್ರ ದೊರಕಿತ್ತು. ಆ ಬಳಿಕ `ಮಿಸೆಸ್‌ ಅಂಡ್‌ ಮಿಸ್ಟರ್‌, `ಚಿಂಟೂ ಚಿಂಕಿ' ಮತ್ತು `ಏಕ್‌ ಬಡಿ ಸಿ ಲವ್ ಸ್ಟೋರಿ,' `ಕಹಾನಿ ಕಾಮಿಡಿ ಸರ್ಕಸ್‌ ಕಿ' ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿ ತಮ್ಮ ಹೆಸರನ್ನು ಟಾಪ್‌ ನಾಯಕಿಯರ ಪಟ್ಟಿಗೆ ಸೇರಿಸಿದರು.

``ನನಗೆ ಯಾವುದೇ ತೊಂದರೆ ಎನಿಸಿದಾಗ ಅಮ್ಮನ ಮುಂದೆ ಅದನ್ನೆಲ್ಲ ಹೇಳ್ತೀನಿ. ಅಮ್ಮ ನನ್ನನ್ನು ಯಾವ ವಿಶ್ವಾಸದಿಂದ ಮುಂಬೈಗೆ ಕಳಿಸಿಕೊಟ್ಟಿದ್ದಾರೊ, ಅದನ್ನು ನಾನು ಎಂದೂ ಭಂಗ ಮಾಡುವುದಿಲ್ಲ.'' `ಕೆಲಸವೇ ನನಗೆ ಪೂಜೆ,' ಎಂದು ಹೇಳುವ ಅವರು, ಅಭಿನಯದ ಪರಿಪಕ್ವತೆಗೆ ಸಾಧ್ಯವಿರುವ ಪ್ರಯತ್ನವನ್ನೆಲ್ಲ ಮಾಡುತ್ತಿರುವುದಾಗಿ ಹೇಳುತ್ತಾರೆ.

ಸಿನಿಮಾದಲ್ಲಿ ಅಭಿನಯಿಸಲು ಅವರಿಗೆ ಇಚ್ಛೆಯೇನೋ ಇದೆ. ಆದರೆ ಅಭಿನಯಿಸುವ ಚಿತ್ರ ಅರ್ಥಪೂರ್ಣವಾಗಿರಬೇಕು. ಅಭಿನಯಿಸಲು ಸಾಕಷ್ಟು ಅವಕಾಶಗಳಿರಬೇಕು ಎನ್ನುತ್ತಾರೆ. ಸದ್ಯ ಅವರು ಧಾರಾವಾಹಿಯಲ್ಲಿಯೇ ತೃಪ್ತಿಯಿಂದಿದ್ದಾರೆ. ಇದರಲ್ಲಿ ಅವರದು ಡೆಂಟಿಸ್ಟ್ ಳ ಪಾತ್ರ. ಅದಕ್ಕೆ ಹಲವು ಆಯಾಮಗಳಿವೆ. ಪಾತ್ರಕ್ಕೆ ಅಗತ್ಯವಾದರೆ ಅಂತರಂಗದ ದೃಶ್ಯಕ್ಕೂ ಸೈ ಎಂದು ಅವರು ಹೇಳುತ್ತಾರೆ. ಈವರೆಗೆ ನಿಭಾಯಿಸಿದ ಪಾತ್ರಗಳಿಗೆಲ್ಲಾ 100 ಕ್ಕೆ 100 ಜೀವ ತುಂಬಿರುವುದಾಗಿಯೂ ಅವರು ಹೇಳುತ್ತಾರೆ.

ತಂದೆತಾಯಿ ಹಾಗೂ ಸೋದರರೇ ಅವರ ನಿಜವಾದ ವಿಮರ್ಶಕರು. ಅವರು ಆಕೆಯ ಪ್ರತಿಯೊಂದು ಶೋ ನೋಡುತ್ತಾರೆ. ಸುಳ್ಳು ಹೇಳುವವರು ಹಾಗೂ ಪ್ರೊಫೆಷನ್‌ ಅಲ್ಲದವರು ಆಕೆಗೆ ಎಳ್ಳಷ್ಟೂ ಇಷ್ಟವಾಗುವುದಿಲ್ಲ. ಅವರು ತಮ್ಮನ್ನು ತಾವು ಯಶಸ್ವಿ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ತಮ್ಮ ಕೆಲಸದ ಬಗ್ಗೆ ತೃಪ್ತಿ ಇದೆ.

``ನೀವು ನಿಮ್ಮ ಕೆಲಸದ ಬಗ್ಗೆ ಖುಷಿಯಿಂದಿದ್ದರೆ, ನಿಮ್ಮ ಕುಟುಂಬ ಚೆನ್ನಾಗಿ ನಡೆಯುತ್ತಿದ್ದರೆ ನೀವು ಯಶಸ್ವಿ ಎಂದರ್ಥ,'' ಎಂದು ಅವರು ಹೇಳುತ್ತಾರೆ.

ದಿವ್ಯಾಂಕಾರ ಸ್ಕಿನ್‌ ಗ್ಲೋಯಿಂಗ್‌ ಆಗಿದೆ. ಅವರು ದಿನಕ್ಕೆ 5-6 ಲೀಟರ್‌ ನೀರು ಕುಡಿಯುವುದರ ಮೂಲಕ ತ್ವಚೆಯ ಯೋಗಕ್ಷೇಮ ನೋಡಿಕೊಳ್ಳುತ್ತಾರೆ.

``ಸೆಟ್‌ನಲ್ಲಿ ಲೈಟ್‌ ಹೆವಿಯಾಗಿರುತ್ತದೆ. ಹೀಗಾಗಿ ಹೆಚ್ಚು ನೀರು ಕುಡಿಯುವುದು ಅತ್ಯವಶ್ಯಕ. ಇದರ ಹೊರತಾಗಿ ನಾನು ಮನೆಗೆ ಹೋಗಿ ಮೇಕಪ್‌ ತೆಗೆದು ಮಾಯಿಶ್ಚರೈಸರ್‌ ಲೇಪಿಸುತ್ತೇನೆ. ನನ್ನ ಮೇಕಪ್‌ ಸಾಮಗ್ರಿಗಳನ್ನು ಪ್ರತ್ಯೇಕವಾಗಿಯೇ ಇಡುತ್ತೇನೆ. ನಾನು ಹೆಚ್ಚು ಫ್ಯಾಷನೆಬ್‌ ಅಲ್ಲ. ಈಗಲೂ ಅಮ್ಮ ಸಿದ್ಧಪಡಿಸಿದ ಡ್ರೆಸ್‌ನ್ನೇ ಧರಿಸ್ತೀನಿ,'' ಎಂದು ಹೇಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ