ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ, ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್‌ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಗೃಹಶೋಭಾ ಹಬ್ಬ ಸಂಭ್ರಮ' ಕಾರ್ಯಕ್ರಮವನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ, ಸೆಪ್ಟೆಂಬರ್‌ 6 ರಂದು, ಬೆಂಗಳೂರಿನ ರಾಜಭವನ್‌ ರಸ್ತೆಯ ಹೋಟೆಲ್ ಕ್ಯಾಪಿಟಲ್ ನಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕಾಗಿ ಬಂದಿದ್ದ 150ಕ್ಕೂ ಹೆಚ್ಚು ಮಂದಿ ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಆರೋಗ್ಯ, ಪೌಷ್ಟಿಕ ಆಹಾರ, ಸೆಲೆಬ್ರಿಟಿ ಶೆಫ್‌ ರಿಂದ ಅಡುಗೆ ಡೆಮೊ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.

NIO00424

ಶ್ರಾವಣ ಮಾಸದಿಂದ ಶುರುವಾಗುವ ಸಾಲು ಸಾಲು ಹಬ್ಬಗಳ ಸಲುವಾಗಿ, ತನ್ನ ಮಹಿಳಾ ಓದುಗರಿಗೆಂದೇ, `ಗೃಹಶೋಭಾ ಹಬ್ಬ ಸಂಭ್ರಮ' ಇವೆಂಟ್‌ ನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮದ ರೂಪುರೇಷೆ ವಿವರಿಸುತ್ತಾ, ಆ್ಯಂಕರ್‌ ಭಾನುಪ್ರಿಯಾ ಬಂದಿದ್ದ ಎಲ್ಲಾ ಅತಿಥಿಗಳನ್ನೂ ಅಭಿನಂದಿಸುತ್ತಾ, ಪಾರ್ಟ್‌ ನರ್ಸ್‌ ನ್ನು ಪರಿಚಯಿಸಿದರು.

ಟೇಸ್ಟ್ ಪಾರ್ಟ್ನರ್‌ : ಸನ್ಪ್ಯೂರ್ಹಾಗೂ ಡೇರಿ ಪಾರ್ಟ್ನರ್‌ : ನಂದಿನಿ.

‘The Festive Season Starts Here’ ಎಂಬ ಆಶಯದೊಂದಿಗೆ ನಡೆದ ಕಾರ್ಯಕ್ರಮದ ಸೌಂದರ್ಯ, ಫ್ಯಾಷನ್‌, ಅಡುಗೆ, ಆರೋಗ್ಯ, ಗೃಹಾಲಂಕಾರ, ಕಲೆ, ಸಂಸ್ಕೃತಿ, ಜೀವನಶೈಲಿಗೆ ಸಂಬಂಧಿಸಿದ ಹಲವು ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಿ ಮಹಿಳೆಯರ ದೈನಂದಿನ ಜೀವನಕ್ಕೆ ಉಪಯುಕ್ತವಾಗುವ, ಹಬ್ಬಗಳ ಸಡಗರ ಸಂಭ್ರಮ ಹೆಚ್ಚಿಸುವ ಹಲವಾರು ಮಾಹಿತಿ ಕುರಿತು ತಿಳಿಸಿಕೊಟ್ಟರು.

ಫೆಸ್ಟಿವ್ ವೆಲ್ ನೆಸ್ಸೆಷನ್‌ : ಆರೋಗ್ಯವೇ ಭಾಗ್ಯ! ಹೀಗಾಗಿ ಹಬ್ಬಗಳಲ್ಲಿ ಮಹಿಳೆಯರು ಹೇಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಡಯೆಟಿಶಿಯನ್‌ ಯಶಸ್ವಿನಿ ಎಂ.ಎಸ್‌.

NIO00059

ತಿಳಿಸಿಕೊಟ್ಟರು. ಕ್ಲಿನಿಕ್‌ ಡಯೆಟಿಶಿಯನ್‌, ನ್ಯೂಟ್ರೀಶನ್‌, ವೆಲ್ ‌ನೆಸ್‌ ಪ್ರೊಫೆಶನ್‌ ತಜ್ಞರಾದ ಇವರು ಹಬ್ಬಗಳಲ್ಲಿ ಹೆಂಗಸರು ಹೇಗೆ ತಮ್ಮ ವೆಲ್ ‌ನೆಸ್‌ ಸ್ಥಿರಪಡಿಸಿಕೊಳ್ಳಬೇಕು ಎಂಬುದನ್ನು ಹಲವು ಉದಾಹರಣೆ, ಮಾಹಿತಿಗಳ ಮೂಲಕ ತಿಳಿಸಿಕೊಟ್ಟರು. ಹಬ್ಬ ಅಂದ ಮೇಲೆ ಗ್ರಾಂಡ್‌ ಲಂಚ್‌, ವಿಶೇಷ ತಿಂಡಿತಿನಿಸು ಇದ್ದೇ ಇರುತ್ತದೆ. ಹಬ್ಬದ ಸಡಗರ ಸಂಭ್ರಮಕ್ಕೆ ಧಕ್ಕೆ ಬರದಂತೆ ಇದನ್ನೆಲ್ಲ ಹೇಗೆ ಸೇವಿಸಬೇಕೆಂದು ತಿಳಿಸಿಕೊಟ್ಟರು. ಮುಖ್ಯ ಧಾರಾಳ ನೀರು ಕುಡಿಯುತ್ತಿರಬೇಕು, ಹೆವಿ ಸ್ವೀಟ್ಸ್ ನ್ನು ಸಣ್ಣ ಪೋರ್ಶರ್ನ್ಸ್ ಆಗಿ ಮಧ್ಯೆ ಮಧ್ಯೆ ಸವಿಯಬೇಕು, ಭಾರಿ ಗ್ರಾಂಡ್‌ ಲಂಚ್‌ ನಂತರ ತಕ್ಷಣ ಮಲಗದೆ ತುಸು ಓಡಾಡಬೇಕು. ಪೌಷ್ಟಿಕ ಆಹಾರದಲ್ಲಿನ ಪ್ರೋಟೀನ್‌, ಕಾರ್ಬೊಹೈಡ್ರೇಟ್ಸ್, ವಿಟಮಿನ್ಸ್, ಮಿನರಲ್ಸ್ ಎಲ್ಲದರ ಮಹತ್ವ ತಿಳಿಸಿಕೊಟ್ಟು, ಮಹಿಳಾ ವೃಂದದ ಹಲವಾರು ಸಂದೇಹಗಳನ್ನು ನಿವಾರಿಸಿ, ಅವರಿಗೆ ಸೂಕ್ತ ಸಲಹೆಗಳನ್ನೂ ನೀಡಿದರು.

ಫೆಸ್ಟಿವ್ ಸ್ಪೇಸಸ್ಸೆಷನ್‌ : ನಂತರದ ಸೆಷನ್‌ ಗೃಹಾಲಂಕಾರದ ಕುರಿತಾಗಿತ್ತು. ಸೃಜನಾ ಹಿರೇಮಠ್‌ ಮೂಲತಃ ಆರ್ಕಿಟೆಕ್ಟ್ ಹಾಗೂ ಇಂಟೀರಿಯರ್‌ ಡಿಸೈನರ್‌. ಬೆಂಗಳೂರಿನ ರಶ್‌ ಡಿಸೈನ್‌ ಸ್ಟುಡಿಯೋ ನಿರ್ವಾಹಕಿ.

NIO00106

ಕಂಟೆಂಪರರಿ ಡಿಸೈನ್ಸ್ ನ್ನು ಇಂಡಿಯನ್‌ ಏಸ್ಥೆಟಿಕ್ಸ್ ಜೊತೆ ಬೆರೆಸಿ ಮನೆಗಳಿಗೆ ಅದ್ಭುತ ಒಳಾಲಂಕಾರದ ಜೀವಕಳೆ ತುಂಬಿಸುತ್ತಾರೆ. ಇವರು ಮುಖ್ಯವಾಗಿ ಹಬ್ಬಗಳಲ್ಲಿ ಹೆಂಗಸರು ಹೇಗೆಲ್ಲ ತಮ್ಮ ಮನೆಯ ಅಲಂಕಾರದಿಂದ ಹಬ್ಬದ ಸಡಗರ ಸಂಭ್ರಮವನ್ನು ಹಸಿರಿನಿಂದ ಹೆಚ್ಚಿಸಬಹುದೆಂದು ತಿಳಿಸಿಕೊಟ್ಟರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ