ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ಗರ್ಭಗುಡಿಯ ಬಾಗಿಲನ್ನುಇಂದು ಮಧ್ಯಾಹ್ನ 12 ರಿಂದ 12.30ಕ್ಕೆ ತೆರೆಯಲಾಗಿದ್ದು, ನಾಳೆಯಿಂದ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ಬಾಗಿಲು ತೆರೆಯುವ ಮುನ್ನ ಐದು ಜನ ಪುರೋಹಿತರ ತಂಡದಿಂದ ದೇವಿಯ ಒಡವೆಗಳನ್ನು ತರಲಾಯಿತು. ಬಳಿಕ ಅರಸರ ವಂಶಸ್ಥರಿಂದ ಬಾಳೆಕಂದು ಕತ್ತರಿಸಿ ದೇವಸ್ಥಾನದ ಬಾಗಿಲು ತೆರೆಯಲಾಯಿತು. ನಾಳೆಯಿಂದ ಅಕ್ಟೋಬರ್ 23ರವರೆಗೆ ಸುಮಾರು 13 ದಿನಗಳ ಕಾಲ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಇಂದು ಹಾಗೂ ಅಕ್ಟೋಬರ್​ 23 ರಂದು ಭಕ್ತರಿಗೆ ದರ್ಶನ ಇರುವುದಿಲ್ಲ.ಹಾಸನಾಂಬೆ ದೇವಿಯ ಸನ್ನಿಧಾನದಲ್ಲಿ ಅರ್ಚಕರ ತಂಡದಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಬಾಗಿಲು ತೆರೆಯುವ ವೇಳೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮತ್ತಿತರರು ಉಪಸ್ಥಿತರಿದ್ದು, ಜಿಲ್ಲಾಡಳಿತದ ಸಮ್ಮಖದಲ್ಲಿ ಗರ್ಭಗುಡಿಯ ಬಾಗಿಲು ತೆರೆಯಲಾಗಿದೆ.

ಶಕ್ತಿ ದೇವತೆ ಹಾಸನಾಂಬೆ, ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುತ್ತಾಳೆ. ವಿಶೇಷ ಪೂಜಾ ಕೈಂಕರ್ಯಗಳ ಮೂಲಕ ಇಂದು ದೇವಾಲಯ ಗರ್ಭಗುಡಿ ತೆರೆದಿದೆ. ಹಾಸನದ ಅಧಿದೇವತೆಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಕಾದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ