ನಮ್ಮ ದೇಶದಲ್ಲಿ ಹೆಂಗಸರಿಗೆ ಎಂಥ ಮರ್ಯಾದೆ ಸಿಗುತ್ತಿದೆ ಎಂಬುದು, ಭಾರತೀಯ ಕುಸ್ತಿ ಸಂಘದ ಚುನಾವಣೆಗಳಿಂದ ಸ್ಪಷ್ಟವಾಗಿದೆ. ಸಂಘದ ಮಾಜಿ ಅಧ್ಯಕ್ಷರು ಬಿಜೆಪಿಯ ಸಾಂಸದರಾದ ಬೃಜಭೂಷಣ್ ಸಿಂಗ್ ರ ವಿರುದ್ಧ ಮಹಿಳಾ ಕುಸ್ತಿಪಟುಗಳು ಖುಲ್ಲಂಖುಲ್ಲ ಆರೋಪಿಸಿದ್ದರು ಹಾಗೂ ತಿಂಗಳುಗಟ್ಟಲೆ ಧರಣಿ ಕುಳಿತಿದ್ದರು, ಆದರೆ ವಿಶೇಷ ಏನೂ ನಡೆಯಲಿಲ್ಲ. ಬಿಜೆಪಿ ಅವರನ್ನು ಸಂಪೂರ್ಣ ರಕ್ಷಿಸಿತು. ಅಪರಾಧಿ ಪ್ರಕರಣ, ಪಾರ್ಟಿಯಿಂದ ಉಚ್ಛಾಟನೆ ಇತ್ಯಾದಿ ಏನೂ ನಡೆಯಲಿಲ್ಲ. ಅಪರಾಧ ಸಾಬೀತಾದರೆ ಮುಂದೆ ಪಾರ್ಟಿಯಿಂದ ಉಚ್ಛಾಟನೆ ಎಂದು ಕೈ ತೊಳೆದುಕೊಂಡರು.
ಈ ಮಹಿಳಾ ಕುಸ್ತಿಪಟುಗಳ ಗಾಯದ ಮೇಲೆ ಆ್ಯಸಿಡ್ ಸಿಂಪಡಿಸುತ್ತಾ, ಭಾರತೀಯ ಕುಸ್ತಿ ಸಂಘದ ಮುಂದಿನ ಚುನಾವಣೆಗಳಲ್ಲಿ ಇವರ ಸಹೋದ್ಯೋಗಿ ಸಂಜಯ ಸಿಂಗ್ ಗೆ 47ರಲ್ಲಿ 40 ಮತ ಸಿಕ್ಕಿತು. ಸಕ್ರಿಯ 15 ಸೀಟುಗಳ 13ರಲ್ಲಿ ಅವರದೇ ರಾಜ್ಯಭಾರವಾಯ್ತು. ಇದರಲ್ಲಿ ಮತ ಚಲಾಯಿಸುವರು, ದೇಶದ ವಿಭಿನ್ನ ಕುಸ್ತಿ ಸಂಘಗಳ ಸ್ಥಾನೀಯ ಅಧ್ಯಕ್ತರಾಗಿರುತ್ತಾರೆ.
ನಂತರ ಈ ಕುರಿತು ಟೀಕೆಗಳಾದಾಗ, ಈ ಚುನಾವಣೆಗಳನ್ನೇ ರದ್ದುಗೊಳಿಸಿದರು. ಏಕೆಂದರೆ ಹೊಸ ಪಪೆಟ್ ಅಧ್ಯಕ್ಷ, ಬೃಜಭೂಷಣರ ಹಳ್ಳಿಯವನೇ ಆಗಿದ್ದು, ಹೊಸ ಕುಸ್ತಿ ಸ್ಪರ್ಧೆಗಳ ಘೋಷಣೆ ಮಾಡಿ, ಮಹಿಳಾ ಪಟುಗಳೇ, ನಾವು ಮೀಸೆ ಹೊತ್ತ ಗಂಡಸರು ಮಾತ್ರ ಈ ಕುಸ್ತಿ ವಿಭಾಯಿಸಬಲ್ಲೆವು. ನೀವು ತೆಪ್ಪಗೆ ನಾವು ಹೇಳಿದಂತೆ ಕೇಳಿಕೊಂಡಿರಬೇಕಷ್ಟೆ, ಎಂದಿದ್ದಾರೆ. ಬಿಜೆಪಿಗೆ ಈ ವಿಪಕ್ಷೀಯರು ಮುಂದಿನ 2024ರ ಚುನಾವಣೆಯಲ್ಲಿ ತಮ್ಮನ್ನು ಕಡೆಗಣಿಸಬಹುದು ಎಂದೆಣಿಸಿ, ಸ್ಪೋರ್ಟ್ಸ್ ಅಥಾರಿಟಿ ಅಸರವಸರದಲ್ಲಿ ಈ ಚುನಾವಣೆಯನ್ನು ಮಾತ್ರವಲ್ಲದೆ, ಹೊಸ ಸಕ್ರಿಯ ಸದಸ್ಯರನ್ನೂ ಸಹ ರದ್ದುಗೊಳಿಸಿತು. ಇದೊಂದು ಉದಾಹರಣೆ ಅಷ್ಟೆ, ಹೆಂಗಸರ ಹಕ್ಕುಗಳ ಅದರಲ್ಲೂ ದೈಹಿಕವಾಗಿ ದುರ್ಬಲರಲ್ಲದ ಹೆಂಗಸರ ಹಾಗೂ 80-85% ಗಂಡಸರನ್ನು ತಮ್ಮ ಬಲವಾದ ಪಟ್ಟಿನಿಂದ ಸೋಲಿಸಬಲ್ಲಂಥವರನ್ನು ಮೂಲೆಗೆ ಒತ್ತರಿಸಿತು. ಈ ಹೆಂಗಸರು ತಿಂಗಳುಗಟ್ಟಲೇ ಧರಣಿ ಕೂರುವಷ್ಟು ಗಟ್ಟಿಗರಾಗಿದ್ದರು. ಪೊಲೀಸರ ಲಾಠಿ, ಚಳಿ, ಮಳೆ, ಬಿಸಿಲು ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸಿದರು. ಆದರೆ ನಮ್ಮ ಸಮಾಜ ಮತ್ತು ಸರ್ಕಾರ ಎಷ್ಟು ನಿಷ್ಕುರಣಿಗಳಾದವೆಂದರೆ, ಅತ್ತ ಸಾಂಸದ ಅಧ್ಯಕ್ಷರ ತಲೆಗೂದಲೂ ಕೊಂಕಲಿಲ್ಲ, ಅವರ ಅಧಿಕಾರಕ್ಕೂ ಚ್ಯುತಿ ಬರಲಿಲ್ಲ. ಅವರೇ ಮುಂದಿನ ಅಧ್ಯಕ್ಷರಲ್ಲದಿದ್ದರೂ, ಅವರ ಮುಖವಾಣಿಯಾದರು.
ಗಂಡಿನ ಶೋಷಣೆಗೆ ಸಿಡಿದೇಳುವ ಪ್ರತಿ ಹೆಣ್ಣೂ ಈ ಸವಾಲನ್ನು ಎದುರಿಸಲೇ ಬೇಕಾಗುತ್ತದೆ. ತನ್ನ ಮನೆ ಮಾತ್ರವಲ್ಲದೆ ವಠಾರ, ಕಾಲೋನಿ, ನಗರ, ನೆಂಟರಿಷ್ಟರೆಲ್ಲರ ವಿರೋಧ ಕಟ್ಟಿಕೊಳ್ಳಬೇಕು ಹಾಗೂ ಈ ರೀತಿ ಗಂಡಸರ ವಿರುದ್ಧ ಸಿಡಿದು ನಿಂತಾಗ ಅವರಿಗೆ ಅನ್ನ ನೀರು ಸಿಗದಂತೆ ಮಾಡಲಾಗುತ್ತದೆ. ಲೋಕಸಭೆಯಲ್ಲಿ ಓಂ ಬಿರ್ಲಾ ಹಾಗೂ ರಾಜ್ಯಸಭೆಯಲ್ಲಿ ಜಗದೀಪ್, ವಿಪಕ್ಷದ ಸಾಂಸದರೊಂದಿಗೆ ನಡೆದುಕೊಳ್ಳುತ್ತಿರುವ ಹಾಗೆ. ಬಂಗಾಳದ ಮಹುಲಾ ಮೊಯೆತ್ರಾರೊಂದಿಗೂ ಹೀಗೇ ನಡೆಯಿತು. ಏಕೆಂದರೆ ಆಕೆ ಸಂಪೂರ್ಣವಾಗಿ ಸಿಡಿದು ಬಿದ್ದಿದ್ದಳು, ತನ್ನ ಹಠ ಬಿಟ್ಟುಕೊಡಲಿಲ್ಲ.
ವಿದ್ರೋಹ ಮಾಡುವ ಯುವತಿಯರು ತಮ್ಮ ಕುಟುಂಬದ ಪಾಲಿಗೆ ಧರ್ಮ ಸಮ್ಮತ ಕಪ್ಪು ಚುಕ್ಕೆ ಆಗುತ್ತಾರೆ. ಅವರಿಗೆ ಹೊಸ ನೌಕರಿ ಸಿಗುವುದಿಲ್ಲ, ತಮ್ಮ ಕುಟುಂಬದವರೊಂದಿಗೆ ಸೌಹಾರ್ದ ಸಂಬಂಧ ಇರೋಲ್ಲ. ಇವರ ಒಡಹುಟ್ಟಿದವರ ಮದುವೆ ಸಂದರ್ಭದಲ್ಲಿ ಇನ್ನಿಲ್ಲದ ಕಷ್ಟಗಳು ಎದುರಾಗುತ್ತವೆ, ಯಾವ ಫಂಕ್ಷನ್ ಗೂ ಆಹ್ವಾನ ಇರುವುದಿಲ್ಲ.





