ನಮ್ಮ ಹಣೆಬರಹಕ್ಕೆ ಒಮ್ಮೊಮ್ಮೆ ಉಪಾಯ ಕೂಡ ಅಪಾಯ ಆಗುತ್ತೆ ಅನ್ನೋದಿಕ್ಕೆ ಉದಾ :
ಭಿಕಾರಿ : ಅಮ್ಮಾ..... ತಾಯಿ... ನೀವು ದಿನಾ ಭಿಕ್ಷೆ ಹಾಕುತ್ತೀರಿ ನಿಜ, ಬಹಳ ಒಳ್ಳೆಯವರು ಅನ್ನೋದೂ ನಿಜ. ಆದರೆ ತಪ್ಪು ತಿಳೀಬೇಡಿ ಅಮ್ಮ.... ಉಪ್ಪು, ಹುಳಿ, ಖಾರ ಇಲ್ಲದ ಇಂಥ ಅಡುಗೆಯನ್ನು ದಿನಾ ತಿನ್ನೋದಾದರೂ ಹೇಗೆ? ನೀವೇ ಹೇಳಿ ನೋಡೋಣ.
ಗೃಹಿಣಿ : ಏ ಹೋಗೋ ಭಿಕಾರಿ.... ನನ್ನ ಗಂಡನೇ ಒಂದು ದಿನಾನೂ ಏನೂ ಹೇಳದೆ ಬಾಯಿ ಮುಚ್ಚಿಕೊಂಡು ತಿಂತಾರಂತೆ..... ನಿಂದೇನು ಹೊಸ ಕ್ಯಾತೆ?
ಭಿಕಾರಿ : ಅಮ್ಮಾ..... ನಿಮ್ಮ ಯಜಮಾನ್ರೇ 20/ ರೂ. ಕೊಟ್ಟು ನಿಮ್ಮನ್ನು ಈ ಬಗ್ಗೆ ಕೇಳಿ ತಿಳ್ಕೊ ಅಂದ್ರಮ್ಮ. ನೋಡಿ, ಇಲ್ಲೇ ಕಾಂಪೌಂಡ್ ಗೋಡೆ ಹಿಂದೆ ಅವಿತುಕೊಂಡು, ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದಾರೆ!
ಸ್ಟೈಲಿಶ್ ಸಿತಾರಾ ಸರಸರನೆ ಹೊಸ ಚಪ್ಪಲಿ ಅಂಗಡಿಗೆ ಹೋದಳು. ಅಲ್ಲಿ ಸುಮಾರು ಒಂದೂವರೆ ಘಂಟೆ ಕಾಲ, ಅಂಗಡಿಯಲ್ಲಿದ್ದ ಎಲ್ಲಾ ಬಗೆಯ ಚಪ್ಪಲಿ, ಶೂ, ಸ್ಯಾಂಡಲ್ಸ್ ಹೊರೆಗೆಳೆಸಿ ತನಗೆ ಬೇಕಾದುದನ್ನು ಹುಡುಕಾಡಿದಳು. ಅಲ್ಲಿದ್ದ ಸೇಲ್ಸ್ ನವರ ಜೀವ ಬಾಯಿಗೆ ಬಂತೇ ಹೊರತು ಇವಳಿಗೆ ಯಾವುದೂ ಇಷ್ಟ ಆಗಲೇ ಇಲ್ಲ.
ಕೊನೆಯಲ್ಲಿ ಹೊಸ ಚಪ್ಪಲಿಗಳ ಅಡಿ ರಾಕ್ ನಲ್ಲಿದ್ದ ಹಳೆ ಬ್ರಾಂಡಿನದೊಂದು ಚಪ್ಪಲಿ ಅಂತೂ ಇಂತೂ ಇವಳ ಮೆಚ್ಚುಗೆ ಗಳಿಸಿತು. ಅದನ್ನು ಹಿಡಿದುಕೊಂಡು ಸಂಭ್ರಮದಿಂದ ಓಡಿಹೋಗಿ ಕ್ಯಾಶ್ ಕೌಂಟರಿನಲ್ಲಿದ್ದ ಮಾಲೀಕರಿಗೆ ತೋರಿಸಿದಳು, ``ಇದರ ಬೆಲೆ ಎಷ್ಟು ಅಂತ ನೋಡಿ ಇವರೇ... ಇದನ್ನೇ ಪ್ಯಾಕ್ ಮಾಡಿಸಿ!'' ಎಂದಳು.
``ಏನೂ ಬೇಡ ತಾಯಿ.... ಇದು ನಮ್ಮ ಅಂಗಡಿಯದಲ್ಲ... ಹೊಸ ಚಪ್ಪಲಿ ಟ್ರೈ ಮಾಡಲೆಂದು ನಿಮ್ಮದೇ ಹಳೇ ಚಪ್ಪಲಿ ನಮ್ಮ ರಾಕ್ ಕೆಳಗೆ ಇಟ್ಟಿದ್ದಿರಿ,'' ಎಂದಾಗ ಸಿತಾರಾ ತಲೆ ಚಚ್ಚಿಕೊಳ್ಳುತ್ತಾ ಅಲ್ಲಿಂದ ಹೊರನಡೆದಳು.
ನೀತಿ : ಇರುವ ಗಂಡನನ್ನು ಬಿಟ್ಟು ಹೊಸ ಗಂಡನ್ನ ಹುಡುಕಿದರೆ ಆಗೋದೂ ಇದೇ ಗತಿ!
ನವ ವಿವಾಹಿತ ಪತಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ದ. ಅವನ ಪತ್ನಿ ಆಗ ತಾನೇ ಅಡುಗೆ ಕಲಿಯ ತೊಡಗಿದ್ದಳು. ಹಾಗೆಂದು ಅವಳ ಅಡುಗೆ ಸರಿ ಇಲ್ಲ ಎಂದು ಟೀಕಿಸಿ ಅವನು ನೆಮ್ಮದಿ ಕಳೆದುಕೊಳ್ಳಲು ಸಾಧ್ಯವೇ?
ಪತ್ನಿ : ಏನ್ರೀ.... ಇವತ್ತಿನ ಅಡುಗೆ ತುಂಬಾ ಚೆನ್ನಾಗಿತ್ತು, ಅಲ್ಲವೇ? ನೀವೇನಂತೀರಿ....? ಊಟ ಮಾಡುವಾಗ ಏನೂ ಹೇಳಲೇ ಇಲ್ಲವಲ್ಲ.....?
ಪತಿ : ನಿನ್ನ ಈ ಬಿರಿದ ಕೇಶರಾಶಿಯ ಹಾಗೆ, ಹರಡಿದ ಈ ಮೇಘಮಾಲೆಗೆ ಸರಿಸಾಟಿಯುಂಟೇ? ಹಾಗಾಗಿಯೇ ಇದು ಗ್ರೇವಿಯಿಂದ ಹಿಡಿದು, ಚಪಾತಿಯವರೆಗೂ ಅನ್ನವನ್ನೂ ಬಿಡದೇ ಎಲ್ಲೆಲ್ಲೂ ತನ್ನ ಬೆಡಗು ಪ್ರದರ್ಶಿಸಿದೆ ಡಾರ್ಲಿಂಗ್!
ರೋಗಿ : ಡಾಕ್ಟ್ರೇ..... ಮೊನ್ನೆ ನೀವು ಔಷಧಿ ಚೀಟಿ (ಪ್ರಿಸ್ ಕ್ರಿಪ್ಶನ್) ಬರೆದು ಕೊಟ್ಟಿದ್ರಲ್ಲ, ಅದರ ಹಿಂದೆ ಕೊನೆ ಘಳಿಗೀಲಿ ಅವಸರದಲ್ಲಿ ಏನೋ ಬರೆದು ಕೊಟ್ಟಿರಿ. ಅದಕ್ಕಾಗಿ ಬೆಂಗಳೂರು ಪೂರ್ತಿ ಹುಡುಕಾಡಿದೆ, ಒಂದು ಅಂಗಡಿಯಲ್ಲಾದರೂ ಆ ಟಾನಿಕ್‌ಸಿಕ್ಕಿದ್ರೆ ಕೇಳಿ!





