ಡಿಸೈನ್ಸುಲಭವೇನಲ್ಲ :  ಫೋಟೋಗ್ರಾಫ್‌ ತೆಗೆದುಕೊಳ್ಳುವುದರಲ್ಲಿ ಈಗ ಯಾರೂ ಹಿಂದುಳಿಯುವುದಿಲ್ಲ. ಆದರೂ ಅತ್ಯುತ್ತಮ ಫೋಟೋ ಫ್ರೇಮ್ ಆಗಬೇಕಾದರೆ, ಅದನ್ನು ಮೊಬೈಲ್ ‌ನಿಂದಲ್ಲ, ಪ್ರೊಫೆಶನಲ್ ಕ್ಯಾಮೆರಾದಿಂದ, ಪಕ್ಕಾ ಫೋಟೋಗ್ರಾಫರ್‌ ಉತ್ತಮ ಬ್ಯಾಕ್‌ ಡ್ರಾಪ್‌ ನೊಂದಿಗೇ ತೆಗೆಯಬೇಕು. ಚೀನಾದ ಕಂಪನಿ ಇದೀಗ ತನ್ನ ಸ್ಟುಡಿಯೋವನ್ನು ರೆಡಿಮೇಡ್‌ ಬ್ಯಾಕ್‌ ಡ್ರಾಪ್‌ ಆಗಿಸಿ, ಗ್ರಾಹಕರು ತಾವೇ ಫೋಟೋ ತೆಗೆಯಲು ಅವನು ಮಾಡಿಕೊಡುತ್ತಿದೆ. ಇದರಲ್ಲಿ ಕರೆಕ್ಟರ್ ಪರ್ಫೆಕ್ಟ್ ಆಗಿರುತ್ತದೆ. ಈಗಲೂ ಮಕ್ಕಳು ಹಾಗೂ ಹೊಸ ಜೋಡಿಗಳು ತಮ್ಮ ಫೋಟೋಗಳನ್ನು ಸ್ಟುಡಿಯೋಗೆ ಹೋಗಿಯೇ ತೆಗೆಸುತ್ತಾರೆ. ಈ ಕಂಪನಿಯಂತೂ ಪ್ರತಿಯೊಂದು ಥೀಮಿನ ಬ್ಯಾಕ್‌ ಡ್ರಾಪ್‌ ರೆಡಿ ಮಾಡಿಟ್ಟಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿ ಕೊಡುತ್ತದೆ. ಇಂಥ ಅನುಪಮ ಡಿೖಸೈನ್ಸ್ ರೆಡಿ ಮಾಡುವುದು ಖಂಡಿತಾ ಸುಲಭವಲ್ಲ. ಏಕೆಂದರೆ ಸಾಮಾನ್ಯವಾಗಿ ಫೋಟೋಗ್ರಾಫರ್‌ ಬಳಿ ಸ್ಟೋರೇಜ್‌ ಸ್ಪೇಸ್‌ ಕಡಿಮೆ ಇರುತ್ತದೆ, ಹೀಗಾಗಿ ಪೆಲ್ ಡೀಬ್‌ ಹೆಚ್ಚಾಗಿ ತಯಾರಾಗುತ್ತವೆ.

sweet-briar-students-enjoy-time

ಮಂದಿರ ಬಿಟ್ಟು ಪ್ರಕೃತಿಯ ಪ್ರವಾಸಕ್ಕೆ ಹೊರಡಿ : ಇದು ಯಾವ ರೆಸಾರ್ಟ್‌ ನ ಫೋಟೋ ಅಲ್ಲ. ಇದು ಇಂಗ್ಲೆಂಡಿನ ಆಕ್ಸ್ ಫರ್ಡ್ ಯೂನಿವರ್ಸಿಟಿಯ ಫೋಟೋ. ಇದರ ಕ್ಯಾಂಪಸ್‌ ಎಷ್ಟು ದೊಡ್ಡದಾಗಿದೆ ಅಂದ್ರೆ, ಅಲ್ಲಿ ಸ್ಟೂಡೆಂಟ್ಸ್ ಬೋಟಿಂಗ್‌ ಸಹ ಮಾಡಬಹುದಾಗಿದೆ. ನಮ್ಮಲ್ಲಿಯೂ ಸಹ ಬೇಕಾದಷ್ಟು ಯೂನಿವರ್ಸಿಟಿಗಳೇನೋ ಇವೆ, ಆದರೆ ಅವು 4 ಗೋಡೆಗಳ ಕ್ಲಾಸ್‌ ರೂಂ, ಹಾಸ್ಟೆಲ್ ‌ಗಳಿಗಷ್ಟೇ ಸೀಮಿತ. ಕೆಲವು ವಿ.ವಿ.ಗಳಲ್ಲಿ ಮಂದಿರಗಳೂ ರೂಪುಗೊಳ್ಳುತ್ತಿವೆ, ಆದರೆ ಇಂಥ ಪ್ರಕೃತಿ ರಮಣೀಯತೆ ಇಲ್ಲ. ಇಂಥ ಮಜಾ ಬೇಕೆಂದರೆ ನೀವೇಕೆ ವಿದೇಶೀ ಪ್ರವಾಸ ಮಾಡಬಾರದು?

green-tile-bath-bomb-photo

ಬೆಲೆ ಹೆಚ್ಚೋ ಅಥವಾ ಕ್ವಾಲಿಟಿಯೋ : ಬಾಥ್‌ ಟಬ್‌ ನಿಂದ ಮಾರ್ಕೆಟಿಂಗ್‌ ಕೆಟ್ಟ ಐಡಿಯಾ ಏನಲ್ಲ. ಅದರಲ್ಲೂ ಆ ಪ್ರಾಡಕ್ಟ್ಸ್ ಸ್ನಾನಕ್ಕೇ ಸಂಬಂಧಿಸಿದ್ದರೆ! ಕುಶ್‌ ಕ್ವೀನ್‌ ಎಂಬ ಹೆಸರಿನ ಬ್ರಾಂಡ್‌, ಬೇದಿಂಗ್‌ ಪ್ರಾಡಕ್ಟ್ಸ್ ತಯಾರಿಸುತ್ತದೆ. ಹಿಂದೆಲ್ಲ ಇದನ್ನು ಸಮುದಾಯ ಮಾತ್ರ ಖರೀದಿಸುತ್ತಿತ್ತು, ಏಕೆಂದರೆ ಇದರಲ್ಲಿ ಕೆಲವು ಡ್ರಗ್ಸ್ ಬೆರೆತಿರುತ್ತಿತ್ತು. ಈಗ ಇದರ ಗ್ರಾಹಕರ ಮಾರುಕಟ್ಟೆ ಹಿಗ್ಗಿಸಲಾಗಿದೆ, ಹೀಗಾಗಿ ನಶಾಕೋರರಲ್ಲದವರೂ ಸಹ ಇನ್ನು ಈಗ ಕೊಳ್ಳುವಂತಾಗಿದೆ. ಅಸಲಿಗೆ ಈ ತರಹದ ವಸ್ತುಗಳಲ್ಲಿ, ಎಲ್ಲಕ್ಕಿಂತ ಮುಖ್ಯವಾದುದು ಇದರ ಬೆಲೆ. ಇದು ಎಷ್ಟು ದುಬಾರಿಯೋ ಇದರ ಗುಣಮಟ್ಟ ಅಷ್ಟೇ ಉನ್ನತ! ಈ ಕಾರಣಕ್ಕೆ ಗ್ರಾಹಕರು ಸೆಳೆಯಲ್ಪಡುತ್ತಾರೆ.

gg-morocco-copy

ಜನಪ್ರಿಯಗೊಳ್ಳುತ್ತಿರುವ ಗರ್ಲ್ಸ್ ಟೂರ್ಸ್‌ : ಈಗೆಲ್ಲ ಕಾಲ ಬದಲಾಗಿದೆ. ವಯಸ್ಕ ಹೆಣ್ಣುಮಕ್ಕಳನ್ನು ಗಂಡು ಹುಡುಗರ ಜೊತೆ ಪ್ರವಾಸಕ್ಕೆ ಕಳಿಸುವುದು ಮಾಮೂಲೇ ಆಗುತ್ತಿದೆ, ಯಾರದೂ ಆಕ್ಷೇಪಣೆ ಇಲ್ಲ. ಆದರೂ ಈಗಿನ ಮಾರ್ಕೆಟಿಂಗ್‌ ಟ್ರೆಂಡ್‌ ಪ್ರಕಾರ, ಓನ್ಲಿ ಗರ್ಲ್ಸ್ ಟೂರ್‌ ಹೆಚ್ಚು ಜನಪ್ರಿಯ ಗೊಳ್ಳುತ್ತಿದೆ. ಅಮೆರಿಕಾದ ಒಂದು ಕಂಪನಿ ಗರ್ಲ್ಸ್ ಗೈಡ್‌ 2026ರಲ್ಲಿ 85 ಟೂರುಗಳನ್ನು ಕೇವಲ ಹುಡುಗಿಯರಿಗೆಂದೇ ಆರ್ಗನೈಸ್‌ ಮಾಡಿದೆ. ಪ್ರತಿ ವರ್ಷ ಇದು ಹೆಚ್ಚುತ್ತಿದೆ. ಪಾಪ, ಬಾಯ್‌ ಫ್ರೆಂಡ್ಸ್ ಗೆ ಇದು ನುಂಗಲಾರದ ಬಿಸಿ ತುಪ್ಪ! ಬೇಕಾದಾಗ ಗರ್ಲ್ ಫ್ರೆಂಡ್ಸ್ ಗೆ ಬೈ ಬೈ ಹೇಳುವ ಅವಕಾಶ ತಪ್ಪುತ್ತಿದೆ. ಹಿಂದಿಗಿಂತ ಈಗ ಎಚ್ಚೆತ್ತಿರುವ ಹುಡುಗಿಯರು, ಇಂಥ ಖತರ್ನಾಕ್‌ ಬಾಯ್‌ ಫ್ರೆಂಡ್ಸ್ ನಿಂದ ಎಷ್ಟೋ ಜಾಗರೂಕರಾಗುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ