ಸತೀಶ : ಹೆಂಡತಿಗೆ ತಿಳಿಹೇಳುವುದು ಕಷ್ಟ ಅಂತಾರೆ, ಅದೇಕೆ ಹಾಗೆ?
ಮಹೇಶ : ನಿನ್ನಂಥ ಬ್ಯಾಚುಲರ್‌ಗೆ ಅದು ಗೊತ್ತಾಗೋಲ್ಲ ಬಿಡು. ನಿನ್ನ ಐ.ಟಿ. ಭಾಷೆಯಲ್ಲಿ ಹೇಳಬೇಕೆಂದರೆ, ವಿಡಿಯೋ ಡೌನ್‌ಲೋಡ್ ಮಾಡಲು ಕುಳಿತಾಗ, ಡೌನ್ ಲೋಡ್ ಆದನಂತರ ಎರರ್ ತೋರಿಸಿದಷ್ಟೇ ಕಷ್ಟಕರ ಅಂದುಕೋ!
ಪತ್ನಿ : ರೀ, ನಿಜವಾಗ್ಲೂ ನೀವು ತುಂಬಾ ಅಮಾಯಕರು. ಯಾರು ಬೇಕಾದರೂ ಸುಲಭವಾಗಿ ನಿಮ್ಮನ್ನು ಏಮಾರಿಸಬಹುದು.
ಪತಿ : ನಿಮ್ಮಪ್ಪ ಮಾಡಿದ್ದು ಅದೇ ಕೆಲಸ ತಾನೇ?
ಮಹೇಶ : ನಿನಗೆ ಗೊತ್ತೇ, ಆಟಂಬಾಂಬಿಗಿಂತಲೂ ಭಯಂಕರವಾದ 2 ವಸ್ತುಗಳಿವೆ ಅಂತ....!
ಸುರೇಶ್ : ಅದೇನಪ್ಪ ಅಂಥದ್ದು?
ಮಹೇಶ : ಮೊದಲನೆಯದು ಹೆಂಡತಿಯ ಕಣ್ಣೀರು, ಎರಡನೆಯದು, ನೆರೆಮನೆಯವಳ ಮಂದಹಾಸ.
ಸುಬ್ಬ ಸುಬ್ಬಿ ಒಂದು ಅಪಘಾತದ ದುರಂತದಲ್ಲಿ ಅಕಾಲ ಮರಣಕ್ಕೆ ತುತ್ತಾದರು. ಅದಾದ ಮೇಲೆ ಸುಬ್ಬ ದೆವ್ವವಾದ, ಸುಬ್ಬಿ ಪಿಶಾಚಿಯಾದಳು.
ಸುಬ್ಬಿ : ಅಬ್ಬಾ! ಸತ್ತ ಮೇಲೆ ನಿನ್ನ ರೂಪ ಎಷ್ಟು ಭಯಂಕರವಾಗಿದೆ, ಒಳ್ಳೆ ದೆವ್ವದ ತರಹ ಕಾಣಿಸ್ತಿದ್ದಿ!
ಸುಬ್ಬ : ಆದರೆ.... ಸತ್ತ ಮೇಲೂ ನೀನು ಬದಲಾಗಿಲ್ಲ ಅನ್ನೋದಂತೂ ನಿಜ. ಮೊದಲೂ ಪಿಶಾಚಿಯಂತಿದ್ದೆ, ಈಗಲೂ ಹಾಗೇ ಇರುವೆ. ನನ್ನನ್ನು ಗೋಳು ಹೊಯ್ದುಕೊಳ್ಳುವುದು ಮಾತ್ರ ಬಿಟ್ಟಿಲ್ಲ.
ನಿಂಗ : ಅಯ್ಯೋ ಸುಬ್ಬಾ.... ಅಲ್ಲಿ ನೋಡು! ನಿನ್ನ ಹೆಂಡತಿಯನ್ನು ಹಾವು ಕಚ್ಚುತ್ತಿದ್ದೆ....
ಸುಬ್ಬ : ಏ, ನೀನು ಕನ್‌ಫ್ಯೂಸ್ ಆಗಿದ್ದೀಯ. ಹಾವಿನ ವಿಷ ಖಾಲಿ ಆಗಿದೆ ಅನ್ಸುತ್ತೆ, ಅದು ರೀಚಾರ್ಜ್ ಮಾಡಿಕೊಳ್ಳಲು ಇವಳ ಹತ್ತಿರ ಬಂದಿರಬೇಕು.
ಪತ್ನಿ : ನಾನು ಶಾಪಿಂಗ್‌ಗೆ ಬಂದಿದ್ದೀನಿ. ಈಗ ನೀವೆಲಿದ್ದೀರಿ? ಆಫೀಸ್‌ನಲ್ಲಿ ಇಲ್ಲಾಂತ ಗೊತ್ತಾಯ್ತು. ಸರಿಯಾಗಿ ಹೇಳಿ.
ಪತಿ : ಬ್ಯಾಂಕ್‌ನಲ್ಲಿದ್ದೀನಿ....
ಪತ್ನಿ : ಸರಿ, ನನ್ನ ಹೊಸ ಫೋನ್‌ಗಾಗಿ 42 ಸಾವಿರ, ರೇಷ್ಮೆ ಸೀರೆಗಾಗಿ 25 ಸಾವಿರ ಬೇಕು.
ಪತಿ : ಬ್ಲಡ್ ಬ್ಯಾಂಕ್‌ನಲ್ಲಿದ್ದೀನಿ. ಹಣದ ಸುಲಿಗೆ ಬದಲು ರಕ್ತಾನೇ ಕುಡ್ಕೋ!
ಅನಿಲ್ : ಮೀಡಿಯಾಗೂ, ಮನೆಯಲ್ಲಿರುವ ಹೆಂಡತಿಗೂ ಸಮಾನತೆ ಇದೆ ಅಂತೀಯಾ?
ಸುನೀಲ್ : ಯಾಕಿಲ್ಲ? ಒಂದೇ ವಿಷಯವನ್ನು ಇಬ್ಬರಿಗೂ 10 ಸಲ ಹೇಳದಿದ್ದರೆ ಸಮಾಧಾನ ಆಗೋಲ್ಲ.
ವಿನಯ್ : ಮದುವೆಯನ್ನು ಯಾವುದಕ್ಕೆ ಹೋಲಿಸಬಹುದು?
ನವೀನ್ : ಮದುವೆ ಅನ್ನೋದು ಬಬ್ಬಲ್ ಗಮ್ ಇದ್ದಂತೆ, ಆರಂಭದಲ್ಲಿ ತುಸು ಸಿಹಿ ಅನ್ಸುತ್ತೆ. ಆಮೇಲೆ ಎಷ್ಟು ಅಗಿದರೂ ನಿಸ್ಸಾರವೇ!
ಪೊಲೀಸ್ : ಏನ್ರಿ ಪಾಟೀಲರೆ, ನಿಮ್ಮ ಮನೇಲಿ ವಿಸ್ಛೋಟಕ ವಸ್ತುಗಳು ಅಡಗಿವೆ ಅಂತ ನಮಗೆ ಸುದ್ದಿ ಬಂದಿದೆ. ಈಗಲೇ ನಿಮ್ಮ ಮನೆಯನ್ನು ತಲಾಶ್ ಮಾಡಬೇಕು.
ಪಾಟೀಲ್ : ಸರ..... ಖಬರ್ ಖರೇ ಐತ್ರೀ... ಆದ್ರೆ ಆಕಿ ಮನೀಲಿಲ್ರಿ... ತವ್ರಿಗೆ ಹೋಗ್ಯಾಳ...
ರವಿ : ನಿನ್ನೆ ರಾತ್ರಿ ನಿನ್ನ ಹೆಂಡತಿ ಯಾಕೆ ಅಷ್ಟು ಜೋರಾಗಿ ಜಗಳ ಆಡುತ್ತಿದ್ದಳು? 3 ಬೀದಿಗೆ ಕೇಳಿಸುತ್ತಿತ್ತು ಮಾರಾಯ ಅವಳ ಕಂಠ!
ಶಶಿ : ಅದೇನಿಲ್ಲ... ಅದೇನೂ ದೊಡ್ಡ ವಿಶೇಷವಲ್ಲ. ಅವಳ ಫೋಟೋ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಆಗುವ ಬದಲು ಓಎಲ್ಎಕ್ಸ್ ನಲ್ಲಿ ಆಯ್ತಲ್ವಾ....!?