ಲಘುಸಂಗೀತ, ಭಜನ್‌, ವಚನ, ಭಾವಗೀತೆ, ಜನಪದ, ಹಿನ್ನೆಲೆ ಸಂಗೀತ ಹೀಗೆ ಎಲ್ಲ ಪ್ರಕಾರದ ಸಂಗೀತದಲ್ಲಿ ಹಾಡುವವರು ಮತ್ತು ಸಾಧನೆ ಮಾಡಿದವರು ವಿರಳ. ಅಂತಹ ಅಪರೂಪದ ಸಾಧಕಿಯರಲ್ಲಿ  ಸಂಗೀತಾ ಕಟ್ಟಿ  ಒಬ್ಬರು.

ಸರಸ್ವತಿ ಪೂಜೆಯಂದು ಜನಿಸಿದ್ದರಿಂದಲೋ ಏನೋ, `ಸಂಗೀತಾ' ಎಂದು ನಾಮಕರಣ. ಹೆಸರಿಗೆ ತಕ್ಕಂತೆಯೇ ಸಂಗೀತ ಸಾಧಕಿ.

ತಂದೆ ಡಾ. ಎಚ್‌.ಎ. ಕಟ್ಟಿ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಸಂಗೀತ ಆರಾಧಕರು ಕೂಡ. ಚಿಕ್ಕ ವಯಸ್ಸಿನಲ್ಲಿಯೇ ಮಗಳಿಗೆ ಸಂಗೀತ ಆಲಿಸುವ ಅಭ್ಯಾಸ ರೂಢಿಸಿದರು.

4ನೇ ವರ್ಷಕ್ಕೆ ಸಂಗೀತ ಲೋಕಕ್ಕೆ ಪಾದಾರ್ಪಣೆ. ಸಂಗೀತ ಸಾಮ್ರಾಟ ನೌಶಾದ್‌ ಅಲಿಯವರ ಭೇಟಿ ಸಂಗೀತಾ ಜೀವನಕ್ಕೆ ತಿರುವು ಕೊಟ್ಟಿತೆನ್ನಬಹುದು.

``ಈ ಹುಡುಗಿಗೆ ಒಳ್ಳೆಯ ಭವಿಷ್ಯವಿದೆ, ಒಳ್ಳೆಯ ಗುರುಗಳಿಂದ ತರಬೇತಿ ಕೊಡಿಸಿ,'' ಎಂದು ಹೇಳಿದ್ದರು. ಆ ಮಾತು ಮುಂದೆ ನಿಜವೇ ಆಯಿತು.

ಶೇಷಗಿರಿ ದಂಡಾಪುರ ಹಾಗೂ ಚಂದ್ರಶೇಖರ ಪುರಾಣಿಕಮಠ ಅವರಿಂದ ಆರಂಭಿಕ ತರಬೇತಿ. ಬಳಿಕ ಬಸವರಾಜ ರಾಜಗುರು ಅವರ ಬಳಿ ಹೆಚ್ಚಿನ ತರಬೇತಿ.

13ನೇ ವಯಸ್ಸಿಗೆ ಕ್ಯಾಸೆಟ್‌ ರಾಜಗುರು ಅವರ ಬಳಿ ಅಭ್ಯಾಸ ಮಾಡುತ್ತಿರುವಾಗಲೇ ಸಂಗೀತಾ ಹಾಡಿದ `ದಾಸ ಮಂಜರಿ' ಕ್ಯಾಸೆಟ್‌ ಬಂದುಬಿಟ್ಟಿತ್ತು. ಆಗ ಅವರ ವಯಸ್ಸು ಕೇವಲ 13. ಆ ಬಳಿಕ ಅವರಿಗೆ ಸಿನಿಮಾದಲ್ಲೂ ಹಾಡುವ ಅವಕಾಶಗಳು ಹೇರಳವಾಗಿ ಬರತೊಡಗಿದವು. 90ರ ದಶಕದಲ್ಲಿ ಅವರು ಒಂದೇ ವರ್ಷದಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡಿದ್ದರು.

ಗುರುವಿಗಾಗಿ ಹುಡುಕಾಟ

ಸಂಗೀತಾ ಕಟ್ಟಿ ಡಾ. ಬಸರಾಜ್‌ ರಾಜಗುರು ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಓದುತ್ತಿದ್ದರು. ಆಗ ಧಾರವಾಡ ಬೆಂಗಳೂರು ಓಡಾಟ ನಡೆದೇ ಇತ್ತು. ಈ ಮಧ್ಯೆ ಡಾ. ಬಸವರಾಜ ರಾಜಗುರು ಅವರ ಆಕಸ್ಮಿಕ  ನಿಧನ ಸಂಗೀತಾಗೆ ಬರಸಿಡಿಲು ಬಡಿದಂತಾಯಿತು. 12 ವರ್ಷದ ಅವರ ಒಡನಾಟ ಜೀವನದಲ್ಲಿ ಬಹು ಅಮೂಲ್ಯವಾದದ್ದನ್ನು ಕಳೆದುಕೊಂಡಂತೆ ಭಾಸವಾಗುತ್ತಿತ್ತು.

ಸಿನಿಮಾದಲ್ಲಿ ಸಾಕಷ್ಟು ಬೇಡಿಕೆಯಿದ್ದರೂ ಸಂಗೀತಾ ಅವರಿಗೆ ಹಿಂದೂಸ್ಧಾನಿ ಸಂಗೀತ ಕಲಿಯುವ ದಾಹ ಸ್ವಲ್ಪವೂ  ಹಿಂಗಿರಲಿಲ್ಲ. ಹೊಸ ಗುರುವಿಗಾಗಿ ಅವರ ಶೋಧನೆ ನಿರಂತರವಾಗಿತ್ತು. ಆ ಸಮಯದಲ್ಲಿ ಸಂಗೀತಾಗೆ ಭೇಟಿಯಾದವರು ಡಾ. ಕಿಶೋರಿ ಅಮೋಣ್‌ಕರ್‌. ಅವರು  `ಗಾನ ಸರಸ್ವತಿ' ಎಂದೇ ಪ್ರಖ್ಯಾತರಾದವರು, ಪದ್ಮವಿಭೂಷಣ ಪುರಸ್ಕಾರದಿಂದ ಗೌರವಿಸಲ್ಪಟ್ಟವರು. ಅಂತಹ ಮೇರು ಗಾಯಕಿಯ ಸಾನಿಧ್ಯದಲ್ಲಿ ಕಲಿಯುವ ಅವಕಾಶ ದೊರೆತದ್ದು ಸಂಗೀತಾಗೆ ಬಲು ಖುಷಿ ಕೊಟ್ಟಿತು. ಸಂಗೀತಾ ಆಗ ಬಿ.ಎಸ್ಸಿ. ಕೊನೆಯ ವರ್ಷದಲ್ಲಿ ಓದುತ್ತಿದ್ದರು. ಪರೀಕ್ಷೆಗೆ ಇನ್ನು 2-3 ತಿಂಗಳು ಮಾತ್ರ ಉಳಿದಿತ್ತು. ಸಂಗೀತ ಕಲಿಯುವುದರ ಮುಂದೆ ಅವರಿಗೆ ಉಳಿದೆಲ್ಲ ಗೌಣ ಎಂಬಂತಾಗಿತ್ತು. ಗುರುವಿನ ಅನುಮತಿ ದೊರೆಯುತ್ತಿದ್ದಂತೆ ಅವರು ತಕ್ಷಣವೇ ಮುಂಬೈಗೆ ಹೊರಟರು. ಗುರುಕುಲ ಪದ್ಧತಿಯಂತೆ ಡಾ. ಕಿಶೋರಿ ಅಮೋಣ್‌ಕರ್‌ ಮನೆಯಲ್ಲಿದ್ದುಕೊಂಡೇ ಸಂಗೀತಾಭ್ಯಾಸ ಮಾಡಿದರು. ಅವರು ಅಲ್ಲಿದ್ದದ್ದು 5 ವರ್ಷ. ಈ ಐದು ವರ್ಷಗಳಲ್ಲಿ ಎರಡೇ ಎರಡು ಸಲ ಬೆಂಗಳೂರಿಗೆ ಬಂದು ಸಿನಿಮಾಗಳಿಗೆ ಹಾಡಿ ಹೋದರು. `ನಾಗಮಂಡಲ' ಚಿತ್ರದ `ಕಂಬದ ಮ್ಯಾಲಿನ ಗೊಂಬೆಯೇ....' ಹಾಗೂ `ಅಮೆರಿಕ ಅಮೆರಿಕ' ಚಿತ್ರದ `ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು' ಈ ಹಾಡುಗಳು ಅಪಾರ ಜನಪ್ರಿಯತೆ ಗಳಿಸಿದವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ