ಕಮಲಿ ಹೊಸದಾಗಿ ಕಂಪ್ಯೂಟರ್‌ ಕೋರ್ಸಿಗೆ ಸೇರಿದ್ದಳು. ಸಂಜೆ ಯಾವನೋ ಬೀದಿ ಕಾಮಣ್ಣ ಅವಳನ್ನೇ ಹಿಂಬಾಲಿಸುತ್ತಾ ಬಂದು ಚುಡಾಯಿಸಿದ. ಅವನತ್ತ ತಿರುಗಿದ ಕಮಲಿ ಕನಲಿ ಕೆಂಡಾಮಂಡಲವಾಗಿ, ``ಏಯ್‌... ಪೆನ್‌ ಡ್ರೈವ್ ‌ಮುಚ್ಚಳದಂತೆ ಇದ್ದೀಯ, ಲೈನ್‌ ಹೊಡಿತೀಯಾ? ಹುಟ್ಟಿನಿಂದಲೇ ಎರರ್‌ ನೀನು, ಮೈ ತುಂಬಾ ವೈರಸ್‌ ತುಂಬಿಕೊಂಡು ಎಕ್ಸೆಲ್ ‌ಕರಪ್ಟ್ ಫೈಲ್‌ಗಿಂತ ಹೀನಾಯವಾಗಿದ್ದೀಯ.... ಒಂದೇ ಕ್ಲಿಕ್‌ನಲ್ಲಿ ಒದ್ದರೆ ನೀನು ನೆಲದಿಂದ ಡೆಲಿಟ್‌ ಆಗಿ ಸಮಾಧಿಯಲ್ಲಿ ಹೋಗಿ ಡೌನ್‌ಲೋಡ್ ಆಗಿರ್ತೀಯ. ನಿನ್ನ ಆತ್ಮ ಪರಲೋಕಕ್ಕೆ ಅಪ್‌ಲೋಡ್‌ ಆಗುವ ಮೊದಲು ಇಲ್ಲಿಂದ ಕಳಚಿಕೋ!''

ಕಮಲಿಯನ್ನು ನೋಡಿ ಭಯವಾಗದಿದ್ದರೂ ಅವಳ ಭಾಷಾ ವೈಖರಿಗೆ ತತ್ತರಿಸಿದ ಅವನು ಮತ್ತೆಂದೂ ಕಾಣಿಸಲೇ ಇಲ್ಲ.

 

ಒಬ್ಬ ರೋಡ್‌ ರೋಮಿಯೋ ಅದೇ ಕಮಲಿಯನ್ನು ಕಂಡು ಕಿಸ್ಕಕನೇ ನಗುತ್ತಾ, ``ಕಮ್ಲಿ, ಐ ಲವ್ ಯೂ... ಕರಿ ಮೋಡದ ಆಣೆ....'' ಎಂದು ಹಾಡತೊಡಗಿದ.

ಕಂಪ್ಯೂಟರ್‌ ಭಾಷೆ ಸಾಕೆನಿಸಿ ಕಮಲಿ ಹೊಸ ವರಸೆಯಲ್ಲಿ ಬಗ್ಗಿ ತನ್ನ ಚಪ್ಪಲಿ ತೋರಿಸುತ್ತಾ, ``ನನ್ನ ಸ್ಯಾಂಡಲ್ ಸೈಜ್‌ ಗೊತ್ತಿದೆ ತಾನೇ....'' ಎಂದಳು.

ಅವನು ಸ್ವಲ್ಪವೂ ಬೇಸರಿಸದೆ, ``ಇದೇನು ಈಗಿನ ಕಾಲದ ಹುಡ್ಗೀರಪ್ಪಾ.... ಲವ್ ಆಯ್ತೋ ಇಲ್ಲವೋ, ಆಗಲೇ ಗಿಫ್ಟ್ ಕೇಳಲು ಶುರು ಮಾಡಿಬಿಡ್ತೀರೀ!'' ಎನ್ನುವುದೇ?

 

ಕಿರಣ್‌ ಬಹಳ ಹೊತ್ತಿನಿಂದ ಫೇಸ್‌ಬುಕ್‌ನಲ್ಲಿ ಮುಳುಗಿಹೋಗಿದ್ದ. ಅಮ್ಮ ಹಲವಾರು ಸಲ ಅವನನ್ನು ಊಟಕ್ಕೆ ಕರೆದಿದ್ದರು, ``ಕಿರಣ್‌, ಬೇಗ ಬಂದು ಊಟ ಮಾಡು....'' ಆದರೆ ಅವನು ಕಿವಿಗೊಟ್ಟಿದ್ದರೆ ತಾನೇ?

ನಂತರ ಅವನ ತಂದೆ ಮೊಬೈಲ್ ತೆಗೆದುಕೊಂಡು ಆನ್‌ ಲೈನ್‌ ಚ್ಯಾಟ್‌ ಮಾಡಿದರು, ``ಊಟ ಆರಿ ಅಕ್ಷತೆ ಆಗಿದೆ. ಕೆಳಗಿಳಿದು ಬರ್ತೀಯಾ ಅಥವಾ ಮೇಲಕ್ಕೆ ಕಳಿಸಬೇಕಾ?''

ಕಿರಣ್‌ ತಕ್ಷಣ ಚ್ಯಾಟಿಂಗ್‌ನಲ್ಲೇ ಉತ್ತರಿಸಿದ, ``ಇಲ್ಲಿಗೇ ಕಳಿಸಿ.... ಇನ್ನೂ ಹಲವಾರು ಫ್ರೆಂಡ್ಸ್ ಜೊತೆ ಆನ್‌ ಲೈನ್‌ ಚ್ಯಾಟಿಂಗ್ ನಡೀತಿದೆ.''

 

ಹಿಂದೆ ತನ್ನನ್ನು ಓಟದ ಸ್ಪರ್ಧೆಯಲ್ಲಿ ಸೋಲಿಸಿದ್ದ ಆಮೆಯ ಮೇಲೆ ಕೋಪ ಉಕ್ಕಿ ಬಂದು ಮೊಲರಾಯ ಒಂದು ಬಾಂಬ್‌ ಹಿಡಿದು ಮೃಗಾಲಯಕ್ಕೆ ನುಗ್ಗಿದ.

``ಎಲ್ಲರೂ ಸರಿಯಾಗಿ ಕೇಳಿಸಿಕೊಳ್ಳಿ! ಇನ್ನು ಒಂದೇ ಒಂದು ನಿಮಿಷ ಟೈಂ ಕೊಡ್ತೀನಿ, ಅಷ್ಟರಲ್ಲಿ ಎಲ್ಲರೂ ತಪ್ಪಿಸಿಕೊಳ್ಳಿ. ಇಲ್ಲದಿದ್ದರೆ ಈ ಬಾಂಬ್‌ ಸಿಡಿಸಿಬಿಡ್ತೀನಿ!''

``ಏಯ್‌ ಸ್ಟುಪಿಡ್‌, ನಾನೇ ನಿನ್ನ ಟಾರ್ಗೆಟ್‌ ಅಂತ ಗೊತ್ತು, ಎಲ್ಲರಿಗೂ ಯಾಕೆ ಟೆನ್ಶನ್‌ ಕೊಡ್ತೀಯ?'' ಆಮೆ ಗುಡುಗಿದ.

 

ರಾಜು ತನ್ನ ಗರ್ಲ್ ಫ್ರೆಂಡ್‌ ಕಾಂತಿಯ ಜೊತೆ ವೇಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮೆಜೆಸ್ಟಿಕ್‌ನಲ್ಲಿ ಘೋರವಾದ ಅಪಘಾತವಾಯಿತು. ತಕ್ಷಣ ಅವನು ಆ್ಯಂಬುಲೆನ್ಸ್ ಗೆ ಫೋನ್‌ ಮಾಡಿದ. ``ನನ್ನ ಗರ್ಲ್ ಫ್ರೆಂಡ್‌ ಕಾಂತಿಗೆ ಆ್ಯಕ್ಸಿಡೆಂಟ್‌ ಆಗಿದೆ. ಅವಳಿಗೆ ಪ್ರಜ್ಞೆ ಇಲ್ಲ. ನಾವೀಗ ಮೆಜಿಸ್ಟಿಕ್‌ನ ಉಪ್ಪಾರಪೇಟೆ ಪೊಲೀಸ್‌ ಸ್ಟೇಷನ್‌ ಬಳಿ ಇದ್ದೇವೆ. ಪ್ಲೀಸ್‌ ಬೇಗ ಇಲ್ಲಿಗೆ ಬನ್ನಿ.''

ಆ್ಯಂಬುಲೆನ್ಸ್ ಗೆ ಸಂಬಂಧಿಸಿದ ಸಿಬ್ಬಂದಿ ಕೇಳಿದರು, ``ಪ್ಲೀಸ್‌, ಮೆಜೆಸ್ಟಿಕ್‌ನ ಸ್ಪೆಲ್ಲಿಂಗ್‌ ಹೇಳಿ. ಇಲ್ಲಿ ಸಿಸ್ಟಮ್ ಗೆ ಫೀಡ್ ಮಾಡಬೇಕು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ