ರಾಯರು : ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಮಿತಭಾಷಿ!

ಗುಂಡ : ನಾನೂ ಅಷ್ಟೆ. ನನಗೂ ಮದುವೆಯಾಗಿದೆ!

ನವ ದಂಪತಿಗಳು ಮಧುಚಂದ್ರಕ್ಕೆಂದು ಕಾಶ್ಮೀರಕ್ಕೆ ಹೊರಟಿದ್ದರು. ಆಗ ಪುಟ್ನಂಜಿಗೆ ಒಂದು ಸಂದೇಹ ಬಂತು.

ಪುಟ್ನಂಜಿ : ಅಲ್ಲ.... ಅಕಸ್ಮಾತ್‌ ಅಲ್ಲಿ ನಾನೇನಾದರೂ ಕಳೆದುಹೋದರೆ ಏನು ಮಾಡ್ತೀರಿ....?

ಗುಂಡ : ತಕ್ಷಣ ಎಲ್ಲಾ ಕಡೆ ಕಾಣೆಯಾಗಿದ್ದಾರೆ ಅಂತ ಪೋಸ್ಟರ್‌ ಹಾಕಿಸ್ತೀನಿ.

ಪುಟ್ನಂಜಿ : ಹೌದೇ....? ಅದರಲ್ಲಿ ಏನಿರುತ್ತೆ...?

ಗುಂಡ : ಇವರು ಕಾಣೆಯಾಗಿದ್ದಾರೆ. ಇವರನ್ನು ಗುರುತಿಸಿದರೆ ಯಾರೂ ಕರೆತರಬೇಡಿ ಅಂತ!

ಯಜಮಾನಿ : ಸರೋಜಾ, ಕರೆಂಟ್‌ ಬರೋವರೆಗೂ ಹಾಗೇ ಅಲುಗಾಡದೆ ನಿಂತಿರು. ಹುಷಾರು ಕತ್ತಲೆ ಜಾರಿ ಬಿದ್ದೀಯಾ?

ಕೆಲಸದಾಕೆ : ನೀವೇನೂ ಚಿಂತೆ ಮಾಡಬೇಡಿ ಅಮ್ಮಾವರೇ.... ಯಜಮಾನರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.

ಟೀಚರ್‌ : ಸಾಯುವಾಗ ಬಾಯಲ್ಲಿ ಏನು ಹಾಕಬೇಕು?

ವಿದ್ಯಾರ್ಥಿ : ಬಿರ್ಲಾ ಸಿಮೆಂಟ್‌

ಟೀಚರ್‌ : ಯಾಕೆ?

ವಿದ್ಯಾರ್ಥಿ : ಅದರಲ್ಲಿ ಜೀವ ಇದೆ.

ರಂಗಮ್ಮ : ಇಲ್ಲಿ ಶಂಕರಾನಂದ ಸ್ವಾಮಿ ಯಾರು?

ಒಬ್ಬ : ನಾನೇ ತಾಯಿ! ಸೆಕೆಯನ್ನು ತಾಳಾರದೆ ತಲೆಗೆ ಹಾಕಿಸಿಕೊಂಡಿದ್ದ ವಿಗ್‌, ಅಂಟಿಸಿಕೊಂಡಿದ್ದ ಗಡ್ಡನ್ನು ಬಿಚ್ಚಿಟ್ಟಿದ್ದೇನೆ ಅಷ್ಟೆ.

ಹೆಂಡತಿ (ಫೋನ್‌ನಲ್ಲಿ) : ರೀ ನೀವು ಕೆಲಸದ ಮೇಲೆ ಅಂತ ಹೋಗಿ ಹದಿನೈದು ದಿವಸ ಆಯಿತು. ನಿಮ್ಮನ್ನು ಕಾಣದೆ ಅರ್ಧ ಸತ್ತಿದ್ದೇನೆ. ಯಾವಾಗ ಬರುತ್ತೀರಿ?

ಗುಂಡ : ಇನ್ನೂ ಹದಿನೈದು ದಿನ ಬಿಟ್ಟು.

ಭಿಕ್ಷುಕ : ಏನ್ಸಾರ್‌ ಊರಿಗೆ ಹೊರಟಿದ್ದೀರಾ?

ಯಜಮಾನ : ಹೌದಯ್ಯ

ಭಿಕ್ಷುಕ : ಆದಷ್ಟು ಬೇಗ ಬಂದು ಬಿಡಿ ಸಾರ್‌.

ಯಜಮಾನ : ಯಾಕಯ್ಯಾ...?

ಭಿಕ್ಷುಕ : ಅಮ್ಮಾವ್ರ ಕೈ ಅಡುಗೆ ಚೆನ್ನಾಗಿರುವುದಿಲ್ಲ ಅದಕ್ಕೆ.....

ರಾಧಾ : ಲೇ ಸುಮಾ ಎಷ್ಟು ವರ್ಷ ಆಯ್ತು ನಿನ್ನನ್ನು ನೋಡಿ! ಅಂದಹಾಗೆ ಈಗ ನಿನ್ನ ವಯಸ್ಸೆಷ್ಟು?

ಸುಮಾ : ಹದಿನೆಂಟು.... ನಿನ್ನದು...?

ರಾಧಾ : ಏನು ಹದಿನೆಂಟು ಅಂದೆಯಾ....? ಆ ಲೆಕ್ಕಾಚಾರದಲ್ಲಿ ನೋಡಿದರೆ ನಾನಿನ್ನೂ ಹುಟ್ಟೇ ಇಲ್ಲ.....

ಹೆಂಡತಿ : ರೀ ಟಿ.ವಿ.ಯಲ್ಲಿ ಒಂದು ಆಶ್ಚರ್ಯಕರ ಸುದ್ದಿ ಹೇಳಿದರು. ಹಾವು ಮುಂಗುಸಿ ಒಟ್ಟಿಗೇ ಜೀವಿಸುತ್ತಿವೆಯಂತೆ.

ಗುಂಡ : ಅದೇನು ಮಹಾ! ಈಗ ನಾನು ನೀನು ಒಟ್ಟಿಗೆ ಜೀವಿಸುತ್ತಿಲ್ಲವೇ....?

ಗುಂಡ : ಏನೇ ಎಲ್ಲಾ ಬಿಟ್ಟು ನಿನ್ನ ನಾಲಿಗೆಗೆ ಯಾಕೆ ಅರಿಶಿನ ಕುಂಕುಮ ಹಚ್ಚಿಕೊಳ್ಳುತ್ತಿದ್ದೀಯಾ.....?

ಹೆಂಡತಿ : ಇಂದು ಆಯುಧ ಪೂಜೆ ಅಲ್ಲಾ....? ಅದಕ್ಕೆ.

ನರ್ಸ್‌ : ಡಾಕ್ಟರ್‌ ಡಾಕ್ಟರ್‌.....! ಆಪರೇಷನ್‌ ಥಿಯೇಟರ್‌ನಿಂದ ಪೇಶೆಂಟ್‌ ಓಡಿ ಹೋಗ್ತಾ ಇದಾನೆ....

ವೈದ್ಯ : ಹೋಗಲಿ ಬಿಡು ಬದುಕಿಕೊಳ್ಳಲಿ....!

ಗುಂಡ : ಸಾರ್‌ ನನ್ನ ಹೆಂಡತಿ ಕಳೆದುಹೋಗಿದ್ದಾಳೆ. ದಯವಿಟ್ಟು ಹುಡುಕಿ ಕೊಡಿ.

ಪೋಸ್ಟ್ ಮಾಸ್ಟರ್‌ : ರೀ ಸ್ವಾಮಿ! ಇದು ಪೋಸ್ಟ್ ಆಫೀಸ್. ಪೊಲೀಸ್‌ ಸ್ಟೇಷನ್‌ಗೆ ಹೋಗಿ ಕಂಪ್ಲೇಂಟ್‌ ಕೊಡಿ.

ಗುಂಡ : ನನಗಾಗುತ್ತಿರುವ ಸಂತೋಷಕ್ಕೆ ನಾನೆಲ್ಲಿ ಹೋಗುತ್ತಿದ್ದೇನೆ ಎಂಬುದೇ ನನಗೆ ತಿಳಿಯುತ್ತಿಲ್ಲ.

ಪಂಕಜಾ : ನನ್ನ ಯಜಮಾನರು ನಮ್ಮ ಮದುವೆಯಾದ ಆರು ತಿಂಗಳೊಳಗೇ ತೀರಿಕೊಂಡುಬಿಟ್ಟರು.

ಗುಂಡ : ಅವರು ನಿಜವಾಗಿಯೂ ಪುಣ್ಯವಂತರು, ಹೆಚ್ಚು ಕಾಲ ನರಳಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ