`ಆವಾಜ್‌' ಫೌಂಡೇಶನ್‌ನ ಸಂಸ್ಥಾಪಕ, ಪರಿಸರವಾದಿ ಸುಮೈರಾ ಅಬ್ದುಲ್ಲಾ ಅವರು ಭಾರತದಲ್ಲಿ  ಮೊದಲ ಬಾರಿಗೆ ಶಬ್ದಮಾಲಿನ್ಯ ಕುರಿತಾದ ಅಂಕಿಅಂಶಗಳನ್ನು ಸಂಗ್ರಹಿಸಿದ್ದಾರೆ. ಆ ಅಂಕಿಅಂಶಗಳನ್ನು ಅವರು ಸರ್ಕಾರಕ್ಕೆ, ಪೊಲೀಸರಿಗೆ, ನ್ಯಾಯಾಲಯಕ್ಕೆ ಅಷ್ಟೇ ಏಕೆ ಜನಸಾಮಾನ್ಯರ ತನಕ ತಲುಪಿಸಿದ್ದಾರೆ. ಶಬ್ದಮಾಲಿನ್ಯದಿಂದ (ಪಟಾಕಿಗಳ ಸದ್ದು, ಟ್ರಾಫಿಕ್‌ನ ಗದ್ದಲ, ವಿಮಾನ, ರೈಲುಗಳ ಓಡಾಟದ ಸದ್ದು, ಕೈಗಾರಿಕಾ ಉಪಕರಣ ಅಥವಾ ಆ ಸ್ಥಳದಲ್ಲಿ ಉಂಟಾಗುವ ಸಪ್ಪಳ) ಮನುಷ್ಯನ ಜನಜೀವನದ ಮೇಲೆ ಅದೆಷ್ಟು ಹಾನಿಕಾರಕ ಎಂಬುದನ್ನು ಅವರು ಮೊದಲ ಬಾರಿಗೆ ಬಹಿರಂಗಪಡಿಸಿದರು. ಇಂತಹ ಸದ್ದುಗದ್ದಲ ನಿಯಂತ್ರಿಸಲು ನಿಯಮ ಕಾನೂನುಗಳೇನೋ ರಚಿಸಲ್ಪಟ್ಟಿವೆ. ಆದರೆ ಅವು ಶಬ್ದ ಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿಲ್ಲ. ಅದರಲ್ಲೂ ಧಾರ್ಮಿಕ ಉತ್ಸವಗಳಲ್ಲಿ ಹಾವಳಿ ಮಾಡುವ ಮೈಕಾಸುರನನ್ನು ನಿಯಂತ್ರಿಸಲು ಆಗುತ್ತಿಲ್ಲ. ಈ ಬಗೆಯ ಅಬ್ಬರದ ಧ್ವನಿಯ ಮುಂದೆ ಸಂಬಂಧಪಟ್ಟ ಅಧಿಕಾರಿ ಕಿವಿ ಮುಚ್ಚಿಕೊಂಡಿರುವುದರಲ್ಲಿ ತನ್ನ ಹಿತ ಅಡಗಿದೆ ಎಂದು ಭಾವಿಸುತ್ತಾನೆ.

ಧಾರ್ಮಿಕ ಸ್ಥಳಗಳನ್ನು `ನಿಶ್ಶಬ್ದ ಪ್ರದೇಶ' ಅಥವಾ `ಸೈಲೈಂಟ್‌ ಝೋನ್‌' ಎಂದು ಭಾವಿಸಲಾಗುತ್ತದೆ. ಆದರೆ ಬಹಳಷ್ಟು ಧಾರ್ಮಿಕ ಕೇಂದ್ರಗಳು ಲೌಡ್‌ ಸ್ಪೀಕರ್‌ನ್ನು ಬೇಕಾಬಿಟ್ಟಿಯಾಗಿ ಅದರಲ್ಲೂ ವಿಶೇಷವಾಗಿ ಹಬ್ಬ, ಜಾತ್ರೆಯ ಸಂದರ್ಭದಲ್ಲಿ ಹಾಕುವುದರ ಮೂಲಕ ಜನರಿಗೆ ಕಿವುಡುತನ ತರುತ್ತಿವೆ. ದೆಹಲಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯಗಳು ಈ ಕುರಿತು ಮಹತ್ವದ ತೀರ್ಪು ನೀಡಿದ್ದವು. ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸಲಾಗುವ ಸ್ಪೀಕರ್‌ಗಳ ಮುಖಭಾಗ ಧಾರ್ಮಿಕ ಕೇಂದ್ರಗಳ ಕಡೆಗೆ ಇರಬೇಕೇ ವಿನಾ ನಾಗರಿಕರು ವಾಸಿಸುವ ಕಡೆ ಇರಬಾರದು ಎನ್ನುವುದೇ ಆ ತೀರ್ಪು.

ಎಲ್ಲ ಪ್ರಕಾರದ ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಲಾಗುವ ಲೌಡ್‌ ಸ್ಪೀಕರ್‌ಗಳ ಬಗ್ಗೆ ಮದ್ರಾಸ್‌ ಹೈಕೋರ್ಟ್‌ ಹೀಗೆ ಹೇಳಿತ್ತು, ``ಎಲ್ಲ ಧರ್ಮಗಳ ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಲಾಗುವ ಲೌಡ್‌ ಸ್ಪೀಕರ್‌ಗಳ ಅಬ್ಬರ ನೋಡಿದರೆ, ಸದ್ದು ಗದ್ದಲವಿದ್ದರೆ ಮಾತ್ರ ದೇವರ ಆಶೀರ್ವಾದ ಸಿಗುತ್ತದೆ ಅನಿಸುತ್ತವೆ. ವಿದ್ಯುತ್‌ ಇಲ್ಲದ ಕಾಲದಿಂದಲೇ ಪ್ರತಿಯೊಂದು ಧರ್ಮದಲ್ಲಿ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿವೆ. ಆದರೂ ಈ ಅಬ್ಬರ ಏಕೆ?''

ಕಾನೂನಿನ ದೃಷ್ಟಿಯಲ್ಲಿ

ಭಾರತದ ಸಂವಿಧಾನದ ಅನುಚ್ಛೇದ 21ರ ಪ್ರಕಾರ, ಈ ದೇಶದ ನಾಗರಿಕರಿಗೆ ಸಭ್ಯ ವಾತಾವರಣ, ಶಾಂತಿಯುತ ಜೀವನ, ರಾತ್ರಿಯ ನೆಮ್ಮದಿಯ ನಿದ್ರೆ ಹಾಗೂ ನಿರಾಳತೆಯ ಹಕ್ಕು ಅಂದರೆ ಜೀವನ ನಡೆಸುವ ಸಂಪೂರ್ಣ ಹಕ್ಕು ಇದೆ. ಶಬ್ದಮಾಲಿನ್ಯ ಕಾನೂನಿನ ಪ್ರಕಾರ, ಹಗಲು ಮತ್ತು ರಾತ್ರಿ ನಿರ್ಧರಿಸಲ್ಪಟ್ಟ ಮಿತಿಯಲ್ಲಿ ಧ್ವನಿ ಹೊರಹೊಮ್ಮಿಸಬಹುದು. ಹಗಲು 50 ಡಿ.ಬಿ. ಮತ್ತು ರಾತ್ರಿ 40 ಡಿಬಿ ಮೀರಬಾರದು. ಜಿಲ್ಲಾ ಮ್ಯಾಜಿಸ್ಟ್ರೇಟರು, ಪೊಲೀಸ್‌ ಆಯುಕ್ತರು ಮಾತ್ರ ಈ ಕಾನೂನನ್ನು ಜಾರಿಗೆ ತರಬಹುದು.

ಕೇರಳದ ಉಚ್ಚ ನ್ಯಾಯಾಲಯ ನೀಡಿದ ಆದೇಶದ ಪ್ರಕಾರ, ಧಾರ್ಮಿಕ ಸ್ಥಳಗಳಲ್ಲಿ ಭಜನೆ ಕೀರ್ತನೆಗಳ ಸದ್ದು ಶಬ್ದಮಾಲಿನ್ಯ ಮಾನದಂಡದ ಪ್ರಕಾರವೇ ಇರಬೇಕು. ಹಗಲು ಇರಬಹುದು, ರಾತ್ರಿಯೇ ಆಗಿರಬಹುದು ಶಬ್ದ ಮಾಲಿನ್ಯದ ನಿಯಮಗಳನ್ನು ಪಾಲಿಸಲೇಬೇಕು. ಮದ್ರಾಸ್‌ ಉಚ್ಚ ನ್ಯಾಯಾಲಯದಲ್ಲಿ ದೇವಾಲಯವೊಂದರ ಲೌಡ್‌ ಸ್ಪೀಕರ್‌ ಪ್ರಕರಣ ಬಂದಿತ್ತು. ಕೋರ್ಟ್‌ ತನ್ನ ಆದೇಶದಲ್ಲಿ ಹೀಗೆ ಹೇಳಿತು, ಪ್ರತಿಯೊಂದು ಕಾನೂನುಗಳು ಈ ದೇಶದ ಸಂಸತ್ತಿನಲ್ಲಿ ಪಾಸಾಗಿ ಬಂದಿರುತ್ತವೆ. ಅವನ್ನು ಅಧಿಕಾರಿಗಳು ಪಾಲಿಸುವುದು ಅನಿವಾರ್ಯ. ಸಾಮಾಜಿಕ ಕಾರ್ಯಕರ್ತ ಕುಮಾರ್‌ ವೇಲು ಅವರ ರಿಟ್‌ ಮೇರೆಗೆ ನ್ಯಾಯಾಧೀಶ ಸಂಜಯ್‌ ಕಿಶನ್‌ ಕೌರ್‌ ಹಾಗೂ ನ್ಯಾಯಾಧೀಶ ಎಂ.ಎಂ. ಸುಂದರೇಶ್‌ ಲೌಡ್‌ ಸ್ಪೀಕರ್‌ ಮೂಲಕ ಶಬ್ದಮಾಲಿನ್ಯದ ಕಾನೂನನ್ನು ಉಲ್ಲಂಘಿಸುವ ಧಾರ್ಮಿಕ ಸ್ಥಳಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ