ಜಾಗೀರ್ದಾರ್*
ಬೆಳಕಿನ ಹಬ್ಬ ದೀಪಾವಳಿಯ ಹೊನ್ನ ಕಿರಣಗಳು ಬಣ್ಣ ಬಣ್ಣದ ಚಿತ್ತಾರಗಳನ್ನು ಎರಕ ಹೊಯ್ಯುವ ಹೊತ್ತಿನಲ್ಲಿ, ಚಿತ್ರ ರಸಿಕರಿಗಾಗಿ ಮತ್ತೊಂದು ಸಂತಸದ ಸುದ್ದಿ “ಆರ್.ವಿ ಮಲ್ಟಿ ಸಿನಿಸ್ ಕ್ರಿಯೇಟರ್ಸ್” ಕಡೆಯಿಂದ ಹೊರಬಿದ್ದಿದ್ದೆ. “ರಾಮಾ ರಾಮಾ ರೇ…” ಖ್ಯಾತಿಯ ನಿರ್ದೇಶಕ “ಡಿ. ಸತ್ಯ ಪ್ರಕಾಶ್” ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಹೊಸ ಚಿತ್ರದ ನಿರ್ದೇಶನದ ಕಾರ್ಯ ಯೋಜನೆಯೊಂದಿಗೆ ಕಣಕಿಳಿದಿದ್ದಾರೆ. ಈ ಚಿತ್ರಕ್ಕಾಗಿ ಅವರು ನಾಯಕ ನಟ “ಶಿವ 143 ಖ್ಯಾತಿಯ ಧೀರೆನ್” ಅವರ ಜೊತೆ ಕೈ ಜೋಡಿಸಿದ್ದಾರೆ.
ಸದಾ ಹೊಸತನ, ವಿಷೇಶ ಪ್ರಯೋಗಾತ್ಮಕ ಮತ್ತು ಸಂದೇಶಾತ್ಮಕ ಕಥೆಗಳಿಗೆ ತೊಡಗಿಸಿಕೊಂಡು ಬಂದಿರುವ ನಿರ್ದೇಶಕ “ಡಿ. ಸತ್ಯ ಪ್ರಕಾಶ್” ಇಲ್ಲೂ ಕುತೂಹಲ ಹೆಚ್ಚಿಸುವ ಕ್ರಿಯಾತ್ಮಕ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಖಂಡಿತ ನಿರೀಕ್ಷಿಸ ಬಹುದು.
“ಕರುನಾಡ ಚಕ್ರವರ್ತಿ ಡಾII. ಶಿವರಾಜ್ ಕುಮಾರ್” ಅವರು ಚಿತ್ರದ ಕಥೆ ಕೇಳಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ತಂಡಕ್ಕೆ ವಿಶೇಷ ಪ್ರೋತ್ಸಾಹ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಈವರೆಗೆ “ಡಿ. ಸತ್ಯ ಪ್ರಕಾಶ್” ನಿರ್ದೇಶನದ ತಮ್ಮ ನಾಲ್ಕು ಚಿತ್ರಗಳಲ್ಲಿ “ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು” ಮುಡಿಗೇರಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸ ಬಹುದಾಗಿದೆ. ಪ್ರಸ್ತುತ ಹೊಸ ಚಿತ್ರದ ಹೆಚ್ಚುವರಿ ವಿವರಗಳನ್ನು ಅತಿ ಸಮೀಪದಲ್ಲೆ ನೀಡುವುದಾಗಿ “ಆರ್.ವಿ ಮಲ್ಟಿ ಸಿನಿಸ್ ಕ್ರಿಯೇಟರ್ಸ್” ಸಂಸ್ಥೆ ಹೇಳಿಕೊಂಡಿದೆ.





