ಉರಿದೆದ್ದ ದೇಶ... ಉಳಿದವರಾರು?
ಬುಡಕಟ್ಟು ಜಾತಿ ಮತ್ತು ಜನಾಂಗದ ಕಾಯ್ದೆಯಲ್ಲಿ ದೂರು ನೀಡಿದಾಗ ಮೇಲ್ಜಾತಿ ವ್ಯಕ್ತಿಯ ಬಂಧನದ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ಬಂಧ ಹೇರಿದ್ದನ್ನು ಖಂಡಿಸಿ ದಲಿತರು ರೊಚ್ಚಿಗೆದ್ದಿದ್ದರು. ಏಪ್ರಿಲ್ 2 ರಂದು ಭಾರತ ಬಂದ್ ಸಂದರ್ಭದಲ್ಲಿ 10 ಜನರಷ್ಟೇ ಸಾಯಲಿಲ್ಲ, ಅಲ್ಲಲ್ಲಿ ಬೆಂಕಿ ಹಚ್ಚುವ ಘಟನೆಗಳು ನಡೆದವು. ಅದೆಷ್ಟೋ ನಗರಗಳು ಸ್ತಬ್ಧವಾದವು. ಕೆಲವು ನಗರಗಳಲ್ಲಂತೂ ಅನೇಕ ದಿನಗಳ ಕಾಲ ಪ್ರತಿಭಟನೆಗಳು ಮುಂದುವರಿದವು.
ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ತನ್ನದೇ ಗೆಲುವು ಎಂದುಕೊಂಡು ಹೊರಟಿತ್ತು. ಪ್ರತಿಭಟನೆಗಳು ಶುರುವಾಗುತ್ತಿದ್ದಂತೆ ಅದು ಇಕ್ಕಟ್ಟಿಗೆ ಸಿಲುಕಿತು, ದಲಿತರಲ್ಲಿ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು ಎಂದು ಗಲಿಬಿಲಿಗೊಂಡಿತು. ಅವರ ಇಬ್ಬರು ಮೂವರು ಮುಖಂಡರು ಕೆಲವು ದಿನ ಕಣ್ಣಿಗೇ ಬೀಳಲಿಲ್ಲ.
ಸರ್ಕಾರ ಸುಪ್ರಿಂ ಕೋರ್ಟ್‌ಗೆ ಧಾವಿಸಿ ತನ್ನನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿತು. ಆದರೆ ಸುಪ್ರೀಂ ಕೋರ್ಟ್ ತನ್ನ ನಿರ್ಧಾರ ಸ್ಪಷ್ಟಪಡಿಸುತ್ತ, ಬಂಧನಕ್ಕೆ ಯಾವುದೇ ಆಧಾರ ಇರದೇ ಇದ್ದರೆ ಅದನ್ನು ಕೋರ್ಟ್ ಒಪ್ಪುವುದಿಲ್ಲ. ಹೀಗಾಗಿ ತನ್ನ ತೀರ್ಪಿಗೆ ನಿರ್ಬಂಧ ಹೇರಲು ಒಪ್ಪಲಿಲ್ಲ.
ವಾಸ್ತವದಲ್ಲಿ ಇದು ರಾಜಕೀಯ ವಿಷಯವಲ್ಲ, ಧಾರ್ಮಿಕ ವಿಷಯ. ಅಸ್ಪೃಶ್ಯರ ಮತ ರಾಜಕೀಯದ್ದಲ್ಲ, ಹಿಂದೂ ಧರ್ಮದ ಉಡುಗೊರೆ. ಯಾವುದನ್ನೂ ಪರಿಶೀಲಿಸದೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟಿರುವವರು ಆಸ್ಪೃಶ್ಯತೆಯನ್ನು ತೊರೆಯಲು ತಯಾರಿಲ್ಲ. ಅವರ ಧರ್ಮಗುರುಗಳು ಕೂಡ ಇದನ್ನು ಧರ್ಮ ಮೂಲದ ಪಾಪಪುಣ್ಯ ಅಥವಾ ಪ್ರಾಯಶ್ಚಿತ್ತ ಎಂಬ ಸಂಕೇತ ನೀಡುತ್ತಾರೆ. ಕೆಲವು ಉದಾರ ಹೃದಯದವರು ಅದನ್ನು ಬಿಡಬೇಕೆಂದರೂ, ಅವರ ಮನೆಯ ಮಹಿಳೆಯರು ಧರ್ಮಮೂಲದ ಈ ಭೇದಭಾವ ಕಡೆಗಣಿಸಬಾರದೆಂದು ಅವರ ಮೇಲೆ ಒತ್ತಡ ತರುತ್ತಾರೆ.
ಭಾರತೀಯ ಜನತಾ ಪಾರ್ಟಿ ಗೆದ್ದಿರುವುದೇ ಈ ಕಂದಾಚಾರಗಳನ್ನು ವಾಪಸ್ ತರಲು. ಅದು ಮತ ಬ್ಯಾಂಕಿನ ದೇಣಿಗೆ.
ವಾಸ್ತವದಲ್ಲಿ ಜಾತಿ ಆಧಾರಿತ ಭೇದಭಾವ ರಾಜಕೀಯ, ಆಡಳಿತ ಶಕ್ತಿ, ವ್ಯಾಪಾರ, ಸಾಮಾಜಿಕ ಸಂಘಟನೆಗಿಂತ ಹೆಚ್ಚಾಗಿ ಮಹಿಳೆಯರನ್ನು ಪ್ರಭಾವಿತಗೊಳಿಸುವುದಾಗಿದೆ. ವಿಚಿತ್ರ ಹಾಗೂ ಖೇದದ ಸಂಗತಿಯೇನೆಂದರೆ, ಮಹಿಳೆಯರಿಗೆ ಈ ವಿಷಯ ಅರಿವಿಗೇ ಬರುವುದಿಲ್ಲ. ಮೇಲ್ವರ್ಗದ ಮಹಿಳೆಯರು ಕೆಳಜಾತಿಯ ಮಹಿಳೆಯರ ಮೇಲೆ ನಡೆಸುವ ಜಾತಿ ಆಧಾರಿತ ಭೇದಭಾವ ಅಸಹನೀಯವಾಗಿರುತ್ತದೆ. ಏಕೆಂದರೆ ಇದೇ ರೀತಿಯ ಅನ್ಯಾಯ ಹಾಗೂ ಅತ್ಯಾಚಾರವನ್ನು ಆಕೆಯ ಮನೆಯ ಪುರುಷರು ಹಾಗೂ ಮನೆಯ ಇತರರು ಕೂಡ ನಡೆಸುತ್ತಾರೆ.
ಮೇಲ್ಜಾತಿಯ ಹೆಂಗಸರು ತಮ್ಮ ಮಕ್ಕಳನ್ನು ಕೆಳಜಾತಿಯ ಮಕ್ಕಳ ಜೊತೆ ಆಟ ಆಡಲು ಸಹ ಕಳಿಸುವುದಿಲ್ಲ. ಅಸ್ಪೃಶ್ಯತೆಯ ಭೂತ ಅವರ ತಲೆಯ ಮೇಲೆ ಹೇಗೆ ಸವಾರಿ ಮಾಡುತ್ತಿದೆಯೆಂದರೆ, ದಲಿತರಿಂದ ಕೆಲವು ಸೇವೆಗಳನ್ನು ಸ್ವೀಕರಿಸಲು ಕೂಡ ಅವರು ಸಿದ್ಧರಿಲ್ಲ.
ಮನೆಗೆಲಸದವಳನ್ನು ನೇಮಿಸಿಕೊಳ್ಳುವ ಮುಂಚೆ ಆಕೆ ದಲಿತೆ ಅಲ್ಲ ತಾನೆ ಎಂದು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಹೀಗೆ ಮಾಡುವುದರ ಮೂಲಕ ಸಮರ್ಥವಾಗಿ ಕೆಲಸ ಮಾಡಲು ಸಿದ್ಧರಿರುವ ಕೋಟ್ಯಂತರ ಮಹಿಳೆಯರಿಗೆ ಅನ್ಯಾಯ ಎಸಗುತ್ತಿದ್ದಾರೆ.
20 ಕೋಟಿಯಷ್ಟು ದಲಿತರನ್ನು ಹಿಮ್ಮೆಟ್ಟಿ ಜೀವನ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಮೀಸಲಾತಿಯ ಕಾರಣದಿಂದ ಉನ್ನತ ಹುದ್ದೆಗೇರಿ ತಮ್ಮ ಪರಿಶ್ರಮದ ಬಲದಿಂದ, ತಿಳಿವಳಿಕೆಯ ಬಲದಿಂದ ಅವರು ಸಮಾನತೆ ಬಯಸಬಹುದು.