ಪುಟ್ಟಿ : ಮಾಮ, ಮಾಮ..... ಮುಂದೆ ನಾನು ದೊಡ್ಡವಳಾದ ಮೇಲೆ ನಿಮ್ಮ ಮಗನ ಜೊತೆ ಮದುವೆ ಮಾಡಿಸ್ತೀರಾ?

ಅಂಗಡಿಯನು : ಅಷ್ಟೇ ತಾನೇ? ಹಾಗೆ ಆಗಲಿ ಬಿಡಮ್ಮ.

ಪುಟ್ಟಿ : ಹಾಗಿದ್ದರೆ ನಿಮ್ಮ ಭಾವಿ ಸೊಸೆಗೆ ಈಗ 2 ಬಾರ್‌ ಚಾಕಲೇಟ್‌ ಕೊಡಿ ಮತ್ತೆ...

ಮುಂಜಾನೆ ಅಡುಗೆಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದ ಹೆಂಡತಿ ಗಿರಿಜಾಳಿಗೆ ಮಹೇಶ ಕೂಗಿ ಹೇಳಿದ, `ನಾನೊಂದು ಮದುವೆಗೆ ಹೋಗ್ತಿದ್ದೀನಿ.... ಬರೋದು ಸ್ವಲ್ಪ ತಡವಾಗಬಹುದು.'

`ಆಗಲಿ, ತುಂಬಾ ಲೇಟ್‌ ಮಾಡಬೇಡಿ,' ಎಂದು ಒಳಗಿನಿಂದ ಉತ್ತರ ಬಂತು.

ಸಂಜೆ ಹೊತ್ತಿಗೆ ಮಹರಾಯ ಮದುವೆ ಮುಗಿಸಿಕೊಂಡು ಅಂತೂ ಮನೆಗೆ ಬಂದು ಸೇರಿದ. ಅವನನ್ನು ಕಂಡಿದ್ದೇ ಅವಳು ಹೌಹಾರಿದಳು. ಕಾರಣ? ಅವನು ಎರಡನೇ ಮದುವೆ ಮುಗಿಸಿಕೊಂಡು ಹೊಸ ಹೆಂಡತಿ ಜೊತೆ ಬಾಸಿಂಗ ಹಾರದ ಸಮೇತ ಹಾಜರಾಗಿದ್ದ!

ಎಂದಿನಂತೆ ಆ ದಿನ ಗಂಡ ಹೆಂಡಿರಲ್ಲಿ ಜಗಳ ನಡೆದಿತ್ತು. ತನ್ನನ್ನು ಬೈದ ಹೆಂಡತಿಯ ಮೇಲೆ ಸಿಡುಕುತ್ತಾ ಗಂಡ ಕೂಗಾಡಿದ.

ಗಂಡ : ನಾನು ಹೇಳ್ತೀನಿ... ಈಗಷ್ಟೇ ನೀನಾಡಿದ ಎಲ್ಲಾ ಮಾತುಗಳನ್ನೂ ತಕ್ಷಣ ವಾಪಸ್‌ ತೆಗೆದುಕೊ.

ಹೆಂಡತಿ : ಇಲ್ಲ.... ತೆಗೆದುಕೊಳ್ಳೋಲ್ಲ.

ಗಂಡ : ನೋಡು, ಕೊನೇ ಸಲ ಹೇಳ್ತಿದ್ದೀನಿ... ನಿನ್ನ ಮಾತುಗಳನ್ನು ವಾಪಸ್ಸು ತೆಗೆದುಕೊ.... ನಾನೀಗ ನಿನಗೆ ಕೇವಲ 5 ನಿಮಿಷ ಟೈಂ ಕೊಡ್ತೀನಿ.

ಹೆಂಡತಿ : ಅದೆಲ್ಲ ಇರಲಿ.... ನಾನು 5 ನಿಮಿಷಗಳಲ್ಲಿ ಆ ಮಾತುಗಳನ್ನು ವಾಪಸ್ಸು ತೆಗೆದುಕೊಳ್ಳಲಿಲ್ಲ ಅಂದ್ರೆ?

ಗಂಡ : ಅದೇ.... ಅದನ್ನೇ ನಾನು ಕೇಳ್ತಿರೋದು, ನಿನಗೆ ಎಷ್ಟು ಟೈಂ ಬೇಕಾಗುತ್ತೆ ಅಂತ?

ಊಟದ ನಂತರ ಪತಿ ತನ್ನ ಸುಶಿಕ್ಷಿತ ಪತ್ನಿಯನ್ನು ಪ್ರಶ್ನಿಸತೊಡಗಿದ.

ಪತಿ : ಊಟ ಆಯ್ತು, ಈಗ ಇನ್ನೇನು ಮಾಡಬೇಕೂಂತಿದ್ದಿ?

ಪತ್ನಿ : ಏನೂ ಅಂಥ ವಿಶೇಷ ಕೆಲಸಗಳಿಲ್ಲ, ಒಂದಿಷ್ಟು ಪತ್ರಿಕೆ ಓದೋದು.... ಟಿ.ವಿ ನೋಡೋದು.... ಇತ್ಯಾದಿ ಇತ್ಯಾದಿ.

ಪತಿ : ಸರಿ ಬಿಡು. ನೀನು ಇತ್ಯಾದಿ ಕೆಲಸಗಳಿಗೆ ಬಂದಾಗ ಅಗತ್ಯವಾಗಿ ನನ್ನ ಶರ್ಟಿನ ಬಟನ್‌ ಸರಿಪಡಿಸಿಬಿಡು.

ರೇಖಾ : ಏನ್ರಿ, ಇಷ್ಟು ದೊಡ್ಡ ವಕೀಲರಾದರೂ ನೀವಿನ್ನೂ ಮನೆಗೆ ಫ್ರಿಜ್‌, ವಾಷಿಂಗ್‌ ಮೆಷಿನ್‌ ಕೊಡಿಸಿಲ್ಲ.

ವಕೀಲ ಪತಿ : ಸ್ವಲ್ಪ ತಾಳ್ಮೆ ಇರಲಿ. ಈಗೊಂದು ಡೈವೋರ್ಸ್‌ ಕೇಸ್‌ ಬಿಸಿ ಹಿಡಿದಿದೆ. ಅತ್ತ ಅವರ ಮನೆ ಮುರಿಯುತ್ತಿದ್ದಂತೆ, ಇತ್ತ ನಮ್ಮ ಮನೆ ತುಂಬಿಸಿಕೊಳ್ಳೋಣ. ಏನಂತೀಯ?

ನವವಿವಾಹಿತ ಜೋಡಿಯೊಂದು ಸಾಗರದಾಚೆಯ ದ್ವೀಪ ಒಂದರಲ್ಲಿ ಮಧುಚಂದ್ರಕ್ಕೆಂದು ಹೋಟೆಲ್ ತಲುಪಿತು. ಅಲ್ಲಿನ ಮ್ಯಾನೇಜರ್‌ ಮಧುಕರನ ಬಗ್ಗೆ ವಿವರಗಳನ್ನೇನೂ ಕೇಳದೆ ರೆಜಿಸ್ಟರ್‌ನಲ್ಲಿ ಎಲ್ಲಾ ಬರೆದುಕೊಂಡಿದ್ದನ್ನು ನೋಡಿ ಮಾಧವಿ ಗಂಡನ ಬಗ್ಗೆ ಸಂಭ್ರಮಿಸಿದಳು.

ಮಾಧವಿ : ಓಹೋ.... ನನ್ನ ಗಂಡ ಸಾಗರದಾಚೆಗೂ ತುಂಬಾ ಫೇಮಸ್‌ ಅನ್ಸುತ್ತೆ ಅಲ್ವಾ....? ಅವರನ್ನು ಯಾವ ವಿವರವನ್ನೂ ಕೇಳದೆ ನೀವೇ ಎಲ್ಲಾ ಎಂಟ್ರಿ ಮಾಡಿಕೊಂಡಿರಿ....

ಮ್ಯಾನೇಜರ್‌ : ಫೇಮಸ್‌ ಅಂತೇನಲ್ಲ.... ಪ್ರತಿ ಸಲ ಹನಿಮೂನ್‌ಗೆಂದು ಅವರು ಹಲವು ವರ್ಷಗಳಿಂದ ನಮ್ಮ ಹೋಟೆಲ್‌ಗೆ ಬರುತ್ತಿರುತ್ತಾರೆ. ಹಾಗಾಗಿ......

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ