`ಖಾನಾ ಖಜಾನಾ' ಕುಕರಿ ಶೋನಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅಡುಗೆಗೆ ವಿಶ್ವಮಾನ್ಯತೆ ತಂದುಕೊಟ್ಟ ಖ್ಯಾತಿ ಸೆಲೆಬ್ರಿಟಿ ಶೆಫ್ ಸಂಜೀವ್ ಕಪೂರ್‌ರದು. ಪಾಕಕಲೆಯನ್ನು ಸತತ ವಿಕಾಸಗೊಳಿಸುತ್ತಾ ಮನೆಮನೆಯ ಅಡುಗೆ ಕೋಣೆಗೂ ಕಾಲಿರಿಸಿದ್ದಾರೆ ಇನರು.
ಮೂಲತಃ ಹರಿಯಾಣಾದನರಾದ ಸಂಜೀನೇ, ದೆಹಲಿಯಲ್ಲಿ ಬೆಳೆದು ಕಲಿತರು. ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿದ ನಂತರ, ಅವರು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಹಲವು ಹೋಟೆಲ್‌ಗಳಲ್ಲಿ ಎಗ್ಝಿಕ್ಯೂಟಿವ್ ಶೆಫ್ ಆದರು. ಉತ್ಕೃಷ್ಟ ಭಾರತೀಯ ವ್ಯಂಜನಗಳನ್ನು ತಯಾರಿಸುವುದರಲ್ಲಿ ಎತ್ತಿದ ಕೈ ಎನಿಸಿದ ಸಂಜೀವ್‌ರನ್ನು ಅನೇಕ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದವು. ಇವರದೇ ಚಾನೆಲ್ `ಫುಡ್ ಫುಡ್' ಅತ್ಯಂತ ಹೆಚ್ಚಿನ ಜನಪ್ರಿಯತೆ ಗಳಿಸಿದ 24 ತಾಸುಗಳ ಕುಕರಿ ಚಾನೆಲ್ ಆಗಿದೆ.
ಸೋನಿ ಟಿ.ವಿ.ಯ `ಸಂಜೀವ್ ಕಪೂರ್ ಕೆ ಕಿಚನ್ ಖಿಲಾಡಿ' ಶೋ ಸಹ ಸಾಕಷ್ಟು ಚರ್ಚೆಯಲ್ಲಿದೆ, ಇದರಲ್ಲಿ ಇವರೇ ತೀರ್ಪುಗಾರರು.
ಸಂಜೀವ್ ಕಪೂರ್‌ರೊಂದಿಗೆ ಅಡುಗೆ ಕುರಿತು ಮಾತನಾಡುವುದೆಂದರೆ, ಕುಕರಿ ಕ್ಲಾಸೆಸ್‌ನಲ್ಲಿ ಪರಿಣಿತರಾದಂತೆಯೇ! ಆಹಾರಕ್ಕೆ ಸಂಬಂಧಿಸಿದಂತೆ ಅವರು ಅಸಂಖ್ಯಾತ ಸಲಹೆಗಳನ್ನು ನೀಡುತ್ತಿರುತ್ತಾರೆ :
ಅಡುಗೆ ತಯಾರಿಸುವಾಗ ಮನೆಮಂದಿಯ ಇಷ್ಟಾನಿಷ್ಟಗಳ ಸಂಪೂರ್ಣ ಗಮನವಿರಬೇಕು. ಹೆಲ್ದಿ ಫುಡ್ ತಯರಿಸಲು ಹೆಲ್ದಿ ಸಿದ್ಧಾಂತ ಹೊಂದಿರಬೇಕು. ಒಂದು ಕುಟುಂಬ ಎಂದ ಮೇಲೆ ಅದರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಇದ್ದದ್ದೇ. ಆದರೆ ಅಡುಗೆಯಲ್ಲಿ ಎಂದೂ ಯಾವುದನ್ನೂ `ಅತಿ' ಮಾಡಲು ಹೋಗಬೇಡಿ. ನೀವು ಏನೇ ಸೇವಿಸಿರಲಿ, ದಿನ ಅಚ್ಚುಕಟ್ಟಾಗಿ ವರ್ಕ್ ಔಟ್ ಮಾಡಿ. ರುಚಿಗೆ ಮರುಳಾಗಿ ನೀವು ತುಸು ಹೆಚ್ಚಾಗಿ ಸೇವಿಸಿದ್ದರೂ, ಈ ವ್ಯಾಯಾಮದಿಂದ ಎಲ್ಲವೂ ಸಲೀಸಾಗಿ ಜೀರ್ಣವಾಗುತ್ತದೆ.
ಯಾರ ಮನೆಯಲ್ಲಿ ತಾನೇ ಸಿಹಿ ತಿಂಡಿ ಇಷ್ಟವಾಗದು ಹೇಳಿ. ಆದರೆ ಎಷ್ಟೋ ಮನೆಗಳಲ್ಲಿ ಶುಗರ್, ಬಿ.ಪಿ. ಮಾಮೂಲಿ ವ್ಯಾಧಿಗಳಾಗಿವೆ. ಹೀಗಿರುವಾಗ ನೇರವಾಗಿ ಸಕ್ಕರೆ ಬಳಸುವ ಬದಲು ಸಾಧ್ಯವಾದಷ್ಟೂ ಜೇನುತುಪ್ಪ, ನೈಸರ್ಗಿಕ ಹಣ್ಣುಗಳನ್ನೇ ಬಳಸಿರಿ. ಆದಷ್ಟೂ ಕಡಿಮೆ ಸಿಹಿ ಸೇವಿಸಲು ಯತ್ನಿಸಿ. ಊಟದ ಕೊನೆಯಲ್ಲಿ ಸಿಹಿ ತಿನ್ನಲೇಬೇಕೆಂದು ನಿರ್ಧರಿಸಿದ್ದರೆ, ಮೇನ್ ಕೋರ್ಸ್ ಪ್ರಮಾಣವನ್ನು ಕಡಿಮೆ ಮಾಡಿ.
ಹಿಂದೆಲ್ಲ ಸೀಸನ್ ಫ್ರೂಟ್ಸ್ ಆಯಾ ಋತುವಿಗೆ ಮಾತ್ರ ಸೀಮಿತವಾಗಿತ್ತು. ಈಗ ಹಾಗಲ್ಲ, ಇಡೀ ವರ್ಷ ನಿಮಗೆ ಯಾವುದು ಯಾವಾಗ ಬೇಕಾದರೂ ಸಿಗುವ ಹಾಗಾಗಿಹೋಗಿದೆ. ನನ್ನ ಅಭಿಪ್ರಾಯದಲ್ಲಿ ಆದಷ್ಟೂ ಸೀಸನ್ ಫ್ರೂಟ್ಸ್ ಗೇ ಅಂಟಿಕೊಂಡಿರಿ. ಯಾವುದು ಇದರ ಹೊರತಾಗಿದೆಯೋ, ಆದಷ್ಟೂ ಅದನ್ನು ಕಡಿಮೆ ಸೇವಿಸಬೇಕು. ಒಂದು, ಅವು ಬಲು ದುಬಾರಿ, ಜೊತೆಗೆ ಅವುಗಳ ರುಚಿಯೂ ಚೆನ್ನಾಗಿರದು. ಬದಲಿಗೆ ಸೀಸನ್ ವೆಜಿಟೆಬಲ್ಸ್ ಫ್ರೂಟ್ಸ್ ತಾಜಾ ಮತ್ತು ಆರೋಗ್ಯಕರ ಎನಿಸುತ್ತವೆ.
ಅಡುಗೆ ತಯಾರಿಸುವಾಗ ಎಣ್ಣೆ ಕುರಿತಾಗಿ ಮಹಿಳೆಯರು ಹೆಚ್ಚು ಕನ್‌ಫ್ಯೂ,ಡ್ ಆಗುತ್ತಾರೆ. ಇದರಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯ ಎಂದರೆ, ಒಂದೇ ಬಗೆಯ ಎಣ್ಣೆಯನ್ನು ಅತಿಯಾಗಿ ಬಳಸಬೇಡಿ. ಹೆಚ್ಚು ಕಡಿಮೆ ಎಲ್ಲಾ ಬಗೆಯ ಎಣ್ಣೆಗಳ ಕ್ಯಾಲೋರಿ ಒಂದೇ ಆದರೂ, ನನ್ನ ಅಭಿಪ್ರಾಯದಲ್ಲಿ ಯಾವುದೇ ಎಣ್ಣೆ ಬಳಸಿದರೂ ಪ್ರಮಾಣ ಕಡಿಮೆ ಇರಲಿ, ಉತ್ತಮ ಗುಣಮಟ್ಟದ್ದಾಗಿರಲಿ. ಅಗ್ಗ ಎಂಬ ಕಾರಣಕ್ಕೆ ಲೂಸ್ ಆಯಿಲ್ ಎಂದೂ ಕೊಳ್ಳಬೇಡಿ.