ಅಲಂಕಾರ, ಮೇಕಪ್‌, ಬ್ಯೂಟಿ ಬಗ್ಗೆ ಮಾತನಾಡುವಾಗ ಶಹನಾಜ್‌ ಹುಸೇನ್‌ರ ಬಗ್ಗೆ ಹೇಳದಿದ್ದರೆ ಹೇಗೆ? ಬ್ಯೂಟಿ ಕ್ಷೇತ್ರದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಸ್ಟ್ಯಾಂಡರ್ಡ್‌ ಒದಗಿಸಿದ ಸುಪ್ರಸಿದ್ಧ `ಹರ್ಬಲ್ ಬ್ಯೂಟಿ ಕ್ಯೂರ್‌ ಕ್ವೀನ್‌’ ಎನಿಸಿರುಲ ಈಕೆ ತಮ್ಮದೇ ಬ್ರ್ಯಾಂಡ್‌ ಆರಂಭಿಸಿದ್ದಾರೆ.

ಇಡೀ ದೇಶಾದ್ಯಂತ ಬ್ಯೂಟಿ ಔಟ್‌ ಲೆಟ್ಸ್ ಹೊಂದಿದ್ದು 350ಕ್ಕೂ ಹೆಚ್ಚಿನ ನೈಸರ್ಗಿಕ ಹರ್ಬಲ್ ಉತ್ಪನ್ನಗಳ ಒಡತಿ ಎನಿಸಿರುವ, ಬ್ಯೂಟಿ ಸೆಲೂನ್‌, ಬ್ಯೂಟಿ ಟ್ರೇನಿಂಗ್‌ ಇನ್‌ಸ್ಟಿಟ್ಯೂಟ್‌, ಸ್ಪಾ ಇತ್ಯಾದಿ ನಡೆಸುತ್ತಿರುವ ಈಕೆಯ ಯಶೋಗಾಥೆ ಅಂತಿಂಥದ್ದಲ್ಲ. ಅನೇಕ ಬ್ಯೂಟಿ ಅವಾರ್ಡ್ಸ್ ನಿಂದ ಸನ್ಮಾನಿತ ಈಕೆ ಭಾರತದ ಬ್ಯೂಟಿ ಅಂಬಾಸಿಡರ್‌ ಎಂದೇ ಜನಪ್ರಿಯರಾಗಿದ್ದಾರೆ.

ಆಕರ್ಷಕವಾಗಿ ಕಾಣಿಸಿಕೊಳ್ಳುವುದರಿಂದ ಎಂಥವರಿಗಾದರೂ ಆತ್ಮವಿಶ್ವಾಸ ಹೆಚ್ಚುತ್ತದೆ ಎನ್ನುತ್ತಾರೆ. ಯಾರೇ ಆಗಲಿ, ತಮ್ಮ ಸೌಂದರ್ಯ ಸಂರಕ್ಷಣೆಯಲ್ಲಿ ಮುತುವರ್ಜಿ ವಹಿಸಿ, ಉನ್ನತ ವ್ಯಕ್ತಿತ್ವ ಹೊಂದಿರಲು ಬಯಸುವರೋ ಅಂಥವರು ಖಂಡಿತಾ ಮುಂದೆ ಬರುತ್ತಾರೆ. ಫ್ಯಾಷನ್‌, ಟಿ.ವಿ., ಮಾಡೆಲಿಂಗ್‌, ಪಬ್ಲಿಕ್‌ ರಿವೇಶನ್ಸ್, ಹೋಟೆಲ್‌, ಟೂರಿಸಮ್ ಇತ್ಯಾದಿ ಎಲ್ಲ ಕಡೆ ಇದರ ಮಹತ್ವ ಎದ್ದು ಕಾಣುತ್ತದೆ.

ಸ್ವಸ್ಥ ಸುಖೀ ಜೀವನಕ್ಕಾಗಿ 10 ಸಲಹೆಗಳು

ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಮನ್ನಣೆಯ ಈ ಕಾಲದಲ್ಲಿ ನಿಮ್ಮ ಚರ್ಮ, ಕೂದಲು, ಕಣ್ಣು, ಹಲ್ಲು, ಉಗುರು ಇತ್ಯಾದಿಗಳು ನಿಮ್ಮ ಫಿಗರ್‌ ಮೇಂಟೆನೆನ್ಸ್ ಗೆ ಪೂರಕವಾಗಿರಬೇಕು. ಹೈಟ್‌ ವೆಯ್ಟ್ ಮಾತ್ರ ಗಮನಿಸದೆ ಬೆಸ್ಟ್ ಪೋಸ್ಚರ್‌, ಬಳುಕುವಿಕೆ ಬತ್ತದ ಉತ್ಸಾಹ ಇತ್ಯಾದಿಗಳೂ ಸೌಂದರ್ಯಕ್ಕೆ ಪೂರಕ ಎಂಬುದನ್ನು ನಿರ್ಲಕ್ಷಿಸದಿರಿ.

ದೈಹಿಕ ಸ್ವಾಸ್ಥ್ಯ :  ಬಾಹ್ಯ ಸೌಂದರ್ಯ ಹಾಗೂ ಆಂತರಿಕ ಆರೋಗ್ಯ ಪರಸ್ಪರ ಪೂರಕ. ಹೀಗಾಗಿ ನೀವು ದೈಹಿಕವಾಗಿ ಸ್ವಸ್ಥವಾಗಿದ್ದರೆ, ವೆರಿ ಬ್ಯೂಟಿಫುಲ್ ಎನಿಸುತ್ತೀರಿ.

ಸಮರ್ಪಕ ಆಹಾರ : ಬ್ಯೂಟಿ ಹೆಚ್ಚಲು ಸಮರ್ಪಕ ಆಹಾರ ಮುಖ್ಯ. ನಾವೇನು ಸೇವಿಸುತ್ತೇವೆಯೋ ಅದನ್ನು ತೋರ್ಪಡಿಸುತ್ತೇವೆ. ಹೀಗಾಗಿ ನಮ್ಮ ಆಹಾರ ಹೈ ವಿಟಮಿನ್‌, ಲೋ ಕಾರ್ಬೋಹೈಡ್ರೇಟ್‌, ಶುಗರ್‌ಫ್ರೀ ಆಗಿರಲೇಬೇಕು.

ನಿಯಮಿತ ವ್ಯಾಯಾಮ : ಸ್ವಸ್ಥ ಸುಂದರವಾಗಿ ಕಾಣಿಸಲು ವ್ಯಾಯಾಮ ಅತ್ಯಗತ್ಯ. ಇದು ನಿಮ್ಮ ಶಕ್ತಿ ಹೆಚ್ಚಿಸಿ, ರಕ್ತ ಸಂಚಾರ ಸಂರ್ಧಿಸುತ್ತದೆ.

ನಿದ್ದೆ ಸಾಕಷ್ಟಿರಲಿ : ನಿದ್ದೆ ಒಂದು ಅತ್ಯುತ್ತಮ ಬ್ಯೂಟಿ ಟ್ರೀಟ್‌ಮೆಂಟ್‌. ಇದು ಆಂತರಿಕವಾಗಿ ಸೌಂದರ್ಯ ಹೆಚ್ಚಿಸಲು ಪೂರಕ.

ಸದಾ ರಿಲ್ಯಾಕ್ಸ್ ಆಗಿರಿ : ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಮೂಲಕಾರಣ ಟೆನ್ಶನ್‌ ಆಗಿದೆ. ಇದರಿಂದ ಮೊಡವೆ, ಡ್ಯಾಂಡ್ರಫ್‌, ಬ್ಲ್ಯಾಕ್‌ ಸರ್ಕಲ್ಸ್, ಕೂದಲಿನ ಉದುರುವಿಕೆ ಇತ್ಯಾದಿ ಹೆಚ್ಚುತ್ತದೆ. ಹೀಗಾಗಿ ಯೋಗ, ಧ್ಯಾನಗಳಿಂದ ಟೆನ್ಶನ್ ದೂರವಿಡಿ.

ಸಕಾರಾತ್ಮಕ ಧೋರಣೆ ರೂಢಿಸಿಕೊಳ್ಳಿ : ದೇಹಬುದ್ಧಿ ಪರಸ್ಪರ ಪೂರಕ. ಹೀಗಾಗಿ ನಕಾರಾತ್ಮಕ ಧೋರಣೆ ಬದಿಗಿಟ್ಟು ಸಕಾರಾತ್ಮಕ ಆಲೋಚನೆ ರೂಢಿಸಿಕೊಳ್ಳಿ.

ಏನಾದರೂ ಹೊಸತನ್ನು ಕಲಿಯುತ್ತಿರಿ : ನಿಮ್ಮ ಅಭಿರುಚಿಗೆ ತಕ್ಕಂತೆ ಸೃಜನಾತ್ಮಕ ಪ್ರವೃತ್ತಿ ಬೆಳೆಸಿಕೊಳ್ಳಿ. ಇದು ನಿಮ್ಮ ವ್ಯಕ್ತಿತ್ವದ ಶೋಭೆ ಹೆಚ್ಚಿಸುತ್ತದೆ.

ಆಳವಾಗಿ ಉಸಿರಾಡಿ : ಇದು ಟೆನ್ಶನ್‌ ದೂರವಿರಿಸಿ, ದೇಹದ ಪ್ರತಿ ಅಂಗಕ್ಕೂ ಆಮ್ಲಜನಕ ತಲುಪಿಸುತ್ತದೆ.

ನೋ ಸ್ಮೋಕಿಂಗ್‌ : ಡ್ರಿಂಕ್ಸ್, ಫ್ಯಾಗಿಂಗ್‌ ಇತ್ಯಾದಿಗಳಿಗೆ ಶಾಶ್ವತವಾಗಿ ಬೈ ಬೈ ಹೇಳಿ.

ಕ್ರ್ಯಾಶ್‌ ಡಯೆಟ್‌ : ಇದನ್ನು ಆದಷ್ಟು ದೂರವಿರಿಸಿ ನಿಮ್ಮ ದೇಹತೂಕ ನಿಯಂತ್ರಿಸುವುದನ್ನು ನೋಡಿ.

– ಟಿ. ಜಯಂತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ