ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯದಲ್ಲಿ ಮುಂಚೂಣಿಯಲ್ಲಿರುವ ಗ್ಯಾಲಂಟ್ ಸ್ಪೋರ್ಟ್ಸ್, ಜಿಂದಾಲ್ ಸ್ಟೀಲ್ ಪ್ಲಾಂಟ್, ಅಂಗುಲ್‌ಗಾಗಿ ನಿರ್ಮಿಸಿದ ಅತ್ಯಾಧುನಿಕ ನಾಲ್ಕು ಕೋರ್ಟ್ ಪಾಡೆಲ್ ಕಾಂಪ್ಲೆಕ್ಸ್‌ನ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
2025ರ ಮೇನಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡ ಗ್ಯಾಲಂಟ್ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಿದೆ. ಈ ಯೋಜನೆ ಗ್ಯಾಲಂಟ್‌ನ ವಿಶ್ವಮಟ್ಟದ ಕ್ರೀಡಾ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ಬದ್ಧತೆಯ ಸಾಕ್ಷಿಯಾಗಿದೆ. ಸಂಪೂರ್ಣ ಪ್ಯಾನೊರಮಿಕ್ ಕೋರ್ಟ್‌ಗಳನ್ನು ಒಳಗೊಂಡ ಈ ಕಾಂಪ್ಲೆಕ್ಸ್, ಜಿಂದಾಲ್ ಉದ್ಯೋಗಿಗಳ ಮನರಂಜನೆ ಮತ್ತು ಫಿಟ್ನೆಸ್ ಅಗತ್ಯಗಳನ್ನು ಪೂರೈಸುವಂತೆ ವಿನ್ಯಾಸಗೊಳಿಸಲ್ಪಟ್ಟಿದೆ.
ಈ ಸಾಧನೆಯ ಬಗ್ಗೆ ಮಾತನಾಡಿದ ಗ್ಯಾಲಂಟ್ ಸ್ಪೋರ್ಟ್ಸ್ ಅಂಡ್ ಇನ್ಫ್ರಾ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ನಸೀರ್ ಅಲಿ 'ಜಿಂದಾಲ್ ನಂತಹ ಪ್ರತಿಷ್ಠಿತ ಗ್ರಾಹಕರಿಗಾಗಿ ಇಂತಹ ಉನ್ನತ ಮಟ್ಟದ ಯೋಜನೆಯನ್ನು ಪೂರ್ಣಗೊಳಿಸಿರುವುದು ನಮಗೆ ಹೆಮ್ಮೆಯ ವಿಷಯ. ಈ ಪಾಡೆಲ್ ಕಾಂಪ್ಲೆಕ್ಸ್ ಭಾರತದಲ್ಲಿನ ಅತಿದೊಡ್ಡ ಹಾಗೂ ಅತ್ಯುತ್ತಮವಾದ ಕ್ರೀಡಾ ಸೌಲಭ್ಯಗಳಲ್ಲಿ ಒಂದಾಗಿದೆ. ಪಾಡೆಲ್ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಕೆಟ್ ಕ್ರೀಡೆಯಾಗಿದ್ದು, ಈ ಕಾಂಪ್ಲೆಕ್ಸ್ ಜಿಂದಾಲ್ ಟೌನ್‌ಶಿಪ್ ಅನ್ನು ಪ್ರಾದೇಶಿಕ ಮಟ್ಟದ ಪ್ರಮುಖ ಕ್ರೀಡಾ ತಾಣವಾಗಿ ರೂಪಿಸಿದೆ ಎಂದರು.
ಪ್ರತಿಯೊಂದು ಕೋರ್ಟ್ ಅಂತರಾಷ್ಟ್ರೀಯ ಮಾನದಂಡಗಳ (10 ಮೀ x 20 ಮೀ) ಅಳತೆಯಲ್ಲಿ ನಿರ್ಮಿಸಲ್ಪಟ್ಟಿದ್ದು, ಗ್ಯಾಲ್ವನೈಸ್ ಮಾಡಿದ ಉಕ್ಕಿನ ಚೌಕಟ್ಟು (ಗ್ರೇಡ್ Q235B) ಮತ್ತು 12 ಮಿಮೀ ಟೆಂಪರ್ಡ್ ಗ್ಲಾಸ್ ಫಲಕಗಳನ್ನು ಬಳಸಲಾಗಿದೆ. ಸುರಕ್ಷಿತ ಹಾಗೂ ಸಮತಟ್ಟಾದ ಆಟದ ಮೇಲ್ಮೈ ಒದಗಿಸಲು ಫೈಬ್ರಿಲೇಟೆಡ್ ಪಾಲಿಪ್ರೊಪಿಲಿನ್ (fibrillated polypropylene fiber) ನಾರುಗಳಿಂದ ತಯಾರಿಸಲಾದ ಅತ್ಯುತ್ತಮ ಕೃತಕ ಟರ್ಫ್ ಅಳವಡಿಸಲಾಗಿದೆ. 200W ಸಾಮರ್ಥ್ಯದ, IP65 ಪ್ರಮಾಣಿತ ಎಲ್ಇಡಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.





