ಮಹಾರಾಷ್ಟ್ರ ಯೂಥ್‌ ವಿಂಗ್‌ನ ಉಪಾಧ್ಯಕ್ಷೆ, ಗುಜರಾತ್‌ನ ಸಂಸದೆ ಸ್ಮೃತಿ ಇರಾನಿ ಬಂಗಾಲಿ ಮತ್ತು ಪಂಜಾಬಿ ಕುಟುಂಬದವರು. ಅವರು ಪಾರ್ಸಿ ಜುಬಿನ್‌ ಇರಾನಿಯನ್ನು ಮದುವೆಯಾಗಿ 3 ಮಕ್ಕಳ ತಾಯಿ ಆಗಿದ್ದಾರೆ. ಏಕ್ತಾ ಕಪೂರ್‌ರ ಮೆಗಾಸೋಪ್‌`ಕ್ಯೂಂಕಿ ಸಾಸ್‌ ಭೀ ಕಭೀ ಬಹೂ ಥಿ' ಧಾರಾವಾಹಿಯ `ತುಳಸಿ' ಪಾತ್ರದಿಂದ ರಾಷ್ಟ್ರಾದ್ಯಂತ ಮನೆಮಾತಾದ ಸ್ಮೃತಿ, ಮುಂದೆ ತಾವೇ ನಿರ್ಮಾಪಕಿಯಾಗಿ, ನಟಿಸುತ್ತಾ ಸೀರಿಯಲ್ಸ್ ಮಾಡತೊಡಗಿದರು.

ನಮ್ರ ಸ್ವಭಾವದ, ಹಸನ್ಮುಖಿ ಸ್ಮೃತಿ ಇರಾನಿ 10 ವರ್ಷಗಳ ಹಿಂದೆ ರಾಜಕೀಯಕ್ಕೆ ಬಂದರು. ನಟಿ ಹಾಗೂ ನಿರ್ಮಾಪಕಿಯಾದ ನಂತರ ಈಗ ಅವರು ತಮ್ಮ ಸಂಪೂರ್ಣ ಸಮಯವನ್ನು ಪಾರ್ಟಿಗೆ ಕೊಡುತ್ತಿದ್ದಾರೆ. ತಮ್ಮ ಕುಟುಂಬದ 3 ಪೀಳಿಗೆಯಿಂದ ಭಾರತೀಯ ಜನತಾ ಪಾರ್ಟಿಯೊಂದಿಗೆ ಸಂಬಂಧವಿದೆ ಎಂದು ಅವರು ಹೇಳುತ್ತಾರೆ. ಸ್ಮೃತಿ ತಮ್ಮ ವ್ಯಸ್ತ ದಿನಚರಿಯ ಮಧ್ಯೆಯೂ ತಮ್ಮ ಕುಟುಂಬದ ಬಗ್ಗೆ ಗಮನಹರಿಸುತ್ತಾರೆ. ಎಷ್ಟೇ ಕಷ್ಟದ ಕೆಲಸವಾದರೂ ನಿರಾಕರಿಸದೆ ಅದನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಮಹಿಳೆಯರು ತಮ್ಮ ಮೇಲಿನ ಶೋಷಣೆ ತಡೆಗಟ್ಟಲು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎನ್ನುತ್ತಾರೆ.

ರಾಜಕೀಯಕ್ಕೆ ಬಂದ ಕಾರಣ ಏನು?

ನೀವೊಬ್ಬ ಯಶಸ್ವಿ ನಟಿಯಾಗಿದ್ದರು..... ನಮ್ಮ ತಾತ ನಿರ್ಮಲಚಂದ್ರ ಸ್ವಯಂಸೇವಕರಾಗಿದ್ದರು. ಅವರೊಂದಿಗೆ ನನಗೆ ಅನೇಕ ಸಿಹಿಕಹಿ ನೆನಪುಗಳಿವೆ. ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ ನಂತರ ಒಂದು ವೇಳೆ ನೀವು ಯಾವುದಾದರೂ ಸಿಸ್ಟಮ್ ಅಥವಾ ಪಾಲಿಸಿಯನ್ನು ದುರಸ್ತಿಗೊಳಿಸಲು ಬಯಸಿದರೆ ರಾಜಕೀಯದ ಒಂದು ಭಾಗವಾಗಿರುವುದು ಅಗತ್ಯ. ಹೀಗಾಗಿ ನಾನು ಈ ಕ್ಷೇತ್ರಕ್ಕೆ ಬಂದೆ.

ಈ ಕ್ಷೇತ್ರದಲ್ಲಿ ಪುರುಷರ ವರ್ಚಸ್ಸಿನ ಕಾರಣದಿಂದಾಗಿ ಮಹಿಳೆಯರು ಉಳಿಯುತ್ತಿಲ್ಲ. ಹೀಗಿರುವಾಗ ನೀವು ಯಾವ ವಿಷಯಗಳಿಗೆ ಗಮನಕೊಡುತ್ತೀರಿ? ಯಾವ ವಿಷಯಗಳನ್ನು ಅವಾಯ್ಡ್ ಮಾಡುತ್ತೀರಿ?

ಬಿ.ಜೆ.ಪಿ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ತಂದಿರುವ ಏಕೈಕ ರಾಜಕೀಯ ಪಕ್ಷ. ಗ್ರಾಮೀಣ ಇಲಾಖೆಗಳಿಂದ ಹಿಡಿದು ನಗರದ ಇಲಾಖೆಗಳವರೆಗೆ ಎಲ್ಲ ಮಹಿಳೆಯರನ್ನು ರಾಜಕೀಯಕ್ಕೆ ಬರಲು ಪ್ರೋತ್ಸಾಹಿಸಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ಪಾಲ್ಗೊಳ್ಳುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ.

ನೀವು ಕಳೆದ 10 ವರ್ಷಗಳಿಂದ ರಾಜಕೀಯದಲ್ಲಿದ್ದೀರಿ. ಯಾವ ವಿಷಯದ ಬಗ್ಗೆ ಹೆಚ್ಚು ಗಮನ ಕೊಡುತ್ತೀರಿ?

ಜನರ ಮೂಲಭೂತ ಸಮಸ್ಯೆಗಳಿಗೆ ಉತ್ತರ ನೀಡಲು ಹೆಚ್ಚು ಪ್ರಯತ್ನಿಸುತ್ತೇನೆ. ಆರ್ಮಿಯಲ್ಲಿರುವ ಕೆಲವು ಮಹಿಳೆಯರು ಶಾಶ್ವತ ಕಮೀಷನ್‌ಗಾಗಿ ಭಾರತ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷೆ ಆಗುವ ಮೊದಲು ನಾನು ಮಹಿಳಾ ವೋರ್ಚಾದ ಮೂಲಕ ಆ ಮಹಿಳೆಯರಿಗೆ ಸಹಾಯ ಮಾಡಿದೆ. ಅವರಿಗೆ ಶಾಶ್ವತ ಕಮಿಷನ್‌ ಸಿಕ್ಕಿತು. ಇದಲ್ಲದೆ ಎಲ್ಲೆಲ್ಲಿ ನಮ್ಮ ಸರ್ಕಾರಗಳಿವೆಯೋ ಅಲ್ಲಿ ಕಾನೂನು ವ್ಯವಸ್ಥೆಯನ್ನು ಸದೃಢಗೊಳಿಸಲಾಯಿತು. ಇದರಿಂದಾಗಿ ಮಹಿಳೆಯರ ವಿರುದ್ಧ ಹಿಂಸಾತ್ಮಕ ದಾಳಿಗಳು ಉಂಟಾಗುವುದಿಲ್ಲ.

ನಿಮ್ಮನ್ನು ನೀವು ಇಷ್ಟು ಆ್ಯಕ್ಟಿವ್ ‌ಆಗಿ ಹೇಗಿಟ್ಟುಕೊಳ್ತೀರಿ?

ನೀವು ನಿಮ್ಮ ಮನಸ್ಸಿನ ಪ್ರಕಾರ ಕೆಲಸ ಮಾಡಿದಾಗಲೇ ಖುಷಿಯಾಗಿರುತ್ತೀರಿ. ಅದರಿಂದ ನೀವು ಸದಾ ಆ್ಯಕ್ಟಿವ್ ಆಗಿರುತ್ತೀರಿ. ನಾನು ಕರ್ಮವನ್ನು ನನ್ನ ಸರ್ವಸ್ವ ಎನ್ನುತ್ತೇನೆ. ನನಗೆ ಸಿಕ್ಕ ಅವಕಾಶದಲ್ಲಿ ನಾನು ಸತ್ಯವಾಗಿ ನಡೆದುಕೊಳ್ಳಲು ಸಂಪೂರ್ಣವಾಗಿ ಪ್ರಯತ್ನಿಸುತ್ತೇನೆ. ಎಂದೂ ಯಾವುದೇ ಕೆಲಸವನ್ನು ಹೊರೆ ಎಂದು ಭಾವಿಸುವುದಿಲ್ಲ. ಯಾವುದೇ ಹೊಸ ಕೆಲಸ ಮಾಡಲು ನಿರಾಕರಿಸುವುದಿಲ್ಲ. ನಾನು ಯಾವಾಗಲೂ ಹೋರಾಟ ಮತ್ತು ಸವಾಲು ಎರಡನ್ನೂ ಸ್ವೀಕರಿಸುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ