ಸಂಜಯನಿಗೆ ಆಗ ತಾನೇ ಹೊಸದಾಗಿ ಮದುವೆಯಾಗಿತ್ತು. ಸಂಜೆ ಆಫೀಸ್‌ ಸಮಯ ಮುಗಿದರೂ ಅವನೆಂದೂ ಬೇಗ ಮನೆಗೆ ಹೊರಡುವ ಅವಸರ ತೋರುತ್ತಿರಲಿಲ್ಲ. ಬಹಳ ಹೊತ್ತು ಆಫೀಸ್‌ನಲ್ಲಿಯೇ ಕುಳಿತು 8 ಗಂಟೆ ನಂತರ ಹೊರಡುತ್ತಿದ್ದ.

ಬಹಳ ದಿನ ಹೀಗೇ ಮುಂದುವರಿದಾಗ, ಅವನ ಬಾಸ್‌ ಕರೆಸಿ ನೇರವಾಗಿ ಕೇಳಿದರು, ``ಯಾಕ್ರಿ ಸಂಜಯ್‌, ಹೊಸದಾಗಿ ಮದುವೆ ಆಗಿದೆ.... ಆದ್ರೂ ಬೇಗ ಆಫೀಸ್‌ ಮುಗಿಸಿ ಮನೆಗೆ ಹೊರಡಲು ಉತ್ಸಾಹವೇ ತೋರಿಸಲ್ಲ ನೀವು.... ಎಲ್ಲಾ ಸರಿಯಾಗಿದೆ ತಾನೇ ಅಥವಾ....?''

``ಸರ್‌.... ವಿಷಯ ಅದಲ್ಲ. ನನ್ನ ಹೆಂಡತಿಯೂ ಕೆಲಸಕ್ಕೆ ಹೋಗುತ್ತಾಳೆ. ನಮ್ಮಲ್ಲಿನ ಒಪ್ಪಂದವೆಂದರೆ ಯಾರು ಮೊದಲು ಮನೆಗೆ ಬರುತ್ತಾರೋ ಅವರೇ ರಾತ್ರಿಯ ಅಡುಗೆ ಮಾಡಬೇಕು ಅಂತ....''

 

ಸೋಮು : ಒಬ್ಬ ವರ್ತಕ ತನ್ನ ಹೆಂಡತಿಗಾಗಿ ಅಮೂಲ್ಯವಾದ 1 ಕೋಟಿ ರೂ. ಬೆಲೆ ಬಾಳುವ ರತ್ನಹಾರ ತಂದುಕೊಟ್ಟನಂತೆ. ಅದಾದ ಮೇಲೆ 6 ತಿಂಗಳು ಅವಳು ಅವನನ್ನು ಮಾತನಾಡಿಸಲೇ ಇಲ್ಲವಂತೆ.

ರಾಮು : ಛೇ....ಛೇ! ಅಂಥ ಅಮೂಲ್ಯ ಉಡುಗೊರೆ ತಂದುಕೊಟ್ಟ ಗಂಡನೊಂದಿಗೆ ಹಾಗಾ ನಡೆದುಕೊಳ್ಳುವುದು?

ಸೋಮು : ಅದು ಹಾಗಲ್ಲ.... ಅವರಿಬ್ಬರ ನಡುವೆ ಒಪ್ಪಂದ ನಡೆದದ್ದೇ ಹಾಗೇ!

 

ಮನೋಹರನಿಗೆ ನಾನ್‌ವೆಜ್‌ ತಿನ್ನುವ ಆಸೆಯಾಗಿ ಎದುರಿಗೆ ಸಿಕ್ಕಿದ ಹೋಟೆಲ್‌ನ ನುಗ್ಗಿದ. ಮಾಣಿಯನ್ನು ಕರೆದು ಚಿಕನ್‌ ತರುವಂತೆ ಆರ್ಡರ್‌ ಮಾಡಿದ.

ಮಾಣಿ : ಸಾರ್‌, ನಿಮಗೆ ಫ್ರೆಂಚ್‌ ಚಿಕನ್‌ ಬೇಕೋ ಸ್ಪ್ಯಾನಿಶ್‌ ಚಿಕನ್ನೋ?

ಮನೋಹರ : ಯಾವುದೋ ಒಂದು ತಗೊಂಬಾ ಮಾರಾಯ, ನಾನೇನು ಅವುಗಳ ಜೊತೆ ಆ ಭಾಷೆಯಲ್ಲಿ ಮಾತನಾಡಬೇಕಿದೆಯೇ?

 

ಸುರೇಶ್‌ ತನ್ನ ಹೆಂಡತಿ ಜೊತೆ ಜಗಳ ಆಡದ ದಿನವೇ ಇಲ್ಲ. ಕೊನೆಗೆ ರೋಸಿಹೋಗಿ ತನ್ನ ಅತ್ತೆಗೆ ಅವಳ ಬಗ್ಗೆ ದೂರಿತ್ತ.

ಸುರೇಶ್‌ : ನಾನು ನಿಮ್ಮ ಮಗಳನ್ನೇನೋ ಮದುವೆ ಆದೆ, ಆದರೆ ಅವಳಲ್ಲಿ ನೂರಾರು ಕುಂದುಕೊರತೆಗಳಿವೆ.

ಅತ್ತೆಮ್ಮ (ನಿಟ್ಟುಸಿರು ಬಿಡುತ್ತಾ) : ಹೂಂ, ಅದೇನೋ ನಿಜ ಕಣಪ್ಪ, ಅವಳ ಈ ಕುಂದುಕೊರತೆಗಳ ಕಾರಣದಿಂದಲೇ ಯಾವ ಒಳ್ಳೆಯ ವರನೂ ಅವಳ ಕೈ ಹಿಡಿಯಲಿಲ್ಲ.

 

ಮೋಹನ್‌ : ಛೇ...ಛೇ....! ಎಂಥ ಕೆಲಸ ಆಯ್ತು ಗೊತ್ತಾ? ನನ್ನ 4 ವರ್ಷದ ಮಗ ನನ್ನ ಎಲ್ಲಾ ಕವಿತೆಗಳನ್ನೂ ಹರಿದುಬಿಟ್ಟ!

ವಿವೇಕ್‌ : ಅಭಿನಂದನೆಗಳು! ಇಷ್ಟು ಸಣ್ಣ ವಯಸ್ಸಿನಲ್ಲೇ ನಿನ್ನ ಮಗ ಸಾಹಿತ್ಯದಲ್ಲಿ ಇಷ್ಟೊಂದು ಕೃಷಿ ಮಾಡ್ತಿದ್ದಾನೆ.....

 

ಹೆಂಡತಿ : ಅಲ್ಲ, ಜೀವನದಲ್ಲಿ ಯಾವತ್ತಾದರೂ ಒಂದೇ ಒಂದು ಒಳ್ಳೆಯ ಕೆಲಸ ಅಂತ ಮಾಡಿದ್ದುಂಟಾ ನೀವು?

ಗಂಡ : ಓಹೋ..... ನಿನಗೆ ತಾಳಿ ಕಟ್ಟಿ ಮದುವೆ ಆಗಲಿಲ್ಲವೇ?

 

ಮನೋಜ್‌ : ನಿನ್ನ ಆ ಹಳಿ ಟ್ರಂಕಿನ ಬೀಗದಕೈ ಕಳೆದುಹೋಗಿತ್ತಲ್ಲ, ಮನೆಯ ಕಾಗದ ಪತ್ರ ಭದ್ರವಾಗಿರಿಸಿದ್ದು, ಈಗಲೂ ತೆರೆಯಲು ಆಯ್ತೋ ಇಲ್ಲವೋ?

ಮುಕುಂದ್‌ : ಅಂತೂ ತೆರೆದಿದ್ದಾಯ್ತು. ಮನೆ ಮಾರಾಟಕ್ಕೆ ಬೇಕಾದ ಪತ್ರ ಸಿಕ್ಕಿತು, ಬಹಳ ಕಷ್ಟಪಡಬೇಕಾಯ್ತು.

ಮನೋಜ್‌ : ಏನಂಥ ಕಷ್ಟಪಟ್ಟೆ?

ಮುಕುಂದ್‌ : ನಮ್ಮ ಕೆಲಸದವಳ ಕೈಲಿ, ನನ್ನ ಹೆಂಡತಿಗೆ ಅದರಲ್ಲಿ ನನ್ನ ಮಾಜಿ ಪ್ರೇಯಸಿ ನನಗೆ ಬರೆದ ಪ್ರೇಮಪತ್ರಗಳಿವೆ ಅಂತ ಸುದ್ದಿ ಮುಟ್ಟಿಸಲು 500/ ರೂ. ಖರ್ಚು ಮಾಡಬೇಕಾಯ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ